»   » 'ಬಿಗ್ ಬಾಸ್' ಮನೆಯಲ್ಲಿ ಕೃತಿಕಾ ಬಗ್ಗೆ ನಟ ಚಂದನ್ ಹೇಳಿದ್ದೇನು?

'ಬಿಗ್ ಬಾಸ್' ಮನೆಯಲ್ಲಿ ಕೃತಿಕಾ ಬಗ್ಗೆ ನಟ ಚಂದನ್ ಹೇಳಿದ್ದೇನು?

Posted By:
Subscribe to Filmibeat Kannada

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟ ಚಂದನ್ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಾರೆ ಅಂತ ಮೊದಲೇ ಜಗಜಾಹೀರಾಗಿತ್ತು.

ಚಂದನ್ ಜೊತೆ 'ರಾಧಾಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ಕೂಡ 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗ್ತಾರೆ ಅಂತ ಸುದ್ದಿಯಾದಾಗಲೇ, ಇವರಿಬ್ಬರು ಮಾಜಿ ಪ್ರೇಮಿಗಳು ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ['ಬಿಗ್ ಬಾಸ್' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

'ರಾಧಾಕಲ್ಯಾಣ' ಸೀರಿಯಲ್ ನಲ್ಲಿ ಜೋಡಿಯಾಗಿ ಅಭಿನಯಿಸಿದ್ದ ಚಂದನ್ ಮತ್ತು ಕೃತಿಕಾ ನಿಜಕ್ಕೂ ಪ್ರೇಮ ಪಕ್ಷಿಗಳಾಗಿದ್ರಾ? ಕ್ರಿಕೆಟರ್ ಅಯ್ಯಪ್ಪಗೆ ಈ ಡೌಟ್ ಕಾಡಿದಾಗ ನಟ ಚಂದನ್ ಏನಂತ ಹೇಳಿದರು.? 'ಬಿಗ್ ಬಾಸ್' ಮನೆಯಲ್ಲಿ ಎಂಟನೇ ದಿನ ಆದ ಕೆಲ ಪ್ರಮುಖ ಘಟನೆಗಳ ವಿವರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಕೃತಿಕಾ ಬಗ್ಗೆ ಚಂದನ್ ಹೇಳಿದ್ದೇನು?

''ನನ್ನ ಲೆವೆಲ್ ಗೆ ಅವರು ಇಲ್ಲ. Financially ಕೂಡ ಅಂತ ಏನಿಲ್ಲ. ನಮ್ಮಲ್ಲಿ ಲೈಕಿಂಗ್ ಎಲ್ಲಾ ಇರ್ಲಿಲ್ಲ'' ಅಂತ ಅಯ್ಯಪ್ಪಗೆ ತಮ್ಮ ಹಾಗು ಕೃತಿಕಾ ನಡುವಿನ ಗಾಸಿಪ್ ಬಗ್ಗೆ ನಟ ಚಂದನ್ ಸ್ಪಷ್ಟನೆ ನೀಡಿದರು.

ಪ್ಲಾನಿಂಗ್

''ನೇಹಾ ಗೌಡ ಮತ್ತು ಜಯಶ್ರೀ ಯಾರು ಅನ್ನೋದೇ ಗೊತ್ತಿಲ್ಲ. ಅವರಿಬ್ಬರನ್ನ ಯಾಕೆ ಸೆಲೆಕ್ಟ್ ಮಾಡಿದ್ದಾರೆ ಅರ್ಥ ಆಗ್ಲಿಲ್ಲ. ಮಾಧುರಿ ಇಟಗಿ ಬದಲು ಇವರಿಬ್ಬರಲ್ಲಿ ಯಾರಾದ್ರೂ ಹೋಗ್ಬೇಕಿತ್ತು. ಈ ವಾರ ಗ್ಯಾರೆಂಟಿ ಅವರಿಬ್ಬರಲ್ಲಿ ಒಬ್ಬರು ಹೋಗ್ತಾರೆ'' ಅಂತ ಚಂದನ್ ಮತ್ತು ಅಯ್ಯಪ್ಪ ನಾಮಿನೇಷನ್ ಬಗ್ಗೆ ಪ್ಲಾನ್ ಮಾಡ್ತಿದ್ದರು.

ಗಾನ ಸುಧೆ ಹರಿಸಿದ ಶ್ರುತಿ

'ಹೆಂಡ-ಹೆಂಡತಿ' ಹಾಡು ಹಾಡುತ್ತಾ ನಟಿ ಶ್ರುತಿ ಗಾನ ಸುಧೆ ಹರಿಸಿ, ಮನೆ ಮಂದಿಗೆಲ್ಲಾ ಸಖತ್ ಮನರಂಜನೆ ನೀಡಿದರು.

ಇಂದಿರಾನಗರದಲ್ಲಿ ಯಾರೂ ಸ್ಲಿವ್ ಲೆಸ್ ಹಾಕಲ್ಲ.!

ತಮ್ಮ ಏರಿಯಾದಲ್ಲಿ ಹುಚ್ಚ ವೆಂಕಟ್ ಹೇಗೆ ಹವಾ ಮೇನ್ಟೇನ್ ಮಾಡಿದ್ದಾರೆ ಅಂದ್ರೆ, ಒಂದೇ ಒಂದು ಹುಡುಗಿ ಕೂಡ ಇಂದಿರಾನಗರದಲ್ಲಿ ಸ್ಲೀವ್ ಲೆಸ್ ಡ್ರೆಸ್ ಹಾಕಲ್ಲವಂತೆ. ಹಾಗಂತ ಮನೆ ಸದಸ್ಯರೊಂದಿಗೆ ಹುಚ್ಚ ವೆಂಕಟ್ ಮಾತನಾಡುತ್ತಿದ್ದರು.

ಹುಚ್ಚ ವೆಂಕಟ್ ಗೆ ಹಣ್ಣು ತಿನ್ನಿಸಿದ ಪೂಜಾ ಗಾಂಧಿ

''ನಾನು ನಿಮ್ಮ ತಂಗಿ. ನೀವು ಹಣ್ಣುಗಳನ್ನ ತಿನ್ನಲೇಬೇಕು'' ಅಂತ ನಟಿ ಪೂಜಾ ಗಾಂಧಿ ಹುಚ್ಚ ವೆಂಕಟ್ ಗೆ ಹಣ್ಣುಗಳನ್ನ ತಮ್ಮ ಕೈಯಾರೆ ತಿನ್ನಿಸಿದರು.

ಮಗಳನ್ನ ಮಿಸ್ ಮಾಡಿಕೊಂಡ ನಟಿ ಶ್ರುತಿ

ಮಗಳನ್ನ ಮಿಸ್ ಮಾಡಿಕೊಂಡು ನಟಿ ಶ್ರುತಿ ಕಣ್ಣೀರಿಟ್ಟರು. ಮಗಳಿಗಾಗಿ 'ಮಿಲಿ' ಅಂತ ಪೇಂಟಿಂಗ್ ಕೂಡ ಮಾಡಿದ್ರು ನಟಿ ಶ್ರುತಿ.

ಎಣ್ಣೆ ಹೊಡೀಬೇಕಂತೆ ಹುಚ್ಚ ವೆಂಕಟ್.!

''ಬಿಗ್ ಬಾಸ್ ಮನೆಯಲ್ಲಿ ಲೈಫ್ ಬೇರೆ ತರಹ ಇದೆ. ಇಲ್ಲಿ ನಾನು ಎಣ್ಣೆ ಹೊಡೀತಾಯಿಲ್ಲ. ಎಣ್ಣೆ ಹೊಡೀಬೇಕು ಅಂತ ಅನಿಸ್ತಾಯಿದೆ'' ಅಂತ ಸುನಾಮಿ ಕಿಟ್ಟಿ ಜೊತೆ ಹುಚ್ಚ ವೆಂಕಟ್ ಹರಟುತ್ತಿದ್ದರು.

English summary
Kannada Actor Chandan cleared the air about the rumors of his relationship with Kruthika. Read the article to know what all happened on Day 8 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada