For Quick Alerts
  ALLOW NOTIFICATIONS  
  For Daily Alerts

  'ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು

  By Harshitha
  |

  'ಬಿಗ್ ಬಾಸ್'ಗೆ ಬಾಸ್ ನಮ್ ಬಾಸ್ ಹುಚ್ಚ ವೆಂಕಟ್ ಅಂತ ಜನ ಎಷ್ಟೇ ಬೊಬ್ಬೆ ಹೊಡೆದುಕೊಳ್ಳಲಿ. ಹುಚ್ಚ ವೆಂಕಟ್ ಬಾಸೋ ಅಥವಾ ಲಾರ್ಡ್ ಲಬಕ್ ದಾಸೋ....ಅದೆಲ್ಲಾ ಏನಿದ್ರೂ 'ಬಿಗ್ ಬಾಸ್' ಮನೆ ಆಚೆ. ಮನೆ ಒಳಗಡೆ ಎಲ್ಲರೂ ಒಂದೇ.

  ಎಲ್ಲರೂ 'ಬಿಗ್ ಬಾಸ್' ಕೊಟ್ಟ ಟಾಸ್ಕ್ ನ ಅಚ್ಚುಕಟ್ಟಾಗಿ ಮಾಡಲೇಬೇಕು ಅಂತ ಹುಚ್ಚ ವೆಂಕಟ್ ಗೆ ಆವಾಜ್ ಹಾಕಿದ್ದಾರೆ ಗಾಯಕ ರವಿ ಮುರೂರು. ಮೊದಲನೇ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಸಖತ್ ಸೈಲೆಂಟ್ ಆಗಿದ್ದ ಗಾಯಕ ರವಿ ಮುರೂರು ನಿನ್ನೆ ಇದ್ದಕ್ಕಿದ್ದ ಹಾಗೆ ವೈಲೆಂಟ್ ಆಗ್ಬಿಟ್ಟರು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಅದಕ್ಕೆ ಕಾರಣ ಹುಚ್ಚ ವೆಂಕಟ್. ಎರಡೆರಡು ಬಾರಿ ಶಿಕ್ಷೆಗೆ ಒಳಗಾದ ಹುಚ್ಚ ವೆಂಕಟ್ ವಿರುದ್ಧ ರವಿ ಮುರೂರು ಕಿಡಿಕಾರಿದರು. ರವಿ ಮುರೂರು ಅಷ್ಟೆಲ್ಲಾ ಬೈಯ್ತಿದ್ರೂ, ಹುಚ್ಚ ವೆಂಕಟ್ ಸುಮ್ನಿದ್ರಾ? 'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ಆದ ವಾಕ್ಸಮರದ ಕಂಪ್ಲೀಟ್ ರಿಪೋರ್ಟ್ ಕೊಡ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ಗರಂ ಆದ ರವಿ ಮುರೂರು

  ಗರಂ ಆದ ರವಿ ಮುರೂರು

  ಗಾಯಕ ರವಿ ಮುರೂರು ಸಿಕ್ಕಾಪಟ್ಟೆ ಗರಂ ಆಗ್ಬಿಟ್ಟರು. ಅದು ಹುಚ್ಚ ವೆಂಕಟ್ ರಿಂದಾಗಿ. ಮೊದಲನೇ ವಾರ 'ಬಿಗ್ ಬಾಸ್' ನೀಡಿದ 'ಶಾಂತಿ-ಕಾಂತಿ' ಟಾಸ್ಕ್ ನಲ್ಲಿ ಹುಚ್ಚ ವೆಂಕಟ್ ಪಾಲ್ಗೊಳ್ಳಲಿಲ್ಲ. ಇದರಿಂದ ಮನೆ ಸದಸ್ಯರಿಗೆಲ್ಲಾ Luxury Budget ಮಿಸ್ ಆಯ್ತು. ನಂತ್ರ 'ಬಿಗ್ ಬಾಸ್' ನೀಡಿದ ಹಾಡಿನ ಟಾಸ್ಕ್ ನಲ್ಲೂ ಹುಚ್ಚ ವೆಂಕಟ್ ಅಸಡ್ಡೆ ತೋರಿದ ಪರಿಣಾಮ ಮಾಸ್ಟರ್ ಆನಂದ್ ಗೆ ಶಿಕ್ಷೆ ಆಯ್ತು. ಇದರಿಂದ ರವಿ ಮುರೂರು ಕೋಪಗೊಂಡರು.

  ಹಾಡಿನ ಟಾಸ್ಕ್ ಏನು?

  ಹಾಡಿನ ಟಾಸ್ಕ್ ಏನು?

  ನಟಿ ಮಾಧುರಿ ಇಟಗಿ 'ಬಿಗ್ ಬಾಸ್' ಮನೆಯಿಂದ ಹೊರಹೋಗುವ ಮುನ್ನ ಅವರಿಗೆ 'ಬಿಗ್ ಬಾಸ್' ಒಂದು ವಿಶೇಷ ಅಧಿಕಾರವನ್ನು ನೀಡಿದ್ದರು. ಅದರ ಪರಿಣಾಮ, ಮಾತನಾಡುವ ಬದಲು ಹಾಡು ಹಾಡುವ ಮೂಲಕ ಮನೆಯ ಎಲ್ಲಾ ಸದಸ್ಯರ ಜೊತೆ ಹುಚ್ಚ ವೆಂಕಟ್ ಸಂಭಾಷಣೆ ನಡೆಸಬೇಕಿತ್ತು. ಇದನ್ನ ಸರಿಯಾಗಿ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನ ಮಾಸ್ಟರ್ ಆನಂದ್ ಗೆ ವಹಿಸಲಾಗಿತ್ತು. ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಮಾತನಾಡುವ ಹಾಗಿಲ್ಲ.!]

  ಹುಚ್ಚ ವೆಂಕಟ್ ಗೆ ಅಸಡ್ಡೆ.!

  ಹುಚ್ಚ ವೆಂಕಟ್ ಗೆ ಅಸಡ್ಡೆ.!

  ಅಲ್ಲೊಮ್ಮೆ ಇಲ್ಲೊಮ್ಮೆ ಹಾಡುತ್ತಿದ್ದರೂ, ಟಾಸ್ಕ್ ನ ಸರಿಯಾಗಿ ಹುಚ್ಚ ವೆಂಕಟ್ ನಿಭಾಯಿಸಲಿಲ್ಲ. ಅನೇಕ ಬಾರಿ ಮಾಸ್ಟರ್ ಆನಂದ್ ಕೇಳಿಕೊಂಡರೂ, ಹುಚ್ಚ ವೆಂಕಟ್ ಮಾತನಾಡುತ್ತಿದ್ದರೇ ಹೊರತು, ಹಾಡಿನ ಮೂಲಕ ಸಂಭಾಷಣೆ ನಡೆಸುತ್ತಿರಲಿಲ್ಲ. ಇದರಿಂದ 'ಬಿಗ್ ಬಾಸ್' ಶಿಕ್ಷೆ ಘೋಷಿಸಿದರು. ಹುಚ್ಚ ವೆಂಕಟ್ ರನ್ನ ಹೊತ್ತು ಮಾಸ್ಟರ್ ಆನಂದ್ ಸ್ಮಿಮ್ಮಿಂಗ್ ಪೂಲ್ ಸುತ್ತ 5 ಸುತ್ತು ಹಾಕಬೇಕಾಯ್ತು.

  ಹುಚ್ಚ ವೆಂಕಟ್ ವಿರುದ್ಧ ತಿರುಗಿಬಿದ್ದ ರವಿ ಮುರೂರು

  ಹುಚ್ಚ ವೆಂಕಟ್ ವಿರುದ್ಧ ತಿರುಗಿಬಿದ್ದ ರವಿ ಮುರೂರು

  ಒಬ್ಬರು ಸರಿಯಾಗಿ ಟಾಸ್ಕ್ ಮಾಡದ ತಪ್ಪಿಗೆ ಇತರರಿಗೂ ಸೇರಿ ಶಿಕ್ಷೆ ಆಗುತ್ತಿರುವ ಪರಿಣಾಮ, ಹುಚ್ಚ ವೆಂಕಟ್ ವಿರುದ್ಧ ರವಿ ಮುರೂರು ತಿರುಗಿಬಿದ್ದರು. [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]

  ರವಿ ಮುರೂರು ಏನ್ ಹೇಳಿದ್ರು?

  ರವಿ ಮುರೂರು ಏನ್ ಹೇಳಿದ್ರು?

  ''Luxury Budget ನಿಮ್ಮಿಂದ ತಪ್ಪಿ ಹೋಯ್ತು. ಎರಡೆರಡು ಬಾರಿ ಶಿಕ್ಷೆ ಆಗಿದೆ. ಇನ್ಮೇಲಾದರೂ ಟಾಸ್ಕ್ ಸರಿಯಾಗಿ ಮಾಡಿ. ತಪ್ಪು ಮಾಡಿದ್ದೀರಾ. ಅದಕ್ಕೆ ನಾನು ನೇರವಾಗಿ ಹೇಳ್ತಿದ್ದೀನಿ'' ಅಂತ ಹುಚ್ಚ ವೆಂಕಟ್ ಗೆ ರವಿ ಮುರೂರು ಹೇಳಿದರು.

  ಮಚ್ಚು ಹಿಡ್ಕೊಂಡು ಬರ್ತಾರಾ?

  ಮಚ್ಚು ಹಿಡ್ಕೊಂಡು ಬರ್ತಾರಾ?

  ''ದೊಡ್ಡವರಾಗಲಿ, ಸಣ್ಣವರಾಗಲಿ ತಪ್ಪು ಮಾಡಿದಾಗ ತಿದ್ದಿ ನಡೀಬೇಕು. ನೀವು ತಪ್ಪು ಮಾಡಿದ್ದೀರಾ. ಹೊರಗಡೆ ನೀವು ಲಾರ್ಡ್ ಲಬಕ್ ದಾಸ್ ಇರಬಹುದು. ಮನೆಯಲ್ಲಿ ಎಲ್ಲರೂ ಒಂದೇ. ಎಲ್ಲರಿಗೂ ಆರ್ಡರ್ ಮಾಡೋದಲ್ಲ. ಟೀ ಮಾಡ್ಕೊಂಡು ಬಾ ಅಂತ. ನಿಮ್ಮ ಹುಡುಗರಿಗೆ ಹೇಳ್ಸಿ. ಹೊರಗಡೆ ಮಚ್ಚು ಎತ್ತಿಕೊಳ್ಳಲಿ'' ಅಂತ ಹುಚ್ಚ ವೆಂಕಟ್ ಗೆ ರವಿ ಮುರೂರು ಆವಾಜ್ ಹಾಕಿದರು.

   ಆರ್ಡರ್ ಮಾಡಿಲ್ಲ.!

  ಆರ್ಡರ್ ಮಾಡಿಲ್ಲ.!

  ''ನಾನು ಯಾರಿಗೂ ಆರ್ಡರ್ ಮಾಡಿಲ್ಲ. ಟಾಸ್ಕ್ ಮಾಡಿಲ್ಲ ಹೌದು. ನನ್ನಿಂದ ತಪ್ಪಾಗಿದೆ. ಅದನ್ನ ಹೇಳಿದ್ದೀನಿ. ನೀವು ಯಾಕ್ ಮಾತನಾಡ್ತೀರಾ'' ಅಂತ ಹುಚ್ಚ ವೆಂಕಟ್ ರವಿ ಮುರೂರುಗೆ ಕೇಳಿದರು.

  ರವಿ ಮುರೂರುಗೆ ಹೊಡೀತಾರಂತೆ ಹುಚ್ಚ ವೆಂಕಟ್.!

  ರವಿ ಮುರೂರುಗೆ ಹೊಡೀತಾರಂತೆ ಹುಚ್ಚ ವೆಂಕಟ್.!

  ಇಬ್ಬರ ನಡುವೆ ವಾಕ್ಸಮರ ಶುರುವಾಗ್ತಿದ್ದಂತೆ, ಹುಚ್ಚ ವೆಂಕಟ್ ರನ್ನ ಮನೆ ಒಳಗೆ ಕರೆದುಕೊಂಡು ಬರಲಾಯ್ತು. ''ಅವರು ಹಾಗೆ ಮಾತನಾಡಿದ್ದು ತಪ್ಪು. ಒಂದೆರಡು ವಾರ ಇಲ್ಲಿರೋಕೆ ನಾನು ಬಂದಿರೋದು. ಹೋಗ್ಬೇಕಾದ್ರೆ, ಅವನಿಗೆ ಹೇಗೆ ಹೊಡಿತೀನಿ ನೋಡ್ತಿರಿ. ಪಿತ್ತ ನೆತ್ತಿಗೇರಿದ್ರೆ, ಅವನು ಬಾಯಲ್ಲಿ ಮಾತನಾಡ್ತಾನೆ, ನಾನು ಕೈಯಲ್ಲಿ ಮಾತನಾಡ್ತೀನಿ'' ಅಂತ ಹುಚ್ಚ ವೆಂಕಟ್ ಸಿಡಿಮಿಡಿಗೊಂಡರು.

  ಕಿಟ್ಟಿ ವ್ಯಂಗ್ಯ

  ಕಿಟ್ಟಿ ವ್ಯಂಗ್ಯ

  'ಹೊಡಿತೀನಿ ಹೊಡಿತೀನಿ ಅಂತೀರಾ. ಒಂದಿನಾ ಹೊಡೆದಿಲ್ಲ. ನನಗೆ ಹೊಡೆದು ಬಿಡಿ ಹೋಗ್ಲಿ, ಹೇಗೆ ಹೊಡೀತೀರಾ ನೋಡೋಣ. ಯಾವಾಗ್ಲೂ ನನ್ ಎಕ್ಕಡ ಅಂತೀರಾ, ನೀವೊಬ್ಬರೇನಾ ಎಕ್ಕಡ ಹಾಕೋದು, ನಾವೆಲ್ಲಾ ಎಕ್ಕಡ ಹಾಕಲ್ವಾ'' ಅಂತ ಸುನಾಮಿ ಕಿಟ್ಟಿ ವ್ಯಂಗ್ಯವಾಡಿದರು.

  ನನಗೆ ಯಾರೂ ಅಡ್ವೈಸ್ ಮಾಡ್ಬಾರ್ದು.!

  ನನಗೆ ಯಾರೂ ಅಡ್ವೈಸ್ ಮಾಡ್ಬಾರ್ದು.!

  ''ನನಗೆ ಯಾರೂ ಅಡ್ವೈಸ್ ಮಾಡ್ಬಾರ್ದು. ಹಾಗೆ ಮಾಡೋದು ನನಗೆ ಇಷ್ಟ ಆಗೋಲ್ಲ. ನಾನು 20 ಸಲಿ ಕೇಳಿದ್ರೂ ಅಡುಗೆ ಮಾಡ್ಬೇಕ್'' ಅಂತ ಹುಚ್ಚ ವೆಂಕಟ್ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು.

  English summary
  Singer Ravi Muroor had an argument with Huccha Venkat over not performing in the task given by Bigg Boss. Read the article to know what all happened on Day 8 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X