»   » 'ಬಿಗ್ ಬಾಸ್' ಮನೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ.!

'ಬಿಗ್ ಬಾಸ್' ಮನೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಶುರುವಾಗುವುದಕ್ಕೂ ಮುನ್ನ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಒಂದು ಮಾತು ಹೇಳಿದರು. ''ಈ ಬಾರಿ ಶೋನಲ್ಲಿ ಕನ್ನಡತನ ಹೆಚ್ಚು. ಕನ್ನಡಕ್ಕೆ ಸಂಬಂಧಪಟ್ಟ ಟಾಸ್ಕ್ ಗಳನ್ನ ನೀಡಲಾಗುತ್ತದೆ'' ಅಂತ.

ಆದ್ರೆ, 'ಬಿಗ್ ಬಾಸ್-3' ಶುರುವಾದಾಗಿನಿಂದಲೂ ಮನೆಯಲ್ಲಿ ಕನ್ನಡಕ್ಕಿಂತ ಇಂಗ್ಲೀಷ್ ಭಾಷೆಯನ್ನ ಬಳಸುವವರೇ ಹೆಚ್ಚು. ನಟಿ ಪೂಜಾ ಗಾಂಧಿ ಕೂಡ ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ. ['ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ]

pooja-gandhi

ಮಾಡೆಲ್ ಕಮ್ ನೃತ್ಯಗಾರ್ತಿ ಜಯಶ್ರೀ ಕನ್ನಡತಿ ಆಗಿದ್ದರೂ, ಅವರ ಸಂಭಾಷಣೆಯಲ್ಲಿ ಆಂಗ್ಲ ಪದಗಳೇ ಜಾಸ್ತಿ. ಇನ್ನೂ ಮಾತಿನ ಭರದಲ್ಲಿ ಹುಚ್ಚ ವೆಂಕಟ್ ಇಂಗ್ಲೀಷ್ ಪದಗಳನ್ನ ಬಳಸುತ್ತಾರೆ.

'ಬಿಗ್ ಬಾಸ್' ನಲ್ಲಿ ಕನ್ನಡ ಕಂಪು ಇಲ್ಲವಲ್ಲ ಅಂತ ಎಲ್ಲರೂ ಮೂಗು ಮುರಿಯುತ್ತಿರುವಾಗಲೇ, 'ಬಿಗ್ ಬಾಸ್' ನಿನ್ನೆ ನಟಿ ಪೂಜಾ ಗಾಂಧಿ ಮತ್ತು ಗಾಯಕ ರವಿ ಮುರೂರು ರವರಿಗೆ ವಿಶಿಷ್ಟ ಟಾಸ್ಕ್ ನೀಡಿದರು.

ravi-muroor

ನಾಡಗೀತೆ ''ಜಯ ಭಾರತ ಜನನಿಯ ತನುಜಾತೆ...'' ಚರಣ ಮತ್ತು ಪಲ್ಲವಿಯನ್ನ ನಟಿ ಪೂಜಾ ಗಾಂಧಿ ತಪ್ಪಿಲ್ಲದಂತೆ ಹಾಡಬೇಕು. ಅವರಿಗೆ ಹಾಡನ್ನ ಕಲಿಸುವ ಜವಾಬ್ದಾರಿ ಗಾಯಕ ರವಿ ಮುರೂರುರದ್ದು.

ನಾಡಗೀತೆಯ ಚರಣ ಮತ್ತು ಪಲ್ಲವಿ ಕಲಿತು, ಪೂಜಾ ಗಾಂಧಿ ತಪ್ಪಿಲ್ಲದಂತೆ ಹಾಡುವ ತನಕ 'ಬಿಗ್ ಬಾಸ್' ಮನೆಯ ಯಾವ ಸದಸ್ಯರು ಕೂಡ ಮಲಗುವ ಹಾಗಿಲ್ಲ. [ಮಳೆ ಹುಡುಗಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ.!]

ನಾಡಗೀತೆಯನ್ನ ನಟಿ ಪೂಜಾ ಗಾಂಧಿ ಕಲಿತು ಹಾಡುವುದು ಇನ್ಯಾವಾಗಲೋ ಅಂತ 'ಬಿಗ್ ಬಾಸ್' ಮನೆ ಸದಸ್ಯರು ತಲೆ ಮೇಲೆ ಕೈಹೊತ್ತು ಕುಳಿತಿರುವಾಗಲೇ, ಕೆಲವೇ ನಿಮಿಷಗಳಲ್ಲಿ ನಾಡಗೀತೆ ಕಲಿತು, ಕ್ಯಾಮರಾ ಮುಂದೆ ನಿಂತು ಪೂಜಾ ಗಾಂಧಿ ಹಾಡಿಬಿಟ್ಟರು.

ಅಂತೂ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ 'ಬಿಗ್ ಬಾಸ್' ಮನೆಯಲ್ಲಿ ಕನ್ನಡ ಡಿಂಡಿಮ ಮೊಳಗಿತು.

English summary
Kannada Actress Pooja Gandhi sung State Anthem 'Jaya Bharata Jananiya Tanujate' in Bigg Boss house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada