'ಡೇಂಜರ್ ಝೋನ್'ನಲ್ಲಿದ್ದಾರೆ ಚಂದನ್ ಮತ್ತು ಅಯ್ಯಪ್ಪ!
'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ಗೌತಮಿ ಗೌಡ ಮತ್ತು ಸುನಾಮಿ ಕಿಟ್ಟಿ ಔಟ್ ಆದರು. 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ಎಂದಿನಂತೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುತ್ತಾರೆ.
ಅದರಂತೆ ಈ ವಾರ ಗೌತಮಿ ಗೌಡ ಮತ್ತು ಸುನಾಮಿ ಕಿಟ್ಟಿಗೂ ವಿಶೇಷ ಅಧಿಕಾರ ಲಭಿಸ್ತು. 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ತಾವು ಇಚ್ಛಿಸುವ ಸ್ಪರ್ಧಿಗಳ ಹೆಸರನ್ನೂ ಇಬ್ಬರೂ ಪ್ರತ್ಯೇಕವಾಗಿ ಹೇಳ್ಬೇಕಿತ್ತು. [ರೆಹಮಾನ್ ಗೆ ಸುದೀಪ್ ಕೊಟ್ಟ ಶಾಕ್ ಮತ್ತು ಸರ್ ಪ್ರೈಸ್!]

ಅದರಂತೆ, ಗೌತಮಿ ಗೌಡ ಚಂದನ್ ಹೆಸರನ್ನ ಹೇಳಿದರು. ಸುನಾಮಿ ಕಿಟ್ಟಿ ಅಯ್ಯಪ್ಪ ರನ್ನ ಆಯ್ಕೆ ಮಾಡಿದರು. ಇದರಿಂದ ಚಂದನ್ ಮತ್ತು ಅಯ್ಯಪ್ಪಗೆ ತಲಾ ಒಂದು ವೋಟ್ ಬಿದ್ಹಾಗಾಗಿದೆ. ಹೀಗಾಗಿ ಅಯ್ಯಪ್ಪ ಮತ್ತು ಚಂದನ್ ಸದ್ಯಕ್ಕೆ ಡೇಂಜರ್ ಝೋನ್ ನಲ್ಲಿದ್ದಾರೆ.[ಗೌತಮಿ ಔಟ್ ಆಗಿದ್ದು ಓಕೆ! ಸುನಾಮಿ ಕಿಟ್ಟಿ ಯಾಕೆ?]
ಇವರೊಂದಿಗೆ ಶ್ರುತಿ, ಪೂಜಾ ಗಾಂಧಿ, ಆನಂದ್ ಮತ್ತು ರೆಹಮಾನ್ ಪೈಕಿ ಯಾರಿಗೆ ಹೆಚ್ಚು ವೋಟ್ಸ್ ಲಭಿಸಿ ನಾಮಿನೇಟ್ ಆಗುತ್ತಾರೆ ಅಂತ ತಿಳಿಯಲು ನಾಳೆಯವರೆಗೂ ಕಾಯಬೇಕು.


Click it and Unblock the Notifications











