»   » 'ಬಿಗ್ ಬಾಸ್' ವೇದಿಕೆಯಲ್ಲಿ ಹುಚ್ಚ ವೆಂಕಟ್-ರವಿ ಮುರೂರು ಹೇಳಿದ್ದೇನು?

'ಬಿಗ್ ಬಾಸ್' ವೇದಿಕೆಯಲ್ಲಿ ಹುಚ್ಚ ವೆಂಕಟ್-ರವಿ ಮುರೂರು ಹೇಳಿದ್ದೇನು?

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೂ, ಗಾಯಕ ರವಿ ಮುರೂರು ರವರಿಗೂ ಆದ ಗಲಾಟೆ ನಿಮಗೆಲ್ಲಾ ನೆನಪಿರಲೇಬೇಕು. ಒಂದ್ವೇಲೆ ಮರೆತುಹೋಗಿದ್ರೆ, ಈ ಲಿಂಕ್ ಕ್ಲಿಕ್ ಮಾಡಿ ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

ಗಾಯಕ ರವಿ ಮುರೂರು ಮೇಲೆ ಹಲ್ಲೆ ನಡೆಸಿ, ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದರು. ನಂತರ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಆರ್ಭಟಿಸಿದ ಹುಚ್ಚ ವೆಂಕಟ್ ಕಥೆ ಏನಾಯ್ತು ಅಂತ ನೀವೇ ಪ್ರತಿ ನಿತ್ಯ ಬ್ರೇಕಿಂಗ್ ನ್ಯೂಸ್ ನಲ್ಲಿ ನೋಡಿರ್ತೀರಾ.[ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!]

'ರವಿ ಮುರೂರು ಸಿಕ್ಕರೆ ಸಾಯಿಸಿಬಿಡ್ತೀನಿ' ಅಂತ ಹೇಳ್ತಾಯಿದ್ದ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಂಡಿದ್ದರು. ಅಚ್ಚರಿ ಅಂದ್ರೆ, ಹುಚ್ಚ ವೆಂಕಟ್ ಮತ್ತು ರವಿ ಮುರೂರು ಒಟ್ಟಿಗೆ ಕುಳಿತುಕೊಂಡಿದ್ದರು. ಇಬ್ಬರ ಮಧ್ಯೆ ಏನಾಯ್ತು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆಯಲ್ಲಿ ಹುಚ್ಚ ವೆಂಕಟ್!

'ಬಿಗ್ ಬಾಸ್' ಮನೆಯಿಂದ ಕಿಕ್ ಔಟ್ ಆದ್ಮೇಲೆ ಮತ್ತೆ ಆ ಕಡೆ ಹುಚ್ಚ ವೆಂಕಟ್ ಮುಖ ಮಾಡುತ್ತಾರೋ ಇಲ್ವೋ ಎನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿತ್ತು. ಆದ್ರೆ, ಕೊಂಚ ಕೂಡ ಹಿಂದು ಮುಂದು ನೋಡದೆ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದರು.

ಸುದೀಪ್ ಅಪ್ಪಿಕೊಂಡ ಹುಚ್ಚ ವೆಂಕಟ್!

'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಸ್ಟೇಜ್ ಗೆ ಎಂಟ್ರಿಕೊಡುತ್ತಿದ್ದಂತೆಯೇ ಸುದೀಪ್ ರವರನ್ನ ಹುಚ್ಚ ವೆಂಕಟ್ ಅಪ್ಪಿಕೊಂಡರು.

ಸುದೀಪ್ ಮತ್ತು ಹುಚ್ಚ ವೆಂಕಟ್ ರವರ ಸಂಭಾಷಣೆ

ಸುದೀಪ್ - ''ವೆಂಕಟ್ ಅವರೇ..''
ಹುಚ್ಚ ವೆಂಕಟ್ - ''ಹೇಳಿ ಬ್ರದರ್ ಹೇಗಿದ್ದೀರಾ?''
ಸುದೀಪ್ - ''ವಾಪಸ್ ಇದೇ ವೇದಿಕೆ ಮೇಲೆ ನಿಮ್ಮನ್ನ ನೋಡಿ ಖುಷಿ ಆಗುತ್ತಿದೆ. ಹೇಗೆ ಅನಿಸ್ತಾಯಿದೆ''
ಹುಚ್ಚ ವೆಂಕಟ್ - ''ಇಲ್ಲಿ ಅನ್ನ ತಿಂದು ಹೋದೆ. ಅನ್ನದ ಋಣ ತೀರಿಸುವುದಕ್ಕೆ ವಾಪಸ್ ಬಂದಿದ್ದೀನಿ''

ಈ ಬಾರಿ ಏಕವಚನ ಬಳಸಲಿಲ್ಲ!

ಈ ಬಾರಿ ಸುದೀಪ್ ಜೊತೆ ಮಾತನಾಡುತ್ತಾ ಹುಚ್ಚ ವೆಂಕಟ್ ಏಕವಚನ ಬಳಸದೆ, ಬಹಳ ಗೌರವಯುತವಾಗಿ ಮಾತನಾಡಿದ್ದು ಗಮನಾರ್ಹ.

ಸುದೀಪ್ - ರವಿ ಮುರೂರು ಸಂಭಾಷಣೆ

ಸುದೀಪ್ - ''ಖುಷಿ ಆಗ್ತಿದೆ. ನಿಮ್ಮನ್ನ ಮತ್ತು ವೆಂಕಟ್ ಅವರನ್ನ ಪಕ್ಕ-ಪಕ್ಕ ನೋಡಿದ್ದಕ್ಕೆ''

ರವಿ ಮುರೂರು - ಹೌದು ಸರ್, ಮನೆ ಅಂದ್ಮೇಲೆ ಅಣ್ಣ-ತಮ್ಮ ಇದ್ದೇ ಇರ್ತಾರೆ. ಅಣ್ಣ-ತಮ್ಮ ಅಂದ್ಮೇಲೆ ಮನಸ್ತಾಪ ಇದ್ದೇ ಇರ್ಬೇಕು. ಅದನ್ನ ನಾನು ಯಾವತ್ತೋ ಬಿಟ್ಟಿದ್ದೀನಿ. ಇವತ್ತೂ ಅದನ್ನ ಹೇಳ್ತಾಯಿದ್ದೀನಿ. ವೆಂಕಟ್ ಅಣ್ಣ ಐ ಲವ್ ಯು''

ಹುಚ್ಚ ವೆಂಕಟ್ ನೀಡಿದ ಪ್ರತಿಕ್ರಿಯೆ

ಹುಚ್ಚ ವೆಂಕಟ್ - ''ರವಿ ನನ್ನ ಬ್ರದರ್ ಅಂದಿದ್ಯಾ. ಐ ಲವ್ ಯು ಕಣೋ''

ಈ ಬುದ್ದಿ ಮೊದಲೇ ಇದ್ದಿದ್ರೆ?

ಈ ಬುದ್ದಿ ಇಬ್ಬರಿಗೂ ಮೊದಲೇ ಇದ್ದಿದ್ರೆ ದೊಡ್ಡ ಗಲಾಟೆ ಆಗುತ್ತಲೇ ಇರ್ಲಿಲ್ಲ. ಹುಚ್ಚ ವೆಂಕಟ್ ಜೈಲಿಗೂ ಹೋಗುತ್ತಿರಲಿಲ್ಲ.

ಹುಚ್ಚ ವೆಂಕಟ್ ಗಿದ್ದ ಆಸೆ!

''ಪೂಜಾ ಗಾಂಧಿ, ನನ್ನ ಸಿಸ್ಟರ್ ಗೆಲ್ಲಬೇಕು'' ಅಂತ ಹುಚ್ಚ ವೆಂಕಟ್ ತಮ್ಮ ಇಚ್ಛೆ ವ್ಯಕ್ತಪಡಿಸಿದರು.

ಸ್ಟೇಜ್ ಮೇಲೆ ಹುಚ್ಚ ವೆಂಕಟ್ ಸ್ಟೆಪ್

ಇನ್ನೂ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ಸ್ಟೇಜ್ ನಲ್ಲಿ ಹುಚ್ಚ ವೆಂಕಟ್ ತಮ್ಮದೇ ಹಾಡಿಗೆ ಸ್ಟೆಪ್ ಹಾಕಿದರು.

English summary
All is well between Singer Ravi Muroor and YouTube Star Huccha Venkat. Both spoke to each other in Bigg Boss Kannada 3 Grand Finale. Read the article for the detailed conversation between Huccha Venkat and Ravi Muroor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada