»   » ಅಳುಮುಂಜಿ ಸ್ಟಾರ್ ಶ್ರುತಿಗ್ಯಾಕೆ ಕಿರೀಟ, ನನ್ ಮಗಂದ್!

ಅಳುಮುಂಜಿ ಸ್ಟಾರ್ ಶ್ರುತಿಗ್ಯಾಕೆ ಕಿರೀಟ, ನನ್ ಮಗಂದ್!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ 3 ಮುಕ್ತಾಯವಾಗಿದೆ. ಅಳುಮುಂಜಿ ಸ್ಟಾರ್ ನಟಿ ಶ್ರುತಿ ಅವರು 'ಬಿಗ್ ಬಾಸ್-3' ರಿಯಾಲಿಟಿ ಶೋ ವಿಜೇತರಾಗಿ ಪ್ರಣಾಮ ಮಾಡಿದ್ದಾರೆ. ಉದಯೋನ್ಮುಖ ನಟ ಚಂದನ್ ಎರಡನೇ ಸ್ಥಾನ ಪಡೆದಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೂ ಮೂರು ದಿನಗಳ ಮುಂಚಿತವಾಗೇ ವಿನ್ನರ್ ಹೆಸರು ಬಹಿರಂಗವಾಗಿತ್ತು.

''ಅರುಣ್ ಸಾಗರ್ ಗೆಲ್ಲಬೇಕಿತ್ತು, ವಿಜಯರಾಘವೇಂದ್ರಗೆ ಕೊಟ್ಟಿದ್ದು ಸರಿಯಿಲ್ಲ...ಸೃಜನ್ ವಾಸ್ ದ ರಿಯಲ್ ವಿನ್ನರ್, ಅಕುಲ್ ಬಾಲಾಜಿ ವೇಸ್ಟು...ಈಗ... ಮಾಸ್ಟರ್ ಆನಂದ್ ವಿನ್ನಿಂಗ್ ಮಾಸ್ಟರ್...ಶೃತಿಗೆ ಬಿಗ್ ಬಾಸ್ ಕಿರೀಟ ಅನ್ಯಾಯ.. ಎಂಬ ವಾಕ್ಯಗಳುಳ್ಳ ಟ್ರಾಲ್ಸ್, ಮೀಮ್ಸ್ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿತು.[ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ಹೈಲೈಟ್ಸ್]

ಟ್ರಾಲ್ ಹೈಕ್ಳು ಹುಡುಗರಿಗಂತೂ ಪುಲ್ ಟೈಮ್ ಕೆಲಸ. ಬಹುಶಃ ಜನ ಗ್ರ್ಯಾಂಡ್ ಫಿನಾಲೆ ಹೊತ್ತಿಗೆ ಈ ಟ್ರಾಲ್ ಗಳಿಂದಲೇ ಹೆಚ್ಚು ತೃಪ್ತಿ ಪಡೆದುಕೊಂಡಿದ್ದರೂ ಆಚ್ಚರಿಯೇನಿಲ್ಲ. ಗಾಳಿ ಸುದ್ದಿಗಳು ಶರವೇಗದಲ್ಲಿ ಎಲ್ಲೆಡೆ ಹಬ್ಬಿತ್ತು.

ಗ್ರ್ಯಾಂಡ್ ಫಿನಾಲೆ ಏನೋ ಎಂದಿನಂತೆ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಆದರೆ, ಫಿನಾಲೆ ಗೆದ್ದವರ ಬಗ್ಗೆ ಕಿಚಾಯಿಸುವುದು ಮಾತ್ರ ಇನ್ನೂ ಮುಂದುವರೆದಿದೆ.

ನನ್ ಮಗಂದ್ ಅಣ್ಣ ನೇ ವಿನ್ನರ್

ಅಸಲಿಗೆ ಈ ಟ್ರಾಲ್, ಮೀಮ್ಸ್ ಗೆಲ್ಲ ಕಿಚ್ಚು ಹಚ್ಚಿದ್ದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಎಂದರೆ ತಪ್ಪಾಗಲಾರದು. ನನ್ ಮಗಂದ್ ಅಣ್ಣ ನೇ ವಿನ್ನರ್ ಎಂಬ ಟ್ರಾಲ್ ಬಹು ನಿರೀಕ್ಷಿತ.

ಬಿಗ್ ಬಾಸ್ ಟೋಪಿ ಹಾಕಿದ್ದು ಯಾರಿಗೆ

ಬಿಗ್ ಬಾಸ್ ಟೋಪಿ ಹಾಕಿದ್ದು ಯಾರಿಗೆ ಇಲ್ಲಿದೆ ಉತ್ತರ, ಸುದೀಪ್, ಆನಂದ್ ಹಾಗೂ ಜನರಿಗೆ

ಕಿರಿಕಿರಿ ಸ್ಟಾರ್ ಕೃತಿಕಾ ಕಂಡರೆ ನಗು ಮಾಯ

ಕಿರಿಕಿರಿ ಸ್ಟಾರ್ ಕೃತಿಕಾ ಕಂಡರೆ ನಗು ಮಾಯ ಆದರೆ, ಆಕೆ ಬಗ್ಗೆ ಬರುವ ಟ್ರಾಲ್ ಗಾಗಿ ಎಲ್ಲರೂ ಕಾತುರದಿಂದ ಕಾಯುವುದು ತಪ್ಪಲ್ಲವಯ್ಯ

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮಜಾ ಕೆಡಿಸಿದ ಚಿತ್ರ

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮಜಾ ಕೆಡಿಸಿದ ಚಿತ್ರ ಇದು ಎಂದರೆ ತಪ್ಪಾಗಲಾರದು. ಮೊದಲಿಗೆ ರಿಸಲ್ಟ್ ಗೊತ್ತಿದ್ದರಿಂದ ಅನೇಕ ಜನ ಪಕ್ಕದ ಜೀಟಿವಿಯಲ್ಲಿ ದರ್ಶನ ಕಥೆ ಕೇಳಿಸಿಕೊಳ್ಳತೊಡಗಿದ್ದು ಸುಳ್ಳಲ್ಲ.

ವೋಟಿಂಗ್ ಬಗ್ಗೆ ವೆಂಕಟ್ ಡೈಲಾಗ್ ರಿಪೀಟ್

ವೋಟಿಂಗ್ ಮಾಡಿ ಕಾಸು ಖರ್ಚು ಮಾಡುವ ಬದಲು ನಾಯಿಗೆ ಬನ್ ಹಾಕಿ ಎಂದು ಹೇಳಿದ್ದ ವೆಂಕಟ್ ಡೈಲಾಗ್ ಆಧಾರಿಸಿದ ಟ್ರಾಲ್.

ವೋಟಿಂಗ್ ಏನಾದರೂ ಉಚಿತವಾಗಿದ್ದರೆ

ವೋಟಿಂಗ್ ಏನಾದರೂ ಉಚಿತವಾಗಿದ್ದರೆ ಆನಂದ್ ಕೂಡಾ ಮೋದಿ ಅವರಂತೆ ಐತಿಹಾಸಿಕ ಜಯ ದಾಖಲಿಸುತ್ತಿದ್ದರು.

ಯಾರು ಗೆಲ್ಲುತ್ತಾರೆ ಎಂಬ ಗೊಂದಲವಿದ್ದಾಗ

ಯಾರು ಗೆಲ್ಲುತ್ತಾರೆ ಎಂಬ ಗೊಂದಲವಿದ್ದಾಗ ಮೂಡಿದ ಟ್ರಾಲ್ ಪ್ರಕಾರ ಹುಚ್ಚ ವೆಂಕಟ್ ಅವರೇ ಜನರ ಪ್ರೀತಿಯ ಚಾಂಪಿಯನ್.

ರಿಯಲ್ ಸ್ಟಾರ್ ಹೇಳಿದ ರಿಯಲ್ ಸಂಗತಿ

ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ ರಿಯಲ್ ಸಂಗತಿ ಪ್ರಕಾರ, ನಮಗೆ (ಸಾರ್ವಜನಿಕರು) ಇಷ್ಟವಾದವರು ಯಾರು ಗೆಲ್ಲಲ್ಲ

English summary
Bigg Boss Kannada 3 Grand Finale concluded with Shruthi lifting the trophy and Chandan as runner. Trolls Memes continued even after the grand finale asking why Shruthi selected as Winner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada