»   » 'ಕಳ್ಳ-ಪೊಲೀಸ್' ಆಟ; 'ಬಿಗ್ ಬಾಸ್' ಮನೆಯಲ್ಲಿ ಗದ್ದಲ ನಿಲ್ಲಂಗಿಲ್ಲ!

'ಕಳ್ಳ-ಪೊಲೀಸ್' ಆಟ; 'ಬಿಗ್ ಬಾಸ್' ಮನೆಯಲ್ಲಿ ಗದ್ದಲ ನಿಲ್ಲಂಗಿಲ್ಲ!

Posted By:
Subscribe to Filmibeat Kannada

'ಚಿ.ಸೌ.ಸಾವಿತ್ರಿ' ಧಾರಾವಾಹಿ ಖ್ಯಾತಿಯ ಗೌತಮಿ ಗೌಡ 'ಬಿಗ್ ಬಾಸ್' ಮನೆಯಲ್ಲಿ ಪೊಲೀಸ್ ಅವತಾರ ತಾಳಿದ್ದೇ ತಡ ಅಬ್ಬರಿಸುವುದಕ್ಕೆ ಶುರುಮಾಡಿದ್ದಾರೆ.

ಅತಿಥಿಗಳಾಗಿ ಒಟ್ಟಿಗೆ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಮಿತ್ರ ಮತ್ತು ಗೌತಮಿ ನಡುವೆಯೇ ನಿನ್ನೆ ದೊಡ್ಡ ವಾಗ್ವಾದ ನಡೆಯಿತು.

ತಮಾಷೆಯಾಗಿ ಸಾಗಬೇಕಾದ ಟಾಸ್ಕ್ ಕೆಲವರಿಂದ ಸೀರಿಯಸ್ ಆಗಿ ಅವಾಚ್ಯ ಶಬ್ದಗಳಿಗೂ ಎಡೆಮಾಡಿಕೊಡ್ತು. [ಕಳ್ಳ ಚಂದನ್ - ಪೊಲೀಸ್ ರೆಹಮಾನ್ ನಡುವೆ 'ಬಿಗ್' ಕಿರಿಕ್]

'ಕಳ್ಳ-ಪೊಲೀಸ್' ಆಟದಿಂದಾಗಿ 'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ಕೂಡ ಗದ್ದಲದ ವಾತಾವರಣ ಮುಂದುವರಿಯಿತು. ಮುಂದೆ ಓದಿ....

ಮಿತ್ರ ಮೇಲೆ 'ಕಳ್ಳ' ಚಂದನ್ ಆರೋಪ

ತಮ್ಮ 14 ಅಂಡರ್ ವೇರ್ ಗಳನ್ನ 'ಜನಸಾಮಾನ್ಯ' ಮಿತ್ರ ಕದ್ದಿದ್ದಾರೆ ಅಂತ ಚಂದನ್ ಆರೋಪ ಮಾಡಿದರು. ಪೊಲೀಸರ ತನಿಖೆ ಶುರುವಾಯ್ತು. [ಕುಚ್ಚಿಕ್ಕು ಗೆಳೆಯರು ಅಯ್ಯಪ್ಪ-ಚಂದನ್ ನಡುವೆ ಮನಸ್ತಾಪ]

ಗದ್ದಲ ಶುರುವಾಯ್ತು!

ಸ್ಟೋರ್ ರೂಮ್ ಒಳಗೆ ಇದ್ದ ಮಿತ್ರ, ಆರೋಪ ಸಾಬೀತಾಗುವವರೆಗೂ ಪೊಲೀಸ್ ಸ್ಟೇಷನ್ ಗೆ ಬರಲ್ಲ ಅಂತ ಹಠ ಹಿಡಿದು ಕೂತರು. ಆಗಲೇ, ಅಯ್ಯಪ್ಪ-ಗೌತಮಿ ಮತ್ತು ಮಿತ್ರ ನಡುವೆ ಗಲಾಟೆ ಶುರುವಾಗಿದ್ದು. [ಅಮ್ಮ ಶ್ರುತಿ-ಮಗಳು ಕೃತಿಕಾ ನಡುವೆ ಮಾತಿನ ಸಮರ]

ಗೌತಮಿ-ಮಿತ್ರ ನಡುವೆ ವಾರ್

ಗೌತಮಿ ಅವರು ಹೊಡೆದು ಮಾತನಾಡಿಸುತ್ತಾರೆ ಎನ್ನುವ ಕಾರಣಕ್ಕೆ ಗೌತಮಿ ಹಾಗು ಮಿತ್ರ ನಡುವೆ ಮಾತಿನ ಚಕಮಕಿ ನಡೆಯಿತು.

ಮನೆಯವರ ಬೇಸರ

ಪೊಲೀಸ್ ಸ್ಟೇಷನ್ ಕೀ ಕಳುವಾಗಿದ್ದಕ್ಕೆ, ಅಡುಗೆ ನಿಲ್ಲಿಸಿ ಮನೆಯವರೆಲ್ಲರನ್ನ ಸ್ಟೇಷನ್ ನಲ್ಲಿ ಕರೆತಂದು ಕೂರಿಸಿದ್ದಕ್ಕೆ ಎಲ್ಲಾ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಕಳ್ಳರ ಸಂಖ್ಯೆ ಹೆಚ್ಚಳ

ಜನಸಾಮಾನ್ಯರಾಗಿದ್ದ ಮಿತ್ರ ಮತ್ತು ಕೃತಿಕಾ ಕೂಡ ಕಳ್ಳತನ ಮಾಡಬೇಕೆಂದು 'ಬಿಗ್ ಬಾಸ್' ಆದೇಶಿಸಿದರು.

ಅಯ್ಯಪ್ಪ ಸಂಕಟ

ಕೃತಿಕಾ ಕೊಟ್ಟ ನಕಲಿ ಪಟ್ಟಿಯಿಂದ ಪೊಲೀಸ್ ಅಯ್ಯಪ್ಪ ಕೂಡ 'ಕಳ್ಳ' ಅಂತ ಅನುಮಾನ ಮೂಡತೊಡಗಿತು.

ಮಾಸ್ಟರ್ ಆನಂದ್ ಒಬ್ಬರೇ ಎಂಟರ್ ಟೇನಿಂಗ್!

ಇಡೀ ಟಾಸ್ಕ್ ನಲ್ಲಿ ಮಾಸ್ಟರ್ ಆನಂದ್ ಒಬ್ಬರೇ ವೀಕ್ಷಕರಿಗೆ ಮಜಾ ಕೊಟ್ಟಿದ್ದು. ಅಂಡರ್ ಕವರ್ ಏಜೆಂಟ್ ಅಂತ ಹೇಳಿಕೊಂಡು 'ಅಗ್ನಿ ಐಪಿಎಸ್' ಎನ್ನುವ ಡೈಲಾಗ್ ಹೊಡೆಯುತ್ತಾ ವೀಕ್ಷಕರನ್ನ 'ರಿಲ್ಯಾಕ್ಸ್' ಮಾಡಿದವರು ಮಾಸ್ಟರ್ ಆನಂದ್ ಮಾತ್ರ! [ಇನ್ನೆರಡು ವಾರ ಮಾಸ್ಟರ್ ಆನಂದ್ ಬಗ್ಗೆ ಯಾರೂ ಕೆಮ್ಮಂಗಿಲ್ಲ!]

English summary
Kalla-Police task continues for the second day in Bigg Boss house. Read the article to know what all happened on Day 45 in Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada