For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ ಮಜಾ ಕೊಟ್ಟ 'ನಾನು ನಾನೇ' ಟಾಸ್ಕ್!

  By Harshitha
  |

  ಅಂತೂ ಇಂತೂ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಒಂದೊಳ್ಳೆ ಮನರಂಜನೆ ಸಿಕ್ಕಿದ್ದು 'ನಾನು ನಾನೇ' ಟಾಸ್ಕ್ ನಲ್ಲಿ.

  ಇದುವರೆಗೂ ಬರೀ ಕಿತ್ತಾಟ, ಜಗಳ, ವಾದ, ವಿವಾದ ನೋಡಿ ನೋಡಿ ಬೇಸೆತ್ತಿದ್ದ ವೀಕ್ಷಕರಿಗೆ ನಿನ್ನೆ 'ಬಿಗ್ ಬಾಸ್' ಮನೆ ಸದಸ್ಯರು ಸಖತ್ ಕಚಗುಳಿ ಕೊಟ್ರು. [ಇದ್ದದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಅಯ್ಯಪ್ಪಗೆ ಟಾಂಗ್ ಕೊಟ್ಟ ಶ್ರುತಿ]

  ಸಮಾಜದಲ್ಲಿ ಕೆಲ ವಿಶಿಷ್ಟ ಜೀವನ ಕ್ರಮಗಳನ್ನು ಅನುಸರಿಸುತ್ತಾ 'ಬಿಗ್ ಬಾಸ್' ಮನೆ ಸದಸ್ಯರು ಖುಷಿ ಪಡಲಿ ಎಂಬ ಆಶಯದೊಂದಿಗೆ 'ನಾನು ನಾನೇ' ಟಾಸ್ಕ್ ನೀಡಲಾಯ್ತು.

  ಅದರಲ್ಲಿ ವಲಸೆ ಬಂದೆ ಮನೆಗೆಲಸದವರಾಗಿ ಮಾಸ್ಟರ್ ಆನಂದ್, ಕೊರವಂಜಿ ಆಗಿ ನಟಿ ಶ್ರುತಿ ಸೂಪರ್ ಪರ್ಫಾಮೆನ್ಸ್ ನೀಡಿದರು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 80ನೇ ದಿನ ಏನೇನೆಲ್ಲಾ ಆಯ್ತು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ಜೋಕರ್ ಆದ ಪೂಜಾ ಗಾಂಧಿ

  ಜೋಕರ್ ಆದ ಪೂಜಾ ಗಾಂಧಿ

  ನಟಿ ಪೂಜಾ ಗಾಂಧಿ ಜೋಕರ್ ಪಾತ್ರ ನಿರ್ವಹಿಸಬೇಕಿತ್ತು. ಯಾವುದೇ ಕಾರಣಕ್ಕೂ ಪೂಜಾ ಅಳುವಂತಿಲ್ಲ. ಭಾವುಕರಾಗಿ ಸುಮ್ಮನೆ ಕೂರುವಂತಿಲ್ಲ. ಸದಾ ಕಾಲ ಜೋಕರ್ ಆಗಿ ಎಲ್ಲರನ್ನ ರಂಜಿಸುವ ಜವಾಬ್ದಾರಿ ಅವರದ್ದು.

  ಟಿವಿ ರಿಪೋರ್ಟರ್ ಆದ ರೆಹಮಾನ್

  ಟಿವಿ ರಿಪೋರ್ಟರ್ ಆದ ರೆಹಮಾನ್

  ರೆಹಮಾನ್ ಟಿವಿ ರಿಪೋರ್ಟರ್ ಪಾತ್ರ ನಿರ್ವಹಿಸಬೇಕಿತ್ತು. ಮನೆಯಲ್ಲಿ ಆಗುವ ಎಲ್ಲಾ ವರ್ತಮಾನಗಳನ್ನ ತಿಳಿ ಹಾಸ್ಯ ಮೂಲಕ 'ಬಿಗ್ ಬಾಸ್'ಗೆ ಒಪ್ಪಿಸುವ ಜವಾಬ್ದಾರಿ ಅವರದ್ದು. ಮನೆಯಲ್ಲಿ ನಡೆಯುವ ಅತಿ ಸೂಕ್ಷ್ಮ ವಿಚಾರಗಳನ್ನು 'ಬಿಗ್ ಬಾಸ್'ಗೆ ರೆಹಮಾನ್ ತಿಳಿಸಬೇಕು.

  ಕೋತಿಯಾದ ಚಂದನ್

  ಕೋತಿಯಾದ ಚಂದನ್

  ನಟ ಚಂದನ್ ಕೋತಿ ಪಾತ್ರ ನಿರ್ವಹಿಸಬೇಕಿತ್ತು. ಕೋತಿ ತರಹ ಜೀವಿಸಿ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಕಾಟ ಕೊಡುವ ಜವಾಬ್ದಾರಿ ಚಂದನ್ ದು. ಚಂದನ್ ಗೆ ಇರುವ ಕಟ್ಟಪ್ಪಣೆ ಅಂದ್ರೆ ಅವರು ಮನುಷ್ಯರ ಹಾಗೆ ಮಾತನಾಡುವಂತಿಲ್ಲ. ಬಾಳೆಹಣ್ಣನ್ನು ಮನೆಯ ಯಾವುದೇ ಸದಸ್ಯರ ಜೊತೆ ಹಂಚಿಕೊಳ್ಳುವಂತಿಲ್ಲ.

  ಸೈನಿಕ ಅಯ್ಯಪ್ಪ

  ಸೈನಿಕ ಅಯ್ಯಪ್ಪ

  ಕ್ರಿಕೆಟರ್ ಅಯ್ಯಪ್ಪ ಸೈನಿಕರಾಗಿ ಮನೆಯಲ್ಲಿ ಶಿಸ್ತು ಕಾಪಾಡಬೇಕು. ಅವರು ಸೈನಿಕನ ಹಾಗೆ ಶಿಸ್ತಿನಿಂದ ನಡೆದುಕೊಳ್ಳಬೇಕು. ಆಲಸ್ಯದಿಂದ ನಡೆದುಕೊಳ್ಳುವಂತಿಲ್ಲ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಾಗ ಮಾರ್ಚ್ ಪಾಸ್ಟ್ ಮಾಡಿಕೊಂಡು ಹೋಗಬೇಕಿತ್ತು.

  ಕೊರವಂಜಿ ಆದ ನಟಿ ಶ್ರುತಿ

  ಕೊರವಂಜಿ ಆದ ನಟಿ ಶ್ರುತಿ

  ನಟಿ ಶ್ರುತಿ ಕೊರವಂಜಿ ಆದರು.

  ಮನೆಗೆಲಸದವ ಆನಂದ್

  ಮನೆಗೆಲಸದವ ಆನಂದ್

  ವಲಸೆ ಬಂದಿರುವ ಮನೆಗೆಲಸದವರ ಪಾತ್ರ ನಿರ್ವಹಿಸಿದರು ಮಾಸ್ಟರ್ ಆನಂದ್. ಮನೆಯಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಕೂಡ ಆನಂದ್ ಮೇಲಿತ್ತು.

  ಭಿಕ್ಷುಕನಾದ ಕಿಟ್ಟಿ

  ಭಿಕ್ಷುಕನಾದ ಕಿಟ್ಟಿ

  ತಮಗೆ ಬೇಕಾದ ಪ್ರತಿ ವಸ್ತುವನ್ನು ಮನೆಯವರಿಂದ ಬೇಡಿ ಬಳಸುವ ಭಿಕ್ಷುಕ ಪಾತ್ರ ನಿರ್ವಹಿಸಿದರು ಸುನಾಮಿ ಕಿಟ್ಟಿ.

  ನಾಗವಲ್ಲಿ ಗೌತಮಿ

  ನಾಗವಲ್ಲಿ ಗೌತಮಿ

  ನೃತ್ಯ ಮತ್ತು ಗಾಯನದಿಂದ ಮನೆಯ ವಾತಾವರಣ ಲವಲವಿಕೆಯಿಂದ ನೋಡಿಕೊಳ್ಳವ ಸಲುವಾಗಿ ಗೌತಮಿ 'ನಾಗವಲ್ಲಿ' ವೇಷ ಧರಿಸಿದರು.

  English summary
  Kannada Actress Shruthi became 'Koravanji', Gowthami Gowda became 'Nagavalli', Pooja Gandhi became 'Joker' in Bigg Boss house. Read the article to know what all happened on Day 80 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X