For Quick Alerts
  ALLOW NOTIFICATIONS  
  For Daily Alerts

  ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯಲ್ಲಿ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೂರನೇ ಆವೃತ್ತಿ ಶುರುವಾಗುವುದಕ್ಕೂ ಮುನ್ನವೇ ಬಿಗ್ ಬಾಸ್ ಶೋ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚು ಹಚ್ಚಿದ್ದರು. ಜೊತೆಗೆ ಎಲ್ಲರ ಕಣ್ಣು ಒಬ್ಬ ಸ್ಪರ್ಧಿ ಮೇಲೆ ನೆಟ್ಟಿತ್ತು.

  ಕಿಚ್ಚ ಸುದೀಪ್ ಅವರ ನಿರೂಪಣೆಯ ಮಜಾ ಅನುಭವಿಸಲು ಸಿದ್ಧರಾಗಿದ್ದ ಪ್ರೇಕ್ಷಕರಿಗೆ ಸಕತ್ ಕಿಕ್ ನೀಡಿದ್ದು ಮಾತ್ರ ಹುಚ್ಚ ವೆಂಕಟ್. ವೆಂಕಟ್ ಅವರ ಬಗ್ಗೆ ಪ್ರೋಮೋ ಶೂಟ್ ಮಾಡಿದ್ದು ಹೇಗೆ ಎಂಬುದನ್ನು ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗಬಹುದು. [ಹುಚ್ಚ ವೆಂಕ್ಟನ ಕಾವೇರಿ... ಐ ಮಿಸ್ ಹರ್ ಸಾಂಗ್]

  ವೆಂಕಟ್ ಎಂಟ್ರಿ, ಸುದೀಪ್ ಜೊತೆ ಮಾತಾನಾಡುತ್ತಿದ್ದ ಸ್ಟೈಲ್, ಮನೆ ಪ್ರವೇಶದ ಬಗ್ಗೆ ಚರ್ಚೆ ಎಲ್ಲವೂ ನಿಮಗೆ ಫಿಲ್ಮಿ ಬೀಟ್ ನ ದಿನದ ಹೈಲೈಟ್ಸ್ ನಲ್ಲಿ ಸಿಗಲಿದೆ.[#BBK3withkicchasudeep ಟ್ರೆಂಡಿಂಗ್ ಮಾಡಿ ಗುರೂ!]

  ಸದ್ಯಕ್ಕೆ ಎಡಗಾಲಿಟ್ಟು ಮನೆಯೊಳಗೆ ಹೋದ ಹುಚ್ಚ ವೆಂಕಟ್ ಗೆ ಬಿಗ್ ಬಾಸ್ ಕೊಟ್ಟ ತಂಗಿ ಸಿಕ್ಕಿದ್ದಾಳೆ. ಮುಂದಿನ ಚಿತ್ರಕ್ಕೆ ನಟಿಯನ್ನು ಗೊತ್ತು ಮಾಡಿಕೊಂಡಿದ್ದಾರೆ. ಮುಂದಿನ ಎಪಿಸೋಡ್ ಪ್ರೊಮೋದಲ್ಲಿ ಹುಚ್ಚ ವೆಂಕಟ್ ಅಬ್ಬರದ ಝಲಕ್ ಕೂಡಾ ಕಾಣಸಿಗುತ್ತದೆ. ಈಗ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹುಚ್ಚ ವೆಂಕಟ್ ಬಗ್ಗೆ ಬಂದಿರುವ ವೈವಿಧ್ಯಮಯ ಟ್ವೀಟ್ ಇಲ್ಲಿದೆ ನೋಡಿ, ಓದಿ ಆನಂದಿಸಿ, ಅಷ್ಟ್ ಸಾಕ್!

  ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಎಂಟ್ರಿ ಸೂಪರ್

  ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಎಂಟ್ರಿ ಸೂಪರ್

  ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಎಂಟ್ರಿ ಸೂಪರ್ ಆಗಿತ್ತು. ವೆಂಕಟ್ ಇರುವ ತನಕ ಮಾತ್ರ ಬಿಗ್ ಬಾಸ್ ನೋಡುತ್ತೇನೆ ಎಂದ ಅಭಿಮಾನಿಗಳು.

  ಚಿತ್ರಮ೦ದಿರಗಳ ಸ೦ಜೆ ಮತ್ತು ರಾತ್ರಿ ಶೋಗಳ ಗತಿ ಏನು?

  ಬಿಗ್ ಬಾಸ್ ಇರುವಾಗ ಅದ್ರಲ್ಲೂ ಹುಚ್ಚ ವೆಂಕಟ್ ಮನೆಯಲ್ಲಿರುವಾಗ ಚಿತ್ರಮ೦ದಿರಗಳ ಸ೦ಜೆ ಮತ್ತು ರಾತ್ರಿ ಶೋಗಳ ಗತಿ ಏನು?

  15 ಸ್ಪರ್ಧಿಗಳ ಬಗ್ಗೆ ಹೀಗೊಂದು ವ್ಯಾಖ್ಯಾನ

  15 ಸ್ಪರ್ಧಿಗಳ ಬಗ್ಗೆ ಹೀಗೊಂದು ವ್ಯಾಖ್ಯಾನ: ಸುನಾಮಿ, ಮಳೆ, ಸಂಗೀತ, ಸುದ್ದಿ, ರೇಡಿಯೋ, ಭಾವನಾತ್ಮಕ, ವಾಂತಿ, ಗ್ಲಿಸರಿನ್, ಗಗನಸಖಿ, ಜಿಮ್ ಬಾಡಿ...ಇತ್ಯಾದಿ

  ನನ್ ಮಗಂದ್ ಎಂದು ಹುಚ್ಚ ವೆಂಕಟ್ ಡೈಲಾಗ್

  ನನ್ ಮಗಂದ್ ಎಂದು ಹುಚ್ಚ ವೆಂಕಟ್ ಡೈಲಾಗ್ ಗಳನ್ನು ಟ್ವಿಟ್ಟರ್ ಗೆ ತಂದ ಫ್ಯಾನ್ಸ್

  ಬಿಗ್ ಬಾಸ್ ಕೊಟ್ಟ ತಂಗಿಗೆ ವೆಂಕಟ್ ಉಪದೇಶ

  ಬಿಗ್ ಬಾಸ್ ಕೊಟ್ಟ ತಂಗಿ(ಕೃತಿಕಾ ರವೀಂದ್ರ)ಗೆ ವೆಂಕಟ್ ಉಪದೇಶ ಮಾಡಿದ್ದು ಏನು?

  ವೀಕ್ ಡೇ ನಲ್ಲಿ ಹುಚ್ಚ,ವೀಕೆಂಡ್ ನಲ್ಲಿ ಕಿಚ್ಚ

  ವೀಕ್ ಡೇ ನಲ್ಲಿ ಹುಚ್ಚ,ವೀಕೆಂಡ್ ನಲ್ಲಿ ಕಿಚ್ಚ ಇದು ನಮ್ಮ ಸಂಜೆ ಟೈಂ ಟೇಬಲ್ ಎಂದ ಫ್ಯಾನ್ಸ್

  ಡ್ಯಾನ್ಸರ್ ಜಯಶ್ರೀಗೆ ಅನುಮತಿ ಮಾತ್ರ ಇದೆ

  ಡ್ಯಾನ್ಸರ್ ಜಯಶ್ರೀ ಬೇಕಾದ ಡ್ರೆಸ್ ಹಾಕಲು ಅನುಮತಿ ಮಾತ್ರ ಇದೆ ಏಕೆಂದರೆ ವೆಂಕಟ್ ಮುಂದಿನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

  English summary
  The actor-director-producer Venkat aka Huccha Venkat is the one reason to watch Bigg Boss Kannada 3 declared fans on micro blogging site Twitter. Kichcha Sudeep is hosting the season 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X