For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಗೆ ನಟ ರವಿಚಂದ್ರನ್ ಬಂದಿದ್ಯಾಕೆ ಗೊತ್ತಾ?

  By Harshitha
  |

  ಕ್ರೇಜಿ ಸ್ಟಾರ್ ರವಿಚಂದ್ರನ್ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಅಂತ ಮೊದಲಿನಿಂದಲೂ ಸುದ್ದಿಯಾಗಿತ್ತು. ಈ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ವರದಿ ಮಾಡಿದ್ದು ನಿಮಗೆ ನೆನಪಿದ್ಯಾ?

  ಎಲ್ಲರೂ ಭಾವಿಸಿದಂತೆ, ರವಿಮಾಮ 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಯಾಗಿ ಹೋಗಲಿಲ್ಲ. ಬದಲಾಗಿ 'ಬಿಗ್ ಬಾಸ್' ರವರಿಂದ ವಿಶೇಷ ಅಧಿಕಾರ ಪಡೆದು ಅತಿಥಿಯಾಗಿ ಮನೆಯೊಳಗೆ ಬಲಗಾಲಿಟ್ಟು ಬಂದ ರವಿಚಂದ್ರನ್ ಸ್ಪರ್ಧೆಗೆ ಹೊಸ ಟ್ವಿಸ್ಟ್ ನೀಡಿದರು. [ನಟಿ ಶ್ರುತಿ ಮುಡಿಗೆ 'ಬಿಗ್ ಬಾಸ್' ಗೆಲುವಿನ ಕಿರೀಟ]

  'ಬಿಗ್ ಬಾಸ್' ಮನೆಯೊಳಗೆ ರವಿಚಂದ್ರನ್ ಆಗಮನದ ಬಗ್ಗೆ ಆಗಾಗ ಹೇಳುತ್ತಲೇ ಇದ್ದ ಮಾಸ್ಟರ್ ಆನಂದ್ ಗೆ ಕ್ರೇಜಿಸ್ಟಾರ್ ಆಗಮನ ನೋಡಿ ಖುಷಿ ಆಯ್ತು. ಮುಂದೆ ಓದಿ.....

  ಸಡನ್ ಎಂಟ್ರಿಕೊಟ್ಟ ರವಿಚಂದ್ರನ್!

  ಸಡನ್ ಎಂಟ್ರಿಕೊಟ್ಟ ರವಿಚಂದ್ರನ್!

  'ಬಿಗ್ ಬಾಸ್' ಮನೆಯಲ್ಲಿ ಡ್ಯಾನ್ಸರ್ಸ್ ಬಂದು ನೃತ್ಯ ಮಾಡುತ್ತಿರುವಾಗಲೇ, ನಟ ರವಿಚಂದ್ರನ್ ಎಂಟ್ರಿಕೊಟ್ಟರು. ರವಿಚಂದ್ರನ್ ಬಂದಿದ್ದು ಎಲ್ಲಾ ಫೈನಲಿಸ್ಟ್ ಗಳಿಗೆ ಖುಷಿ ಆಗಿದ್ದು ಸತ್ಯ. [ಹುಚ್ಚ ವೆಂಕಟ್ ಜಾಗ ತುಂಬಲು ಹೋಗ್ತಾರಾ? ರವಿಮಾಮ..!]

  ಯಶಸ್ಸು ಬೇಕಾ..? ತೃಪ್ತಿ ಬೇಕಾ..?

  ಯಶಸ್ಸು ಬೇಕಾ..? ತೃಪ್ತಿ ಬೇಕಾ..?

  'ಬಿಗ್ ಬಾಸ್' ಮನೆಗೆ ಬರುತ್ತಲೇ, ಎಲ್ಲಾ ಸ್ಪರ್ಧಿಗಳಿಗೂ ರವಿಚಂದ್ರನ್ ಕೇಳಿದ ಏಕೈಕ ಪ್ರಶ್ನೆ, ''ನಿಮಗೆ ಯಶಸ್ಸು ಬೇಕಾ? ತೃಪ್ತಿ ಬೇಕಾ?''

  ನಟಿ ಶ್ರುತಿ ನೀಡಿದ ಉತ್ತರ

  ನಟಿ ಶ್ರುತಿ ನೀಡಿದ ಉತ್ತರ

  ''ಯಶಸ್ಸು ಮತ್ತು ತೃಪ್ತಿ, ಎರಡೂ ಬೇಕು'' ಅಂತ ನಟಿ ಶ್ರುತಿ ಹೇಳಿದರು.

  20 ಲಕ್ಷದ ಬಗ್ಗೆ ರವಿಚಂದ್ರನ್ ಮಾತು!

  20 ಲಕ್ಷದ ಬಗ್ಗೆ ರವಿಚಂದ್ರನ್ ಮಾತು!

  ಎರಡು ದಿನಗಳ ಹಿಂದೆಯಷ್ಟೇ ಎಲ್ಲಾ ಸದಸ್ಯರಿಗೂ 'ಬಿಗ್ ಬಾಸ್' ಬಂಪರ್ ಆಫರ್ ನೀಡಿದ್ದರು. ಫೈನಲ್ ತಲುಪಲು ನಂಬಿಕೆ ಇಲ್ಲದ ಸದಸ್ಯರು 20 ಲಕ್ಷ ರೂಪಾಯಿ ಪಡೆದು ಆಟದಿಂದ ಹೊರಗೆ ಹೋಗುವ ಚಾನ್ಸ್ ನೀಡಿದ್ದರು. ಈ ಬಗ್ಗೆ ಎಲ್ಲಾ ಫೈನಲಿಸ್ಟ್ ಗಳ ಜೊತೆ ಮಾತನಾಡಿ ಒಬ್ಬರನ್ನ ಮನೆಯಿಂದ ಆಚೆ ಕರೆದುಕೊಂಡು ಬರುವ ಜವಾಬ್ದಾರಿ ರವಿಚಂದ್ರನ್ ರದ್ದಾಗಿತ್ತು.

  ರವಿಚಂದ್ರನ್ ಸಮರ್ಥನೆ

  ರವಿಚಂದ್ರನ್ ಸಮರ್ಥನೆ

  ''ನೀವೆಲ್ಲಾ ಐದು ಜನ ಇದ್ದೀರಾ. ಎಲ್ಲರೂ ಒಳ್ಳೆ ಫ್ರೆಂಡ್ಸ್. ಎಲ್ಲರೂ ಗೆಲ್ಲುವುದರ ಬಗ್ಗೆ ಆಸೆ ಪಡುತ್ತೀರಾ. ಸೋಲುವುದರ ಬಗ್ಗೆ ಯಾರಿಗೂ ಫೀಲಿಂಗ್ ಇಲ್ವಾ? ಹಂಚಿಕೊಂಡು ಬಿಡೋಣ ಎಲ್ಲರೂ 10 ಲಕ್ಷ ಅನಿಸೋಲ್ವಾ ನಿಮಗೆ'' - ರವಿಚಂದ್ರನ್

  ಒಂದು ಲಕ್ಷ ಎಕ್ಸ್ ಟ್ರಾ?

  ಒಂದು ಲಕ್ಷ ಎಕ್ಸ್ ಟ್ರಾ?

  ''20 ಲಕ್ಷದ ಜೊತೆ 1 ಲಕ್ಷ ಎಕ್ಸ್ ಟ್ರಾ ನಾನು ಕೊಡುತ್ತೀನಿ. ಯಾರು ಬರ್ತೀರಾ ನನ್ನ ಜೊತೆ? ನನಗೊಂದು ಅರ್ಥ ಆಗ್ತಿಲ್ಲ. ಗೆಲ್ಲುವುದೇ ಲೈಫ್ ಅಲ್ಲ. ಸೋಲು-ಗೆಲುವು ಇಲ್ಲಿ ಇಲ್ಲವೇ ಇಲ್ಲ. ನನ್ನನ್ನ ಕಳುಹಿಸಿರುವುದು ಸೋಲುವವರಿಗೆ ಧೈರ್ಯ ಕೊಡಿ ಅಂತ'' - ರವಿಚಂದ್ರನ್

  ರವಿಚಂದ್ರನ್ ಭಾವನೆ ಏನು?

  ರವಿಚಂದ್ರನ್ ಭಾವನೆ ಏನು?

  ''ಅದು ಚಿಕ್ಕ ಅಮೌಂಟ್ ಅಲ್ಲವೇ ಅಲ್ಲ. ಎರಡು ಜನ ಗೆದ್ದರು ಅಂತ ಸಂತೋಷ ಕಾಣುತ್ತೆ ನನ್ನಲ್ಲಿ. ನಾಲ್ಕು ಜನ ಸೋಲುವ ಬದಲು ಇಬ್ಬರಿಗೆ ಒಳ್ಳೆಯದು ಆಗುತ್ತೆ ಅಂತ ಭಾವನೆ ನನ್ನದು'' - ರವಿಚಂದ್ರನ್

  ಸ್ವಾರ್ಥ ಅಲ್ಲ!

  ಸ್ವಾರ್ಥ ಅಲ್ಲ!

  ''ಇದು ಸ್ವಾರ್ಥ ಅಲ್ಲ. 'ಬಿಗ್ ಬಾಸ್' ಚಾಯ್ಸ್ ಕೊಟ್ಟಿದ್ದಾರೆ ಅಷ್ಟೆ. ಯಾರು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಯಾರಾದರೂ ಒಬ್ಬರು ತಗೊಂಡ್ರೆ, ರವಿಚಂದ್ರನ್ ಒಳಗೆ ಬಂದಿದ್ದು ಸಾರ್ಥಕ ಅನ್ಸುತ್ತೆ. ಒಬ್ಬರಿಗೆ 20 ಲಕ್ಷ ಕೊಡಿಸಿದ ಸಂತೋಷ ನನಗೆ ಸಿಗುತ್ತೆ'' - ರವಿಚಂದ್ರನ್

  24 ಲಕ್ಷಕ್ಕೆ ಬಂತು

  24 ಲಕ್ಷಕ್ಕೆ ಬಂತು

  ''24 ಲಕ್ಷ ರೂಪಾಯಿ ಕೊಡಿಸ್ತೀನಿ ನಾನು. ಇದಕ್ಕಿಂತ ನಿಮಗೆ ಯಾರಾದರೂ ಚಾಯ್ಸ್ ಕೊಟ್ಬಿಟ್ರೆ ಕೇಳಿ. ನಾನು ಡಿಸೈಡ್ ಮಾಡಿ ಕರ್ಕೊಂಡು ಹೋಗೋಕೆ ಆಗಲ್ಲ'' - ರವಿಚಂದ್ರನ್

  ಎಲ್ಲರಲ್ಲೂ ರವಿಚಂದ್ರನ್ ಗಮನಿಸಿದ್ದು ಏನು?

  ಎಲ್ಲರಲ್ಲೂ ರವಿಚಂದ್ರನ್ ಗಮನಿಸಿದ್ದು ಏನು?

  ''ಎಲ್ಲರಿಗೂ ಅವರವರ ಫ್ಯಾಮಿಲಿ ಅಂತ ಬಂದಾಗ ಹಣ ತುಂಬಾ ಮುಖ್ಯ ಪಾತ್ರ ವಹಿಸುತ್ತೆ. ಬರೀ ದುಡ್ಡು ತಗೊಂಡು ಹೋಗ್ಬಿಟ್ರು ಅಂತ ಜನ ನಮ್ಮನ್ನ ತಪ್ಪು ತಿಳಿದುಕೊಂಡು ಬಿಡ್ತಾರೆ ಅಂತ ಎಲ್ಲರಲ್ಲೂ ಈಗ ಕಾಡ್ತಿರೋದು. ನೀವು ಬೇಕಾದರೆ ಹೇಳಿ, ನಿಮ್ಮ ಜೊತೆ ಬಂದುಬಿಡ್ತೀವಿ ಅಂತಾರೆ. ಅಂದ್ರೆ, They are bothered about the blame. ಜನರ ಭಯ ಅವರಿಗೆ ಕಾಡ್ತಿದ್ದೆ. ಆದ್ರೆ ನಾನು ಯಾರನ್ನಾದರೂ ಕರೆದರೆ ಬರುವುದಕ್ಕೆ ರೆಡಿಯಾಗಿದ್ದಾರೆ'' ಅಂತ ರವಿಚಂದ್ರನ್ ಸುದೀಪ್ ಬಳಿ ಹೇಳಿದ್ರು.

  ಶ್ರುತಿ ಹೇಳುವುದೇನು?

  ಶ್ರುತಿ ಹೇಳುವುದೇನು?

  ''ಖಂಡಿತವಾಗಲೂ ದುಡ್ಡು ತುಂಬಾ ದೊಡ್ಡ ಪಾತ್ರ ವಹಿಸುತ್ತೆ ನನ್ನ ಲೈಫ್ ನಲ್ಲಿ. ಆದರೆ ನನಗಾಗಿ ನಾನು ಬದುಕುವುದು ಬಿಟ್ಟು ಬಹಳ ದಿನಗಳಾಯ್ತು. ನನ್ನ ಪ್ರೀತಿಸುವವರಿಗಾಗಿ ನಾನು ನಿಮ್ಮ ಪಕ್ಕ ಬಂದು ನಿಂತುಕೊಳ್ಳಬೇಕು. ಫೈನಲ್ ಸ್ಪರ್ಧಿಯಾಗಿ. ಗೆದ್ದರೆ ಸಂತೋಷ. ಸೋತರೆ ಇನ್ನೊಂದು ಅವಕಾಶ ಕೊಡಿ ಅಂತ ಕೇಳಿಕೊಳ್ಳುತ್ತೇನೆ'' - ಶ್ರುತಿ

  ಮಾಸ್ಟರ್ ಆನಂದ್

  ಮಾಸ್ಟರ್ ಆನಂದ್

  ''98 ದಿನ ಇಲ್ಲಿದ್ದು ಈಗ ನಾನು ಹಣ ತಗೊಂಡ್ರೆ, ನನ್ನ ಶ್ರಮ ನೊಣ ತರಹ ಆಗ್ಬಿಡತ್ತೆ'' - ಮಾಸ್ಟರ್ ಆನಂದ್

  ರೆಹಮಾನ್

  ರೆಹಮಾನ್

  ''ನಾನು ಈಸಿಯಾಗಿ ಗೇಮ್ ತಗೊಂಡಿಲ್ಲ. ಇಷ್ಟು ವಾರ ಇರ್ತೀನಿ ಅಂತ ನಾನು ಖಂಡಿತ ಅಂದುಕೊಂಡಿರಲಿಲ್ಲ. ಆದ್ರೆ ಜನ ನನ್ನನ್ನ ಉಳಿಸುತ್ತಾ ಬಂದಾಗ, ನಾನು ಗೆಲ್ಲಬೇಕು ಅಂತ ನನ್ನಲ್ಲಿ ಆಸೆ ಚಿಗುರಿದ್ದು. ಈಗ ಹಣ ನೋಡಿ ಹೋಗುವುದಕ್ಕೆ ಇಷ್ಟ ಇಲ್ಲ. 24 ಲಕ್ಷ ದೊಡ್ಡ ಅಮೌಂಟ್. ಬಟ್ ಜನರ ತೀರ್ಮಾನ ದೊಡ್ಡದು'' - ರೆಹಮಾನ್

  ಪೂಜಾ ಗಾಂಧಿ

  ಪೂಜಾ ಗಾಂಧಿ

  ''ನನಗೆ ದುಡ್ಡು ಬೇಡ'' - ಪೂಜಾ ಗಾಂಧಿ

  ಚಂದನ್

  ಚಂದನ್

  ''ನಾನು ಕಾಯುತ್ತೇನೆ'' - ಚಂದನ್

  ವಾಪಸ್ಸಾದ ರವಿಚಂದ್ರನ್!

  ವಾಪಸ್ಸಾದ ರವಿಚಂದ್ರನ್!

  24 ಲಕ್ಷ ಪಡೆದು ಆಟದಿಂದ ಔಟ್ ಆಗುವುದಕ್ಕೆ ಯಾರೂ ಇಚ್ಛಿಸದ ಕಾರಣ ರವಿಚಂದ್ರನ್ 'ಬಿಗ್ ಬಾಸ್' ಮನೆಯಿಂದ ಹೊರಬಂದರು.

  ವೇದಿಕೆ ಮೇಲೆ ಅನುಭವ ಹಂಚಿಕೊಂಡ ರವಿಮಾಮ

  ವೇದಿಕೆ ಮೇಲೆ ಅನುಭವ ಹಂಚಿಕೊಂಡ ರವಿಮಾಮ

  ''ತುಂಬಾ ಖುಷಿ ಆಯ್ತು. ನನಗೆ ಅನಿಸಿದ್ದು, ಅಲ್ಲಿ ಎಲ್ಲರೂ ಬೇರೆಯವರ ತಪ್ಪುಗಳನ್ನ ಹೇಳುತ್ತಾರೆ ಹೊರತು, ತಮ್ಮ ತಪ್ಪುಗಳನ್ನ ಒಪ್ಪಿಕೊಳ್ಳುವುದಿಲ್ಲ. ಯಾರೂ ಪರ್ಫೆಕ್ಟ್ ಅಲ್ಲವೇ ಅಲ್ಲ. ಪರ್ಫೆಕ್ಷನ್ ಮಾಡಿಕೊಳ್ಳುವುದೇ ಜೀವನ'' - ರವಿಚಂದ್ರನ್

  ಮಗನಿಗೆ ಕ್ಷಮೆ ಕೇಳ್ತೀನಿ

  ಮಗನಿಗೆ ಕ್ಷಮೆ ಕೇಳ್ತೀನಿ

  ''ನನ್ನ ಮಗನ ಸಿನಿಮಾ ತುಂಬಾ ಡಿಲೇ ಮಾಡಿದ್ದೀನಿ. ನನ್ನ ಕನಸುಗಾಗಿ. ತುಂಬಾ ದಿನ ಅವನು ಕಾದಿರುವುದರಿಂದ ದುಃಖ ಆಗುವುದು ಸಹಜ. ಆದ್ರೆ, ನನಗೆ 'ಅಪೂರ್ವ' ಮೇಲೆ ಏನೋ ಒಂಥರಾ ಮೋಹ ಮತ್ತು ದಾಹ'' - ರವಿಚಂದ್ರನ್

  ಪತ್ನಿಗೆ ಥ್ಯಾಂಕ್ಸ್

  ಪತ್ನಿಗೆ ಥ್ಯಾಂಕ್ಸ್

  ''ನನ್ನ ಪತ್ನಿಗೆ ಥ್ಯಾಂಕ್ಸ್'' - ರವಿಚಂದ್ರನ್

  ರವಿಚಂದ್ರನ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

  ರವಿಚಂದ್ರನ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

  ''ನನ್ನ ಜೀವನದಲ್ಲಿ ರವಿಚಂದ್ರನ್ ಇನ್ನೊಬ್ಬ ತಂದೆ ಇದ್ದ ಹಾಗೆ. ನಾನು ಅದನ್ನ 'ಮಾಣಿಕ್ಯ' ಸಿನಿಮಾದಲ್ಲಿ ತೋರಿಸಿದ್ದೀನಿ. ನನಗೆ ನಾನು ಯಾವ ರವಿಚಂದ್ರನ್ ರವರನ್ನ ನೋಡುವುದಕ್ಕೆ ಇಷ್ಟಪಡುತ್ತೀನೋ, ಆ ರವಿಚಂದ್ರನ್ ರವರನ್ನ ತೋರಿಸಿದ್ದೀನಿ. A divine Fantastic Actor. ನಾನು ಯಾವಾಗಲೂ ಹೇಳ್ತಾ ಇರ್ತೀನಿ. ಆಯ್ತು, ತುಂಬಾ ರೋಸ್ ಹಿಡಿದುಕೊಂಡಿದ್ದೀರಾ ಕೈಯಲ್ಲಿ. ಬೇರೆಯವರ ಕೈಯಲ್ಲಿ ಕೊಡಿ ಅಂತ. I think he has do that'' - ಸುದೀಪ್

  English summary
  Kannada Actor Ravichandran entered 'Bigg Boss' house as special guest in 'Bigg Boss Kannada 3' reality show.
  Monday, February 1, 2016, 12:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X