For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ ಮುಡಿಗೆ 'ಬಿಗ್ ಬಾಸ್' ಗೆಲುವಿನ ಕಿರೀಟ

  By Harshitha
  |

  ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಿನ್ನೆ ವರದಿ ಮಾಡಿದಂತೆ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ವಿಜೇತರಾಗಿ ನಟಿ ಶ್ರುತಿ ಹೊರಹೊಮ್ಮಿದ್ದಾರೆ.

  ವೀಕ್ಷಕರ ಎಸ್.ಎಂ.ಎಸ್ ಕೃಪಾಕಟಾಕ್ಷದಿಂದ ನಟಿ ಶ್ರುತಿ 'ಬಿಗ್ ಬಾಸ್' ಮನೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗ್ರ್ಯಾಂಡ್ ಫಿನಾಲೆ ಅಖಾಡದಲ್ಲಿದ್ದ ನಟ ಚಂದನ್, 'ಮಳೆ ಹುಡುಗಿ' ಪೂಜಾ ಗಾಂಧಿ, ಮಾಸ್ಟರ್ ಆನಂದ್ ಮತ್ತು ರೆಹಮಾನ್ ರವರೆಲ್ಲರನ್ನ ಹಿಂದಿಕ್ಕಿ ನಟಿ ಶ್ರುತಿ 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿದಿದ್ದಾರೆ. [ನಟಿ ಶ್ರುತಿ 'ಬಿಗ್ ಬಾಸ್' ಮನೆಗೆ ಬಂದಿರುವುದು ಯಾಕೆ ಗೊತ್ತಾ?]

  ಆ ಮೂಲಕ ಕನ್ನಡದ 'ಬಿಗ್ ಬಾಸ್' ಕಾರ್ಯಕ್ರಮ ಗೆದ್ದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ನಟಿ ಶ್ರುತಿ ಪಾತ್ರವಾಗಿದ್ದಾರೆ. ಮುಂದೆ ಓದಿ.....

  ನಟಿ ಶ್ರುತಿಗೆ ಸಿಕ್ಕ ಬಹುಮಾನ

  ನಟಿ ಶ್ರುತಿಗೆ ಸಿಕ್ಕ ಬಹುಮಾನ

  98 ದಿನ 'ಬಿಗ್ ಬಾಸ್' ಮನೆಯಲ್ಲಿದ್ದು ವಿಜೇತರಾದ ನಟಿ ಶ್ರುತಿಗೆ ಅರ್ಧ ಕೋಟಿ (50 ಲಕ್ಷ) ರೂಪಾಯಿ ಬಹುಮಾನ ಮತ್ತು ಟ್ರೋಫಿ ಸಿಕ್ಕಿದೆ. ['ಬಿಗ್ ಬಾಸ್ ಕನ್ನಡ 3' ರಿಯಾಲಿಟಿ ಶೋ ಗೆದ್ದು ಬಿಟ್ಟರೆ ನಟಿ ಶ್ರುತಿ?]

  ನಟಿ ಶ್ರುತಿ ಪ್ರತಿಕ್ರಿಯೆ

  ನಟಿ ಶ್ರುತಿ ಪ್ರತಿಕ್ರಿಯೆ

  ''ನನಗೆ ಮಾತೇ ಬರ್ತಾಯಿಲ್ಲ. ನನಗೆ ವೋಟ್ ಹಾಕಿದ ಎಲ್ಲರಿಗೂ ಧನ್ಯವಾದಗಳು. ನೀವು ನನ್ನನ್ನ ಬರೀ ಗೆಲ್ಲಿಸಲಿಲ್ಲ. ನನ್ನನ್ನ ಬದುಕಿಸಿದ್ದೀರಾ. ನಾನು ಇಡೀ ಜನ್ಮ ಪೂರ್ತಿ ಋಣಿಯಾಗಿರ್ತೀನಿ ಎಲ್ಲರಿಗೂ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನವನ್ನ ಹೀಗೆ ಉಳಿಸಿಕೊಳ್ಳುತ್ತೇನೆ'' - ಶ್ರುತಿ

  ರನ್ನರ್ ಅಪ್ ಆದ ಚಂದನ್

  ರನ್ನರ್ ಅಪ್ ಆದ ಚಂದನ್

  ಕೊನೆ ಕ್ಷಣದವರೆಗೂ ನಟಿ ಶ್ರುತಿಗೆ ಪೈಪೋಟಿ ನೀಡಿದ ನಟ ಚಂದನ್ 'ಬಿಗ್ ಬಾಸ್-3' ರನ್ನರ್ ಅಪ್ ಟ್ರೋಫಿ ಎತ್ತಿ ಹಿಡಿದರು.

  ಶ್ರುತಿ ರವರ ಏಕೈಕ ಪ್ಲಸ್ ಪಾಯಿಂಟ್

  ಶ್ರುತಿ ರವರ ಏಕೈಕ ಪ್ಲಸ್ ಪಾಯಿಂಟ್

  'ಬಿಗ್ ಬಾಸ್' ಮನೆಯಲ್ಲಿದ್ದ ಅಷ್ಟೂ ದಿನ ಅನೇಕ ವಾದ-ವಿವಾದಗಳು ಆದರೂ, ಎಲ್ಲೂ ಸಹನೆ ಮತ್ತು ತಾಳ್ಮೆ ಕಳೆದುಕೊಳ್ಳದೆ, ಗಾಂಭೀರ್ಯದಿಂದ ನಟಿ ಶ್ರುತಿ ಇದ್ದದ್ದು ಪ್ಲಸ್ ಪಾಯಿಂಟ್.

  14 ವಾರ 'ಬಿಗ್ ಬಾಸ್' ಮನೆಯಲ್ಲಿದ್ದ ನಟಿ ಶ್ರುತಿ

  14 ವಾರ 'ಬಿಗ್ ಬಾಸ್' ಮನೆಯಲ್ಲಿದ್ದ ನಟಿ ಶ್ರುತಿ

  40 ವರ್ಷ ವಯಸ್ಸಿನ ನಟಿ ಶ್ರುತಿ 'ಬಿಗ್ ಬಾಸ್' ಮನೆಯಲ್ಲಿ 14 ವಾರ ವಾಸವಿದ್ದರು.

  ಇದ್ದ ಒಂದೇ ಅಪವಾದ

  ಇದ್ದ ಒಂದೇ ಅಪವಾದ

  ನಟಿ ಶ್ರುತಿ ಮೇಲಿದ್ದ ಒಂದೇ ಒಂದು ಅಪವಾದ ಅಂದ್ರೆ ಅವರು ಓಪನ್ ಅಪ್ ಆಗ್ತಿರ್ಲಿಲ್ಲ. ''ನಟಿ ಶ್ರುತಿ ನಿಜ ಜೀವನದಲ್ಲಿ ಇದ್ದ ಹಾಗೆ, 'ಬಿಗ್ ಬಾಸ್' ಮನೆಯಲ್ಲಿ ಇಲ್ಲ'' ಅಂತ ಸ್ಪರ್ಧಿಗಳು ರಾಗ ಎಳೆದಿದ್ದರು.

  ಫಿನಾಲೆಯಲ್ಲಿ ಅಮ್ಮ-ಮಗ!

  ಫಿನಾಲೆಯಲ್ಲಿ ಅಮ್ಮ-ಮಗ!

  'ಬಿಗ್ ಬಾಸ್' ಮನೆಯಲ್ಲಿ 'ಅಮ್ಮ-ಮಗ' ಎಂದೇ ಖ್ಯಾತರಾಗಿದ್ದ ನಟಿ ಶ್ರುತಿ ಮತ್ತು ಚಂದನ್ ಟಾಪ್ 2 ವರೆಗೂ ಬಂದಿದ್ದು ಅಚ್ಚರಿಯೇ ಸರಿ.

  ಶ್ರುತಿ ತಾಯಿ ಏನಂದ್ರು?

  ಶ್ರುತಿ ತಾಯಿ ಏನಂದ್ರು?

  ''ನಿನಗೆ ಯಾರು ಏನೇ ವಿಷ ಹಾಕಿದ್ರೂ ಕರ್ನಾಟಕದ ಜನತೆ ನಿನ್ನ ಬದುಕಿಸಿಕೊಂಡೇ ಬದುಕಿಸಿಕೊಳ್ಳುತ್ತಾರೆ. ಇವತ್ತು ಅವರೇ ನಿನ್ನ ಬದುಕಿಸಿರುವುದು. ಕೋಟಿ ಜನರ ಆಶೀರ್ವಾದ ನಿನಗೆ ಇದ್ದೇ ಇದೆ. ಸಾರ್ಥಕವಾಯ್ತು ಮಗಳೆ'' - ರಾಧಾ ಮತ್ತು ರುಕ್ಮಿಣಿ, ಶ್ರುತಿ ತಾಯಿ

  ಶ್ರುತಿ ಮಗಳು ಹೇಳಿದ್ದೇನು?

  ಶ್ರುತಿ ಮಗಳು ಹೇಳಿದ್ದೇನು?

  ''ತುಂಬಾ ಖುಷಿಯಾಯ್ತು. ನಮ್ಮ ಫ್ಯಾಮಿಲಿಯವರ ಜೊತೆ ಹೇಗೋ, 'ಬಿಗ್ ಬಾಸ್' ಮನೆಯಲ್ಲೂ ಹಾಗೇ ಅಮ್ಮ ಎಲ್ಲರನ್ನೂ ನೋಡಿದ್ದಾರೆ. ಐ ಆಮ್ ಪ್ರೌಡ್ ಆಫ್ ಹರ್'' - ಗೌರಿ, ಶ್ರುತಿ ಮಗಳು

  ಎಲ್ಲರೂ ಚಂದನ್ ಹೆಸರೇ ಹೇಳಿದರು!

  ಎಲ್ಲರೂ ಚಂದನ್ ಹೆಸರೇ ಹೇಳಿದರು!

  'ಬಿಗ್ ಬಾಸ್-3' ವಿಜೇತರನ್ನ ಅನೌನ್ಸ್ ಮಾಡುವ ಮುನ್ನ ಮಾಸ್ಟರ್ ಆನಂದ್, ರವಿ ಮುರೂರು, ಸುನಾಮಿ ಕಿಟ್ಟಿ, ಮಿತ್ರ, ಕೃತಿಕಾ, ಭಾವನಾ ಬೆಳಗೆರೆ, ಅಯ್ಯಪ್ಪ ಮತ್ತು ಸುಷ್ಮಾ ವೀರ್, ನಟ ಚಂದನ್ ಗೆಲ್ಲುತ್ತಾರೆ ಅಂತ ಹೇಳಿದ್ದರು.

  ಶ್ರುತಿ ಹೆಸರು ಹೇಳಿದವರು ಯಾರ್ಯಾರು?

  ಶ್ರುತಿ ಹೆಸರು ಹೇಳಿದವರು ಯಾರ್ಯಾರು?

  ರೆಹಮಾನ್, ನೇತ್ರ, ಜಯಶ್ರೀ, ಪೂಜಾ ಗಾಂಧಿ, ಗೌತಮಿ ಗೌಡ ಮತ್ತು ನೇಹಾ ಗೌಡ, ನಟಿ ಶ್ರುತಿ ಗೆಲ್ಲಬಹುದು ಅಂತ ಲೆಕ್ಕಾಚಾರ ಹಾಕಿದ್ದರು.

  English summary
  Kannada Actress Shruthi is the winner of 'Bigg Boss Kannada 3' reality show.
  Monday, February 1, 2016, 10:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X