»   » 'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮ ಕೊನೆಯ ಹಂತ ತಲುಪಿದೆ. ಮುಂದಿನ ವಾರ ಕನ್ನಡದ 'ಬಿಗ್ ಬಾಸ್' 3ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫೈನಲ್ ಹಂತಕ್ಕೆ ನಟಿ ಶ್ರುತಿ, ಪೂಜಾ ಗಾಂಧಿ, ರೆಹಮಾನ್, ಮಾಸ್ಟರ್ ಆನಂದ್ ಮತ್ತು ಚಂದನ್ ತಲುಪಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ನಟಿ ಶ್ರುತಿ ಬಗ್ಗೆ ಅಪಸ್ವರ ಕೇಳಿ ಬಂತು. ಪೂಜಾ ಗಾಂಧಿ ಮತ್ತು ಅಯ್ಯಪ್ಪ ಕುರಿತು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಂಡರು, ರೆಹಮಾನ್ ಸುತ್ತ ಸುತ್ತಿಕೊಂಡ ಆರೋಪ ಒಂದೆರಡಲ್ಲ ಬಿಡಿ. ಇನ್ನೂ ಚಂದನ್ ಮಾಡಿಕೊಂಡ ರಗಳೆ ನಿಮಗೆಲ್ಲಾ ಗೊತ್ತೇ ಇದೆ. [ಇವರೆಲ್ಲರಿಗೂ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಮುಖ್ಯ! ಯಾಕೆ ಗೊತ್ತಾ?]

ಇಷ್ಟೆಲ್ಲಾ ಇದ್ದರೂ, ಎಲ್ಲಾ ಸ್ಪರ್ಧಿಗಳಲ್ಲಿದ್ದ ಪಾಸಿಟೀವ್ ಅಂಶಗಳನ್ನ ಕಿಚ್ಚ ಸುದೀಪ್ ಎತ್ತಿ ಹಿಡಿದರು. ತಮ್ಮ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್' ಮನೆಯ ಸ್ಪರ್ಧಿಗಳ ಪ್ಲಸ್ ಪಾಯಿಂಟ್ ಗಳನ್ನ ಹೇಳಿದರು.

ಯಾರ್ಯಾರ್ ಬಗ್ಗೆ ಸುದೀಪ್ ಏನೇನು ಹೇಳಿದ್ರು ಅಂತ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ಶ್ರುತಿ ಬಗ್ಗೆ ಸುದೀಪ್ ಹೇಳಿದಿಷ್ಟು

''ಎಷ್ಟೋ ಸಲ ಈ 92 ದಿನಗಳಲ್ಲಿ ನಿಮಗೆ ಬಹಳ ಕಷ್ಟ ಆಯ್ತು. ಆದರೂ Patience ನ ತಾವು ಕಳೆದುಕೊಳ್ಳಲಿಲ್ಲ. ತಮ್ಮ Patience ನಾನಾ ರೀತಿಯಲ್ಲಿ ಟೆಸ್ಟ್ ಆದರೂ ಕೂಡ You came out as a winner'' - ಸುದೀಪ್ ['ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!]

ಪೂಜಾ ಗಾಂಧಿ ಕುರಿತು ಸುದೀಪ್ ಹೇಳಿದ್ದೇನು?

''ಗೇಮ್ ಅಂತ ಗೊತ್ತಿದ್ದರೂ ನೀವು ನಿಮ್ಮ ಮನಸ್ಸಿಗೆ ಬಂದಿದ್ದನ್ನ, ಮಾಡ್ಬೇಕು ಅನ್ನೋದನ್ನ, ಅನ್ಸಿದ್ದನ್ನ ಹೇಳುವುದನ್ನ ಯಾವತ್ತೂ ನಿಲ್ಲಿಸಲಿಲ್ಲ. ನಿಮ್ಮ Innocence, ನಿಮ್ಮ Nature, gesture, humbleness ಹಾಗೇ ಇರ್ಲಿ'' - ಸುದೀಪ್

ಮಾಸ್ಟರ್ ಆನಂದ್ ಬಗ್ಗೆ ಸುದೀಪ್ ಉವಾಚ

''ನಿಮ್ಮ ಶಾರ್ಪ್ ಒನ್ ಲೈನ್ ಗಳು, ಟೈಮಿಂಗ್, ನೀವು ಯೋಚನೆ ಮಾಡ್ತಾಯಿದ್ದ ರೀತಿ ಬಹಳ ಎಂಟರ್ಟೇನ್ ಮಾಡ್ತು. ನೀವೇನು ಅಂತ ಎತ್ತಿ ಹೇಳ್ತಾಯಿತ್ತು. ಅದು ಹಾಗೇ ಇರ್ಲಿ. ಆನಂದ್ ಅವರು ಶಾರದೆ ಗೆ, ಸರಸ್ವತಿಗೆ, ಲಕ್ಷ್ಮಿಗೆ ಮೂರು ದೇವತೆಗಳಿಗೂ ಹಾಗೇ ಪ್ರೀತಿ ಪಾತ್ರರು ಆಗಿರಲಿ. ಅದನ್ನ ಹಾಗೇ ಕಾಪಾಡಿಕೊಂಡು ಹೊರಗೆ ಬನ್ನಿ. ಹೊರಗೆ ಬಂದ ಮೇಲೆ ಹಾಗೇ ಇರಿ. You have done a great job'' - ಸುದೀಪ್

ಅಯ್ಯಪ್ಪ ರನ್ನ ಮೆಚ್ಚಿದ ಸುದೀಪ್

''ನೀವು ಈ ಪ್ರಪಂಚದವರೇ ಅಲ್ಲ. ಈ ಜಗತ್ತಿನವರೇ ಅಲ್ಲ. ನಮ್ಮ ಪ್ರಪಂಚ ಅಂದ್ರೆ ನಾನು ಹೇಳ್ತಾಯಿರೋದು ಸಿನಿಮಾ, ಟಿವಿ, ಆರ್ಟ್ ಪ್ರಪಂಚ. ನಿಮ್ಮ ಫ್ಯಾಮಿಲಿಯಲ್ಲಿ ಪ್ರೇಮ ಅವರಿಗೆ ಆ ಸಂಪರ್ಕ ಇತ್ತೇ ಹೊರತು ನಿಮಗಲ್ಲ. ಆದರೂ ಕೂಡ ನೀವು ಬಹಳ ಬೇಗ ಅಡ್ಜಸ್ಟ್ ಆದ್ರಿ. ಮನೆಯಲ್ಲಿ ಒಬ್ಬರಾಗಿ ಉಳ್ಕೊಂಡ್ರಿ, ಸಪೋರ್ಟ್ ಮಾಡಿದ್ರಿ. I personally feel it's not at all easy. You have done a great job'' - ಸುದೀಪ್

ಚಂದನ್ ಬಗ್ಗೆ ಸುದೀಪ್ ಮಾತು

''ಮನೆಯನ್ನ ನಿಮ್ಮ ಎನರ್ಜಿಯಲ್ಲಿ, ಸ್ಪಿರಿಟ್ ನಲ್ಲಿ ಖುಷಿ ಖುಷಿಯಾಗಿ ಇಟ್ಟಿದ್ದಕ್ಕೆ ತುಂಬಾ ಸಲ ಸ್ಮೈಲ್ ತಂದಿದ್ದಕ್ಕೆ. ತುಂಬಾ ಜನಕ್ಕೆ ನಾನಾ ತರಹ ನಾನಾ ರೀತಿಯಲ್ಲಿ ಸಪೋರ್ಟ್ ಮಾಡಿದ್ದಕ್ಕೆ ನಿಮಗೆ ಫಸ್ಟ್ ಕಂಗ್ರ್ಯಾಟ್ಸ್ ಹೇಳ್ಬೇಕು. And that's the positive side of you'' - ಸುದೀಪ್

ರೆಹಮಾನ್ ರನ್ನ ಹೊಗಳಿದ ಸುದೀಪ್

''I think you are the only contestant ಯಾವ ರೂಲ್ಸ್ ಬ್ರೇಕ್ ಮಾಡದೆ ಪನಿಶ್ಮೆಂಟ್ ತೆಗೆದುಕೊಳ್ಳದೆ ಇರೋರು. And it is not the small thing. ಎಲ್ಲೋ ಒಂದು ಕಡೆ ಹರ್ಟ್ ಆಗುವ ಆಪಾದನೆಗಳು ಬಂದರೂ ಕೂಡ You held on to yourself and we are very proud of you for that. You did very good'' - ಸುದೀಪ್

English summary
Kiccha Sudeep appreciated Kannada Actress Shruthi, Pooja Gandhi, Actor Chandan, Rehman, Master Anand and Aiyappa in 'Vaarada Kathe Kicchana Jothe' show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada