»   » ನನ್ಮಗಂದ್, ಸೇವಕ ಆಗಲ್ಲ ಅಂದ ವೆಂಕಟ್‌ಗೆ ಫುಲ್ ಆವಾಜ್!

ನನ್ಮಗಂದ್, ಸೇವಕ ಆಗಲ್ಲ ಅಂದ ವೆಂಕಟ್‌ಗೆ ಫುಲ್ ಆವಾಜ್!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಧಗಧಗ ಉರಿಯುತ್ತಿರುವ ಬೆಂಕಿ, ಅರಸರು ಗುಲಾಮರು ಎಂಬ ಟಾಸ್ಕ್ ನಿಂದ ಮನೆಯಲ್ಲಿ ಇಡೀ ಅಶಾಂತಿ ತುಂಬಿದೆ. ಇನ್ನು ಟಾಸ್ಕ್ ನ ೨ನೇ ದಿನ ಗುಲಾಮರು ಅರಸರ ಕಾಲು ತೊಳೆದು ಒರೆಸಿದರು.

ದೀಪಾವಳಿ ಹಬ್ಬದ ವಿಶೇಷವಾಗಿ ಆಲ್ ಓವರ್ ಇಂಡಿಯಾ ಹಬ್ಬ ಆಚರಿಸಬೇಕು ಹುಚ್ಚ ವೆಂಕಟ್ ಸೇನೆಯಿಂದ ೫ ಸಾವಿರ ದುಡ್ಡು ಹಂಚುತ್ತಾ ಇದ್ದೀವಿ ಐಸಿಐಸಿಐ ಬ್ಯಾಂಕ್ ನಿಂದ ಪಡೆಯಬಹುದು ಎಂದು ಹುಚ್ಚ ವೆಂಕಟ್ ಅವರು ಹಬ್ಬದ ಆಫರ್ ಗಳ ಬಗ್ಗೆ ಕ್ಯಾಮರ ಮುಂದೆ ಬಂದು ಮಾಹಿತಿ ಬೇರೆ ಒದಗಿಸಿದರು.

ಇನ್ನು ಬೆಳಗಿನ ತಿಂಡಿಯ ಸಂದರ್ಭದಲ್ಲಿ ಹುಚ್ಚ ವೆಂಕಟ್ ಅವರು ಸ್ನಾನದ ವಿಷಯದಲ್ಲಿ ಚಂದನ್ ಅವರನ್ನು ಪ್ರಶ್ನೆ ಮಾಡಿದಾಗ ಚಂದನ್ ಅವರು ಸ್ವಲ್ಪ ಗರಮ್ ಆಗಿ ಉತ್ತರ ಕೊಟ್ಟರು. ಇದಕ್ಕೆ ಕೋಪಗೊಂಡ ವೆಂಕಟ್, ಕಿಟ್ಟಿಗೆ ಕಿಚ್ಚು ಹಚ್ಚಿದರು. ಆ ಸಂದರ್ಭದಲ್ಲಿ ಕಿಟ್ಟಿ ಚಂದನ್ ಗೆ ದಬಾಯಿಸಿ ತಪ್ಪಾಯ್ತು ಅಂತ ಹೇಳು ಎಂದರು. ಅದಕ್ಕೆ ಚಂದನ್ ಅವರು ತಪ್ಪೊಪ್ಪಿಕೊಂಡರು.[ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

ಇನ್ನೊಂದೆಡೆ ಗುಲಾಮರಾದ ಅಯ್ಯಪ್ಪ ಹಾಗೂ ರೆಹಮಾನ್ ಗೆ ಫರ್ ಫ್ಯೂಮ್ ಬಗ್ಗೆ ಹುಚ್ಚ ವೆಂಕಟ್ ಅವರು ಸ್ವಲ್ಪ ಹೊತ್ತು ಪಾಠ ತೆಗೆದುಕೊಂಡರು.

ಇನ್ನು ಬಿಗ್ ಮನೆಯಲ್ಲಿ ನಟಿ ಕೃತಿಕಾ ಮತ್ತು ಸುನಾಮಿ ಕಿಟ್ಟಿ ಅವರು ಹಾವು-ಮುಂಗುಸಿ ಇದ್ದಂತೆ, ಇವರಿಬ್ಬರಿಗೂ ಈ ವಿಭಿನ್ನ ಟಾಸ್ಕ್ ಮೂಲಕ ದೊಡ್ಡಣ್ಣ ಚೆನ್ನಾಗೇ ಫಿಟ್ಟಿಂಗ್ ಇಟ್ಟಿದ್ದರು. ನಟ ಚಂದನ್ ಹೇಳಿದ ಹಾಡಿಗೆ ನಟಿ ಕೃತಿಕಾ ಅವರು ಡ್ಯಾನ್ಸ್ ಮಾಡಿದರು.

ನಟಿ ಕೃತಿಕಾ ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿ ನಡುವೆ ಭರ್ಜರಿ ಫೈಟ್ ಬೇರೆ ನಡೆಯಿತು. ಈ ಸೀಕ್ರೇಟ್ ಟಾಸ್ಕ್ ನಿಂದ ಸುನಾಮಿ ಕಿಟ್ಟಿಗೆ ಒಂಥರಾ ಇರುಸು ಮುರುಸಿನ ಅನುಭವವಾಯಿತು.

ಈ ನಡುವೆ ಸಮಸ್ಯೆ ಇತ್ಯರ್ಥ ಮಾಡಲು ಹುಚ್ಚ ವೆಂಕಟ್ ಮಧ್ಯಕ್ಕೆ ಆಗಮಿಸಿದ್ರು, ಫಸ್ಟ್ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟ ಮಾತಾಡು ಅಂತ ಹುಚ್ಚ ವೆಂಕಟ್ ಕಿಟ್ಟಿಗೆ ಅವಾಜ್ ಹಾಕಿದ್ರು. ಈ ಸಂದರ್ಭದಲ್ಲಿ ಕಿಟ್ಟಿ ಹಾಗೂ ವೆಂಕಟ್ ನಡುವೆ ಜಗಳ ಶುರುವಾಗಿ, ಕಿಟ್ಟಿ ನಾನು ಟಾಸ್ಕ್ ಮಾಡಲ್ಲ ನಾನು ರಾಜ ಆಗಲ್ಲ ಅಂದುಬಿಟ್ರು.['ಫ್ಲರ್ಟ್' ಮಾಡೋದು ಹೇಗಂತ ಅಯ್ಯಪ್ಪ ಅವರನ್ನ ಕೇಳಿ!]

ಇದನ್ನು ನೋಡಿ ನೋಡಿ ಸುಸ್ತಾದ ಕ್ಯಾಪ್ಟನ್ ಆನಂದ್ ಬಿಗ್ ಬಾಸ್ ಆಜ್ಞೆ ಮೇರೆಗೆ ಕೊನೆಗೆ ಕಿಟ್ಟಿ ಮಂಡಿ ಊರಿ ಕೃತಿಕಾಗೆ ಸಾರಿ ಹೇಳುವಂತೆ ಹೇಳಿದರು. ಕ್ಯಾಪ್ಟನ್ ಮಾತನ್ನು ಪಾಲಿಸಿದ ಕಿಟ್ಟಿ, ಕೃತಿಕಾ ಮುಂದೆ ಮಂಡಿ ಊರಿ ಕ್ಷಮೆ ಕೇಳಿದರು.

ಇದು ಕೃತಿಕಾ ಹಾಗೂ ಕಿಟ್ಟಿ ನಡುವೆ ನಡೆದ ಹೈಡ್ರಾಮ. ಹಾಗೂ ಇಡೀ ಮನೆಯಲ್ಲಿ ಆದ ಘಟನೆಯ ಹೈಲೈಟ್. ಈ ನಡುವೆ ಟಾಸ್ಕ್ ನಲ್ಲಿ ಬದಲಾವಣೆ ಮಾಡಿದ ಬಿಗ್ ಬಾಸ್ ಅರಸರಾಗಿದ್ದವರು ಆಳಾಗಬೇಕು-ಆಳುಗಳು ಅರಸರಾಗಬೇಕು ಎಂದರು.

ಈ ಸಂದರ್ಭದಲ್ಲಿ ಭಾವನಾ ಕಿಟ್ಟಿಯನ್ನು 13 ಸಾವಿರಕ್ಕೆ ಹಾಗೂ ನೇತ್ರಾರನ್ನು 11 ಸಾವಿರಕ್ಕೆ ತಮ್ಮ ಗುಲಾಮರನ್ನಾಗಿಸಿಕೊಂಡರು. ರೆಹಮಾನ್ ಕೃತಿಕಾರನ್ನು 6 ಸಾವಿರಕ್ಕೆ ಹಾಗೂ ಅಯ್ಯಪ್ಪ ಅವರನ್ನು 12 ಸಾವಿರಕ್ಕೆ ಕೊಂಡುಕೊಂಡರು. ಕೊನೆಗೆ ಚಂದನ್ ವೆಂಕಟ್ ಹಾಗೂ ರವಿ ಅವರನ್ನು ಕೊಂಡುಕೊಂಡರೆ, ಶ್ರುತಿ ಅವರು ಪೂಜಾ ಮತ್ತು ನೇಹಾ ಅವರನ್ನು ಕೊಂಡುಕೊಂಡರು.

ಗುಲಾಮನಾಗಲು ಒಪ್ಪದ ಬ್ಯಾನ್ ಸ್ಟಾರ್ ಗೆ ಚಂದನ್ ಹಾಗೂ ರೆಹಮಾನ್ ಸಖತ್ ಬೆಂಡೆತ್ತಿ ಆವಾಜ್ ಬೇರೆ ಹಾಕಿದ್ರು, ಅಸಲಿ ವಿಷಯ ಇಲ್ಲಿದೆ, ಮುಂದೆ ಓದಿ...

ಹಾವು-ಮುಂಗುಸಿಯಾದ, ಕೃತಿಕಾ-ಕಿಟ್ಟಿ

ಊಟ ಮಾಡಿಸುವಾಗ ಸುನಾಮಿ ಕಿಟ್ಟಿ, ಬೆರಳು ಕಚ್ಚಿದ್ರು, ಜೊತೆಗೆ ಮಸಾಜ್ ಮಾಡುವಾಗ ಕೈ ಹಿಚುಕಿದ್ರು, ಅಂತ ಬೊಬ್ಬೆ ಹೊಡೆದು ಗಳಗಳನೆ ಅತ್ತ ಕೃತಿಕಾ, ಟಾಸ್ಕ್ ಮಾಡಲ್ಲ ಅಂತ ಪಟ್ಟು ಹಿಡಿದು ಕೂತರು. ಈ ನಡುವೆ ಕಚ್ಚಾಡಿಕೊಂಡ ಸುನಾಮಿ ಕಿಟ್ಟಿ ಹಾಗೂ ಕೃತಿಕಾ ನಾನು ಹೇಳಿದ ಟಾಸ್ಕ್ ಮಾಡಿದ್ದೀನಿ ತಾನೇ, ನೀನೇನು ನಿನ್ನನ್ನು ನೀನು ರಾಜ ಅಂತ ಅಂದುಕೊಂಡಿದ್ದೀಯಾ ಎಂದು ಜಗಳಕ್ಕೆ ನಿಂತರು. ಒಟ್ನಲ್ಲಿ ಬಿಗ್ ಮನೆಯಲ್ಲಿ ಗದ್ದಲ ಶುರುವಾಗಿತ್ತು.

ಹುಚ್ಚ ವೆಂಕಟ್ ಕಾಲೆಳೆದ ಬಿಗ್ ಬಾಸ್ ಕಾಲ

2 ಸಾವಿರ ರೂ ಹರಾಜಿನಲ್ಲಿ ವೆಂಕಟ್ ನನ್ನು ಚಂದನ್ ಕೊಂಡುಕೊಂಡರು, ಅರಸನಾಗಿದ್ದ ಹುಚ್ಚ ವೆಂಕಟ್ ಗುಲಾಮನಾಗಲು ಹಿಂಜರಿದರು, ಆ ಸಂದರ್ಭದಲ್ಲಿ ರೆಹಮಾನ್ ಅವರು ಗುಲಾಮ ವೆಂಕಟ್ ಗೆ ಸಖತ್ ಬೆಂಡೆತ್ತಿದರು ಇದಕ್ಕೆ ಚಂದನ್ ಕೂಡ ಸಾಥ್ ನೀಡಿದ್ರು. ಗುಲಾಮನಾಗಲು ಒಪ್ಪದ ವೆಂಕಟ್ ಗೆ ರೆಹಮಾನ್, ಟಾಸ್ಕ್ ಎಲ್ಲರಿಗೂ ಒಂದೇ, ನಾನು ಮಾಡಿದ್ದೀನಿ, ನೀನು ಮಾಡ್ಬೇಕ್, ನೀನು ಅಡುಗೆ ಮಾಡ್ಬೇಕ್, ಇಷ್ಟು ದಿನ ಮಾಡಿದ್ದನ್ನು ನೀನು ತಿಂದಿದ್ದಿಯಲ್ಲ ಈಗ ನೀನು ಮಾಡ್ಬೇಕ್, ಅರ್ಥ ಆಗುತ್ತಾ, ಕನ್ನಡ ಬರುತ್ತಾ, ಅಂತ ರೆಹಮಾನ್ ಅವಾಜ್ ಹಾಕಿ ಹುಚ್ಚನ ಬೆವರಿಳಿಸಿದ್ರು.

ಗುರಾಯಿಸಿದ ಹುಚ್ಚ, ಕಣ್ಣು ಕಿತ್ತು ಹಾಕ್ತೀನಿ ಎಂದ ರೆಹಮಾನ್

ನಾನು ಕಾಲಿನ ಹತ್ತಿರ ಕೂರಲ್ಲ, ಆಚೆ ನನ್ನನ್ನು ಜನ ನೋಡ್ತೀದ್ದಾರೆ, ನನ್ನ ಅಭಿಮಾನಿಗಳಿದ್ದಾರೆ, ನಾನು ಗುಲಾಮನಾಗಿ ಕೆಲಸ ಮಾಡಲ್ಲ ಎಂದು ಹುಚ್ಚ ವೆಂಕಟ್ ಅಂದಾಗ, ರೆಹಮಾನ್, ಏಯ್ ವಾಯ್ಸ್ ಕೆಳಗೆ ಶ್ರುತಿ ಅಕ್ಕನಿಗಿಂತ ದೊಡ್ಡ ಸ್ಟಾರಾ ನೀನು, ಯಾವ ಸೀಮೆ ಸ್ಟಾರ್ ನೀನು, ಗುರಾಯಿಸಬೇಡ, ಕಣ್ಣು ಕಿತ್ತಾಕ್ತೀನಿ ನೋಡು ಎಂದರು.

ಎಲ್ಲಾ ಬರೀ ಓಳು ಎಂದ ಚಂದನ್

ವೆಂಕಟ್ ಬರಲ್ಲ, ಬಂದು ಕೆಳಗೆ ಕೂರಲ್ಲ, ಎಂದಾಗ ಚಂದನ್ ಮಾರ್ಯಾದೆ ಕೊಟ್ಟು ಮಾತಾಡ್ತೀನಿ ಸುಮ್ನೆ ಬನ್ನಿ, ಇಲ್ಲಾಂದ್ರೆ ಭಾಷೆ ಬದ್ಲಾಗುತ್ತೆ, ಎಂದರು. ಈ ಸಂದರ್ಭದಲ್ಲಿ ನೇತ್ರಾ ನೀವು ಮಾಡಿದ್ದು ಪಬ್ಲಿಸಿಟಿ ಗಿಮಿಕ್ಕಾ ಎಂದು ಪ್ರಶ್ನಿಸಿದರು. ನೀವು ದೊಡ್ಡ ಸ್ಟಾರ್ ಅಂದ್ರಲ್ಲಾ, ಎಲ್ಲಾ ಬರೀ ಓಳು, ಎಂದು ಚಂದನ್ ನುಡಿದರು. ಅದಕ್ಕೆ ರೆಹಮಾನ್, ಭಾವನಾ ಎಲ್ಲರು ನೀವು ಇಷ್ಟು ದಿನ ಮಾಡಿದ್ದು, ಮಾತಾಡಿದ್ದು, ಕೊಚ್ಕೊಂಡಿದ್ದು, ಎಲ್ಲಾ ಸುಳ್ಳಾ, ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಖಾರವಾಗಿ ಪ್ರತಿಕ್ರೀಯಿಸಲು ಮುಂದಾದ ವೆಂಕಟ್ ಗೆ ರೆಹಮಾನ್ ಹೇ ವಾಯ್ಸ್ ಡೌನ್ ಎಂದು ಜೋರು ಧ್ವನಿಯಲ್ಲಿ ದಬಾಯಿಸಿದರು.

ಗಡ ಗಡ ನಡುಗಿದ ವೆಂಕಟ್

ಯಾವಾಗಲೂ ಮನೆಯಲ್ಲಿ ಎಗರಾಡುತ್ತಿದ್ದ ಹುಚ್ಚ ವೆಂಕಟ್ ರೆಹಮಾನ್ ಅವಾಜ್ ಗೆ ಗಪ್ ಚುಪ್ ಆದರು. ರೆಹಮಾನ್ ನಿಮ್ಮನ್ನು ಟಾರ್ಗೆಟ್ ಮಾಡ್ತಾನೆ ಎಂದ ಆನಂದ್ ಮಾತನ್ನು ಲೆಕ್ಕಿಸದ ವೆಂಕಟ್, ನಾನು ದುಡ್ಡಿಗಾಗಿ ಇದನ್ನ ಮಾಡ್ತಾ ಇಲ್ಲ ಜನ ನೋಡ್ತಾರೆ, ನನ್ನ ಅಭಿಮಾನಿಗಳು ನೋಡ್ತಾರೆ ಅಂತ ನಾನು ಇಲ್ಲಿರೋದು, ಆದರೆ ಈ ಟಾಸ್ಕ್ ಮಾಡಲ್ಲ, ಎಂದಿದ್ದಕ್ಕೆ, ರೆಹಮಾನ್ ಸರಿಯಾಗಿ ಬೆಂಡೆತ್ತಿ ಹಗೆ ತೀರಿಸಿಕೊಂಡಿದ್ದಾರೆ. ಒಟ್ಟಾರೆ ವೆಂಕಟ್ ಅವಾಜ್ ಹಾಕ್ತಾರೆ ಆದ್ರೆ ತಿರುಗಿ ಅವರಿಗೆ ಆವಾಜ್ ಹಾಕಿದ್ರೆ, ಗಪ್ ಚುಪ್ ಆಗ್ತಾರೆ, ಅನ್ನೋದು ಬಿಗ್ ಬಾಸ್ ನೋಡ್ತಾ ಇರೋ ಎಲ್ಲರ ಸರ್ವ ಸಮ್ಮತ ಅಭಿಪ್ರಾಯ. ಮುಂದೇನಾಗುತ್ತದೆ ಕಾದು ನೋಡಬೇಕು.

English summary
Bigg Boss Kannada 3 King and Slave Task Venkat became the Slave. Chandan, Rehman, Shruthi, and Bhavana are the King. And Neha Gowda, Kruthika, Ravi, Huccha Venkat, Tsunami Kitty, RJ Netra and Pooja Gandhi are the Slave's.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada