»   » ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ರೀ ಎಂಟ್ರಿ ಡೌಟ್

ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ರೀ ಎಂಟ್ರಿ ಡೌಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್‌ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ಅವರು ಸಹ ಸ್ಪರ್ಧಿ ರವಿ ಮುರೂರು ಅವರಿಗೆ ಗೂಸಾ ಕೊಟ್ಟು ರೌದ್ರಾವತಾರ ತಾಳಿ ಮನೆಯಿಂದ ಹೊರ ಬಿದ್ದಿರುವುದು ಎಲ್ಲರಿಗೂ ಗೊತ್ತಾಗಿರುತ್ತದೆ. ಅದರೆ, ಟಿಆರ್ ಪಿ ಕಿಂಗ್ ಎನಿಸಿರುವ ಹುಚ್ಚ ವೆಂಕಟ್ ರನ್ನು ಈ ರೀತಿ ಹೊರ ಹಾಕಿರುವುದೆಲ್ಲ ಚಾನೆಲ್ ನ ಗಿಮಿಕ್ ಎಂಬ ಮಾತಿಗೆ ಫಿಕ್ಷನ್ ಹೆಡ್ ಪರಮೇಶ್ವರ್ ಗುಂಡ್ಕಲ್ ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಕಾರಣಕ್ಕೂ ಹುಚ್ಚ ವೆಂಕಟ್ ಅವರನ್ನು ಮನೆಗೆ ಮತ್ತೆ ಕರೆಸಿಕೊಳ್ಳುವ ಸಾಧ್ಯತೆ ಕಡಿಮೆ. ಶೇ 99ರಷ್ಟು ಈ ರೀತಿ ವೈಲ್ಡ್ ಕಾರ್ಡ್ ಎಂಟ್ರಿ ಸಾಧ್ಯವೇ ಇಲ್ಲ ಎಂದಿದ್ದಾರೆ.

ಬಿಡದಿಯ ಇನ್ನೋವೇಟಿವ್ ಸಿಟಿಯಲ್ಲಿ ಶೂಟಿಂಗ್ ನಡುವೆಯೇ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪರಮೇಶ್ವರ್ ಅವರು, ಇದರಲ್ಲಿ ನಾವು ಗಿಮಿಕ್ ಮಾಡಿ ಏನು ಲಾಭ ಗಳಿಸಲು ಸಾಧ್ಯ. ಅತ್ಯಂತ ಜನಪ್ರಿಯ ಸ್ಪರ್ಧಿಯಾಗಿದ್ದ ವೆಂಕಟ್(ನಾನು ಹುಚ್ಚ ಎನ್ನಲಾರೆ) ಅವರು ಇದ್ದರೆ ತಾನೆ ನಮಗೆ ಲಾಭ. ಹೊರ ಹಾಕುವುದರಿಂದ ಏನು ಲಾಭ ಸಾಧ್ಯ ಹೇಳಿ ಎಂದು ಮರು ಪ್ರಶ್ನಿಸಿದರು.

No wildcard entry to Evicted Huccha Venkat : Parameshwar Gundkal

ವಾರದ ಕಥೆ ನಡೆಸುತ್ತಿದ್ದ ಕಿಚ್ಚ ಸುದೀಪ್​ ಅವರ ಮಾತನ್ನು ಹುಚ್ಚ ವೆಂಕಟ್ ಕೇಳಲು ತಯಾರಿರಲಿಲ್ಲ. ಬಿಗ್ ಬಾಸ್ ಅಂತಾರಾಷ್ಟ್ರೀಯ ಮಟ್ಟದ ರಿಯಾಲಿಟಿ ಶೋ ಆಗಿದ್ದು, ಇಲ್ಲಿನ ನಿಯಮ ಎಲ್ಲರಿಗೂ ಒಂದೇ. ನಿಯಮ ಮುರಿದ ಕಾರಣ ವೆಂಕಟ್ ಅವರು ತಾವಾಗೇ ಮನೆಯಿಂದ ಹೊರ ಬರಬೇಕಾಗಿದೆ.

ಬಿಗ್​ಬಾಸ್​ ಮನೆಯಿಂದ ಹುಚ್ಚ ವೆಂಕಟ್​ ಔಟ್​ ಆಗಲು ಅವರ ವರ್ತನೆಯೇ ಕಾರಣ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಹಿಂದಿ ಬಿಗ್ ಬಾಸ್ ನಲ್ಲೂ ಈ ರೀತಿ ಹಲ್ಲೆ ಮಾಡಿದ ಕಾರಣ ಸ್ಪರ್ಧಿಯೊಬ್ಬರನ್ನು ಹೊರಹಾಕಲಾಗಿತ್ತು. ಇಲ್ಲಿ ಯಾರು ಯಾರೊಬ್ಬರನ್ನು ದೂಡುವಂತಿಲ್ಲ, ಅವಾಚ್ಯ ಶಬ್ದಗಳಿಂದ ನಿಂದಿಸುವಂತಿಲ್ಲ. ನಿಯಮ ಮೀರಿದವರನ್ನು ಇಲ್ಲೇ ಇರಿಸಿಕೊಂಡರೆ ನಾನು ರಾಜಿನಾಮೆ ನೀಡಿ ಹೋಗಬೇಕಾಗುತ್ತದೆ. ಯಾರ ಪರ ವಹಿಸಿ ನಾವು ಕಾರ್ಯ ನಿರ್ವಹಿಸುವಂತಿಲ್ಲ ಎಂದು ಕಲರ್ಸ್​ ಚಾನೆಲ್ ರಿಯಾಲಿಟಿ ಶೋ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.

English summary
Bigg Boss Kannada 3: No Wild card entry to Evicted Huccha Venkat said Colors Channel reality show head Parameshwar Gundkal. Parameshwar speaking to media persons from Innovative film city, Bidadi told there is no gimmick in Venkat elimination episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada