»   » 'ಬಿಗ್ ಬಾಸ್'ಗೆ ಹೋಗಲು ಹುಚ್ಚ ವೆಂಕಟ್ ಹಾಕಿದ ಕಂಡೀಷನ್ ಏನು?

'ಬಿಗ್ ಬಾಸ್'ಗೆ ಹೋಗಲು ಹುಚ್ಚ ವೆಂಕಟ್ ಹಾಕಿದ ಕಂಡೀಷನ್ ಏನು?

Posted By:
Subscribe to Filmibeat Kannada

ಕನ್ನಡ ಕಿರುತೆರೆಯಲ್ಲಿ ಭಾರಿ ಕುತೂಹಲ ಕೆರಳಿಸಿದ 'ಬಿಗ್ ಬಾಸ್' ರಿಯಾಲಿಟಿ ಶೋದ ಮೂರನೇ ಆವೃತ್ತಿ ಶುರುವಾಗಿದೆ.

ಅಷ್ಟಕ್ಕೂ 'ಬಿಗ್ ಬಾಸ್-3' ಕರ್ನಾಟಕದ ಮೂಲೆ ಮೂಲೆಯಲ್ಲೂ ಸುದ್ದಿ ಆಗಿದ್ದು ಸ್ಪರ್ಧಿಗಳ ವಿಚಾರಕ್ಕಾಗಿ. 'ಬಿಗ್ ಬಾಸ್-3' ನಲ್ಲಿ ಅವರು ಇರ್ತಾರೆ, ಇವರು ಇರ್ತಾರೆ ಅಂತ ದಿನಕ್ಕೊಂದು ಲಿಸ್ಟ್ ಹೊರ ಬರುತ್ತಿತ್ತು. ['ಬಿಗ್ ಬಾಸ್' ಮನೆಯ ಎಲ್ಲಾ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ]

'ಬಿಗ್ ಬಾಸ್'ನಲ್ಲಿ ಯಾರು ಇರಲಿ ಬಿಡಲಿ, ಹುಚ್ಚ ವೆಂಕಟ್ ಇದ್ರೆ ಶೋಗೆ ಕಳೆ ಅಂತ ಎಲ್ಲರೂ ಕಾತರದಿಂದ ಕಾಯ್ತಿದ್ದರು. ಎಲ್ಲರ ನಿರೀಕ್ಷೆಯಂತೆ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆ ಸೇರಿದ್ದಾರೆ.

ಆದ್ರೆ, 'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಸೇರುವುದಕ್ಕೆ ಒಪ್ಪಿಕೊಂಡಿದ್ದು ಹೇಗೆ? ಕಲರ್ಸ್ ಕನ್ನಡ ವಾಹಿನಿಯವರು ಹುಚ್ಚ ವೆಂಕಟ್ ಹಿಂದೆ ಬಿದ್ದದ್ದು ಯಾಕೆ? 'ಬಿಗ್ ಬಾಸ್'ಗೆ ಹೋಗುವ ಮುನ್ನ ಹುಚ್ಚ ವೆಂಕಟ್ ಹಾಕಿದ ಕಂಡೀಷನ್ಸ್ ಏನು? ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಪರಮೇಶ್ವರ ಗುಂಡ್ಕಲ್ ಸ್ಪಷ್ಟನೆ

'ಬಿಗ್ ಬಾಸ್' ರಿಯಾಲಿಟಿ ಶೋ ಬಗ್ಗೆ, ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಸೆಲೆಕ್ಟ್ ಆದ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಹಾಗು 'ಬಿಗ್ ಬಾಸ್' ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಟಿವಿ9 ಕನ್ನಡ ವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ. ಪರಮೇಶ್ವರ ಗುಂಡ್ಕಲ್ ಏನು ಹೇಳಿದ್ದಾರೆ ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.... [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]

ಸೆಲೆಕ್ಷನ್ ಆಗುವುದು ಹೇಗೆ?

''ಶೋ ಶುರುವಾಗುವ ಮುನ್ನ ಒಂದು ಲೆವಲ್ ನಲ್ಲಿ ಸಿದ್ಧತೆ ತುಂಬಾನೇ ಆಗ್ತಿರುತ್ತೆ. ಕಾಸ್ಟಿಂಗ್ ಸಿಂಪಲ್ ಆಗಿರೋಲ್ಲ. ಒಂದು ಇಡೀ ಮನೆಯನ್ನ ತುಂಬಿಸ್ಬೇಕು. ಬೇರೆ ಬೇರೆ ವರ್ಗದ ಜನರನ್ನ ಹಾಕಿಕೊಳ್ಳಬೇಕು ಅಂತ ಇತ್ತು. ಕಾಸ್ಟಿಂಗ್ ಟೀಮ್ ನಲ್ಲಿ ಶೆಣೈ ಮತ್ತು ಸುಬ್ರಮಣ್ಯ ನನಗೆ ತುಂಬಾ ಸಹಾಯ ಮಾಡಿದರು''- ಪರಮೇಶ್ವರ ಗುಂಡ್ಕಲ್. [ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್! ]

ಎಲ್ಲೇ ಹೋದರೂ ಜನ ನನ್ನ ಕೇಳ್ತಿದ್ರು.!

''ನಾನು ಏಲ್ಲೇ ಹೋಗಲಿ. ಜನ ನನ್ನ ಹುಚ್ಚ ವೆಂಕಟ್ ಇರ್ತಾರಾ ಅಂತ ಕೇಳ್ತಿದ್ರು. ಪೆಟ್ರೋಲ್ ಬಂಕ್ ನಲ್ಲಿ, ನನ್ನ ಆಫೀಸ್ ನಲ್ಲಿ, ನಮ್ಮ ಕ್ಯಾಮರಾಮೆನ್ ಕೂಡ ನನ್ನ ಕೇಳ್ತಿದ್ರು. ಹುಚ್ಚ ವೆಂಕಟ್ ಇರ್ತಾರಾ ಅಂತ.''- ಪರಮೇಶ್ವರ ಗುಂಡ್ಕಲ್. [ಧ್ಯಾನದಲ್ಲೂ ನಿಮ್ 'ಎಕ್ಕಡ' ಮಾತ್ ಬೇಕಿತ್ತಾ ಹುಚ್ಚ ವೆಂಕಟ್?]

ಅವರ ವಿಡಿಯೋ ನೋಡಿರಲಿಲ್ಲ.!

''ನಾನು ಅವರ ಯೂಟ್ಯೂಬ್ ವಿಡಿಯೋ ನೋಡಿರಲಿಲ್ಲ. ನನಗೆ ಅವರ ವಿಡಿಯೋಗಳಲ್ಲಿ ಆಸಕ್ತಿ ಕೂಡ ಇರಲಿಲ್ಲ. ಆದ್ರೆ, ಈ ವ್ಯಕ್ತಿ ಜನರ ಗಮನ ಸೆಳೆದಿದ್ದಾರೆ ಅಂದ್ರೆ, ಅವರಲ್ಲಿ ಎನೋ ಇದೆ ಅಂತ ಅನಿಸ್ತು.''- ಪರಮೇಶ್ವರ ಗುಂಡ್ಕಲ್.

ಮೀಡಿಯಾಗಳಲ್ಲಿ ಅವರದ್ದೇ ಅಬ್ಬರ ಇತ್ತು

''ಬಿಗ್ ಬಾಸ್-3' ಕಾರ್ಯಕ್ರಮದ ಸ್ಪರ್ಧಿಗಳ ಲಿಸ್ಟ್ ಆಗಾಗ ಮೀಡಿಯಾದಲ್ಲಿ ಬರ್ತಾನೇ ಇತ್ತು. ಮೀಡಿಯಾದಲ್ಲಿ ಪ್ರತಿ ಲಿಸ್ಟ್ ನಲ್ಲಿ ಹುಚ್ಚ ವೆಂಕಟ್ ಹೆಸರು ಇತ್ತು. ನಂತರ ಅವರೊಂದಿಗೆ ಕಾಸ್ಟಿಂಗ್ ಟೀಮ್ ಕೂಡ ಮಾತುಕತೆ ನಡೆಸಿತು. ಅವರೊಂದಿಗೆ ಮಾತನಾಡಿದ ಮೇಲೆ ನಾವು ಶಾರ್ಟ್ ಲಿಸ್ಟ್ ಮಾಡಿದ್ವಿ.''- ಪರಮೇಶ್ವರ ಗುಂಡ್ಕಲ್.

ಹುಚ್ಚ ವೆಂಕಟ್ ಜೊತೆ ಮಾತನಾಡಿದಾಗ....

''ಕಾಸ್ಟಿಂಗ್ ಪಕ್ಕಾ ಮಾಡಿದ್ಮೇಲೆ ನಾನು ಅವರನ್ನ ಮಾತನಾಡಿಸಿದ್ದು. ಅವರೊಂದಿಗೆ ಮೂರು ನಾಲ್ಕು ಸಲಿ ನಮ್ಮ ಕಾಸ್ಟಿಂಗ್ ಟೀಮ್ ಮಾತನಾಡಿದ ಬಳಿಕ ಸೆಲೆಕ್ಟ್ ಮಾಡಿದ್ದು. ಇವರಲ್ಲಿ ಒಂದು ಮಗು ಇದೆ. ಮನಸ್ಸಿಂದ ಒಳ್ಳೆ ವ್ಯಕ್ತಿ. ತುಂಬಾ ಜೋವಿಯಲ್ ಮನುಷ್ಯ ಅಂತ ಅವರ ಜೊತೆ ಮಾತನಾಡಿದ ಬಳಿಕ ಗೊತ್ತಾಯ್ತು.!''- ಪರಮೇಶ್ವರ ಗುಂಡ್ಕಲ್.

ಡಿಮ್ಯಾಂಡ್ ಏನಿತ್ತು?

''ಹುಚ್ಚ ವೆಂಕಟ್ ಕಡೆಯಿಂದ ಡಿಮ್ಯಾಂಡ್ಸ್ ಅಂತ ಏನೂ ಇಲ್ಲ. ನಾನು ಏನು ಮಾಡ್ಬೇಕು ಅಲ್ಲಿ. ನಾನು ಆಂಕರ್ ಮಾಡ್ಬೇಕಾ. ಇಲ್ಲಾ ಗೆಸ್ಟ್ ಆಗಿ ಬರ್ಬೇಕಾ. ಇಲ್ಲಾ ಸ್ಪರ್ಧಿನಾ ಅಂತ ತುಂಬಾ Innocent ಆಗಿ ಹುಚ್ಚ ವೆಂಕಟ್ ನನ್ನ ಕೇಳಿದರು.''- ಪರಮೇಶ್ವರ ಗುಂಡ್ಕಲ್.

ಕಂಡೀಷನ್ಸ್ ಇತ್ತಾ?

''ಹುಚ್ಚ ವೆಂಕಟ್ ಹಾಕಿದ ಕಂಡೀಷನ್ ಏನು ಅಂದ್ರೆ, ನನಗೊಂದು ಡೆಸ್ಕ್ ಟಾಪ್ ಬೇಕು ಅಂತ ಕೇಳಿದರು. One way Conversation ಆದರೆ ಕ್ಯಾಮರಾ ಜೊತೆ ಮಾತನಾಡಬಹುದು ಅಂತ ಹೇಳಿದ್ವಿ. ಅವರಿಗೆ ಅವರ ಸೇನೆಯ ಹುಡುಗರ ಜೊತೆ ಮಾತನಾಡಬೇಕು ಅಂತ ಹಾಗೆ ಕೇಳಿದರು.''- ಪರಮೇಶ್ವರ ಗುಂಡ್ಕಲ್.

ಟಿ.ಆರ್.ಪಿಗಾಗಿ ಹುಚ್ಚ ವೆಂಕಟ್ ಇದ್ದಾರಾ?

''24 ಗಂಟೆಯಲ್ಲಿ ಆಗಿರುವುದನ್ನ ಒಂದು ಗಂಟೆಯಲ್ಲಿ ತೋರಿಸ್ತೀವಿ. ಹುಚ್ಚ ವೆಂಕಟ್ ನ ನೋಡಿ ಆಡಿಕೊಳ್ಳಲಿ. ಅವರನ್ನ ಗೇಲಿ ಮಾಡಿಕೊಳ್ಳಲಿ ಅಂತ ಶೋಗೆ ಕರೆದುಕೊಂಡು ಬಂದಿಲ್ಲ. ಈ ಶೋ Study of Human Behaviour. ಎಲ್ಲರೂ ಎಚ್ಚರಿಕೆಯಿಂದಲೇ ಇದ್ದಾರೆ. ಯಾರನ್ನೂ ಆಡಿಕೊಳ್ಳುವ ಉದ್ದೇಶದಿಂದ ನಾವು ಸ್ಪರ್ಧಿಗಳ ಆಯ್ಕೆ ಮಾಡಿಲ್ಲ.''- ಪರಮೇಶ್ವರ ಗುಂಡ್ಕಲ್.

ಶೋ ಮುನ್ನ ಜನರಲ್ ಚೆಕಪ್ ನಡೆದಿತ್ತು

''ಬಿಗ್ ಬಾಸ್' ಶೋ ಶುರುವಾಗುವ ಮುನ್ನ ಜೆನರಲ್ ಚೆಕಪ್ ಎಲ್ಲಾ Contestants ಗೆ ನಡೆದಿತ್ತು. ವಿಶಾಲ್ ಸಾವಂತ್ ಅಂತ ಮನಶಾಸ್ತ್ರಜ್ಞರು. ಅವರೊಂದಿಗೆ ಎಲ್ಲರೂ ವಿಸ್ತೃತ ಮಾತುಕತೆ ನಡೆಸಿ. ನಂತರ ಅವರು ಕಳುಹಿಸ ಬಹುದು ಅಂದ್ಮೇಲೆ ನಾವು ಫೈನಲ್ ಲಿಸ್ಟ್ ಮಾಡಿದ್ದು.''-ಪರಮೇಶ್ವರ ಗುಂಡ್ಕಲ್.

ಹುಚ್ಚ ವೆಂಕಟ್ ಬಗ್ಗೆ ರಿಪೋರ್ಟ್ ಬಂದ್ಮೇಲೆ ಫೈನಲ್ ಮಾಡಿದ್ದು

''ಹುಚ್ಚ ವೆಂಕಟ್ ರನ್ನ ವಿಶಾಲ್ ಸಾವಂತ್ ಇಂಟರ್ವ್ಯೂ ಮಾಡಿ, ಅವರು ಮಾನಸಿಕವಾಗಿ ರೆಡಿ, ಪರ್ಫೆಕ್ಟ್ಲಿ ಆಲ್ ರೈಟ್ ಅಂತ ಹೇಳಿದ ಮೇಲೆ ನಾವು ಹುಚ್ಚ ವೆಂಕಟ್ ರನ್ನ ಮನೆ ಒಳಗೆ ಕಳುಹಿಸಿದ್ದು''- ಪರಮೇಶ್ವರ ಗುಂಡ್ಕಲ್. ಮಾಹಿತಿ ಕೃಪೆ - TV9 KANNADA

English summary
Colors Kannada Channel Business head, Bigg Boss Kannada 3 Director Parameshwar Gundkal has revealed how he selected YouTube Star Huccha Venkat for the reality show. Read the article to know what Parameshwar Gundkal spoke about Huccha Venkat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada