For Quick Alerts
  ALLOW NOTIFICATIONS  
  For Daily Alerts

  ಬಿಗ್ ಮನೆಯ ವಾತಾವರಣವನ್ನು ರಾಡಿ ಎಬ್ಬಿಸಿದ, ಬಿಗ್ ಪಾಲಿಟಿಕ್ಸ್

  By Suneetha
  |

  ನಮ್ಮ ತುಕ್ಕು ಹಿಡಿದ ರಾಜಕೀಯಕ್ಕಿಂತ, ಕೆಟ್ಟ ರಾಜಕೀಯ ಚಿತ್ರಣವನ್ನು ಬಿಗ್ ಬಾಸ್ ಹೌಸ್ ನಲ್ಲಿ ನೀವು ನೋಡಬಹುದು. ಮನೆ ರಾಜಕೀಯದಲ್ಲಿ ಯಾರು, ಯಾರೋ ಮೈತ್ರಿ ಮಾಡಿಕೊಳ್ಳಲು ಹೋಗಿ ತಮ್ಮ ವೈಯಕ್ತಿಕ ವಿಷಯಗಳನ್ನು ತೆಗೆದು ರಾಡಿ ಎಬ್ಬಿಸಿಕೊಂಡರು.

  ಆರೋಪ-ಪ್ರತ್ಯಾರೋಪದ ಮಾಡಿ ಕಾಲೆಳೆಯಲು ಹೋಗಿ ವಾದ-ವಿವಾದಗಳು ಎದ್ದವು, ಇದರಿಂದ ಮತ್ತೆ ದೊಡ್ಡಣ್ಣನ ಮನೆಯಲ್ಲಿ ಅಸಮಾಧಾನದ ಕಿಡಿ ಹೊತ್ತಿ ಉರಿಯಲು ಪ್ರಾರಂಭವಾಯಿತು.

  ನಾನು ಟಾಸ್ಕ್ ಮಾಡಲ್ಲ, ಅಂತ ಬರೀ ಹುಚ್ಚ ವೆಂಕಟ್ ಮಾತ್ರ ಅಲ್ಲ ಬೇರೆಯವರು ನಿರಾಕರಿಸಿ ಹೊರಟು ಹೋಗ್ತಾರೆ ಅನ್ನೋದನ್ನು, ಬಿಗ್ ಮನೆಯಲ್ಲಿ ಉಳಿದ ಸದಸ್ಯರು ಮುಲಾಜಿಲ್ಲದೇ ತೋರಿಸಿಕೊಟ್ಟಿದ್ದಾರೆ.['ಬಿಗ್ ಬಾಸ್' ಮನೆಯಲ್ಲಿ ರಾಜಕೀಯ ದೊಂಬರಾಟ]

  ಈ ನಡುವೆ ರಾಜಕೀಯ ವಿಷಯದಲ್ಲಿ ಆರೋಪ-ಪ್ರತ್ಯಾರೋಪ ಮಾಡುವ ಮುನ್ನ ಪ್ರಾಮಾಣಿಕ ಕಾರ್ಯ ಪಕ್ಷ ಹಾಗೂ ಬಿಬಿಎಸ್ ಪಿ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು.

  ಇನ್ನು ಈ ರಾಜಕೀಯ ದೊಂಬರಾಟದಲ್ಲಿ ವೈಯಕ್ತಿಕ ವಿಷಯಗಳ ಚರ್ಚೆಯಿಂದ ಬೇಸತ್ತ ಸುನಾಮಿ ಕಿಟ್ಟಿ ನಾನು ಟಾಸ್ಕ್ ಮಾಡಲ್ಲ, ಎಂದು ಹೊರಟು ಹೋದರೆ, ಮಾಸ್ಟರ್ ಆನಂದ್ ಮಾತಿನಿಂದ ಬೇಸರಗೊಂಡ ಮಳೆ ಹುಡುಗಿ ಪೂಜಾ ಗಾಂಧಿ ಮೈಕ್ ಬಿಸಾಡಿ ಹೊರಟೇ ಹೋದ್ರು.['ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!]

  ಬಿಗ್ ಹೌಸ್ ನಲ್ಲಿ ಕಳೆಕಟ್ಟಿದ ಮನೆ ರಾಜಕೀಯದ ಕಂಪ್ಲೀಟ್ ಸ್ಟೋರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ಎರಡು ಪಕ್ಷಗಳಿಂದ ಪ್ರಣಾಳಿಕೆ ಬಿಡುಗಡೆ

  ಎರಡು ಪಕ್ಷಗಳಿಂದ ಪ್ರಣಾಳಿಕೆ ಬಿಡುಗಡೆ

  ಪಕ್ಷದ ಮುಖಂಡರಾದ ಮಾಸ್ಟರ್ ಆನಂದ್ ಹಾಗೂ ರೆಹಮಾನ್ ಅವರು ತಮ್ಮ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ಆನಂದ್ ಅವರ ಪ್ರಣಾಳಿಕೆಯಲ್ಲಿ, ಪ್ರತಿದಿನ ಎರಡು ಹೊತ್ತು ಚಹಾ, ತಣ್ಣನೆಯ ಗಾಳಿ ಬೆಚ್ಚನೆಯ ನಿದ್ದೆ, ಪ್ರತಿನಿತ್ಯ ಬಿಸಿನೀರು ಮುಂತಾದವು ಸೇರಿದರೆ, ರೆಹಮಾನ್ ಪ್ರಣಾಳಿಕೆಯಲ್ಲಿ, ಎಲ್ಲಾ ಕಡೆ ಸ್ವ‍ಚ್ಚತೆ, ಅಪ್ರಮಾಣಿಕತೆಯನ್ನು ಖಡಾಖಂಡಿತವಾಗಿ ವಿರೋಧಿಸೋದು, ಪ್ರತಿಯೊಬ್ಬರಿಗೂ ಮೂರು ಹೊತ್ತು ಹೊಟ್ಟೆ ತುಂಬಾ ಊಟ, ಮನೆಯನ್ನು ಜಗಳ ಮುಕ್ತ ಮಾಡೋದು, ಆಗಿತ್ತು.

  ಬಿಬಿಎಸ್ ಪಿಗೆ ದಿಕ್ಕಾರ

  ಬಿಬಿಎಸ್ ಪಿಗೆ ದಿಕ್ಕಾರ

  ಬಿಬಿಎಸ್ ಪಿ ಪಕ್ಷ (ಆನಂದ್ ಪಕ್ಷ)ದಲ್ಲಿ ಸುನಾಮಿ ಕಿಟ್ಟಿ ಒಬ್ಬರೇ ತುಂಬಾ ಕೆಲಸ ಮಾಡಿದ್ದಾರೆ. ಸೋ ಎಲ್ಲರಿಗೂ ಸಮಾನ ಅವಕಾಶ ಬೇಕಿತ್ತು ಅಂತ ಅನಿಸುತ್ತಿದೆ. ಸಮಾನತೆ ಇಲ್ಲದ ಪಕ್ಷಕ್ಕೆ ದಿಕ್ಕಾರ, ಕಣ್ಣಿದ್ದು ಕುರುಡಾಯಿತು ಬಿಬಿಎಸ್ ಪಿ ಅಂತ ಪ್ರಾಮಾಣಿಕ ಪಕ್ಷ (ರೆಹಮಾನ್ ಪಕ್ಷ) ದಿಕ್ಕಾರ ಕೂಗಿತು.

  ಅರಮನೆಯಲ್ಲಿ ಶುರುವಾಯಿತು ರಾಜಕೀಯ ಲಾಭ

  ಅರಮನೆಯಲ್ಲಿ ಶುರುವಾಯಿತು ರಾಜಕೀಯ ಲಾಭ

  ಆರೋಪದ ವೇಳೆ ಎರಡು ಪಕ್ಷಗಳ ನಡುವೆ ಮಾತಿನ ಸಮರ ನಡೆಯಿತು. ಮನೆ ರಾಜಕೀಯದಲ್ಲಿ ಆರೋಪಗಳ ಸುರಿಮಳೆಯೇ ಸುರಿಯಿತು. ಜೊತೆಗೆ ವಾದ-ವಿವಾದಗಳ ನಡುವೆ ಚಂದನ್ ಅವರು ಬಿಬಿಎಸ್ ಪಿ ಪಕ್ಷದ ಮುಖಂಡ ಆನಂದ್ ಅವರಿಗೆ ಧೈರ್ಯ ಇದ್ರೆ ಬಾರೋ ಎಂದು ತೊಡೆತಟ್ಟಿ, ಓಪನ್ನ್ ಚಾಲೆಂಜ್ ಹಾಕಿದರು. ಹಾಗು ಪರ್ಸನಲ್ ಆಗಿ ಮಾತಾಡೋದನ್ನು ನೀವು ಈಗಲೇ ನಿಲ್ಲಿಸಬೇಕು ಎಂದು ಚಂದನ್ ವಾರ್ನ್ ಮಾಡಿದರು.

  ಆರೋಪದ ವೇಳೆ ತಲೆದೂರಿದ ವೈಯಕ್ತಿಕ ವಿಚಾರಗಳು

  ಆರೋಪದ ವೇಳೆ ತಲೆದೂರಿದ ವೈಯಕ್ತಿಕ ವಿಚಾರಗಳು

  ಹನಿಮೂನ್ ಗೆ ಬಂದಿದ್ದಾರ ಅಥವಾ ಟಾಸ್ಕ್ ಮಾಡೋಕೆ ಬಂದಿದ್ದಾರ ಎಂದು ರೆಹಮಾನ್ ಹಾಗೂ ನೇಹಾ ಗೆ ಟಾಂಗ್ ಕೊಟ್ಟ ಮನೆಯ ಹಿರಿಯ ಸದಸ್ಯರು, ರೆಹಮಾನ್ ಮತ್ತು ನೇಹಾ ಗೌಡ ಅವರ ಸಂಬಂಧದ ಬಗ್ಗೆ ಬಿಸಿ ಬಿಸಿ ಚರ್ಚೆ ಮಾಡತೊಡಗಿದರು. ನೇಹಾ ಗೌಡ ಅವರನ್ನು ರೆಹಮಾನ್ ತೊಡೆ ಮೇಲೆ ಮಲಗಿಸಿಕೊಂಡರು ಎಂಬ ಕಾರಣಕ್ಕೆ ಎದುರಾಳಿ ಪಕ್ಷದವರು, ತೊಡೆ ಮೇಲೆ ಮಲಗಿಸಿಕೊಂಡು ಜೋಗುಳ ಹಾಡಿದ್ರು ಅಂತ ಟಾಂಗ್ ಕೊಟ್ಟರು.

  ಸಿಡಿದೆದ್ದ ರೆಹಮಾನ್

  ಸಿಡಿದೆದ್ದ ರೆಹಮಾನ್

  ತಮ್ಮಿಬ್ಬರ ಬಗ್ಗೆ ಅಂತೆ-ಕಂತೆಗಳ ಪುರಾಣ ಶುರುವಾಗಿದ್ದಕ್ಕೆ, ರೆಹಮಾನ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಅಕ್ಕಾ ಅಂತ ತಲೆ ಸವರಿದ್ರೆ, ಬೇರೆ ಅರ್ಥ ಮಾಡಿಕೊಂಡ್ರಿ, ಯಾವುದ್ರಿ ನಿಮ್ಮ ವ್ಯಕ್ತಿತ್ವ. ನೀವು ವ್ಯಕ್ತಿತ್ವದ ಬಗ್ಗೆ ಮಾತಾಡಬೇಡಿ ಎಂದು ರೆಹಮಾನ್ ಗುಡುಗಿದರು. ಜೊತೆಗೆ ಎದುರಾಳಿಯವರು ಮಾತು ಕೇಳಿ ಕಣ್ಣೀರು ಹಾಕಿದರು.

  ಟಾಸ್ಕ್ ಬೇಡವೆಂದು ಹೊರಟೇ ಹೋದ್ರು ಕಿಟ್ಟಿ

  ಟಾಸ್ಕ್ ಬೇಡವೆಂದು ಹೊರಟೇ ಹೋದ್ರು ಕಿಟ್ಟಿ

  ವೈಯಕ್ತಿಕ ವಿಚಾರದಿಂದ ಬೇಸರಗೊಂಡು ನಾನು ಯಾವುದೇ ಕಾರಣಕ್ಕೂ ಟಾಸ್ಕ್ ಮಾಡಲ್ಲ ಎಂದು ಹೊರಟೇ ಹೋದ ಸುನಾಮಿ ಕಿಟ್ಟಿಯ ಮನ ಒಲಿಸಿ ಆನಂದ್ ಮತ್ತು ಶ್ರುತಿ ವಾಪಸ್ ಪಕ್ಷಕ್ಕೆ ಕರೆತರುತ್ತಾರೆ. ಒಟ್ನಲ್ಲಿ ತಿಳಿ ಹೇಳಿ ಕಿಟ್ಟಿಯನ್ನು ವಾಪಸ್ ಕರೆತರುವಲ್ಲಿ ಆನಂದ್ ಮತ್ತು ಶ್ರುತಿ ಯಶಸ್ವಿಯಾದ್ರು

  ಕಿವಿ ಮಾತು ಹೇಳಿದ ಶ್ರುತಿ

  ಕಿವಿ ಮಾತು ಹೇಳಿದ ಶ್ರುತಿ

  ಇಷ್ಟಲ್ಲಾ ಜಟಾಪಟಿ ನಡೆದ ಮೇಲೆ, ಎರಡು ಪಕ್ಷಗಳಿಗೂ ತಿಳಿ ಹೇಳಿದ ಶ್ರುತಿ ಅಮ್ಮ, ಚಾರಿತ್ರ್ಯ ವಧೆ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು. ಜೊತೆಗೆ ಎಲ್ಲರೂ ಟಾಸ್ಕ್ ಅಂತ ತಿಳಿದುಕೊಂಡು, ಮೊದಲು ಟಾಸ್ಕ್ ಮುಗಿಸಿ ಎಂದು ಇಡೀ ಮನೆಯ ಸದಸ್ಯರಿಗೆ ಬುದ್ದಿ ಹೇಳಿದರು.

  ಬಿಕ್ಕಿ ಬಿಕ್ಕಿ ಅತ್ತ ನೇಹಾ ಗೌಡ

  ಬಿಕ್ಕಿ ಬಿಕ್ಕಿ ಅತ್ತ ನೇಹಾ ಗೌಡ

  ರೆಹಮಾನ್ ಹಾಗೂ ನೇಹಾ ಗೌಡ ಅವರ ಮಧ್ಯೆ ಏನೋ ಇದೆ ಅಂತ ಎಲ್ಲರೂ ಮಾತಾಡಿಕೊಂಡಿದ್ದಕ್ಕೆ, ಜೊತೆಗೆ ಆನಂದ್ ಆರೋಪ ಕೇಳಿದ ನೇಹಾ ಅವರು ಬೇಸರ ಮಾಡಿಕೊಂಡು, ನನಗೆ ಇಂತಹ ಮಾತುಗಳನ್ನು ಕೇಳೋದು ಇಷ್ಟ ಇಲ್ಲ, ನಾನು ಆಚೆ ಹೋದ್ರೆ, ನನ್ನ ಸಾಯಿಸಿಬಿಡ್ತಾರೆ ಎಂದು ತಲೆ ಚಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.

  ಸೆಲೆಬ್ರಿಟಿಗಳ ನಡುವೆ ಮತ್ತೆ ಮೂಡಿದ ಅಸಮಾಧಾನ

  ಸೆಲೆಬ್ರಿಟಿಗಳ ನಡುವೆ ಮತ್ತೆ ಮೂಡಿದ ಅಸಮಾಧಾನ

  ಈ ಎಲ್ಲಾ ವಾಗ್ವಾದಗಳಿಂದ ಸೆಲೆಬ್ರಿಟಿಗಳ ನಡುವೆ ಮತ್ತೆ ಅಸಮಾಧಾನ ಹುಟ್ಟಿಕೊಂಡಿತು. ಬಿಬಿಎಸ್ ಪಿ ಪಕ್ಷದ ನಡವಳಿಕೆ ಬಗ್ಗೆ ರೆಹಮಾನ್ ತಮ್ಮ ಗುಂಪಿನಲ್ಲಿ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಚಂದನ್ ಅವರು ಆನಂದ್ ಬಗ್ಗೆ ಹೀಗೆ ಹೇಳಿದರು. 'ನನಗೆ ಆನಂದ್ ಅವರ ಮೇಲೆ ತುಂಬಾ ಗೌರವ ಇತ್ತು. ಆದ್ರೆ ಈಗ ಅದೆಲ್ಲಾ ಹೋಯ್ತು, ಆನಂದ್ ಬರೀ ಬ್ಯಾಡ್ ಪರ್ಸನ್ ಎಂದರು.

  ಬಿಗ್ ಹೌಸ್ ನಲ್ಲಿ ಮತದಾನ ಪ್ರಕ್ರಿಯೆ ನಡೆಯಿತು

  ಬಿಗ್ ಹೌಸ್ ನಲ್ಲಿ ಮತದಾನ ಪ್ರಕ್ರಿಯೆ ನಡೆಯಿತು

  ಇಷ್ಟೆಲ್ಲಾ ದೊಂಬರಾಟ ಮುಗಿದ ಮೇಲೆ ಮತದಾನ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಎರಡು ಪಕ್ಷಗಳು ಸಮಬಲ ಸಾಧಿಸಿದ್ದರಿಂದ ನಿರ್ಣಾಯಕ ಮತದಾನ ಮಾಡುವಂತೆ ಸ್ಪಿಕರ್ ಶ್ರುತಿ ಅವರಿಗೆ ಬಿಗ್ ಬಾಸ್ ಆದೇಶ ನೀಡಿದರು. ಇದರಿಂದ ಆನಂದ್ ಪಕ್ಷ ಜಯ ಗಳಿಸಿ, ಮಾಸ್ಟರ್ ಆನಂದ್ ಅವರು ಮುಂದಿನ ವಾರದ ಇಮ್ಯನಿಟಿ ಪಡೆದುಕೊಂಡರೆ. ಸೋತ ಪಕ್ಷದ ಮುಖಂಡ ರೆಹಮಾನ್ ಮುಂದಿನ ವಾರಕ್ಕೆ ನೇರವಾಗಿ ನಾಮಿನೆಟ್ ಆದರು.

  English summary
  Bigg Boss Kannada 3: Day 25 Political task heats up the Bigg Boss house. Political game turns into battle field.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X