»   » ಸುದೀಪ್ ಮೇಲೆ ಆರೋಪ; ನೇಹ-ರೆಹಮಾನ್ ಬಗ್ಗೆ ಕಿಚ್ಚನ ಕಿಚ್ಚು!

ಸುದೀಪ್ ಮೇಲೆ ಆರೋಪ; ನೇಹ-ರೆಹಮಾನ್ ಬಗ್ಗೆ ಕಿಚ್ಚನ ಕಿಚ್ಚು!

Posted By:
Subscribe to Filmibeat Kannada

ಮಾತನಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ ಮಾತನಾಡುವ ಕಿಚ್ಚ ಸುದೀಪ್ 'ಬಿಗ್ ಬಾಸ್' ಮನೆಯಲ್ಲಿ ಒಡೆದ ಮನಸ್ಸುಗಳನ್ನ ತಮ್ಮ ಪಂಚಾಯತಿ ಮೂಲಕ ಒಂದು ಮಾಡುವುದರಲ್ಲಿ ಎಕ್ಸ್ ಪರ್ಟ್.

ಮೊದಲ ಸೀಸನ್ ನಿಂದಲೂ ಅನೇಕ ಕಿತ್ತಾಟಗಳನ್ನ, ಹಲವು ಗಂಭೀರ ವಿಷಯಗಳನ್ನ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿರುವ ಕಿಚ್ಚ ಸುದೀಪ್ ಯಾರಿಂದಲೂ ಬೆಟ್ಟು ಮಾಡಿ ತೋರಿಸಿಕೊಂಡವರಲ್ಲ.

ಅಂತಹುದರಲ್ಲಿ ಕಿಚ್ಚ ಸುದೀಪ್ ಮೇಲೆ ಗಗನಸಖಿ ನೇಹ ಗೌಡ ಒಂದು ವೈಯುಕ್ತಿಕ ಆರೋಪ ಮಾಡಿದ್ದರು. ಜೊತೆಗೆ ರೆಹಮಾನ್ ಕೂಡ 'ಬಿಗ್ ಬಾಸ್' ಬಗ್ಗೆ ಗಂಭೀರ ಆಪಾದನೆ ಮಾಡಿದ್ದರು. ['ಬಿಗ್ ಬಾಸ್' ಮೇಲೆ ರೆಹಮಾನ್ ಮಾಡಿದ ಆರೋಪ ಏನು?]

ಆ ಬಗ್ಗೆ ಬೇಸರಗೊಂಡಂತೆ ಕಂಡ ಸುದೀಪ್, ತಮ್ಮ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನೇಹ ಗೌಡ ಮತ್ತು ರೆಹಮಾನ್ ಗೆ ನೇರವಾಗಿ ಪ್ರಶ್ನೆ ಕೇಳಿದರು. ಮುಂದೆ ಓದಿ......

ರೆಹಮಾನ್ ಮಾಡಿದ್ದ ಆರೋಪ ಏನು?

ಕಳೆದ ವಾರ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ವೀಕ್ಷಕರೊಬ್ಬರು ಫೋನ್ ಮಾಡಿದ್ದರು. 'ಅಣ್ಣ-ತಂಗಿ' ಅಂತ ಹೇಳುತ್ತಿರುವ ರೆಹಮಾನ್-ನೇಹ ನಡವಳಿಕೆ ಬಗ್ಗೆ ವೀಕ್ಷಕರೊಬ್ಬರು ಪ್ರಶ್ನೆ ಮಾಡಿದ್ರು. ಈ ಫೋನ್ ಕಾಲ್ 'ಸ್ಕ್ರಿಪ್ಟೆಡ್', Genuine ಅಲ್ಲ ಅಂತ ರೆಹಮಾನ್ 'ಬಿಗ್ ಬಾಸ್' ಕಾರ್ಯಕ್ರಮದ ಮೇಲೆ ಆರೋಪ ಮಾಡಿದ್ದರು. [ಬಿಗ್ ಮನೆಯಲ್ಲಿ ಅಣ್ಣ-ತಂಗಿ ಸಂಬಂಧಕ್ಕೆ, ತೆರೆ ಎಳೆದ ರೆಹಮಾನ್]

ಸುದೀಪ್ ಕೊಟ್ಟ ಸಮರ್ಥನೆ

'ಬಿಗ್ ಬಾಸ್' ಕಾಲರ್ ಗಳನ್ನ ಹೇಗೆ ಆಯ್ಕೆ ಮಾಡುತ್ತಾರೆ ಅಂತ ಸುದೀಪ್ ತಮ್ಮ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ವಿವರಿಸಿದರು. ''ಕಾಲರ್ ನ ಯಾಕೆ ಮತ್ತು ಹೇಗೆ ಸೆಲೆಕ್ಟ್ ಮಾಡ್ತೀವಿ ಅಂತ ನಿಮಗೆ ಹೇಳ್ತೀವಿ. ಯಾರ್ಯಾರಿಗೆ ಏನೇನು ಪ್ರಶ್ನೆಗಳನ್ನ ಕೇಳ್ಬೇಕು ಅನ್ನೋ ನೂರಾರು ಪ್ರಶ್ನೆಗಳು ನಮಗೆ ಬರುತ್ವೆ. ಈಮೇಲ್, ಟ್ವಿಟ್ಟರ್, ಫೇಸ್ ಬುಕ್ ಮತ್ತು ಪತ್ರಗಳ ಮೂಲಕ.'' - ಸುದೀಪ್

ಎಲ್ಲರಿಗೂ ಪ್ರಶ್ನೆಗಳಿವೆ!

''ಮನೆಯಲ್ಲಿರುವ ಎಲ್ಲರಿಗೂ ಪ್ರಶ್ನೆಗಳು ಇರುತ್ವೆ. ಒಬ್ಬರಿಗೆ ಮಾತ್ರ ಅಂತಲ್ಲ. ಬಟ್ ಕೆಲವರಿಗೆ ಜಾಸ್ತಿ ಪ್ರಶ್ನೆಗಳು ಬಂದಿರುತ್ವೆ. ಒಂದು ಸಾವಿರ ಪ್ರಶ್ನೆಗಳು ಬಂದಿದ್ದರೆ, ಅದರಲ್ಲಿ ಕೆಲವರಿಗೆ 300 ಬಂದಿರಬಹುದು. ಹೀಗಾಗಿ ಯಾರಿಗೆ ಹೆಚ್ಚು ಬಂದಿದೆಯೋ, ಅವರಿಗೆ ನಾವು ಪ್ರಶ್ನೆ ಕೇಳುವ ಹಾಗೆ ಆಯ್ಕೆ ಮಾಡ್ತೀವಿ.'' - ಸುದೀಪ್

ಫೋನ್ ಕಾಲರ್ ಆಯ್ಕೆ ಹೇಗೆ?

''ಯಾರ್ಯಾರು ಫೋನ್ ಮಾಡ್ಬೇಕು ಅಂತಿರ್ತಾರೋ, ಅವರ ನಂಬರ್ ಆಯ್ಕೆ ಮಾಡ್ತೀವಿ. ಪ್ರಶ್ನೆ ಕೇಳಿಸ್ತೀವಿ. ಇದು ಬ್ಯಾಕ್ ಹ್ಯಾಂಡ್ ನಲ್ಲಿ ನಮ್ಮ ರಿಸರ್ಚ್ ಟೀಮ್ ಹ್ಯಾಂಡಲ್ ಮಾಡುವುದು. ಇದರಲ್ಲಿ ಯಾರಿಗಾದರೂ ಡೌಟ್ ಇದ್ದರೆ, ತಾವು ಹೊರಗಡೆ ಬಂದಾಗ ಅದನ್ನ ಸರ್ವೆ ಮಾಡಿ ನೋಡಿ, ಈ ಕಾಲರ್ಸ್ ನಿಜನಾ ಇಲ್ಲಾ ಸ್ಕ್ರಿಪ್ಟೆಡ್ ಅಂತ ಡಿಸೈಡ್ ಮಾಡ್ಕೊಳ್ಳಿ'' ಅಂತ ರೆಹಮಾನ್ ಗೆ ಸುದೀಪ್ ಬಿಸಿ ಮುಟ್ಟಿಸಿದರು.

ನೇಹ ಗೌಡ ಮಾಡಿದ್ದ ಆರೋಪ ಏನು?

ಕಳೆದ ವಾರದ ಕಾಲರ್ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ''ನಾನೂ ಇನ್ನೂ ಅವರದ್ದೇ ಶೈಲಿಯಲ್ಲಿ ಉತ್ತರ ನೀಡುತ್ತಿದೆ. ಆದ್ರೆ ಅಷ್ಟರಲ್ಲಿ ಸುದೀಪ್ ಕಾಲ್ ಕಟ್ ಮಾಡಿದರು'' ಅಂತ ರೆಹಮಾನ್ ಹೇಳಿದಾಗ, ಅದಕ್ಕೆ ನೇಹ ''ಅವರೇ ಅದರ ಬಗ್ಗೆ ಜಾಸ್ತಿ ಮಾತನಾಡಿದ್ದು'' ಅಂತ ನೇರವಾಗಿ ಸುದೀಪ್ ಮೇಲೆ ಆರೋಪ ಮಾಡಿದ್ರು. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

ನೇಹ ಹೇಳಿದ್ದು ನಿಜಾನಾ?

ರೆಹಮಾನ್-ನೇಹ ಸಂಬಂಧದ ಕುರಿತಾಗಿ ಮನೆಯಲ್ಲಿ ದೊಡ್ಡ 'ರಾಜಕೀಯ' ಜಗಳವಾದಾಗಲೇ ಸುದೀಪ್ ಆ ಬಗ್ಗೆ ಮಾತನಾಡಲಿಲ್ಲ. ''ಅವರವರ ಬದುಕು. ಬಿಟ್ಟುಬಿಡಿ'' ಅಂತ್ಹೇಳಿ ಟಾಪಿಕ್ ಗೆ ಫುಲ್ ಸ್ಟಾಪ್ ಇಟ್ಟುಬಿಟ್ಟರು. ಹೀಗಿದ್ದರೂ, ತಮ್ಮ ರಿಲೇಶನ್ ಶಿಪ್ ಬಗ್ಗೆ ಸುದೀಪ್ ಅವರೇ ಹೆಚ್ಚು ಮಾತನಾಡಿದ್ದು ಅಂತ ನೇಹ ಹೇಳಿದ್ದು ಸುದೀಪ್ ಗೆ ಬೇಸರವಾದಂತೆ ಕಂಡುಬಂತು.

ರ್ಯಾಪಿಡ್ ಫೈಯರ್ ರೌಂಡ್ ನಲ್ಲಿ ಕಿಚ್ಚನ ಕಿಚ್ಚು!

ಆಡಿಯನ್ಸ್ ಕಾಲ್ ಫೇಕ್ ಅನ್ನುವ ಬಗ್ಗೆ ಗುಮಾನಿ ಮತ್ತು ನೇಹ ಅವರ ಆರೋಪ. ಈ ಎರಡನ್ನೂ ಇಟ್ಟುಕೊಂಡು ಸುದೀಪ್ ರ್ಯಾಪಿಡ್ ಫೈಯರ್ ರೌಂಡ್ ನಲ್ಲಿ ಪ್ರಶ್ನೆಗಳನ್ನ ಕೇಳಿದರು. [ಟಿವಿ9 ರೆಹಮಾನ್ ಗೆ, ಕಿಚ್ಚ ಸುದೀಪ್ ಕೇಳಿದ್ದೇನು?]

ಸುದೀಪ್ ಪ್ರಶ್ನೆ ಏನು?

''ಆಡಿಯನ್ಸ್ ಕಾಲ್ ಗಳು ನಿಮಗೆ ಬರ್ತಿರೋದು, ನಿಜವಾಗಿಯೂ ಆಡಿಯನ್ಸ್ ಕಾಲ್ ಅಲ್ಲ. ಅದು ಫೇಕ್ ಅಂತ ಅನಿಸುತ್ತಾ?'' ಅಂತ ಸುದೀಪ್ ಕೇಳಿದಕ್ಕೆ ರೆಹಮಾನ್ ಮತ್ತು ನೇಹ ಮಾತ್ರ 'ಯೆಸ್' ಅಂತ ಹೇಳಿದರು.

ರೆಹಮಾನ್ ಸಬೂಬು ಏನು?

''ಮೊದಲ ವಾರ ನನಗೆ ಹಾಗೆ ಅನಿಸಿತ್ತು. ಬಹುಶಃ ಫೇಕ್ ಅಂತ ಅಲ್ಲ. ಆಡಿಯನ್ಸ್ ಕಾಲ್ ಇರ್ಬಹುದು. ಆದ್ರೆ, ಅದನ್ನ ಹೇಳಿಕೊಟ್ಟು ಇವತ್ತಿನ ಎಪಿಸೋಡ್ ಗೆ ಇದು ಬೇಕು ಅಂತ ಕೇಳಿ ಅಂತ ಹೇಳಿಕೊಡೋದು ಇರಬಹುದೇನೋ ಅಂತ ಅನಿಸಿತ್ತು'' - ರೆಹಮಾನ್

ನೇಹ ಪ್ರತಿಕ್ರಿಯೆ

''ಸೇಮ್ ರೆಹಮಾನ್ ಹೇಳಿದ್ದೇ ನನಗೂ ಅನಿಸಿದ್ದು. ಯಾಕಂದ್ರೆ, ಅವರು ಮಾತನಾಡುತ್ತಿದ್ದಾಗ ಅದನ್ನೇ ಜಾಸ್ತಿ ಎಳೀತಾಯಿದ್ದರು. ಅದಕ್ಕೆ ಹೇಳಿಕೊಟ್ಟು ಹೇಳಿಸ್ತಿರೋದಾ ಅಂತ ಅನಿಸ್ತಿತ್ತು'' - ನೇಹ ಗೌಡ

ಸುದೀಪ್ ವೈಯುಕ್ತಿಕ ಪ್ರಶ್ನೆ

''ರೆಹಮಾನ್ ಅವರು, 'ಕಾಲರ್ ಇನ್ನೂ ಮಾತನಾಡುತ್ತಿರುವಾಗಲೇ ಸುದೀಪ್ ಅದನ್ನ ಕಟ್ ಮಾಡ್ತಾರೆ' ಅಂತ ಹೇಳಿದಾಗ ನೇಹ ಒಂದು ಲೈನ್ ಹೇಳ್ತೀರಾ, '' ಆಕ್ಚ್ಯುಲಿ ಅವರೇ ಜಾಸ್ತಿ ಮಾತಾಡೋದು'' ಅಂತ. ವೈಯುಕ್ತಿಕವಾಗಿ ನನ್ನ ಮೇಲೆ ಒಂದು ಆಪಾದನೆ ಹೊರಸಿದ್ರಿ ತಾವು.'' ಅಂತ ನೇಹಗೆ ಸುದೀಪ್ ಪ್ರಶ್ನೆ ಕೇಳಿದರು.

ನೇಹ ಉತ್ತರವೇನು?

''ನನಗೆ ಅನಿಸ್ಸಿದ್ದು Probably ನೀವೇ ಜಾಸ್ತಿ ಮಾತನಾಡಿದ್ರಿ ಅಂತ'' - ನೇಹ ಗೌಡ

ರೆಹಮಾನ್ ಅಂದುಕೊಂಡಿದ್ದೇ ಬೇರೆ

''ಸುದೀಪ್ ಅವರೇ ಜಾಸ್ತಿ ಮಾತನಾಡುತ್ತಾರೆ ಅಂತ ನೇಹ ಹೇಳಿದ್ದು ನಮ್ಮಿಬ್ಬರ ಸಂಬಂಧದ ಬಗ್ಗೆ ಅಲ್ಲ. ಐ ಆಮ್ ಡ್ಯಾಮ್ ಶೂರ್ ಅಬೌಟ್ ಇಟ್.'' - ರೆಹಮಾನ್

ಫುಟೇಜ್ ಇದೆ ರೆಹಮಾನ್!

''ವೀ ಹ್ಯಾವ್ ದಿ ಎಂಟೈರ್ ಫುಟೇಜ್ ರೆಹಮಾನ್. ನೀವು ಮಾತನಾಡ್ತಾಯಿದ್ದದ್ದು ರಿಲೇಶನ್ ಶಿಪ್ ಬಗ್ಗೆ. ಅವರು ಹೇಳಿದ್ದು, 'ಅಕ್ಚ್ಯುಲಿ ಅವರೇ ಅದರ ಬಗ್ಗೆ ಜಾಸ್ತಿ ಮಾತನಾಡುವುದು' ಅಂತ'' - ಸುದೀಪ್

ನೇಹ-ಸುದೀಪ್ ಸಂಭಾಷಣೆ

ನೇಹ - ''ನನ್ನ ಮಾತಿನ ಅರ್ಥ ಅದಾಗಿರಲಿಲ್ಲ.''

ಸುದೀಪ್ - ''ಅದನ್ನ ನೀವು ಹೇಳಿದ್ರೆ, ನಮಗೆ ಗೊತ್ತಾಗುತ್ತೆ. ನಮ್ಮಿಂದ ತಪ್ಪಾಗಿದ್ರೆ, ತಿದ್ಕೊಳ್ಳೋಣ''

ನೇಹ - ''ಕಾಲರ್ ಜೊತೆ ನೀವೇ ಮಾತನಾಡಿದ್ರಿ, ನಮಗೆ ಸಮಯ ಸಿಗ್ಲಿಲ್ಲ ಅನ್ನೋದು ನನ್ನ ಅಭಿಪ್ರಾಯ ಆಗಿತ್ತು. ಅದು ಬೇರೆ ತರಹ ಅರ್ಥ ಆಗಿದ್ರೆ ಐ ಆಮ್ ಎಕ್ಸ್ ಟ್ರೀಮ್ಲಿ ಸಾರಿ''

ಸುದೀಪ್ ಸಮರ್ಥನೆ

''ಇಡೀ ಫುಟೇಜ್ ನಮ್ಮ ಹತ್ರ ಇದೆ. ಕಾಲರ್ ನ ನಿಮಗೆ ಕನೆಕ್ಟ್ ಮಾಡಿದ ಮೇಲೆ ನಾನು ಮಧ್ಯೆ ಮಾತನಾಡಲೇ ಇಲ್ಲ. ಕಾಲರ್ ನಿಮ್ಮ ಸಂಬಂಧದ ಬಗ್ಗೆ ಜಾಸ್ತಿ ಮಾತಾಡ್ತಾಯಿದ್ದಾರೆ ಅಂತ ನನಗೆ ಅನಿಸಿದಾಗ ನಾನು ಕಟ್ ಮಾಡ್ದೆ. Because i was feeling Uncomfortable. That was the only time I spoke''- ಸುದೀಪ್

ನನಗೇನೂ ಆಗಲ್ಲ!

''ಇವತ್ತು ಇದನ್ನ ಕೇಳ್ಬಾರ್ದು ಅಂತ ಅಂದುಕೊಂಡಿದ್ದೆ. ಯಾಕಂದ್ರೆ It doesn't affect me. ಸಿಕ್ಕಾಪಟ್ಟೆ ಪ್ರೊಟೆಕ್ಷನ್ ಕೊಡೋದೇ ನಾನು ಇಲ್ಲಿಂದ ನಿಂತುಕೊಂಡು'' - ಸುದೀಪ್

ಕ್ಷಮೆ ಕೇಳಿದ ನೇಹ

''ನಂದೇ ತಪ್ಪು. I Apologize'' ಅಂತ ನೇಹ ಹೇಳಿದಾಗ, ''I have forgiven even before the episode started'' ಅಂತ್ಹೇಳಿ ವಿವಾದಕ್ಕೆ ಶುಭಂ ಹಾಡಿದರು.

English summary
Tv9 Kannada Anchor Rahman and Neha Gowda's conversation over 'Caller of the week' in 'Varada Kathe Kicchana Jothe' irked Sudeep. Read the article to know how Sudeep managed to clear all the allegations made by Rahman and Neha Gowda on Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada