»   » ಸುಷ್ಮಾ ವೀರ್ ರಿಂದ ರೆಹಮಾನ್ ಗೆ ಸಿಕ್ಕ 'ಬಿಗ್' ಗಿಫ್ಟ್!

ಸುಷ್ಮಾ ವೀರ್ ರಿಂದ ರೆಹಮಾನ್ ಗೆ ಸಿಕ್ಕ 'ಬಿಗ್' ಗಿಫ್ಟ್!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ಸುಷ್ಮಾ ವೀರ್ ಹೊರಬಿದ್ದರು. ಎಂದಿನಂತೆ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ಸುಷ್ಮಾ ವೀರ್ ಗೆ ವಿಶೇಷ ಅಧಿಕಾರ ಲಭಿಸ್ತು.

ಅದರ ಪ್ರಕಾರ, ಮುಂದಿನ ವಾರದ ಮನೆಯ ಕ್ಯಾಪ್ಟನ್ ಆಯ್ಕೆ ಮಾಡುವ ಜವಾಬ್ದಾರಿ ಸುಷ್ಮಾ ವೀರ್ ರದ್ದಾಗಿತ್ತು. ಹಿಂದು ಮುಂದು ಯೋಚನೆ ಮಾಡದೆ ಸಿಕ್ಕ ಅಧಿಕಾರವನ್ನ ಸದುಪಯೋಗ ಪಡಿಸಿಕೊಂಡ ಸುಷ್ಮಾ ವೀರ್, ರೆಹಮಾನ್ ಹೆಸರನ್ನ ಹೇಳಿದರು. ['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸುಷ್ಮಾ ವೀರ್!]

rehman-captain

ಪರಿಣಾಮ, ಮುಂದಿನ ವಾರದ ಮನೆಯ ಕ್ಯಾಪ್ಟನ್ ಆಗಿ ರೆಹಮಾನ್ ಸೆಲೆಕ್ಟ್ ಆಗಿದ್ದಾರೆ. ಅಂದ್ರೆ, ಎಲಿಮಿನೇಷನ್ ನಿಂದ ರೆಹಮಾನ್ ಸೇಫ್ ಅಂತರ್ಥ. ಅಲ್ಲಿಗೆ, ಉಳಿದಿರುವ ಮೂರ್ನಾಲ್ಕು ವಾರಗಳಲ್ಲಿ ರೆಹಮಾನ್ ರವರನ್ನ ಸುಷ್ಮಾ ಒಂದು ವಾರ ಸೇಫ್ ಮಾಡಿದ್ದಾರೆ. ಇನ್ನೊಂದು ವಾರ ಹಾಗೂ ಹೀಗೂ ತಳ್ಳಿದರೆ ರೆಹಮಾನ್ 'ಬಿಗ್ ಬಾಸ್-3' ಫೈನಲ್ ತಲುಪುವುದರಲ್ಲಿ ಡೌಟ್ ಇಲ್ಲ.

'ಬಿಗ್ ಬಾಸ್' ಮನೆಯಲ್ಲಿ ಸುಷ್ಮಾ ವೀರ್ ಮತ್ತು ರೆಹಮಾನ್ ನಡುವೆ ಭಿನ್ನಾಭಿಪ್ರಾಯ ಇದ್ದರೂ, ಸುಷ್ಮಾ ವೀರ್ ನೀಡಿರುವ ಈ ಗಿಫ್ಟ್ ನ ರೆಹಮಾನ್ ಮರೆಯುವ ಹಾಗಿಲ್ಲ.

English summary
Before leaving Bigg Boss house, Sushma Veer selected Rehman to become Next week's Captain. Hence, Rehman is safe from next elimination.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X