»   » 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಮಾತನಾಡುವ ಹಾಗಿಲ್ಲ.!

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಮಾತನಾಡುವ ಹಾಗಿಲ್ಲ.!

Posted By:
Subscribe to Filmibeat Kannada

ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಯಾವುದಕ್ಕೆ ಫೇಮಸ್ ಹೇಳಿ...ಅವರ ಮಾತಿಗೆ...ಅಲ್ಲಲ್ಲ, ಅವರ ಅಬ್ಬರದ ಬೈಗುಳಕ್ಕೆ..! ''ನನ್ ಮಗಂದ್...ನನ್ ಎಕ್ಕಡ...ಬೆಂಡೆತ್ಬುಡ್ತೀನಿ...ಸಾಯಿಸ್ಬಿಡ್ತೀನಿ'' ಅಂತ ಎಲ್ಲರಿಗೂ ಆವಾಜ್ ಹಾಕ್ತಿದ್ದ ಹುಚ್ಚ ವೆಂಕಟ್ ಗೆ 'ಬಿಗ್ ಬಾಸ್' ಮನೆಯಲ್ಲಿ ಒಂದು ಮಜವಾದ ಟಾಸ್ಕ್ ಸಿಕ್ಕಿದೆ.

ಮೊದಲನೇ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ನಟಿ ಮಾಧುರಿ ಇಟಗಿ ಹೊರಬಿದ್ದರು. ಮನೆಯಿಂದ ಹೊರಹೋಗುವ ಮುನ್ನ, ಮಾಧುರಿ ಇಟಗಿಗೆ ಒಂದು ವಿಶೇಷ ಅಧಿಕಾರವನ್ನು 'ಬಿಗ್ ಬಾಸ್' ನೀಡಿದರು.

huccha-venkat

ಅದರ ಪ್ರಕಾರ, ಮಾತನಾಡುವ ಬದಲು ಹಾಡಿನ ಮುಖಾಂತರ ಮನೆಯ ಇತರೆ ಸದಸ್ಯರೊಂದಿಗೆ ಸಂಭಾಷಣೆ ನಡೆಸಲು ಮನೆಯ ಯಾರಾದರೂ ಒಬ್ಬ ಸದಸ್ಯರನ್ನ ನಟಿ ಮಾಧುರಿ ಇಟಗಿ ನೇಮಿಸಬೇಕಿತ್ತು. ಸದಾ ''ಕಾವೇರಿ...ನಿನ್ನ ಮಡಿಲಲಿ...'' ಹಾಡನ್ನ ಗುನುಗುತ್ತಿದ್ದ ಹುಚ್ಚ ವೆಂಕಟ್ ಹೆಸರನ್ನ ಮಾಧುರಿ ಇಟಗಿ, ಸೂಚಿಸಿದರು. [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]

ಇದರ ಪರಿಣಾಮ, 'ಬಿಗ್ ಬಾಸ್' ಮುಂದಿನ ಆದೇಶದವರೆಗೂ ಹುಚ್ಚ ವೆಂಕಟ್ ಮಾತನಾಡುವ ಹಾಗಿಲ್ಲ. ಹಾಡಿನ ಮುಖಾಂತರವೇ ಸಂಭಾಷಣೆ ನಡೆಸಬೇಕು. ಹೀಗಾಗಿ, ಸದ್ಯಕ್ಕಂತೂ ''ನನ್ ಮಗಂದ್...ನನ್ ಎಕ್ಕಡ...'' ಡೈಲಾಗ್ ಗೆ ಬ್ರೇಕ್ ಬೀಳುವುದು ಗ್ಯಾರೆಂಟಿ.

ಹುಚ್ಚ ವೆಂಕಟ್ ಈ ಟಾಸ್ಕ್ ನ ಸಮರ್ಪಕವಾಗಿ ನಿಭಾಯಿಸಲು ಮಾಸ್ಟರ್ ಆನಂದ್ ಸಹಾಯ ಮಾಡಬೇಕು ಅಂತ 'ಬಿಗ್ ಬಾಸ್' ಆದೇಶಿಸಿದ್ದಾರೆ. ನೋಡೋಣ, ಹುಚ್ಚ ವೆಂಕಟ್ ಗಾಯನದ ಪ್ರತಿಭೆ ಹೇಗಿದೆ ಅಂತ.

English summary
YouTube Star Huccha Venkat is supposed to communicate with all contestants through singing in Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada