»   » 'ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!

'ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!

Posted By:
Subscribe to Filmibeat Kannada

ಶನಿವಾರ ಬಂತೂಂದ್ರೆ 'ಬಿಗ್ ಬಾಸ್' ಮನೆಯಲ್ಲಿ ಟೆನ್ಷನ್ ಶುರುವಾಗುತ್ತೆ. ಯಾಕಂದ್ರೆ, ಸ್ಪರ್ಧಿಗಳು ಮನೆಯಿಂದ ಹೊರ ಹೋಗುವುದೇ ಶನಿವಾರ.

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಪಂಚಾಯತಿ ನಡೆಸಿದ ಬಳಿಕ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು ಎಂದು ಘೋಷಿಸುತ್ತಾರೆ.

ಎಂದಿನಂತೆ ಈ ವಾರ ಕೂಡ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಒಬ್ಬ ಸ್ಪರ್ಧಿ ಹೊರಹೋಗಬೇಕಿತ್ತು. ಆದ್ರೆ, ನಿನ್ನೆಯ (ಡಿಸೆಂಬರ್ 19) 'ವಾರದ ಕಥೆ ಕಿಚ್ಚ ಜೊತೆ' ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಒಂದು ಶಾಕ್ ನೀಡಿದರು. ['ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ]

Bigg Boss Kannada 3 - Sudeep's shocking news - Chandan becomes emotional

''ಈ ವಾರ ಎಲಿಮಿನೇಟ್ ಆಗ್ತಿರೋದು ಒಬ್ಬರಲ್ಲ, ಇಬ್ಬರು'' ಅಂತ್ಹೇಳಿ ಶಾಕಿಂಗ್ ನ್ಯೂಸ್ ನೀಡಿದರು. ಅದರಂತೆ ರೆಹಮಾನ್, ಅಯ್ಯಪ್ಪ ಮತ್ತು ಕೃತಿಕಾ ರನ್ನ ಸುದೀಪ್ ಸೇಫ್ ಮಾಡಿದರು.

ಅಲ್ಲಿಗೆ, ಚಂದನ್ ಮತ್ತು ಮಿತ್ರ ಔಟ್ ಆದರು ಅಂತ ಎಲ್ಲರೂ ಭಾವಿಸಿದರು. ಕ್ಷಣಾರ್ಧದಲ್ಲಿ ನಟ ಚಂದನ್ ಭಾವುಕರಾದರು. ಕಣ್ಣೀರಿಡುತ್ತಾ, ''ಬಿಟ್ಟು ಹೋದೆ ಅಂತ ಹೆಸರು ತೆಗೆದುಕೊಳ್ಳಲಿಲ್ಲ. ಜನ ನನ್ನ ಕಳುಹಿಸಿ ಕೊಡ್ತಿದ್ದಾರೆ ಅಂತ ಖುಷಿ ಇದೆ'' ಅಂತ ಚಂದನ್ ಹೇಳಿದರು. [ನಟಿ ಪೂಜಾ ಗಾಂಧಿ 'ಐ ಲವ್ ಯು' ಅಂದಿದ್ದು ಯಾರಿಗೆ?]

Bigg Boss Kannada 3 - Sudeep's shocking news - Chandan becomes emotional

ತಕ್ಷಣ ಸುದೀಪ್, ''ಜನ ಕಳುಹಿಸಿ ಕೊಡ್ತಿಲ್ಲ ಚಂದನ್, You are safe'' ಅಂದರು. ಸಂತಸಗೊಂಡ ಚಂದನ್, ''ಸೂಪರ್ ಸ್ಟೈಲ್ ಆಕ್ಟಿಂಗ್ ಸರ್ ನಿಮ್ದು'' ಅಂದರು. ಅದಕ್ಕೆ ಸುದೀಪ್, ''ಆಕ್ಟಿಂಗ್ ಗಿಂತ ಹೆಚ್ಚಾಗಿ I know how to make a person strong'' ಎಂದರು.

ಆ ಮೂಲಕ 'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೆ ಮಾತ್ರ ಅಲ್ಲ, ಎಲ್ಲಾ ವೀಕ್ಷಕರಿಗೂ ಸುದೀಪ್ ಚಮಕ್ ನೀಡಿದರು.

English summary
By telling its double elimination, Kannada Actor Sudeep gave shocking news for Bigg Boss Kannada 3 contestants. Chandan became emotional for the same. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada