For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಸ್ಪರ್ಧಿಗಳ ಕೈಲಾಗದ್ದು; ಸುದೀಪ್ 1 ಸೆಕೆಂಡ್ ನಲ್ಲಿ ಮಾಡಿದ್ರು!

  By Harshitha
  |

  'ಬಿಗ್ ಬಾಸ್-3' ಕಾರ್ಯಕ್ರಮವನ್ನ ನೀವು ಬಿಡದೆ ನೋಡ್ತಿದ್ರೆ, ನಿಮಗೆ ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಏನೇನೆಲ್ಲಾ ಆಯ್ತು, ಯಾವ ಟಾಸ್ಕ್ ಇತ್ತು ಅನ್ನೋ ಚಿತ್ರಣ ಕಣ್ಣ ಮುಂದೆ ಇರುತ್ತೆ.

  ಇಲ್ಲಾಂದ್ರೆ, ಸಣ್ಣ ಇಂಟ್ರೊಡಕ್ಷನ್ ಕೊಟ್ಟು ಬಿಡ್ತೀವಿ. ಈ ವಾರ 'ಬಿಗ್ ಬಾಸ್' 'ಚೇರ್ ವಾರ್' ಅಂತ Luxury Budget ಟಾಸ್ಕ್ ನೀಡಿದ್ರು. ಅದ್ರಲ್ಲಿ ಚೇರ್ ನಲ್ಲಿ ಕುಳಿತಿರುವವರನ್ನ ಎದುರಾಳಿ ತಂಡದ ಸದಸ್ಯರು ಎಬ್ಬಿಸಬೇಕಿತ್ತು.

  ಕುಳಿತಿರುವವರನ್ನ ನಿಲ್ಲಿಸುವ ಉದ್ದೇಶದಿಂದ 'ಬಿಗ್ ಬಾಸ್' ಮನೆ ಸದಸ್ಯರು ಹರಸಾಹಸ ಮಾಡಿದರು. ಎಲ್ಲರಿಗಿಂತ ಒಂದು ಹೆಚ್ಚೆ ಮುಂದಕ್ಕೆ ಹೋದ ಮಾಸ್ಟರ್ ಆನಂದ್ 'ಗಾಂಧಿಗಿರಿ' ತತ್ವವನ್ನೂ ಅನುಸರಿಸಿದರು. ['ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!]

  ಇಷ್ಟೆಲ್ಲಾ ಮಾಡಿದರೂ, ಎದುರಾಳಿ ತಂಡಕ್ಕೆ ಸೋಲದ 'ಬಿಗ್ ಬಾಸ್' ಸ್ಪರ್ಧಿಗಳು ಕಿಚ್ಚ ಸುದೀಪ್ ಮುಂದೆ ಒಂದೇ ಸೆಕೆಂಡ್ ಗೆ ಎದ್ದು ನಿಂತರು. ಅದಕ್ಕೆ ಕಾರಣ ನಮ್ಮ 'ರಾಷ್ಟ್ರಗೀತೆ'. ['ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ]

  'ಬಿಗ್ ಬಾಸ್' ವೇದಿಕೆಯಲ್ಲಿ ರಾಷ್ಟ್ರಗೀತೆ ಹಾಡಿ, ಕುಳಿತಿದ್ದ ಎಲ್ಲರನ್ನ ಗೌರವದಿಂದ ಎದ್ದು ನಿಲ್ಲುವಂತೆ ಕಿಚ್ಚ ಸುದೀಪ್ ಮಾಡಿದರು. ಆಗಲೇ 'ಚೇರ್ ವಾರ್' ಟಾಸ್ಕ್ ನಲ್ಲಿ ಅನವಶ್ಯಕ ರಗಳೆ ಮಾಡಿಕೊಂಡವರೆಲ್ಲರ ತಲೆಯಲ್ಲಿ ಬಲ್ಬ್ ಆನ್ ಆದ್ಹಾಗೆ ಕಂಡಿದ್ದು.

  English summary
  By singing National Anthem in Bigg Boss Kannada 3 stage, Kannada Actor Sudeep showed a smart strategy for winning 'Chair War' task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X