»   » 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸುಷ್ಮಾ ವೀರ್!

'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸುಷ್ಮಾ ವೀರ್!

Posted By:
Subscribe to Filmibeat Kannada

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕೆಲವೇ ವಾರಗಳ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದ ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಮೊಮ್ಮಗಳು, ಗಾಯಕಿ ಬಿ.ಜಯಶ್ರೀ ಪುತ್ರಿ ಸುಷ್ಮಾ ವೀರ್ ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.

ನೇರ ನುಡಿಗೆ ಕು'ಖ್ಯಾತಿ' ಗಳಿಸಿದ್ದ ಸುಷ್ಮಾ ವೀರ್ 'ಬಿಗ್ ಬಾಸ್' ಮನೆಯಲ್ಲಿ ಕೆಲವರಿಗೆ ಇಷ್ಟವಾಗಿದ್ದರೆ, ಉಳಿದವರಿಗೆ ಕಿರಿಕಿರಿ ತಂದಿದ್ದರು. ಇದ್ದಿದ್ದನ್ನ ಇದ್ದ ಹಾಗೇ ಫಿಲ್ಟರ್ ಇಲ್ಲದೆ ಮಾತನಾಡುವ ಸುಷ್ಮಾ ವೀರ್ 'ಬಿಗ್ ಬಾಸ್' ಮನೆಯ ಹಲವು ಜಗಳಗಳಿಗೆ ಸಾಕ್ಷಿಯಾಗಿದ್ದರು.

sushma-veer

ಮನೆಯ ಕ್ಯಾಪ್ಟನ್ ಗೌತಮಿ ಜೊತೆ ಕಿರಿಕ್ ಮಾಡಿಕೊಂಡಿದ್ದ ಕಾರಣ ಸುಷ್ಮಾ ವೀರ್ ರನ್ನ ಗೌತಮಿ ನೇರವಾಗಿ ನಾಮಿನೇಟ್ ಮಾಡಿದ್ರು. ಚಂದನ್, ರೆಹಮಾನ್, ಅಯ್ಯಪ್ಪ, ಪೂಜಾ ಗಾಂಧಿ ಕೂಡ ಈ ವಾರ ನಾಮಿನೇಟ್ ಆಗಿದ್ದರು. ['ಬಿಗ್ ಬಾಸ್ ಕನ್ನಡ 3' ; ಈ ವಾರ ಉಳಿಯೋರು ಯಾರು?]

ಆದ್ರೆ, ವೀಕ್ಷಕರ ಎಸ್.ಎಂ.ಎಸ್ ಕಡಿಮೆ ಪಡೆದ ಕಾರಣ ನಟಿ ಸುಷ್ಮಾ ವೀರ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ. ಹೀಗಾಗಿ ನಟಿ ಶ್ರುತಿ ಮತ್ತು ಚಂದನ್ ನಿಟ್ಟುಸಿರು ಬಿಡುವಂತಾಗಿದೆ.

English summary
Actress Sushma Veer is eliminated from Bigg Boss Kannada 3 this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada