»   » ಹುಚ್ಚ ವೆಂಕಟಣ್ಣನಿಗೆ ಮದುವೆಯಾಗುವ ಆಸೆಯಂತೆ!

ಹುಚ್ಚ ವೆಂಕಟಣ್ಣನಿಗೆ ಮದುವೆಯಾಗುವ ಆಸೆಯಂತೆ!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಅರಸರು ಗುಲಾಮರ ನಡುವೆ ಕಚ್ಚಾಟ-ರಂಪಾಟ ಶುರುವಾಗಿತ್ತು. ಟಾಸ್ಕ್ ಮಾಡಲು ಒಪ್ಪದೇ ಹಟ ಸಾಧಿಸಿದ ಹುಚ್ಚ ವೆಂಕಟ್ ಉಪವಾಸ ಕುಳಿತರು. ಜಪ್ಪಯ್ಯ ಅಂದ್ರು ಕೂಡ ಕುಳಿತಲ್ಲಿಂದ ಏಳಲೇ ಇಲ್ಲ.

ಗುಲಾಮನಾಗಲು ಒಪ್ಪದ ವೆಂಕಟ್ ಅನ್ನ-ನೀರು ಬಿಟ್ಟು ಧರಣಿ ಕುಳಿತರು. ಈ ಸಂದರ್ಭದಲ್ಲಿ ಮನೆಯ ಸದಸ್ಯರೆಲ್ಲಾ ಅವರನ್ನು ಓಲೈಸಲು ಪ್ರಯತ್ನಪಟ್ಟರಾದರೂ ಯಾವುದಕ್ಕೂ ಕೇರ್ ಮಾಡದ ವೆಂಕಟ್ ಮೂಲೆಯಲ್ಲಿ ಕುಳಿತಿದ್ದರು.[ನಾನು ಯಾವತ್ತಿದ್ರೂ ರಾಜನೇ, ಎಂದ ಹುಚ್ಚ ವೆಂಕಟ್!]

ಉಪ್ಪಿನ ಋಣ ತೀರಿಸಬೇಕು, ನೀವು ಬಿಗ್ ಬಾಸ್ ಗೋಸ್ಕರ ಈ ಟಾಸ್ಕ್ ಮಾಡಲೇಬೇಕು ಅಂತ ದೊಡ್ಡ ದೊಡ್ಡ ಡೈಲಾಗ್ ಗಳ ಮೂಲಕ ಚಂದನ್ ವೆಂಕಟ್‌ ನನ್ನು ಸಮಾಧಾನ ಪಡಿಸಿದರು.

ಹುಚ್ಚ ವೆಂಕಟ್ ಅವರ ಹಠ, ಮನೆಯಲ್ಲಿ ಆಗುತ್ತಿರುವ ರಂಪಾಟಗಳನ್ನು ನೋಡಿ ನೋಡಿ ಬೇಸತ್ತ ಕ್ಯಾಪ್ಟನ್ ಮಾಸ್ಟರ್ ಆನಂದ್ ಅವರು ಕಣ್ಣೀರಿಟ್ಟರು.[ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!]

ರಾತ್ರಿ ಊಟ ಮಾಡದೇ ಹಟ ಮಾಡುತ್ತಿದ್ದ ಹುಚ್ಚ ವೆಂಕಟ್ ಅವರನ್ನು 'ಊಟ ಮಾಡಿ ಚಪಾತಿ ಮತ್ತು ಎಗ್ ಬುರ್ಜಿ ಇದೆ' ಎಂದು ಪುಸಲಾಯಿಸಿದ ಅಯ್ಯಪ್ಪನ ಮಾತಿಗೂ ಬಗ್ಗದ ಹುಚ್ಚ ವೆಂಕಟ್ ಎಲ್ಲರಿಂದ ದೂರ ಸರಿದು ಗಾರ್ಡನ್ ನಲ್ಲಿ ಒಂಟಿಯಾಗಿ ಕುಳಿತು ಬಿಟ್ಟರು. ಮುಂದೆ ಓದಿ..

ಬಿಗ್ ಬಾಸ್ ಗೆ ಕಂಪ್ಲೆಂಟ್ ಮಾಡಿದ ವೆಂಕಟ್

ನಾನು ಈ ವಾರ ಮನೆಯಿಂದ ಆಚೆ ಹೋಗ್ತೀನಿ, ನನಗೆ ಏನೂ ಬೇಡ ನಾನು ಊಟ ಮಾಡಲ್ಲ, ಒಂದು ಗ್ಲಾಸ್ ಟೀ ಕೂಡ ಕುಡಿಯಲ್ಲ, ನನಗೆ ಹಸಿವು ತಡೆಯೋ ಶಕ್ತಿ ಇದೆ, ನಾನು ನನ್ನ ತಂದೆ ಮೇಲೆ ಆಣೆ ಮಾಡಿದ್ದೇನೆ ನಾನು ಖಂಡಿತವಾಗಿಯೂ ಟಾಸ್ಕ್ ಮಾಡಲ್ಲ. ನನಗೂ ಹೆಂಡತಿ, ಮಕ್ಕಳು ಬೇಕು ಅಂತ ಇದೆ. ನಾನು ಇಲ್ಲಿಂದ ಹೋದ ಮೇಲೆ ಎಲ್ಲಾ ಮಾಡ್ಕೊಳ್ಳೋಣ ಅಂತ ಇದ್ದೆ. ಆದರೆ ಇಲ್ಲಿ ನಾನು ತಿನ್ನುವ ಊಟ, ಚಹಾವನ್ನು ಸಹ ಲೆಕ್ಕ ಇಡುತ್ತಿದ್ದಾರೆ. ಇದರಿಂದ ನನಗೆ ತುಂಬಾ ಬೇಸರ ಆಗಿದೆ. ಎಂದು ವೆಂಕಟ್ ಮನೆಯವರ ಮೇಲೆ ದೂರು ನೀಡಿದರು.

ಊಟ ಮಾಡಿಸಲು ಪ್ರಯತ್ನಪಟ್ಟ ಕ್ಯಾಪ್ಟನ್- ಆನಂದ್

ಊಟ ಮಾಡದೇ ಉಪವಾಸ ಕುಳಿತ ವೆಂಕಟ್ ಗೆ ಕ್ಯಾಪ್ಟನ್ ಆನಂದ್ ಅವರು ತಿಂಡಿ ತಿನ್ನಿಸಲು ಪ್ರಯತ್ನಪಟ್ಟಾಗ ಜಪ್ಪಯ್ಯ ಅಂದ್ರು ಒಪ್ಪಲಿಲ್ಲ. ಊಟ ಬೇಡ ಅಂದ್ರೆ, ಹಣ್ಣುಗಳನ್ನಾದ್ರು ತಿನ್ನಿ, ಇದು ಪಪ್ಪಾಯಿ ರೈತರದು ಎಂದಾಗಲೂ ವೆಂಕಟ್ ಸೇವಿಸಲಿಲ್ಲ. ಈ ನಡುವೆ ಚಂದನ್ ಹಾಗೂ ರೆಹಮಾನ್ ಕೂಡ ಊಟ ತಿನ್ನಿಸಲು ಪ್ರಯತ್ನಪಟ್ಟರಾದರೂ ಯಾರಿಗೂ ಬಗ್ಗದ ವೆಂಕಟ್ ಎಲ್ಲರಿಗೂ, ನನ್ನನ್ನು ಒಂಟಿಯಾಗಿರಲು ಬಿಡಿ ಎಂದರು.

ಉಪವಾಸ ಇರಬೇಡಿ ಎಂದ ಶ್ರುತಿ

ನೀವು ಇಲ್ಲಿ ಇರೋವಷ್ಟು ದಿನ ಉಪವಾಸ ಇರೋ ಹಾಗಿಲ್ಲ, ನನ್ನನ್ನು ಅಕ್ಕ ಅಂತ ಬೇರೆ ಕರೀತೀರಾ ಅಕ್ಕನ ಮಾತು ಕೇಳೋದಿಲ್ವಾ ಅಂತ ವೆಂಕಟ್ ಅವರನ್ನು ಊಟ ಮಾಡಿಸಲು ಪುಸಲಾಯಿಸಿದ ಶ್ರುತಿ ಅವರಿಗೆ ವೆಂಕಟ್ ಅವರು ಜನ ನೋಡ್ತಾರೆ, ನನಗೆ ಫ್ಯಾನ್ಸ್ ಇದ್ದಾರೆ. ನಾನು ಅದಕ್ಕಾಗಿ ಸುಮ್ಮನೆ ಒಂದು ಮಾತಾಡದೇ ಇದ್ದೇನೆ. ರೆಹಮಾನ್ ನನ್ನು ನಾನು ಸೆಲೆಕ್ಟ್ ಮಾಡಿಲ್ಲ, ಬಿಗ್ ಬಾಸ್ ಕೊಟ್ಟಿದ್ದು, ನನಗೆ ಸೇವಕನಾಗಿ. ಆದರೆ ಅವರು ನಾನು ಅವರ ಮೇಲೆ ಹಗೆ ತೀರಿಸಿಕೊಳ್ಳುತ್ತಿದ್ದೇನೆ ಎಂದು ಅಂದುಕೊಂಡಿದ್ದಾರೆ ಎಂದರು

ಮನೆಯಲ್ಲಿ ದೀಪಾವಳಿ ಸಂಭ್ರಮ

ಅದೇನೇ ಆದರು ಮನೆಯಲ್ಲಿ ಜ್ವಾಲೆ ಹೊತ್ತಿ ಉರಿದರು ಬಿಗ್ ಬಾಸ್ ಮನೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ತುಂಬಿ ತುಳುಕುತ್ತಿದ್ದು, ಮನೆಯ ಎಲ್ಲಾ ಸದಸ್ಯರು ಕೋಪ-ತಾಪ ಮರೆತು ಹೊಸ ಬಟ್ಟೆ ಧರಿಸಿ, ಪಟಾಕಿ ಹಚ್ಚಿ, ಸಿಹಿ ತಿಂದು-ತಿನ್ನಿಸಿ, ಗ್ರ್ಯಾಂಡ್ ಆಗಿ ಹಬ್ಬ ಆಚರಿಸಿಕೊಂಡರು. ಒಟ್ನಲ್ಲಿ ಎಲ್ಲರೂ ಸೇರಿ ಹಬ್ಬ ಆಚರಿಸಿಕೊಂಡರು ಕೂಡ, ಮನೆಯಲ್ಲಿ ಹುಚ್ಚ ವೆಂಕಟ್ ಅವರ ಗರ್ವ ಹಾಗೂ ಮನೆಯವರ ಜ್ವಾಲೆ ಎರಡೂ ಯಾವಾಗ ಸ್ಪೋಟಗೊಳ್ಳುತ್ತೆ ಅಂತ ಮುಂದೆ ಕಾದು ನೋಡಬೇಕು.

English summary
King and slave task in Bigg Boss Kannada 3 has put every contestant to show their true character. But Huccha Venkat have showing their true color, in stead of true character. Venkat did not accept to become slave.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada