»   » ಡೇಂಜರ್ ಝೋನ್ ನಲ್ಲಿ ನಾಲ್ಕನೇ ಬಾರಿ ; ನೇತ್ರ ಮೇಲೆ ಕಿಟ್ಟಿ ಗರಂ

ಡೇಂಜರ್ ಝೋನ್ ನಲ್ಲಿ ನಾಲ್ಕನೇ ಬಾರಿ ; ನೇತ್ರ ಮೇಲೆ ಕಿಟ್ಟಿ ಗರಂ

Posted By:
Subscribe to Filmibeat Kannada

ಪ್ರತಿ ವಾರ ಎಲಿಮಿನೇಷನ್ ಟೆನ್ಷನ್ ಎದುರಿಸಬೇಕು ಅಂದ್ರೆ ಯಾರಿಗೆ ತಾನೆ ಬೇಜಾರಾಗಲ್ಲ. ಎಲ್ಲರಿಗಿಂತ ಸ್ವಲ್ಪ ಒರಟ ಇರಬಹುದು. 'ಬಿಗ್ ಬಾಸ್' ಮನೆಯಲ್ಲಿ ಇರುವವರಿಗಿಂತ ಕೊಂಚ ಕಡಿಮೆ ಓದಿರಬಹುದು. ಹಾಗಂದ ಮಾತ್ರಕ್ಕೆ ಆತ ದಡ್ಡ ಅಲ್ಲ. ಪ್ರತಿ ಬಾರಿಯೂ ಅರ್ಥ ಆಗಲ್ಲ, ಗ್ರಹಿಕೆ ಸರಿಯಾಗಿ ಮಾಡಲ್ಲ ಅಂತ ಕಾರಣ ಕೊಟ್ರೆ ಯಾರ ಸ್ವಾಭಿಮಾನಕ್ಕೆ ತಾನೆ ಪೆಟ್ಟು ಬೀಳಲ್ಲ.?

ಗ್ರಾಮೀಣ ಪ್ರತಿಭೆ ಸುನಾಮಿ ಕಿಟ್ಟಿಗೆ ಆಗಿದ್ದು ಇದೇ.! 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಕಾಲಿಟ್ಟಾಗಿನಿಂದಲೂ ಸುನಾಮಿ ಕಿಟ್ಟಿ ಡೇಂಜರ್ ಝೋನ್ ನಲ್ಲಿ ಖಾಯಂ ಸ್ಪರ್ಧಿ. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಮೂರು ಬಾರಿ ನಾಮಿನೇಟ್ ಆಗಿದ್ದರೂ, ವೀಕ್ಷಕರ ಎಸ್.ಎಂ.ಎಸ್ ನಿಂದಾಗಿ ಬಚಾವ್ ಆಗಿದ್ದ ಕಿಟ್ಟಿ ಈ ವಾರ ATLEAST ಸೇಫ್ ಆಗ್ಬಹುದು ಅಂತ ಲೆಕ್ಕ ಹಾಕಿದ್ದರು. ಅದರಂತೆ 'ಬಿಗ್ ಬಾಸ್' ಮನೆ ಸದಸ್ಯರ್ಯಾರು ಕಿಟ್ಟಿ ಹೆಸರನ್ನ ನಾಮಿನೇಟ್ ಮಾಡ್ಲಿಲ್ಲ. ಮುಂದೆ ಓದಿ......

ನೇತ್ರ ಸಿಡಿಸಿದ ಬಾಂಬ್.!

'ಬಿಗ್ ಬಾಸ್' ನಿಯಮದ ಪ್ರಕಾರ ಮನೆಯ ಕ್ಯಾಪ್ಟನ್ ಎಲ್ಲರ ಮುಂದೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮನೆಯ ಕ್ಯಾಪ್ಟನ್ ನಾಮಿನೇಟ್ ಮಾಡುವ ವ್ಯಕ್ತಿ ನೇರವಾಗಿ ನಾಮಿನೇಟ್ ಆಗುತ್ತಾರೆ. [ಸುನಾಮಿ ಕಿಟ್ಟಿ ಮುಖಕ್ಕೆ ಮಸಿ; ಕಣ್ಣೀರಿಟ್ಟ ನಟಿ ಶ್ರುತಿ]

ನೇತ್ರ ಮೊದಲ ಆಯ್ಕೆ ನೇಹ ಗೌಡ

ಟಾಸ್ಕ್ ನಲ್ಲಿ ಕೆಲವೊಮ್ಮೆ ಸರಿಯಾದ ಪ್ರದರ್ಶನ ನೀಡುವುದಿಲ್ಲ, ಕೆಲವೊಮ್ಮೆ ಅತಿಯಾದ ಪ್ರದರ್ಶನ ನೀಡುತ್ತಾರೆ ಅನ್ನುವ ಕಾರಣ ಕೊಟ್ಟು ನೇತ್ರ ಮೊದಲು ನೇಹ ಗೌಡರನ್ನ ನಾಮಿನೇಟ್ ಮಾಡಿದರು.

ಅದಾಗಲೇ ನಾಮಿನೇಟ್ ಆಗಿದ್ದ ನೇಹ

ಅದಾಗಲೇ ನೇಹ ಗೌಡಗೆ ನಾಲ್ಕು ವೋಟ್ ಗಳು ಸಿಕ್ಕಿದ್ದರಿಂದ ಡೇಂಜರ್ ಝೋನ್ ನಲ್ಲಿದ್ದರು. ನಾಮಿನೇಟ್ ಆದವರನ್ನ ಬಿಟ್ಟು ಬೇರೆ ಹೆಸರನ್ನ ಸೂಚಿಸಲು ಹೇಳಿದಾಗ ನೇತ್ರ ಕಿಟ್ಟಿ ಹೆಸರನ್ನ ಹೇಳಿದರು.

ನೇತ್ರ ಕೊಟ್ಟ ಕಾರಣ ಏನು?

ಏನಾದರೂ ಹೇಳಿದರೆ ಅದನ್ನ ಅರ್ಥ ಮಾಡಿಕೊಳ್ಳೋದು ಒಂದು. ಗ್ರಹಿಸುವುದು ಇನ್ನೊಂದು ಅನ್ನುವ ಕಾರಣ ನೀಡಿ ಆರ್.ಜೆ ನೇತ್ರ ಸುನಾಮಿ ಕಿಟ್ಟಿಯನ್ನ ನಾಮಿನೇಟ್ ಮಾಡಿದರು.

ಗರಂ ಆದ ಕಿಟ್ಟಿ

''ಏನಮ್ಮ ನೇತ್ರ ಈ ತರಹ ಕಾರಣ ಕೊಡ್ತೀಯಾ. ಅಮ್ಮ ಆಗಿದ್ದು ವೇಸ್ಟ್ ನೀನು. ಅರ್ಥ ಆಗ್ಲಿಲ್ಲ ಅನ್ನೋದು ಯಾವ ಕಾರಣ. ಅಮ್ಮ-ಮಗ ಟಾಸ್ಕ್ ಇದ್ದಾಗ ಚೆನ್ನಾಗಿ ಅರ್ಥ ಮಾಡಿಕೊಂಡು ಮಾಡ್ಲಿಲ್ವಾ? ನನಗೂ ಬೇಜಾರಾಗಲ್ವಾ. ವಾರ ವಾರ ಇದೇ ಕಥೆ ಅಂದ್ರೆ.? ಹೆಸರು ತೆಗೆದುಕೊಳ್ಳೋದು ದೊಡ್ಡ ವಿಷ್ಯ ಅಲ್ಲ. ಕರೆಕ್ಟ್ ರೀಸನ್ ಕೊಡಬೇಕಲ್ವಾ. ಅರ್ಥ ಆಗಲ್ಲ ಅಂದ್ರೆ ಏನರ್ಥ. ಇನ್ಯಾವುದು ಅರ್ಥ ಆಗ್ಬೇಕು.?'' ಅಂತ ಕಿಟ್ಟಿ ಎಲ್ಲರ ಹತ್ರ ಬೇಸರ ವ್ಯಕ್ತಪಡಿಸುತ್ತಿದ್ದರು.

ನೇತ್ರ ಸಮರ್ಥನೆ

''ಯಾವ ರೀಸನ್ ಕೊಟ್ಟರೂ ಡುಬಾಕ್ ಅಂತಲೇ ಅನ್ನೋದು. ಮೆಂಟಲ್ ಮೆಂಟಲ್ ಹಂಗೆ ಮಾತಾಡೋದೇ ನಂಗೆ ಇಷ್ಟ ಆಗಲ್ಲ.'' ಅಂತ ನಾಮಿನೇಟ್ ಮಾಡಿದ ಬಗ್ಗೆ ನೇತ್ರ ಸಮರ್ಥನೆ ನೀಡಿದರು.

ನೇತ್ರಗೆ ಬೇರೆಯವರು ಕಾಣ್ಲಿಲ್ವಂತೆ.!

''ಆಗಲೇ ನಾಮಿನೇಷನ್ ಆಗೋಗಿತ್ತು. ಕಡಿಮೆ ಜನ ಇದ್ದರು. ಬೇರೆ ಆಪ್ಷನ್ ಇರ್ಲಿಲ್ಲ. ಅದಕ್ಕೆ ಅವನನ್ನೇ ನಾಮಿನೇಟ್ ಮಾಡಿದೆ'' ಅಂತಾರೆ ನೇತ್ರ.

ಕಿಟ್ಟಿ ಶಾಪ ಫಲಿಸಿತೇ?

ನಾಮಿನೇಷನ್ ಬಗ್ಗೆ ಕನ್ಫೆಶನ್ ರೂಮ್ ನಲ್ಲಿ ಆಗಿದ್ದನ್ನ ಹೊರಗಡೆ ಚರ್ಚಿಸಿದ ಪರಿಣಾಮ ನೇತ್ರ ಮನೆಯ ಕ್ಯಾಪ್ಟನ್ ಸ್ಥಾನದಿಂದ ಕೆಳಗೆ ಇಳಿದರು. ಅಯ್ಯಪ್ಪ ಈ ವಾರ ಮನೆಯ ಕ್ಯಾಪ್ಟನ್ ಆದರು. ಇದಕ್ಕೆ ಕಿಟ್ಟಿ ಪ್ರತಿಕ್ರಿಯೆ ನೀಡಿದ್ದು ಹೀಗೆ - ''ನಿಯತ್ತಿಲ್ಲದೇ ಇರೋದು ಯಾವುದೂ ಉಳಿಯಲ್ಲ ಗುರು''

ಅಯ್ಯಪ್ಪಗೆ ಬೇಸರ ಯಾಕೆ?

ನಾಮಿನೇಷನ್ ಮಾಡುವಾಗ ಕ್ಯಾಪ್ಟನ್ ಆಗಿರಬೇಕಿತ್ತು ಅನ್ನೋದು ಅಯ್ಯಪ್ಪ ಬಯಕೆ ಆಗಿತ್ತು. ''ಸ್ವಲ್ಪ ಮುಂಚೆ ಆಗಿದಿದ್ದರೆ, ಅದರ ಕಥೆನೇ ಬೇರೆ. ಸಮ್ ಒನ್ ಹ್ಯಾಸ್ ಟು ಸ್ಟಾರ್ಟ್ ಅಲ್ವಾ'' ಅಂತ ಚಂದನ್ ಬಳಿ ಅಯ್ಯಪ್ಪ ಹೇಳುತ್ತಿದ್ದರು.

English summary
'Indian' and 'Dancing Star' reality show winner Tsunami Kitty is annoyed with RJ Netra for nominating him for the elimination from 'Bigg Boss Kannada-3' reality show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada