»   » 'ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!

'ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸುನಾಮಿ ಕಿಟ್ಟಿ. ಅದಾಗಲೇ 'ಇಂಡಿಯನ್' ಮತ್ತು 'ಡ್ಯಾನ್ಸಿಂಗ್ ಸ್ಟಾರ್' ನಂತಹ ಎರಡೆರಡು ರಿಯಾಲಿಟಿ ಶೋ ಗೆದ್ದಿದ್ದ ಸುನಾಮಿ ಕಿಟ್ಟಿಗೆ 'ಬಿಗ್ ಬಾಸ್' ಹೊಸ ಚಾಲೆಂಜ್.

ಹಳ್ಳಿಯಿಂದ ಪೇಟೆಗೆ ಬಂದು ಸಾಧನೆ ಮಾಡೋಕೆ ಹೊರಟಿರುವ ಸುನಾಮಿ ಕಿಟ್ಟಿ 'ಬಿಗ್ ಬಾಸ್' ಮನೆಯಲ್ಲಿ ಹೊಸ ರೆಕಾರ್ಡ್ ಮಾಡಿದ್ದಾರೆ. ಅದೇನಪ್ಪಾ ಅಂತಹ ರೆಕಾರ್ಡ್ ಅಂದ್ರೆ, 'ಬಿಗ್ ಬಾಸ್' ಕಾರ್ಯಕ್ರಮದ ಇತಿಹಾಸದಲ್ಲಿ ಸತತ ಆರನೇ ಬಾರಿ ನಾಮಿನೇಟ್ ಆಗಿರುವ ಮೊದಲ ವ್ಯಕ್ತಿ ಸುನಾಮಿ ಕಿಟ್ಟಿ.! [ಸುನಾಮಿ ಕಿಟ್ಟಿ ಮುಖಕ್ಕೆ ಮಸಿ; ಕಣ್ಣೀರಿಟ್ಟ ನಟಿ ಶ್ರುತಿ]

tsunami-kitty

ಇದುವರೆಗೂ 'ಬಿಗ್ ಬಾಸ್' ಕಾರ್ಯಕ್ರಮ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ, ಹಲವು ವರ್ಷಗಳಿಂದ ಪ್ರಸಾರವಾಗುತ್ತಿದೆ. ಎಲ್ಲಾ ಭಾಷೆಗಳಲ್ಲಿ, ಎಲ್ಲಾ ಸೀಸನ್ ಗಳಲ್ಲಿ ಆರನೇ ಬಾರಿ ಸತತವಾಗಿ ಯಾರೂ ನಾಮಿನೇಟ್ ಆಗಿಲ್ಲ. ಅಂತಹ ಕು'ಖ್ಯಾತಿ'ಗೆ ಇದೀಗ ಸುನಾಮಿ ಕಿಟ್ಟಿ ಪಾತ್ರರಾಗಿದ್ದಾರೆ. [ಡೇಂಜರ್ ಝೋನ್ ನಲ್ಲಿ ನಾಲ್ಕನೇ ಬಾರಿ ; ನೇತ್ರ ಮೇಲೆ ಕಿಟ್ಟಿ ಗರಂ]

ಸುನಾಮಿ ಕಿಟ್ಟಿಗೆ 'ಬಿಗ್ ಬಾಸ್' ಮನೆ ಸದಸ್ಯರಿಂದ ಬೆಂಬಲ ಸಿಗ್ಲಿಲ್ಲ ಅಂದ್ರೇನಂತೆ, ಕನ್ನಡಿಗರು ಕಿಟ್ಟಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದಕ್ಕೆ ಐದು ಬಾರಿ ವೀಕ್ಷಕರ ಎಸ್.ಎಂ.ಎಸ್ ಕೃಪೆಯಿಂದ ಕಿಟ್ಟಿ ಸೇಫ್ ಆಗಿದ್ದಾರೆ. ಮುಂದಿನ ವಾರ ಕೂಡ ವೀಕ್ಷಕರ ಕೃಪೆ ಕಿಟ್ಟಿ ಮೇಲಿರುತ್ತಾ ಅಂತ ಕಾದು ನೋಡಬೇಕಷ್ಟೆ.

English summary
'Indian' and 'Dancing Star' reality show winner Tsunami Kitty has created a new record in 'Bigg Boss' show by getting nominated 6 times consecutively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada