»   » 'ಬಿಗ್ ಬಾಸ್-3' ಫೈನಲ್ ಗೆ ಅಯ್ಯಪ್ಪ ಹೋಗಲೇ ಬಾರದು!

'ಬಿಗ್ ಬಾಸ್-3' ಫೈನಲ್ ಗೆ ಅಯ್ಯಪ್ಪ ಹೋಗಲೇ ಬಾರದು!

Posted By:
Subscribe to Filmibeat Kannada

ಹೀಗಂತ ನಾವ್ ಹೇಳ್ತಿಲ್ಲ...'ಬಿಗ್ ಬಾಸ್-3' ಕಾರ್ಯಕ್ರಮವನ್ನ ಮಿಸ್ ಮಾಡದೆ ನೋಡುತ್ತಿರುವ ವೀಕ್ಷಕರು ಆಡುತ್ತಿರುವ ಮಾತು.

'ಬಿಗ್ ಬಾಸ್' ಮನೆಯಲ್ಲಿ ಒಂದಲ್ಲಾ ಒಂದು ಹುಡುಗಿಯರ ಜೊತೆ ಫ್ಲರ್ಟ್ ಮಾಡುತ್ತಾ ಕಾರ್ಯಕ್ರಮದ ಕೊನೆ ಹಂತದವರೆಗೂ ಬಂದಿರುವ ಅಯ್ಯಪ್ಪ ಗ್ರ್ಯಾಂಡ್ ಫಿನಾಲೆಗೆ ಹೋಗಲೇಬಾರದು ಅನ್ನೋದು ವೀಕ್ಷಕರ ಆಗ್ರಹ. [ಅಯ್ಯಪ್ಪಗೆ ಕಪಾಳ ಮೋಕ್ಷ ಮಾಡಬೇಕಂತೆ ಪೂಜಾ ಗಾಂಧಿ!]

ರೆಹಮಾನ್, ಚಂದನ್ ಮತ್ತು ಶ್ರುತಿ ಸೇಫ್ ಆದರೂ ಪರ್ವಾಗಿಲ್ಲ. ಆದ್ರೆ, ಅಯ್ಯಪ್ಪ ಮಾತ್ರ ಉಳಿದುಕೊಳ್ಳಬಾರದು ಅಂತ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಪಟ್ಟು ಹಿಡಿದಿದ್ದಾರೆ. ಮುಂದೆ ಓದಿ....

ಅಯ್ಯಪ್ಪ ಫೈನಲ್ ಗೆ ಬೇಡ

'ಬಿಗ್ ಬಾಸ್' ಮನೆಯಲ್ಲಿ ಅಯ್ಯಪ್ಪ ನಡವಳಿಕೆ ವೀಕ್ಷಕರಿಗೆ ಇಷ್ಟವಾಗಿಲ್ಲ. ಪೂಜಾ ಗಾಂಧಿ, ಗೌತಮಿ ಮತ್ತು ಜಯಶ್ರೀ ಜೊತೆ ಅಯ್ಯಪ್ಪ ರವರ ವರ್ತನೆ ಸದಭಿರುಚಿ ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ. [ಇದ್ದದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಅಯ್ಯಪ್ಪಗೆ ಟಾಂಗ್ ಕೊಟ್ಟ ಶ್ರುತಿ]

ಫಿನಾಲೆಗೆ Unfit

'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆಗೆ ಅಯ್ಯಪ್ಪ Unfit. ಹೀಗಾಗಿ ಅಯ್ಯಪ್ಪ ರವರನ್ನ ಹೊರಗೆ ಕಳುಹಿಸಿ ಅನ್ನೋದು ವೀಕ್ಷಕರ ಅಭಿಪ್ರಾಯ. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]

ಲಗೇಜ್ ರೆಡಿ ಮಾಡ್ಕೋ ಗುರು!

ಅಯ್ಯಪ್ಪ ಈ ವಾರ ಔಟ್ ಆಗುವುದು ಗ್ಯಾರೆಂಟಿ ಅನ್ನೋದು ವೀಕ್ಷಕರ ಲೆಕ್ಕಾಚಾರ.

ಯಾವ ಹುಡುಗಿ ಕೂಡ ಮೆಚ್ಚುವುದಿಲ್ಲ!

''ಬಿಗ್ ಬಾಸ್' ಮನೆಯಲ್ಲಿ ಅಯ್ಯಪ್ಪ ರವರ ವರ್ತನೆ ನೋಡಿ ಯಾವ ಹುಡುಗಿ ಕೂಡ ಮೆಚ್ಚುವುದಕ್ಕೆ ಸಾಧ್ಯ ಇಲ್ಲ'' ಅಂತ ಹುಡುಗಿಯರೇ ಹೇಳ್ತಾವ್ರೆ ಸ್ವಾಮಿ.

ಯಾರು ಸಭ್ಯರು!

'ಸಭ್ಯತೆ ಬಗ್ಗೆ ಪಾಠ ಮಾಡುವ ಅಯ್ಯಪ್ಪ ಮೊದಲು ಹೆಣ್ಮಕ್ಕಳ ಜೊತೆ ಹೇಗಿರ್ಬೇಕು ಅಂತ ಕಲಿಯಬೇಕು' ಅಂತಿದ್ದಾರೆ ವೀಕ್ಷಕರು.

ಶ್ರುತಿ ಬಗ್ಗೆ ಕೂಡ ಅಷ್ಟಕಷ್ಟೆ!

ಇನ್ನೂ ನಟಿ ಶ್ರುತಿ ಬಗ್ಗೆ ಕೂಡ ವೀಕ್ಷಕರಿಗೆ ಬೇಸರವಿದೆ. ಅದಕ್ಕೆ ಈ ಕಾಮೆಂಟ್ ಸಾಕ್ಷಿ.

ರೆಹಮಾನ್ ಗೆ ವೋಟ್ ಮಾಡಿ

'ಬಿಗ್ ಬಾಸ್' ಮನೆಯಲ್ಲಿ ಸದ್ಯಕ್ಕೆ ಸೈಲೆಂಟ್ ಆಗಿರುವ ರೆಹಮಾನ್ ಸೇಫ್ ಆಗಲಿ ಅನ್ನೋದು ವೀಕ್ಷಕರ ಇಚ್ಛೆ.

ಕಿಟ್ಟಿಗೆ ಆದ ಅನ್ಯಾಯ ಇನ್ನೂ ಮರೆತಿಲ್ಲ!

ಸುನಾಮಿ ಕಿಟ್ಟಿಯನ್ನ ಹೊರಗೆ ಹಾಕಿ, ಒಂದು ಬಾರಿ ಹೊರಬಿದ್ದ ಪೂಜಾ ಗಾಂಧಿ ಫೈನಲ್ ತಲುಪಿರುವುದು ವೀಕ್ಷಕರಿಗೆ ಇಷ್ಟವೇ ಇಲ್ಲ!

ಶೋ ಫೇಕ್ ಆಗುತ್ತಾ?

ಅಯ್ಯಪ್ಪ ಈ ವಾರ ಔಟ್ ಆಗ್ಲಿಲ್ಲ ಅಂದ್ರೆ 'ಬಿಗ್ ಬಾಸ್-3' ಶೋ ಫೇಕ್ ಅಂತ ಪ್ರೂವ್ ಆಗುವುದು ಖಂಡಿತ ಅಂತೆ.!

ಚಂದನ್ ಇರ್ಬೇಕು!

ಚಂದನ್ ಸೇಫ್ ಆಗ್ಬೇಕು, ಅಯ್ಯಪ್ಪ ಔಟ್ ಆಗ್ಬೇಕು ಅನ್ನೋದು ವೀಕ್ಷಕರ ಆಗ್ರಹ.

ಫೈನಲ್ ನಲ್ಲಿ ಯಾರು ಇರ್ಬೇಕು?

ಆನಂದ್, ಪೂಜಾ, ಶ್ರುತಿ, ರೆಹಮಾನ್ ಫೈನಲ್ ಗೆ ಬಂದು ಆನಂದ್ ವಿನ್ನರ್ ಆದ್ರೆ ವೀಕ್ಷಕರಿಗೆ ಖುಷಿ.

ಗೆಲ್ಲಲು ಪೂಜಾ ಗಾಂಧಿ ಅರ್ಹರಲ್ಲ!

'ಅಮೃತ ನೀಡಿದವರಿಗೆ ವಿಷ ನೀಡಿದ ಪೂಜಾ ಗಾಂಧಿ ಗೆಲ್ಲಲು ಅರ್ಹರಲ್ಲ' ಅಂತಿದ್ದಾರೆ ವೀಕ್ಷಕರು.

ಚಂದನ್ ಮಾತು ಇಷ್ಟವಿಲ್ಲ!

ಬೆನ್ನಹಿಂದೆ ಮಾತನಾಡುವ ಚಂದನ್ ವರ್ತನೆ ಕೆಲವರಿಗೆ ಸರಿ ಅನ್ಸಿಲ್ಲ.

ಶ್ರುತಿಗೂ ವೋಟ್ ಮಾಡಿ!

ನಟಿ ಶ್ರುತಿ ಪರ ಸಪೋರ್ಟ್ ಮಾಡುವವರೂ ಇದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಉತ್ತಮ ನಿದರ್ಶನ.

ನಿಮ್ಮ ಅಭಿಪ್ರಾಯ ಏನು?

ನಿಮಗೂ ಅಯ್ಯಪ್ಪ ಔಟ್ ಆಗ್ಬೇಕು ಅಂತ ಅನ್ಸುತ್ತಾ? ಶ್ರುತಿ, ಚಂದನ್, ರೆಹಮಾನ್ ಮತ್ತು ಅಯ್ಯಪ್ಪ ಪೈಕಿ ಯಾರು ಔಟ್ ಆದರೆ ಉತ್ತಮ ಅನ್ನೋದು ನಿಮ್ಮ ಅಭಿಪ್ರಾಯ? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ....

English summary
Viewers of Bigg Boss Kannada 3 have taken their Facebook Account to express their support for Rehman, Chandan and Shruthi. Viewers want Cricketer Aiyappa to get eliminated this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada