»   » ಡವ್ ಮಾಡದೆ 'ಬಿಗ್ ಬಾಸ್' ಡವ್ ರಾಣಿ ಕೃತಿಕಾನ ಆಚೆ ಹಾಕ್ಬೇಕ್!

ಡವ್ ಮಾಡದೆ 'ಬಿಗ್ ಬಾಸ್' ಡವ್ ರಾಣಿ ಕೃತಿಕಾನ ಆಚೆ ಹಾಕ್ಬೇಕ್!

Posted By:
Subscribe to Filmibeat Kannada

ಏನೇ ಹೇಳಿದರೂ, ಅದಕ್ಕೆ ಕಣ್ಣೀರು ಸುರಿಸುವ ಕೃತಿಕಾ 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್', 'ಡವ್ ರಾಣಿ' ಅಂತಲೇ ಹೆಸರುವಾಸಿ. ಅದಕ್ಕೆ ಮಾಸ್ಟರ್ ಆನಂದ್ ರವರ - ''ಬಿಗ್ ಬಾಸ್' ಮನೆಯಿಂದ ಕೃತಿಕಾ ಔಟ್ ಆದ್ರೆ, Non-fiction ನಲ್ಲಿ Fiction ನ ಮಿಸ್ ಮಾಡಿಕೊಳ್ಳುತ್ತೇನೆ'' ಈ ಮಾತುಗಳೇ ಸಾಕ್ಷಿ.

'ಫಿಕ್ಷನ್ ನ ಮಿಸ್ ಮಾಡಿಕೊಳ್ಳುತ್ತೇನೆ' ಅಂತ ಆನಂದ್ ಹೇಳಿರಬಹುದು. ಆದ್ರೆ, ಅದೇ ಫಿಕ್ಷನ್ ನ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನೋಡಿ ನೋಡಿ ವೀಕ್ಷಕರಿಗೆ ಸಾಕ್ಹಾಗೋಗಿದೆ.

ಇದೇ ಕಾರಣಕ್ಕೆ ''ಡವ್ ರಾಣಿ ಕೃತಿಕಾನ ಮೊದ್ಲು ಮನೆಯಿಂದ ಹೊರಹಾಕಿ'' ಅಂತ ವೀಕ್ಷಕರು ಪಟ್ಟು ಹಿಡಿದಿದ್ದಾರೆ.[ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!]

ಈ ಬಗ್ಗೆ ಕಲರ್ಸ್ ಕನ್ನಡ ಫೇಸ್ ಬುಕ್ ನಲ್ಲಿ 'ಬಿಗ್ ಬಾಸ್' ವೀಕ್ಷಕರು ಹಾಕಿರುವ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......

ಮಜಾ ಏನ್ ಗೊತ್ತಾ?

''ಮೊದ್ಲು ಡ್ರಾಮಾ ಕ್ವೀನ್ ನ ಹೊರಗಡೆ ಹಾಕ್ಬೇಕು ಅನ್ನೋರು ಲೈಕ್ ಮಾಡಿ'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನಿಮಿಷ ಮಾತ್ರದಲ್ಲೇ 591 ಮಂದಿ ಲೈಕ್ ಒತ್ತಿದ್ದಾರೆ. ಅಂದ್ರೆ, ಅದೆಷ್ಟು ಮಂದಿ ಕೃತಿಕಾನ 'ಬಿಗ್ ಬಾಸ್' ಮನೆಯಿಂದ ಔಟ್ ಮಾಡಲು ಕಾಯ್ತಿದ್ದಾರೆ ಅಂತ ನೀವೇ ಲೆಕ್ಕ ಹಾಕಿ.....[ಒಂದೇ ಒಂದು ವೋಟ್ ನಿಂದ ಬಚಾವ್ ಆದ ನಟಿ ಶ್ರುತಿ!]

ಮೊದ್ಲು ಹೊರಗಡೆ ಹಾಕ್ರಪ್ಪ!

ಈ ವಾರ ಕೃತಿಕಾ ಔಟ್ ಆಗ್ಬೇಕು ಅನ್ನುವ ವೀಕ್ಷಕರ ಒಕ್ಕೊರಲಿನ ಆಗ್ರಹಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ....[ಡವ್ ರಾಣಿ ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ ಪ್ಲೀಸ್!]

ಕೃತಿಕಾ ಔಟ್ ಆಗ್ಬೇಕು!

ಮಿತ್ರ ಅಥವಾ ರೆಹಮಾನ್ ಹೊರಹೋಗ್ಬಹುದು ಅನ್ನುವ ಲೆಕ್ಕಾಚಾರ ಇದ್ದರೂ, ಕೃತಿಕಾ ಔಟ್ ಆಗ್ಬೇಕು ಎನ್ನುವ ಕಾಮೆಂಟ್ ಗಳೇ ಹೆಚ್ಚು.

ಡವ್ ರಾಣಿ...

ಅಯ್ಯಪ್ಪ-ಪೂಜಾ ಲವ್ ನೋಡ್ಬಹುದು. ಆದ್ರೆ ಕಣ್ಣೀರು ಹಾಕುವ ಕೃತಿಕಾ ಡವ್ ನೋಡೋಕ್ಕಾಗಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

ವೋಟ್ ಮಾಡ್ಬೇಡಿ

ಕೃತಿಕಾ ಔಟ್ ಆಗ್ಬೇಕು. ಅವರಿಗೆ ವೋಟ್ ಮಾಡ್ಬೇಡಿ ಎನ್ನುವವರೇ ಹೆಚ್ಚಿನ ಮಂದಿ.

ಜನಪ್ರಿಯತೆ ಇಲ್ಲ

'ರಾಧಾ ಕಲ್ಯಾಣ' ಸೀರಿಯಲ್ ನಲ್ಲಿ ಅಭಿನಯಿಸಿದ್ದರೂ, ಕೃತಿಕಾಗೆ ಫ್ಯಾನ್ ಫಾಲೋವಿಂಗ್ ಕಡಿಮೆ.

ಎರಡು ಬಾರಿ ಕೃತಿಕಾ ಬಚಾವ್!

ಎಲಿಮಿನೇಷನ್ ನಿಂದ ಕೃತಿಕಾ ಎರಡು ಬಾರಿ ಬಚಾವ್ ಆಗಿದ್ದರು. ಈ ಬಾರಿ ಏನಾಗುತ್ತೋ ಕಾದು ನೋಡ್ಬೇಕು.

ಸಪೋರ್ಟ್ ಮಾಡೋರೂ ಇದ್ದಾರೆ ಸ್ವಾಮಿ!

ಕೃತಿಕಾ ಪರ ದನಿಯೆತ್ತುವವರೂ ಇದ್ದಾರೆ. ಕೃತಿಕಾ ತುಂಬಾ ಭಾವುಕ ಹುಡುಗಿ. ಅವರನ್ನ ಸೇವ್ ಮಾಡಬೇಕು ಅನ್ನೋದು ಕೆಲವರ ಅಭಿಪ್ರಾಯ.

ಚಂದನ್ ನ ಔಟ್ ಮಾಡಿ

ಟಾಸ್ಕ್ ವಿಚಾರಕ್ಕೆ ಜಗಳ ಮಾಡಿಕೊಳ್ಳುವ ಚಂದನ್ ನ ಔಟ್ ಮಾಡಿ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ವೋಟ್ ಗೆ ಬೆಲೆ ಇಲ್ಲ?

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ವೀಕ್ಷಕರ ವೋಟಿಂಗ್ ಗೆ ಬೆಲೆ ಇಲ್ಲ. ವೋಟಿಂಗ್ ನ ಜನರ ಮುಂದೆ ತೋರಿಸಬೇಕು'' ಅಂತ ಕೆಲವರು ಪಟ್ಟು ಹಿಡಿದಿದ್ದಾರೆ.

ನಿಮ್ಮ ಅಭಿಪ್ರಾಯ ಏನು?

ನಟಿ ಕೃತಿಕಾ ಇರಬೇಕಾ? ಔಟ್ ಆಗ್ಬೇಕಾ? ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Viewers of Bigg Boss Kannada 3 in majority want Kruthika to get eliminated this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada