»   » ಮೊದ್ಲು 'ಅಣ್ಣ-ತಂಗಿ' ರೆಹಮಾನ್-ನೇಹ ರನ್ನ ಔಟ್ ಮಾಡ್ರಪ್ಪ!!

ಮೊದ್ಲು 'ಅಣ್ಣ-ತಂಗಿ' ರೆಹಮಾನ್-ನೇಹ ರನ್ನ ಔಟ್ ಮಾಡ್ರಪ್ಪ!!

Posted By:
Subscribe to Filmibeat Kannada

''ನಾನು-ನೇಹ 'ಅಣ್ಣ-ತಂಗಿ', ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿಲ್ಲ ಅಷ್ಟೆ. ನನ್ನ ಭಾವನೆಗಳನ್ನ ಅವಳ ಜೊತೆ ಶೇರ್ ಮಾಡಿಕೊಳ್ಳುತ್ತೇನೆ. ನಾವಿಬ್ಬರು ಜಾಸ್ತಿ ಮಾತನಾಡಿಕೊಳ್ಳುತ್ತೇವೆ. ಅದು ಬೇರೆ ತರಹ ಅನಿಸಿದ್ರೆ ನಾನೇನೂ ಮಾಡೋಕೆ ಆಗಲ್ಲ'' ಅಂತ ಕಾಲರ್ ಒಬ್ಬರು ಕೇಳಿದ ಪ್ರಶ್ನೆಗೆ ರೆಹಮಾನ್ ಉತ್ತರಿಸಿದ್ದರು.

ಸಾಲದಕ್ಕೆ, ಆ ಕಾಲರ್ Genuine ಅಲ್ಲ Scripted (ಯಾರೋ ಹೇಳಿ ಮಾಡಿಸಿರುವುದು) ಅಂತ 'ಬಿಗ್ ಬಾಸ್' ಮನೆಯಲ್ಲಿ ಗಂಭೀರ ಆರೋಪ ಕೂಡ ಮಾಡಿದ್ದರು. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

ಇದನ್ನೆಲ್ಲಾ ಬಿಟ್ಟೂ ಬಿಡದೆ ನೋಡುತ್ತಿರುವ 'ಬಿಗ್ ಬಾಸ್-3' ಕಾರ್ಯಕ್ರಮದ ವೀಕ್ಷಕರು, ಮೊದಲು ರೆಹಮಾನ್-ನೇಹರನ್ನ ಔಟ್ ಮಾಡಿ ಅಂತಿದ್ದಾರೆ. ಈ ವಾರ ಮುಗ್ಧ ಸುನಾಮಿ ಕಿಟ್ಟಿ ಮತ್ತು ಮಾಸ್ಟರ್ ಆನಂದ್ ಸೇವ್ ಆಗಲೇಬೇಕು ಹಾಗೂ ರೆಹಮಾನ್ ಮತ್ತು ನೇಹ ಪೈಕಿ ಒಬ್ಬರು ಔಟ್ ಆಗಲೇಬೇಕು ಅಂತ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಪಟ್ಟು ಹಿಡಿದಿದ್ದಾರೆ. ಮುಂದೆ ಓದಿ....

ಕಿರಿಕಿರಿ ಆಗ್ತಿದೆ.!

ಯಾರೋ ಓರ್ವ ಕಾಲರ್ ಗೆ ಮಾತ್ರ ಅಲ್ಲ, ಬಾಕಿ ವೀಕ್ಷಕರಿಗೂ ರೆಹಮಾನ್-ನೇಹ ವರ್ತನೆ ಕಿರಿಕಿರಿ ತರುತ್ತಿದೆ ಅನ್ನುವುದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ. [ಟಿವಿ9 ರೆಹಮಾನ್ ಗೆ, ಕಿಚ್ಚ ಸುದೀಪ್ ಕೇಳಿದ್ದೇನು?]

ರೆಹಮಾನ್ ಗೆ ಕೆಟ್ಟ ಹೆಸರು.!?

''ನೇಹ ವರ್ತನೆಯಿಂದ ರೆಹಮಾನ್ ಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಮೊದಲು ನೇಹ ಔಟ್ ಆಗ್ಬೇಕು'' ಅನ್ನೋದು ಕೆಲವರ ವಾದ. ['ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!]

'ಬಿಗ್ ಬಾಸ್' ಮಾನ ಮರ್ಯಾದೆ ಉಳೀಬೇಕು ಅಂದ್ರೆ.....

''ಪ್ರತಿ ಬಾರಿ ಸೇಫ್ ಆಗುತ್ತಿರುವ ನೇಹ ಈ ಬಾರಿ ಔಟ್ ಆಗಬೇಕು'' ಅಂತ ಕೆಲವರು ಪಟ್ಟು ಹಿಡಿದು ಕಾಮೆಂಟ್ ಮಾಡಿರುವುದು ಹೀಗೆ... ['ಬಿಗ್ ಬಾಸ್' ಮನೆಯಲ್ಲಿ ರಾಜಕೀಯ ದೊಂಬರಾಟ]

ರೆಹಮಾನ್-ನೇಹಗೆ ವೋಟ್ ಮಾಡ್ಬೇಡಿ!

ರೆಹಮಾನ್ ವಿರುದ್ಧ ಕೆಲ ವೀಕ್ಷಕರು ರೊಚ್ಚಿಗೆದ್ದಿರುವುದು ಹೀಗೆ...

ಕಾಲರ್ ಪರ ನಿಂತ ವೀಕ್ಷಕರು.!

'ಅಣ್ಣ-ತಂಗಿ' ವರ್ತನೆ ಬಗ್ಗೆ ಪ್ರಶ್ನೆ ಕೇಳಿದ ಕಾಲರ್ ಸ್ಕ್ರಿಪ್ಟೆಡ್ ಅಂತ ರೆಹಮಾನ್ ಹೇಳಿದ್ದಕ್ಕೆ ಕೆಲ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರ ಅಭಿಪ್ರಾಯ ಸರಿಯಾಗಿದೆ ಅಂತ ಕೆಲವರು ವಾದಕ್ಕೆ ಇಳಿದಿದ್ದಾರೆ.

ರೆಹಮಾನ್-ನೇಹ ಬೇಡ.!

ರೆಹಮಾನ್ ಮತ್ತು ನೇಹರನ್ನ ಸೇವ್ ಮಾಡಬೇಡಿ ಅಂತ ಹೇಳುವವರೇ ಹೆಚ್ಚಿನ ಮಂದಿ.

ರೆಹಮಾನ್ ಒಳ್ಳೆಯವರು!

'ರೆಹಮಾನ್ ಒಳ್ಳೆಯವರು. ನೇಹ ಔಟ್ ಆದರೆ ಶೋ ಚೆನ್ನಾಗಿರುತ್ತೆ' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಕಿಟ್ಟಿ-ಆನಂದ್ ಸೇವ್ ಮಾಡಿ

ಸುನಾಮಿ-ಕಿಟ್ಟಿ ಮತ್ತು ಮಾಸ್ಟರ್ ಆನಂದ್ ನ ಸೇವ್ ಮಾಡಿ. ಅವರನ್ನ ಔಟ್ ಮಾಡ್ಬೇಡಿ ಅನ್ನೋದು ವೀಕ್ಷಕರ ಆಗ್ರಹ.

ಕಿಟ್ಟಿಗೆ ಫ್ಯಾನ್ಸ್ ಹೆಚ್ಚು

ಹಳ್ಳಿ ಹುಡುಗ ಕಿಟ್ಟಿ ಎಷ್ಟು ಬಾರಿ ಡೇಂಜರ್ ಝೋನ್ ಗೆ ಬಂದ್ರೂ ಅವರನ್ನ ಸೇಫ್ ಮಾಡುವುದುಕ್ಕೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.

English summary
Viewers of Bigg Boss Kannada 3 have taken their Facebook Account to express their support for Tsunami Kitty and Master Anand. Viewers want TV9 Anchor Rehman or Neha to get eliminated this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada