ಗೌತಮಿ ಔಟ್ ಆಗಿದ್ದು ಓಕೆ! ಸುನಾಮಿ ಕಿಟ್ಟಿ ಯಾಕೆ?
'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೂ, ಕ್ರಿಕೆಟರ್ ಅಯ್ಯಪ್ಪ ಜೊತೆಗೆ ಲಿಂಕಪ್ ಮಾಡಿಕೊಂಡು ಬೇಜಾನ್ ಬಿಲ್ಡಪ್ ತೆಗೆದುಕೊಂಡ 'ಚಿ.ಸೌ.ಸಾವಿತ್ರಿ' ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಈ ವಾರ ಔಟ್ ಆದರು.
ಇನ್ನೂ ಏಳು ಬಾರಿ ಎಲಿಮಿನೇಷನ್ ನಿಂದ ಸೇಫ್ ಆಗಿದ್ದ ಸುನಾಮಿ ಕಿಟ್ಟಿ ಈ ವಾರ ಬಚಾವ್ ಆಗ್ಲಿಲ್ಲ.

ಮೊದಲೇ ಮನೆಯ ಎಲ್ಲಾ ಸದಸ್ಯರನ್ನ ನೇರವಾಗಿ ನಾಮಿನೇಟ್ ಮಾಡಿ 'ಬಿಗ್ ಬಾಸ್' ಶಾಕ್ ನೀಡಿದ್ದರು. ಅದರೊಂದಿಗೆ ಎರಡು ಎಲಿಮಿನೇಷನ್ ಅಂತ ಸುದೀಪ್ ಬ್ರೇಕಿಂಗ್ ನ್ಯೂಸ್ ಕೊಟ್ಟು ಗೌತಮಿ ಜೊತೆಗೆ ಕಿಟ್ಟಿಯನ್ನೂ ಕೂಡ 'ಬಿಗ್ ಬಾಸ್' ಮನೆಯಿಂದ ಹೊರಗೆ ಕರೆದರು.[ಬಿಗ್ ಮನೆಯಿಂದ ಕಿಟ್ಟಿ ಮತ್ತು ಗೌತಮಿ ಔಟ್ ಆದ್ರಾ?]
ಕಣ್ಣೀರು ಹಾಕುತ್ತಾ ಸುನಾಮಿ ಕಿಟ್ಟಿ 'ಬಿಗ್ ಬಾಸ್' ಮನೆಯಿಂದ ಹೊರನಡೆದರು. ಅಲ್ಲಿಗೆ, ಸತತವಾಗಿ ಮೂರನೇ ರಿಯಾಲಿಟಿ ಶೋ ಗೆಲ್ಲುವ ಸುನಾಮಿ ಕಿಟ್ಟಿ ಕನಸು ಕಮರಿ ಹೋಯ್ತು.
ವೀಕ್ಷಕರ ಫೇವರಿಟ್ ಸ್ಪರ್ಧಿ ಆಗಿದ್ದ ಕಿಟ್ಟಿಗೆ ಈ ವಾರ ವೀಕ್ಷಕರ ಕೃಪೆ ಸಿಗ್ಲಿಲ್ವಾ? ಅನ್ನೋದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.


Click it and Unblock the Notifications











