»   » ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಯಶ್ರೀ: ಫೇಸ್ ಬುಕ್ಕಿನಲ್ಲಿ ಮಿಶ್ರ ರಂಗು!

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಯಶ್ರೀ: ಫೇಸ್ ಬುಕ್ಕಿನಲ್ಲಿ ಮಿಶ್ರ ರಂಗು!

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, 'ಬಿಗ್ ಬಾಸ್' ಮನೆಯಲ್ಲಿ ಈ ವಾರ ಎಲಿಮಿನೇಷನ್ ಕೂಡ ನಡೆದಿದೆ. ಈ ವಾರ ಡ್ಯಾನ್ಸರ್ ಜಯಶ್ರೀ ಅವರನ್ನು ಜನ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಮೈಸೂರು ಹುಡುಗ ಸುನಾಮಿ ಕಿಟ್ಟಿ ಸೇಫ್ ಆಗಿ ಮನೆಯಲ್ಲೇ ಉಳಿದರೆ, ಡ್ಯಾನ್ಸರ್ ಜಯಶ್ರೀ ಅವರು ಹೊರ ನಡೆದಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ಕಿಚ್ಚನ ಜೊತೆ ಸ್ವಲ್ಪ ಮಸ್ತಿ, ಸ್ವಲ್ಪ ಮಾತಿನ ಚಕಮಕಿ ಸೇರಿದಂತೆ ಕಿಚ್ಚ ಕೆಲವರಿಗೆ ಕಿವಿ ಮಾತನ್ನು ಕೂಡ ಹೇಳಿದ್ದಾರೆ.

'Bigg Boss kannada 3' week 2nd Dancer Jayashree eliminated -Facebook reaction

ಇದೀಗ ಮನೆಯಿಂದ ಹೊರ ನಡೆದಿರುವ ಡ್ಯಾನ್ಸರ್ ಜಯಶ್ರೀ ಬಗ್ಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಭಾರಿ ಕಮೆಂಟ್ ಗಳು ವ್ಯಕ್ತವಾಗಿದೆ.[ಬಿಗ್ ಬಾಸ್: ಡ್ಯಾನ್ಸರ್ ಜಯಶ್ರೀ ಎಕ್ಸಿಟ್ ಗೆ ಕಾರಣವೇನು?]

Bigg Boss maneyinda hora hoda eradane contestant Jayashree. Ee bagge nimma abhipraya yenu? Swalpa tilistira?#BBK3

Posted by Colors Kannada on Saturday, November 7, 2015

ಅಂದಹಾಗೆ ಡ್ಯಾನ್ಸರ್ ಜಯಶ್ರೀ ಅವರು ಮನೆಯಿಂದ ಹೊರನಡೆದಿದ್ದಕ್ಕೆ ಕೆಲವರು ಖುಷಿ ಪಟ್ಟರೆ, ಕೆಲವರಂತೂ ತುಂಬಾ ದುಃಖ ಪಟ್ಟಿದ್ದಾರೆ.

'ಜಯಶ್ರೀ ಅವರು ಡವ್ ರಾಣಿ, ಅವರನ್ನು ಜನ ವೋಟ್ ಮಾಡದೇ ಮನೆಯಿಂದ ಹೊರಗಡೆ ಹಾಕಿದ್ದು, ತುಂಬಾನೇ ಖುಷಿ ಆಯ್ತು ಫಸ್ಟ್ ಟೈಮ್ ಬಿಗ್ ಬಾಸ್ ಕಾರ್ಯಕ್ರಮ ಒಂದೊಳ್ಳೆ ಕೆಲಸ ಮಾಡಿದೆ' ಅವರಿಗೆ ಡವ್ ಜಾಸ್ತಿ, ರಿಯಲ್ ಆಗಿ ಇಲ್ಲ ಅವರು, ನಾಟ್ಕ ಮಾಡೋ ಜಯಶ್ರೀ ಅವರನ್ನು ಮನೆಯಿಂದ ಹೊರಗಡೆ ಹಾಕಿದ್ದು ತುಂಬಾ ಸಂತೋಷ ಆಯ್ತು ಅಂತ, ಹೀಗೆ ಹಲವಾರು ಕಮೆಂಟ್ ಗಳು ಫೇಸ್ ಬುಕ್ಕ್ ನಲ್ಲಿ ಹರಿದಾಡುತ್ತಿದೆ.['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಮಾಧುರಿ ಇಟಗಿ.!]

ಇನ್ನು ಜಯಶ್ರೀ ಹೊರನಡೆದಿದ್ದಕ್ಕೆ ಕೆಲವು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಜಯಶ್ರೀ ಅವರ ಇನ್ನೋಸೆನ್ಸ್ ಬಗ್ಗೆ ಫೇಸ್ ಬುಕ್ಕಿನಲ್ಲಿ ಚರ್ಚೆ ನಡೆಸಿದ್ದಾರೆ. 'ನಿನ್ನೆಯ ದಿನ ವಾರದ ಕಥೆಯಲ್ಲಿ ಜಯಶ್ರೀ ಅವರು ಸರಿಯಾಗಿ ಮೇಕಪ್ಪ್ ಮಾಡಿಕೊಂಡಿರಲಿಲ್ಲ, ಅಷ್ಟರಮಟ್ಟಿಗೆ ಅವರು ಮುಗ್ದೆ ಜೊತೆಗೆ ಅವರು ಸೆಲೆಬ್ರಿಟಿ ಬೇರೆ ಅಲ್ಲ, ಪಾಪ ಅವರೇನು ಮಾಡೋಕ್ಕಾಗುತ್ತೆ ಜನ ವೋಟ್ ಮಾಡಿಲ್ಲ' ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಹುಚ್ಚ ವೆಂಕಟ್ ಅವರ ಜೊತೆ ಕಿರಿಕ್ ಮಾಡಿಕೊಂಡು ಹೊರಬಿದ್ದ ಜಯಶ್ರೀ ಅವರ ವಿರುದ್ದ ವೆಂಕಟ್ ಅಭಿಮಾನಿಗಳು ಕಿಡಿಕಾರಿದ್ದಾರೆ. 'ನಮ್ ಬಾಸ್ ಹುಚ್ಚ ವೆಂಕಟ್ ಅವರ ಜೊತೆನೇ ಕಿರಿಕ್ ಮಾಡಿಕೊಂಡ ಜಯಶ್ರೀ ಹೊರಗಡೆ ಹೋಗಿದ್ದು ತುಂಬಾ ಖುಷಿ ಆಯ್ತು' ಅಂತ ಹುಚ್ಚ ವೆಂಕಟ್ ಅವರ ಫ್ಯಾನ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Facebook reaction to 'Bigg Boss kannada 3' week 2nd Dancer Jayashree elimination. Dancer Jayashree has been eliminated from the "Bigg Boss 3" Kannada during the Weekend with Kichcha Sudeep's Show. Tsunami Kitty has turned safe for the second time in a row. They were the only two inmates, who were in the danger zone this week.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X