»   » 'ಬಿಗ್ ಬಾಸ್' ಮನೆಯಿಂದ ಗಾಯಕ ರವಿ ಮುರೂರು ಔಟ್.!

'ಬಿಗ್ ಬಾಸ್' ಮನೆಯಿಂದ ಗಾಯಕ ರವಿ ಮುರೂರು ಔಟ್.!

Posted By:
Subscribe to Filmibeat Kannada

ವೀಕ್ಷಕರ ನಿರೀಕ್ಷೆ ನಿಜವಾಗಿದೆ. ಕಳೆದ ವಾರ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ರಿಂದ ಹೊಡೆತ ತಿಂದಿದ್ದ ಗಾಯಕ ರವಿ ಮುರೂರು ಈ ವಾರ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರೆ.

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ ಔಟ್ ಆಗುವುದಕ್ಕೆ ಗಾಯಕ ರವಿ ಮುರೂರು ಕಾರಣ ಅಂತ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. [ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?]

Bigg Boss Kannada 3 Week 4 ; Singer Ravi Murror gets eliminate

ಸಾಲದ್ದಕ್ಕೆ, ಈ ವಾರ ರವಿ ಮುರೂರು ಔಟ್ ಆಗ್ಬೇಕು ಅಂತ ಕೆಲವರು ಪಟ್ಟು ಹಿಡಿದಿದ್ದರು. ರವಿ ಮುರೂರು ಮತ್ತು ಚಂದನ್ ಪರ ವೋಟ್ ಹಾಕ್ಬೇಡಿ ಅನ್ನುವ ಅಭಿಯಾನ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ನಡೆದಿತ್ತು.

ಅದರಂತೆ, ಈ ವಾರ 'ಬಿಗ್ ಬಾಸ್' ಮನೆಯಿಂದ ರವಿ ಮುರೂರು ಹೊರಬಿದ್ದಿದ್ದಾರೆ. ಇಡೀ ವಾರ ''ನಾನು ಮನೆಯಿಂದ ಆಚೆ ಹೋಗ್ಬೇಕು'' ಅಂತ ಬಯಸುತ್ತಿದ್ದ ರವಿ ಮುರೂರು ಇಚ್ಛೆ ಈಡೇರಿದೆ. [ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!]

ಗಗನಸಖಿ ನೇಹಾ ಗೌಡ, ನಟ ಚಂದನ್, ಆರ್.ಜೆ ನೇತ್ರ ಪರ ಹೆಚ್ಚು ವೋಟ್ ಗಳು ಬಿದ್ದಿರುವ ಕಾರಣ ಮೂವರು ಸೇಫ್ ಆಗಿದ್ದಾರೆ.

English summary
Week 4 Elimination: Singer Ravi Muroor has been eliminated from Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada