»   » ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?

ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?

Posted By:
Subscribe to Filmibeat Kannada

ಮೂರೇ ವಾರಕ್ಕೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗ್ತಾರೆ ಅಂತ ಯಾರೂ ಊಹಿಸಿರಲಿಲ್ಲ.! ವೀಕ್ಷಕರು ಮಾತ್ರವಲ್ಲ ರಿಯಾಲಿಟಿ ಶೋದ ಆಯೋಜಕರು ಕೂಡ ವೆಂಕಟ್ ಇಷ್ಟು ವೈಲ್ಡ್ ಆಗಿ ವರ್ತಿಸುತ್ತಾರಂತ ಅಂದುಕೊಂಡಿರಲಿಕ್ಕಿಲ್ಲ.

'ಮಾನ ಮರ್ಯಾದೆ' ಬಗ್ಗೆ ಕೆಣಕಿದ್ದಕ್ಕೆ ರೊಚ್ಚಿಗೆದ್ದ ಹುಚ್ಚ ವೆಂಕಟ್ ಅವರು ಗಾಯಕ ರವಿ ಮುರೂರುಗೆ ಬಲವಾಗಿ ಹೊಡೆದ ಪರಿಣಾಮ 'ಬಿಗ್ ಬಾಸ್' ಮನೆಯಿಂದ ಹೊರ ನಡೆದರು.

ಹುಚ್ಚ ವೆಂಕಟ್ ರಿಂದ ಏಟು ತಿಂದ ಗಾಯಕ ರವಿ ಮುರೂರು ಈ ಬಾರಿ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ. ಗಗನಸಖಿ ನೇಹಾ ಗೌಡ, ಆರ್.ಜೆ.ನೇತ್ರ ಮತ್ತು ಚಂದನ್ ಕೂಡ ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ. [ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!]

ಹುಚ್ಚ ವೆಂಕಟ್ ರನ್ನ ಕೆಣಕಿದ ರವಿಯನ್ನ ಮನೆಯಿಂದ ಹೊರಹಾಕಿ ಅಂತ ಹುಚ್ಚ ವೆಂಕಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ ಶುರುಮಾಡಿದ್ದಾರೆ. ಮುಂದೆ ಓದಿ.....

ರೆಹಮಾನ್ ನಾಮಿನೇಟ್ ಆಗುವ ಹಾಗಿರ್ಲಿಲ್ಲ.!

ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದ ರೆಹಮಾನ್ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿದ್ದರು. [ಹುಚ್ಚ ವೆಂಕಟ್ ಔಟ್ ; ನಮ್ಮ ಓದುಗರು ಏನಂತಾರೆ?]

ರವಿಯನ್ನ ನಾಮಿನೇಟ್ ಮಾಡಿದವರ್ಯಾರು?

ಭಾವನಾ ಬೆಳಗೆರೆ, ಕ್ರಿಕೆಟರ್ ಅಯ್ಯಪ್ಪ, ನಟಿ ಪೂಜಾ ಗಾಂಧಿ ಮತ್ತು ನೇಹಾ ಗೌಡ ಗಾಯಕ ರವಿ ಮುರೂರು ರವರನ್ನ ನಾಮಿನೇಟ್ ಮಾಡಿದರು. [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

ನೇಹಾ ಗೌಡಗೆ ವೋಟ್ ಹಾಕಿದವರ್ಯಾರು?

ನಟಿ ಶ್ರುತಿ, ನಟ ಚಂದನ್, ಭಾವನಾ ಬೆಳಗೆರೆ ಮತ್ತು ಮಾಸ್ಟರ್ ಆನಂದ್ ಗಗನಸಖಿ ನೇಹಾ ಗೌಡರನ್ನ ನಾಮಿನೇಟ್ ಮಾಡಿದರು.

ಚಂದನ್ ನ ನಾಮಿನೇಟ್ ಮಾಡಿದವರು?

ನಟಿ ಶ್ರುತಿ, ಮಾಸ್ಟರ್ ಆನಂದ್ ಮತ್ತು ಆರ್.ಜೆ ನೇತ್ರ ಚಂದನ್ ನ ನಾಮಿನೇಟ್ ಮಾಡಿದ್ರು.

ರೆಹಮಾನ್ ನಿಂದ ನೇತ್ರ ಕಣಕ್ಕೆ.!

ರೆಹಮಾನ್ ಆರ್.ಜೆ.ನೇತ್ರ ಹೆಸರು ತೆಗೆದುಕೊಂಡಿದ್ದಕ್ಕಾಗಿ ನೇತ್ರ ನೇರವಾಗಿ ನಾಮಿನೇಟ್ ಆದರು.

ರವಿಗೆ ವೋಟ್ ಹಾಕ್ಬೇಡಿ.!

ಹುಚ್ಚ ವೆಂಕಟ್ ರನ್ನ ಕೆಣಕಿದ ಗಾಯಕ ರವಿ ಮುರೂರುನ ಹೊರಹಾಕಿ ಅಂತ ಹುಚ್ಚ ವೆಂಕಟ್ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ಚಂದನ್ ಮತ್ತು ರವಿ ತೊಲಗಲಿ

ಹುಚ್ಚ ವೆಂಕಟ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವ ಎಲ್ಲರೂ ಚಂದನ್ ಮತ್ತು ರವಿ ಮನೆಯಿಂದ ತೊಲಗಲಿ ಅಂತ ಹೇಳ್ತಿದ್ದಾರೆ.

ನಾಲ್ವರನ್ನೂ ಇಷ್ಟ ಪಡದ ಜನ

ಒಂದಲ್ಲಾ ಒಂದು ಕಾರಣಕ್ಕೆ ನಾಮಿನೇಟ್ ಆಗಿರುವ ನಾಲ್ವರನ್ನೂ ಜನ ಇಷ್ಟ ಪಡುತ್ತಿಲ್ಲ.

ವಿರೋಧಿಗಳೇ ಹೆಚ್ಚು.!

ಹಾಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಚಂದನ್ ಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂತ ಊಹಿಸಲಾಗಿತ್ತು. ಆದ್ರೆ, ಚಂದನ್ ಗೆ ಅಭಿಮಾನಿಗಳಿಗಿಂತ ವಿರೋಧಿಗಳೇ ಜಾಸ್ತಿಯಾಗಿದ್ದಾರೆ. ಮೊದಲು ಚಂದನ್ ನ ಹೊರಗಟ್ಟಿ ಅಂತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.

ವೋಟ್ ಹಾಕ್ಬೇಡಿ ಅಭಿಯಾನ

ಸೇವ್ ಮಾಡಿ ಅನ್ನೋದಕ್ಕಿಂತ ಇವರ್ಯಾರಿಗೂ ವೋಟ್ ಹಾಕ್ಬೇಡಿ ಅಂತ ಹೇಳುವವರ ಸಂಖ್ಯೆ ಹೆಚ್ಚಿದೆ.

ಮೂರನೇ ಬಾರಿ ರವಿ ನಾಮಿನೇಟ್.!

ಕಳೆದ ನಾಲ್ಕು ವಾರಗಳಲ್ಲಿ ಮೂರನೇ ಬಾರಿ ಗಾಯಕ ರವಿ ಮುರೂರು ನಾಮಿನೇಟ್ ಆಗಿದ್ದಾರೆ. ಮೂರನೇ ಬಾರಿಯೂ ಅವರು ಸೇಫ್ ಆಗುವುದು ಸ್ವಲ್ಪ ಡೌಟ್. ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರು ಆಚೆ ಹೋಗ್ಬೇಕು ಅಂತ ನೀವು ಇಷ್ಟಪಡ್ತೀರಾ? ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

English summary
Singer Ravi Muroor, Chandan, Neha Gowda and Netra are nominated for the this week elimination. Check who nominated whom on in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada