»   » 'ಬಿಗ್ ಬಾಸ್' ಮನೆಯಿಂದ ರೆಹಮಾನ್ 'ತಂಗಿ' ನೇಹಾ ಈ ವಾರ ಔಟ್?

'ಬಿಗ್ ಬಾಸ್' ಮನೆಯಿಂದ ರೆಹಮಾನ್ 'ತಂಗಿ' ನೇಹಾ ಈ ವಾರ ಔಟ್?

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಗಗನಸಖಿ ನೇಹಾ ಗೌಡಗೆ ಈಗಾಗಲೇ ಎರಡು ಬಾರಿ ಜೀವದಾನ ಸಿಕ್ಕಿದೆ. ಹುಚ್ಚ ವೆಂಕಟ್ ಹುಚ್ಚಾಟದ ಸಂಚಿಕೆಯಲ್ಲಿ ಒಮ್ಮೆ ಸೇಫ್ ಆಗಿದ್ರೆ, ಕಳೆದ ವಾರ ಅದೇ ವೆಂಕಟ್ ರಿಂದ ಹೊಡೆತ ತಿಂದಿದ್ದ ರವಿ ಔಟ್ ಆದ ಪರಿಣಾಮ ನೇಹಾ ಗೌಡ ನಾಲ್ಕು ವಾರಗಳ ಕಾಲ ಕಾರ್ಯಕ್ರಮದಲ್ಲಿ ಉಳಿಯುವಂತಾಯ್ತು.

ಕಿರುತೆರೆ ವೀಕ್ಷಕರಿಗೆ ಪರಿಚಯವಿಲ್ಲದ, ಅಷ್ಟೇನು ಫ್ಯಾನ್ ಫಾಲೋವಿಂಗ್ ಇಲ್ಲದ ನೇಹಾ ಗೌಡ ಈ ವಾರ ಮಗದೊಮ್ಮೆ ನಾಮಿನೇಟ್ ಆಗಿದ್ದಾರೆ. [ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!]

ಕಳೆದ ವಾರ 'ಅಣ್ಣ-ತಂಗಿ' ರೆಹಮಾನ್-ನೇಹಾ ಗೌಡ ಸುತ್ತ ಹಬ್ಬಿದ ಗಾಸಿಪ್ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವ ಕಾರಣ 'ಬಿಗ್ ಬಾಸ್' ಮನೆಯ ಬಹುತೇಕ ಸದಸ್ಯರು ನೇಹಾ ಅವರನ್ನ ನಾಮಿನೇಟ್ ಮಾಡಿದ್ದಾರೆ. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

ಎಲ್ಲರಿಂದ ಆಗಾಗ ಟಾರ್ಗೆಟ್ ಆಗುವ ಸುನಾಮಿ ಕಿಟ್ಟಿ ಈ ಬಾರಿ ಮತ್ತೆ ಎಲಿಮಿನೇಷನ್ ಲಿಸ್ಟ್ ನಲ್ಲಿದ್ದರೆ, ಮೊದಲ ಬಾರಿಗೆ ನಟಿ ಪೂಜಾ ಗಾಂಧಿ ಮತ್ತು ರೆಹಮಾನ್ ಎಲಿಮಿನೇಷನ್ ಭಯ ಎದುರಿಸಬೇಕಾಗಿದೆ. ಮುಂದೆ ಓದಿ.....

ಶ್ರುತಿ - ಆನಂದ್ ಸೇಫ್

'ಮನೆ ರಾಜಕೀಯ' ಟಾಸ್ಕ್ ನಲ್ಲಿ ಗೆದ್ದ ಮಾಸ್ಟರ್ ಆನಂದ್ ಈ ವಾರ ನಾಮಿನೇಷನ್ ನಿಂದ ಸೇಫ್ ಆಗಿದ್ರು. ಇನ್ನೂ ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಕಾರಣ ಶ್ರುತಿ ಪರ ಯಾರೂ ವೋಟ್ ಹಾಕುವ ಹಾಗಿರ್ಲಿಲ್ಲ.

ನೇರವಾಗಿ ನಾಮಿನೇಟ್ ಆಗಿದ್ದ ರೆಹಮಾನ್

'ಮನೆ ರಾಜಕೀಯ' ಟಾಸ್ಕ್ ನಲ್ಲಿ ಸೋತ ಕಾರಣ ರೆಹಮಾನ್ ನೇರವಾಗಿ ನಾಮಿನೇಟ್ ಆಗಿದ್ರು. [ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

ಅಚ್ಚರಿ ಮೂಡಿಸಿದ ಆನಂದ್ ನಾಮಿನೇಷನ್

ಆಂಗ್ಲ ಭಾಷೆಯಲ್ಲಿ ಹೆಚ್ಚು ಮಾತನಾಡುತ್ತಾರೆ ಅನ್ನುವ ಕಾರಣ ನೀಡಿ ನಟಿ ಪೂಜಾ ಗಾಂಧಿ ಮತ್ತು ಸೇಫ್ ಗೇಮ್ ಆಡುತ್ತಿದ್ದಾರೆ ಅಂತ ನೇತ್ರ ಅವರನ್ನ ಮಾಸ್ಟರ್ ಆನಂದ್ ನಾಮಿನೇಟ್ ಮಾಡಿದರು.

ಪೂಜಾ ಗಾಂಧಿ ಆಯ್ಕೆ....

ಸುನಾಮಿ ಕಿಟ್ಟಿ ಮತ್ತು ನೇಹಾ ಗೌಡ ಹೆಸರನ್ನ ನಟಿ ಪೂಜಾ ಗಾಂಧಿ ನಾಮಿನೇಟ್ ಮಾಡಿದರು.

ನೇಹಾ ನಾಮಿನೇಟ್ ಮಾಡಿದ್ದು....

ನಟಿ ಪೂಜಾ ಗಾಂಧಿ ಮತ್ತು ಭಾವನಾ ಬೆಳಗೆರೆ ಅವರನ್ನ ನೇಹಾ ಗೌಡ ನಾಮಿನೇಟ್ ಮಾಡಿದರು.

ಅಯ್ಯಪ್ಪ ಆಯ್ಕೆ...

ಸುನಾಮಿ ಕಿಟ್ಟಿ ಮತ್ತು ನೇಹಾ ಗೌಡ ರನ್ನ ಅಯ್ಯಪ್ಪ 'ಬಿಗ್ ಬಾಸ್' ಮನೆಯಿಂದ ಹೊರಹಾಕುವುದಕ್ಕೆ ಇಚ್ಛಿಸಿದರು.

ರೆಹಮಾನ್ ಕಣ್ಣು ಯಾರ ಮೇಲೆ?

ಸುನಾಮಿ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಹೆಸರನ್ನ ರೆಹಮಾನ್ ತೆಗೆದುಕೊಂಡರು.

ಕೃತಿಕಾ ಚಾಯ್ಸ್....

ಕೃತಿಕಾ - ನೇಹಾ ಗೌಡ ಮತ್ತು ಪೂಜಾ ಗಾಂಧಿ

ಚಂದನ್ ನಾಮಿನೇಷನ್

ಚಂದನ್ - ನೇಹಾ ಗೌಡ ಮತ್ತು ನೇತ್ರ

ಕಿಟ್ಟಿಗೂ ಪೂಜಾಗೂ ಆಗ್ಬರಲ್ಲ

ಪೂಜಾ ಗಾಂಧಿ ಮತ್ತು ಭಾವನಾ ಬೆಳಗೆರೆ ಹೆಸರನ್ನ ಸುನಾಮಿ ಕಿಟ್ಟಿ ತೆಗೆದುಕೊಂಡರು.

ತಿರುಗುಬಾಣ ಬಿಟ್ಟ ಭಾವನಾ

ಸುನಾಮಿ ಕಿಟ್ಟಿ ಮತ್ತು ನೇಹಾ ಹೆಸರನ್ನ ಭಾವನಾ ಬೆಳಗೆರೆ ಹೇಳಿದರು.

ನೇತ್ರ ಆಯ್ಕೆ

ನೇತ್ರ - ನೇಹಾ ಗೌಡ, ಕಿಟ್ಟಿ

ಶ್ರುತಿ ಕೊಟ್ಟ ಕಾರಣ....

ಟಾಸ್ಕ್ ನಲ್ಲಿ ನೇಹಾ ರವರ ಪ್ರಯತ್ನ ಕಡಿಮೆ ಇರುವ ಕಾರಣ ಮನೆಯ ಕ್ಯಾಪ್ಟನ್ ಶ್ರುತಿ ನೇಹಾ ರವರನ್ನ ನೇರವಾಗಿ ನಾಮಿನೇಟ್ ಮಾಡಿದರು.

ನಾಲ್ವರಲ್ಲಿ ಹೋಗುವವರು ಯಾರು?

ರೆಹಮಾನ್, ನೇಹಾ ಗೌಡ, ಸುನಾಮಿ ಕಿಟ್ಟಿ ಮತ್ತು ನಟಿ ಪೂಜಾ ಗಾಂಧಿ ಈ ವಾರ ನಾಮಿನೇಟ್ ಆಗಿದ್ದಾರೆ. ಫ್ಯಾನ್ ಫಾಲೋವಿಂಗ್ ನ ಆಧಾರವಾಗಿ ಇಟ್ಟುಕೊಂಡರೆ ನೇಹಾ ಗೌಡಗೆ ಫ್ಯಾನ್ಸ್ ಕಡಿಮೆ. ಮೂರನೇ ಬಾರಿ ಎಲಿಮಿನೇಷನ್ ಗೆ ಬಂದಿರುವ ನೇಹಾ ಗೌಡ ಈ ಬಾರಿ ಔಟ್ ಆಗುತ್ತಾರಾ?

ನಿಮ್ಮ ಅಭಿಪ್ರಾಯ ತಿಳಿಸಿ....

ಮೂರನೇ ಬಾರಿ ಸುನಾಮಿ ಕಿಟ್ಟಿ ಕೂಡ ಎಲಿಮಿನೇಷನ್ ಝೋನ್ ನಲ್ಲಿದ್ದಾರೆ. ಕಿಟ್ಟಿ ಸೇಫ್ ಆಗ್ಬೇಕಾ? ನೇಹಾ ಹೋಗ್ಬೇಕಾ? ರೆಹಮಾನ್ ಮತ್ತು ಪೂಜಾ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

English summary
Kannada Actress Pooja Gandhi, Rehman, Neha Gowda and Tsunami Kitti are nominated for this week elimination. Check who nominated whom in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada