»   » 'ಬಿಗ್ ಬಾಸ್' ಮನೆಯಿಂದ ಸಿಸ್ಟರ್ ನೇಹ ಗೌಡ ಔಟ್

'ಬಿಗ್ ಬಾಸ್' ಮನೆಯಿಂದ ಸಿಸ್ಟರ್ ನೇಹ ಗೌಡ ಔಟ್

Posted By:
Subscribe to Filmibeat Kannada

ಕಳೆದ ಮೂರು ವಾರಗಳಿಂದ ಬಚಾವ್ ಆಗಿದ್ದ ಗಗನಸಖಿ ನೇಹ ಗೌಡ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ.

ಕಿರುತೆರೆ ವೀಕ್ಷಕರಿಗೆ ಪರಿಚಯವಿಲ್ಲದ ನೇಹ ಗೌಡ ಇಷ್ಟು ವಾರ 'ಬಿಗ್ ಬಾಸ್' ಮನೆಯಲ್ಲಿ ಕಾಲ ಕಳೆದದ್ದೇ ಅಚ್ಚರಿ ವಿಷಯ. [ಮೊದ್ಲು 'ಅಣ್ಣ-ತಂಗಿ' ರೆಹಮಾನ್-ನೇಹ ರನ್ನ ಔಟ್ ಮಾಡ್ರಪ್ಪ!!]

neha-gowda

ಟಿವಿ9 ಆಂಕರ್ ರೆಹಮಾನ್ ಗೆ ತಂಗಿಯಾಗಿ 'ಬಿಗ್ ಬಾಸ್' ಮನೆಯಲ್ಲಿ ನೇಹ ಗೌಡ ಗಾಸಿಪ್ ಗೆ ಆಹಾರವಾಗಿದ್ದರು. 'ಬಿಗ್ ಬಾಸ್' ನೀಡುವ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವುದಿಲ್ಲ ಅನ್ನುವ ಕಾರಣಕ್ಕೆ ಪದೇಪದೇ ನಾಮಿನೇಟ್ ಆಗುತ್ತಿದ್ದರು. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

ಅನಿರೀಕ್ಷಿತ ಟ್ವಿಸ್ಟ್ ನಿಂದಾಗಿ ಎರಡು ಬಾರಿ ಬಚಾವ್ ಆಗಿದ್ದ ನೇಹ ಗೌಡ ಈ ಬಾರಿ ಮಿಸ್ ಆಗ್ಲಿಲ್ಲ. ವೀಕ್ಷಕರಿಂದ ಅತಿ ಹೆಚ್ಚು ವೋಟ್ಸ್ ಪಡೆದ ಸುನಾಮಿ ಕಿಟ್ಟಿ, ಮಾಸ್ಟರ್ ಆನಂದ್ ಮತ್ತು ರೆಹಮಾನ್ ಈ ವಾರ ಸೇಫ್ ಆದರು. ತಮ್ಮ ಮನೆ ಕಡೆ ನೇಹ ಗೌಡ ಮುಖ ಮಾಡಿದರು.

English summary
Air Hostess Neha Gowda is eliminated from Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada