»   » ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!

ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!

Posted By:
Subscribe to Filmibeat Kannada

ನಾನು ಟಾಸ್ಕ್ ಮಾಡಲ್ಲ, ನಾನು ಗುಲಾಮನಾಗಲು ಒಪ್ಪಲ್ಲ, ನನಗೆ ಆಗಲ್ಲ, ಹೋಗಲ್ಲ, ಅಂತ ಇಡೀ ಮನೆಯವರ ಗೋಳು ಹೊಯ್ದುಕೊಂಡ, ಹುಚ್ಚ ವೆಂಕಟ್ ಗೆ ಬಿಗ್ ಬಾಸ್ ಕಠಿಣವಾದ ಶಿಕ್ಷೆ ವಿಧಿಸಿದರು.

ಬಿಗ್ ಬಾಸ್ ಅನುಮತಿಯ ಮೇರೆಗೆ ಕನ್ ಫೆಶನ್ ರೂಮ್ ಗೆ ತೆರಳಿದ ಹುಚ್ಚ ವೆಂಕಟ್, ನನ್ನನ್ನು ಎಲ್ಲರೂ ಬಾಯಿಗೆ ಬಂದಂತೆ ಬೈದರು. ನಾನು ನಮ್ಮ ಅಪ್ಪನಿಗೋಸ್ಕರ ಇಲ್ಲಿ ಬಂದೇ, ಇಷ್ಟು ದಿನ ಕೋಪ ತಡೆದುಕೊಂಡಿದ್ದು, ಕೂಡ ಅವರಿಗಾಗಿಯೇ. ಹೊರಗಡೆ ನನ್ನ ಅಭಿಮಾನಿಗಳಿದ್ದಾರೆ, ನಾನು ಇಲ್ಲಿಯವರೆಗೆ ಯಾರ ಚಪ್ಪಲಿ ಕೂಡ ಮುಟ್ಟಿಲ್ಲ, ಅದು ನನ್ನ ಅಭಿಮಾನಿಗಳಿಗೆ ಸಹ ಇಷ್ಟ ಆಗೋದಿಲ್ಲ, ನನಗೆ ನನ್ನದೇ ಆದ ಗೌರವ ಇದೆ. ಆದರೆ ಇಲ್ಲಿ ಬಂದ ಮೇಲೆ ಏನೇನೋ ನಡೆಯುತ್ತಿದೆ. ಎಂದು ಬಿಗ್ ಬಾಸ್ ಗೆ ಹೇಳಿ ವೆಂಕಟ್ ಗಳಗಳನೆ ಅತ್ತು ಬಿಟ್ಟರು.[ಟಿವಿ9 ರೆಹಮಾನ್ ಗೆ 'ಬಿಗ್ ಬಾಸ್' ಕೊಟ್ಟ ಶಿಕ್ಷೆ ಏನು?]

Bigg boss kannada 3 weird punishment for Huccha Venkat

ಅಲ್ಲದೇ ಯಾವಾಗಲೂ ನನ್ ಎಕ್ಕಡ, ನನ್ ಎಕ್ಕಡ ಅಂತ ಬಾಯ್ ಬಾಯ್ ಬಡ್ಕೋತಾ ಇದ್ದ ಹುಚ್ಚ ವೆಂಕಟ್ ಗೆ, ತಲೆ ಮೇಲೆ ಚಪ್ಪಲಿ ಹೊತ್ತು ಅರ್ಧ ಘಂಟೆ ನಿಲ್ಲಬೇಕು ಎಂದು ಬಿಗ್ ಬಾಸ್ ಕಠಿಣ ಶಿಕ್ಷೆ ವಿಧಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಹುಚ್ಚ ವೆಂಕಟ್ ನಾನು ನನ್ನ ತಂದೆಯವರ ಚಪ್ಪಲಿ ತಲೆ ಮೇಲೆ ಹೊತ್ತು ನಿಲ್ಲುತ್ತೇನೆ, ಅದು ಅರ್ಧ ಗಂಟೆ ಅಲ್ಲ, ಒಂದು ಘಂಟೆ ಬೇಕಾದ್ರೂ ನಿಲ್ಲುತ್ತೇನೆ ಎಂದು ವೆಂಕಟ್ ತಲೆ ಮೇಲೆ ಚಪ್ಲಿ ಇಟ್ಟುಕೊಳ್ಳುವ ಶಿಕ್ಷೆಗೆ ಒಪ್ಪಿಕೊಂಡರು.

ಕನ್ ಫೆಶನ್ ರೂಮ್ ನಿಂದ ವೆಂಕಟ್ ಆಚೆ ಬಂದ ನಂತರ ಕ್ಯಾಪ್ಟನ್ ಆನಂದ್ ಅವರು ಎಲ್ಲಾ ಸ್ಪರ್ಧಿಗಳಿಗೂ ವೆಂಕಟ್ ಗೆ ಬಿಗ್ ಬಾಸ್ ನೀಡಿದ ಶಿಕ್ಷೆಯ ಬಗ್ಗೆ ವಿವರಿಸಿದಾಗ, ರೆಹಮಾನ್ ಅವರು ಮಧ್ಯೆ ಬಾಯಿ ಹಾಕಿ ನಿಮ್ಮ ತಂದೆಯ ಚಪ್ಪಲಿ ಯಾವ ಶೋ ರೂಮ್ ನಿಂದ ತಂದಿದ್ದು, ಎಂದು ಪ್ರಶ್ನೆ ಹಾಕಿದರು.[ಹುಚ್ಚ ವೆಂಕಟ್ ಗೆ 2ನೇ ಹೆಂಡತಿ ಆಗ್ತಾರಾ ಜಯಶ್ರೀ?]

ಇದಕ್ಕೆ ರೊಚ್ಚಿಗೆದ್ದ ಹುಚ್ಚ ವೆಂಕಟ್, ಗರಂ ಆಗಿ ಹುಚ್ಚನಂತಾದರು, ಅಪ್ಪನ ವಿಷಯಕ್ಕೆ ಬಂದ್ರೆ, ಕೊಲೆ ಆಗ್ತೀಯಾ ಅಂದ್ರು, ನೀನು ನನ್ನ ಅಪ್ಪನ ಬಗ್ಗೆ ಮಾತಾಡಬೇಡ, ನಿನಗೆ ಹಕ್ಕಿಲ್ಲ, ಎಂದಾಗ ರೆಹಮಾನ್ ಮತ್ತೆ ಜೋರು ಧ್ವನಿಯಲ್ಲಿ ಏಯ್ ಶಬ್ದ ಮಾಡ್ಬೇಡ, ನನಗೆ ಎದುರು ಮಾತಾಡ್ತೀಯಾ, ಅಂತ ಆವಾಜ್ ಹಾಕಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆಯೂ ದೊಡ್ಡ ಜಗಳ ಆಗಿ, ಒಂದು ಹಂತದಲ್ಲಿ ಹೊಡೆದಾಡುತ್ತಾರೋ ಏನೋ ಅನ್ನೋವಷ್ಟರಮಟ್ಟಿಗೆ ಕೋಪ ಭುಗಿಲೆದ್ದಿತ್ತು.

ಅಷ್ಟರಲ್ಲಿ ಕ್ಯಾಪ್ಟನ್ ಆನಂದ್ ಮಧ್ಯ ಪ್ರವೇಶಿಸಿ ಎಲ್ಲವನ್ನೂ ನಿಯಂತ್ರಿಸಿದರು. ಅಂತೂ ಇಂತೂ ಕೊನೆಗೂ ಹುಚ್ಚ ವೆಂಕಟ್ ಅವರು ಮನೆಯ ಗಾರ್ಡನ್ ನಲ್ಲಿ ಒಂದು ಘಂಟೆ ತಮ್ಮ ತಂದೆಯ ಚಪ್ಪಲಿಯನ್ನು ತಲೆ ಮೇಲೆ ಹೊತ್ತು ನಿಲ್ಲುವ ಮೂಲಕ ಬಿಗ್ ಬಾಸ್ ನೀಡಿದ ಶಿಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

English summary
'Bigg Boss' has given a weird punishment for Huccha Venkat in Bigg Boss Kannada 3. Read the article to know about the punishment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada