»   » 'ಡ್ರಾಮಾ ಕ್ವೀನ್' ಕೃತಿಕಾಗೆ ರವಿ ಕೊಟ್ಟ ವಿಚಿತ್ರ ಶಿಕ್ಷೆ.!

'ಡ್ರಾಮಾ ಕ್ವೀನ್' ಕೃತಿಕಾಗೆ ರವಿ ಕೊಟ್ಟ ವಿಚಿತ್ರ ಶಿಕ್ಷೆ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 'ಡ್ರಾಮಾ ಕ್ವೀನ್' ಅಂತಲೇ ಫೇಮಸ್ ಆಗಿರುವ ಕಿರುತೆರೆ ನಟಿ ಕೃತಿಕಾಗೆ ಈ ವಾರ ವಿಚಿತ್ರ ಶಿಕ್ಷೆ ಸಿಕ್ಕಿದೆ. ಅದೇನಪ್ಪಾ ಅಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ನೆಲದ ಮೇಲೆ ಕೃತಿಕಾ ಕಾಲಿಟ್ಟು ನಡೆಯುವಂತಿಲ್ಲ.!

ಕೃತಿಕಾ ನೆಲದ ಮೇಲೆ ಕಾಲಿಟ್ಟು ನಡೆಯದಂತೆ ಈ ವಾರದ ಮನೆಯ ಕ್ಯಾಪ್ಟನ್ ನಟಿ ಶ್ರುತಿ ನೋಡಿಕೊಳ್ಳಬೇಕು. ಅಷ್ಟಕ್ಕೂ, ಈ ಶಿಕ್ಷೆಯನ್ನ ಕೃತಿಕಾಗೆ ದಯಪಾಲಿಸಿದವರು ಗಾಯಕ ರವಿ ಮುರೂರು. [ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?]

Bigg Boss Kannada 3 - Weird Punishment for Kruthika

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ಔಟ್ ಆದ ರವಿ ಮುರೂರು, ಮನೆಯಿಂದ ನಿರ್ಗಮಿಸುವ ಮುನ್ನ ಅವರಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಿದರು. ['ಬಿಗ್ ಬಾಸ್' ಮನೆಯಿಂದ ಗಾಯಕ ರವಿ ಮುರೂರು ಔಟ್.!]

''ಬಿಗ್ ಬಾಸ್' ಮುಂದಿನ ಆದೇಶದ ವರೆಗೆ ನೆಲದ ಮೇಲೆ ಕಾಲಿಟ್ಟು ನಡೆಯದಂತೆ ಮನೆಯ ಯಾರಾದರೂ ಒಬ್ಬ ಸದಸ್ಯರ ಹೆಸರನ್ನ ರವಿ ಮುರೂರು ಸೂಚಿಸಬೇಕಿತ್ತು''. ಅದರಂತೆ, ಕೃತಿಕಾ ಹೆಸರನ್ನ ರವಿ ಸೂಚಿಸಿದರು.

ಆ ಕ್ಷಣವೇ ಕೃತಿಕಾರನ್ನ ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಹೊತ್ತುಕೊಂಡು 'ಬಿಗ್ ಬಾಸ್' ಮನೆ ಒಳಗೆ ಕರೆದುಕೊಂಡು ಹೋದರು.

English summary
'Bigg Boss' has given a weird punishment for Actress Kruthika in Bigg Boss Kannada 3. Read the article to know about the punishment.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada