»   » ನರ್ಸ್ ಜಯಲಕ್ಷ್ಮಿ ಬಳಿ ಬ್ರಹ್ಮಾಂಡ ಶರ್ಮಾ ಬಂಡಲ್

ನರ್ಸ್ ಜಯಲಕ್ಷ್ಮಿ ಬಳಿ ಬ್ರಹ್ಮಾಂಡ ಶರ್ಮಾ ಬಂಡಲ್

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಶೋನಲ್ಲಿ ಪ್ರತಿವಾರ ಇಬ್ಬರು ಅಥವಾ ಮೂವರು ಮನೆಯಿಂದ ಹೊರಬೀಳಲು ನಾಮಿನೇಟ್ ಆಗುತ್ತಿದ್ದರು. ಆದರೆ ಈ ವಾರ ಮನೆಯ ಎಲ್ಲ ಸದಸ್ಯರನ್ನೂ 'ಬಿಗ್ ಬಾಸ್' ನಾಮಿನೇಟ್ ಮಾಡಿದ್ದಾರೆ. ಇಬ್ಬರು ಸದಸ್ಯರಿಗೆ ಗೇಟ್ ಪಾಸ್ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.

ಬನ್ನಿ ಒಮ್ಮೆ ಕಣ್ಣಾಡಿಸೋಣ ಬಿಗ್ ಬಾಸ್ ಕಾರ್ಯಕ್ರಮದಲ್ಲಿ 35 ಹಾಗೂ 36ನೇ ದಿನ ಏನು ನಡೆಯಿತು. ಮನೆಯಲ್ಲಿ ಒಬ್ಬರ ಮೇಲೆ ಒಬ್ಬರ ಆಪಾದನೆಗಳು ಜಾಸ್ತಿಯಾಗಿವೆ. ಇಷ್ಟು ದಿನ ನಿಖಿತಾ ವಿರುದ್ಧ ಕತ್ತಿ ಮಸೆಯುತ್ತಿದ್ದ ಚಂದ್ರಿಕಾ ಈಗ ಅಪರ್ಣಾ ವಿರುದ್ಧ ತಿರುಗಿದ್ದಾರೆ.

ಬ್ರಹ್ಮಾಂಡ ಸ್ವಾಮೀಜಿಗಳಂತೂ ಕೂಲ್ ಆಗಿದ್ದಾರೆ. ಎಲ್ಲರೊಂದಿಗೂ ಹೊಂದಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅಪರ್ಣಾ ಸಹ ಅಷ್ಟೇ ಚಂದ್ರಿಕಾ ವಿರುದ್ಧ ನಿಂತಿದ್ದಾರೆ. ಇನ್ನು ನರ್ಸ್ ಜಯಲಕ್ಷ್ಮಿಅವರಂತೂ ಮನೆಯ ಎಲ್ಲ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೆಂಟ್ ಬಗ್ಗೆ ನರೇಂದ್ರ ಬಾಬು ಶರ್ಮಾ ಜೋಕು

ಒಮ್ಮೆ ಅದ್ಯಾವುದೋ ಸೆಂಟ್ ಹಾಕಿಕೊಂಡು ಹೋಗಿದ್ದೆ. ಎಲ್ಲಿ ಹೋಗಿ ಬಂದಿದ್ದೀಯಾ ಎಂದು ಎಲ್ಲರೂ ಅನುಮಾನವಾಗಿ ನೋಡಿದರು. ಆವಾಗಲೇ ಗೊತ್ತಾಗಿದ್ದು ನನಗೆ ಹುಡುಗೀರಿಗೊಂದು, ಹುಡುಗರಿಗೊಂದು ಸೆಂಟ್ ಇದೆ ಎಂದು ಎಂದರು.

ಅಪರ್ಣಾ ವಿರುದ್ಧ ಚಂದ್ರಿಕಾ ತೆರೆಮರೆ ಸಮರ

ಅವರನ್ನು ಎಲ್ಲರೂ ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ. ಆಯಮ್ಮ ಇದುವರೆಗೂ ಅಡುಗೆ ಮನೆಗೆ ಕಡೆನೇ ತಲೆಹಾಕಿಲ್ಲ. ಅದ್ಯಾವ ರೀತಿ ಅವರನ್ನು ಹಾಗೆ ಕರಿಯುತ್ತಾರೋ ಗೊತ್ತಿಲ್ಲ. ಅಡುಗೆ ಮನೆ ಕಡೆ ತಲೆ ಹಾಕದೋರಿಗೆಲ್ಲಾ ಅನ್ನಪೂರ್ಣೇಶ್ವರಿ ಎಂದರೆ ಹೇಗೆ. ಅನ್ನ ಮಾಡಕೋ ಬರಲ್ಲ ಆಯಮ್ಮನಿಗೆ. ಅದ್ಯಾವ ಸೀಮೆ ಅನ್ನಪೂರ್ಣೇಶ್ವರಿನೋ ಏನೋ ಎಂದು ನರ್ಸ್ ಜಯಲಕ್ಷ್ಮಿ ಜೊತೆ ಚಂದ್ರಿಕಾ ಕಿವಿಕಚ್ಚಿದರು.

ನನ್ನನ್ನು ಯಾರೂ ಅಲ್ಲಾಡಿಸಕ್ಕೆ ಸಾಧ್ಯವಿಲ್ಲ

ಐ ಯಾಮ್ ನಾಟ್ ಎ ಫೂಲ್ ಜಯ. ಅವಳು (ನಿಖಿತಾ) ನನ್ನನ್ನು ಏನಂತ ತಿಳಿದುಕೊಂಡಿದ್ದಾರೆ. ನನ್ನನ್ನು ಅಲ್ಲಾಡಿಸಕ್ಕೆ ಸಾಧ್ಯವೇ ಇಲ್ಲ. ಯಾವಾಗ ನೋಡಿದರು ಸ್ವಾಮೀಜಿ ಸ್ವಾಮೀಜಿ ಎಂದು ಅವರ ಶಿಷ್ಯೆ ಆಗಿಬಿಟ್ಟಿದ್ದಾಳೆ ಎಂದು ನರ್ಸಮ್ಮನ ಹತ್ತಿನ ತಮ್ಮ ಬೇಗುದಿಯನ್ನು ತೋಡಿಕೊಂಡರು ಚಂದ್ರಿಕಾ.

ಹೇಯ್ ಹೂ ಈಸ್ ಬ್ಲಡಿ ಬ್ರಹ್ಮಾಂಡ!

ಈ ರೀತಿಯಾಗಿ ತಮ್ಮನ್ನು ತಾವೇ ಲೇವಡಿ ಮಾಡಿಕೊಂಡರು ನರೇಂದ್ರ ಬಾಬು ಶರ್ಮಾ. ಅವರು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಆಧುನಿಕ ಶೈಲಿಯಲ್ಲಿ ತಾವಿದ್ದರೆ ಹೇಗೆ ಎಂದು ಹೇಳುತ್ತಿದ್ದರು. ಕೈಯಲ್ಲಿ ಸಿಗಾರ್, ಟೈಟ್ ಜೀನ್ಸ್ ತೊಟ್ಟು, ಕೌ ಬಾಯ್ ಕ್ಯಾಪ್ ಧರಿಸಿದರೆ ಹೇಗಿರುತ್ತದೆ ಎಂದು ಒಮ್ಮೆ ಊಹಾಲೋಕಕ್ಕೆ ಜಾರಿದರು. ಆಗ ಅವರ ಬಾಯಿಂದ ಉದುರಿದ ಮುತ್ತು Hey who is bloody Brahmanda.

ನರ್ಸಮ್ಮನ ಬಳಿ ಬಂಡಲ್ ಬಿಟ್ಟ ಬ್ರಹ್ಮಾಂಡ

ನಾನು ಮಣ್ಣು ಕೊಟ್ಟರು ಅದು ಬಂಗಾರವಾಗುತ್ತದೆ. ನನ್ನನ್ನು ನಂಬಿದವರಿಗೆ ಯಾರಿಗೂ ಕೆಟ್ಟದಾಗಿಲ್ಲ. ಎಲ್ಲರೂ ಉದ್ಧಾರವಾಗಿದ್ದಾರೆ ಎಂದರು. ಇದಕ್ಕೆ ನರ್ಸ್ ಜಯಲಕ್ಷ್ಮಿ ಹಾಗಿದ್ದರೆ ನನಗೆ ಹತ್ತು ಕೆ.ಜಿ ಮಣ್ಣು ಕೊಡಿ ಎಂದರು. ಅಯ್ಯೋ ನಾನು ಮಾತಿಗೆ ಹಾಗೆ ಹೇಳಿದೆ ಅಷ್ಟೆ. ಮಣ್ಣೆಲ್ಲಾ ಚಿನ್ನ ಆಗೋ ಹಂಗಿದ್ರೆ ನಾನು ಮನೆಯಲ್ಲೆಲ್ಲಾ ಮಣ್ಣೇ ತುಂಬಿಸಿಕೊಳ್ಳುತ್ತಿದ್ದೆ ಎಂದರು ಹಾಸ್ಯ ಚಟಾಕಿ ಸಿಡಿಸಿದರು ಶರ್ಮಾ.

ತಿಲಕ್ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ

ಈ ಬಾರಿಯ ಟಾಸ್ಕ್ ನಿರ್ವಹಣೆ ಜವಾಬ್ದಾರಿಯನ್ನು ಬಿಗ್ ಬಾಸ್ ತಿಲಕ್ ಹೆಗಲಿಗೆ ಹಾಕಿದ್ದಾರೆ. ಇದೊಂದು ಸೀಕ್ರೇಟ್ ಟಾಸ್ಕ್ ಆಗಿದ್ದು ಮನೆಯ ಒಬ್ಬರು ಸದಸ್ಯರ ಜೊತೆ ಮಾತ್ರ ಹಂಚಿಕೊಳ್ಳುವಂತೆ ಆಜ್ಞಾಪಿಸಿದ್ದಾರೆ. ಹಾಗಾಗಿ ವಿಜಯ್ ರಾಘವೇಂದ್ರ ಜೊತೆ ಟಾಸ್ಕನ್ನು ತಿಲಕ್ ಹಂಚಿಕೊಂಡಿದ್ದಾರೆ. ಎಲ್ಲರೂ ಕನ್ನಡದಲ್ಲೇ ಮಾತನಾಡುವಂತೆ ಹಾಗೂ ಹಗಲು ನಿದ್ದೆಯನ್ನು ತಡೆಯುವಂತೆ ಬಾಸ್ ಆದೇಶ ನೀಡಿದ್ದಾರೆ.

ಚಂದ್ರಿಕಾರನ್ನು ಶೀ ಈಸ್ ವಿಲನಿಶ್ ಎಂದ ಅಪರ್ಣಾ

ಅವಳನ್ನೇನು ಕಮ್ಮಿ ಎಂದು ತಿಳಿಯಬೇಡಿ. ಆಚೆ ಹೋದ ಬಳಿಕ ಸಂದರ್ಭ ಬಂದಾಗ ಅವಳ ಜಾತಕ ಬಿಡಿಸುತ್ತೇನೆ. She is villainize ಎಂದು ನಿಖಿತಾ ಸಂಗಡ ಗುಸುಗುಸು ಎಂದು ಅಪರ್ಣಾ ಮಾತನಾಡಿದರು. ಈಗ ಅಪರ್ಣಾ ಹಾಗೂ ಚಂದ್ರಿಕಾ ನಡುವೆ ಶೀತರ ಸಮರ ಶುರುವಾಗಿದೆ.

ವಿಜಯ್ ರಾಘವೇಂದ್ರ ಮದುವೆ ದಿನಗಳ ಮೆಲುಕು

ಇನ್ನೊಂದು ಕಡೆ ವಿಜಯ್ ರಾಘವೇಂದ್ರ ಅವರು ತಮ್ಮ ಮದುವೆ ದಿನಗಳನ್ನು ಮೆಲುಕು ಹಾಕಿದರು. ತಮ್ಮ ಪತ್ನಿಯೊಂದಿಗೆ ಕಾಫಿ ಸವಿದ್ದದ್ದು, ಮೊದಲ ಮಾತು, ಮೊದಲ ಸ್ಪರ್ಶದ ಬಗ್ಗೆ ಹೇಳಿ ಇನ್ನೂ ಮದುವೆಯಾಗದ ನಿಖಿತಾ ಹಾಗೂ ಅನುಶ್ರೀ ಅವರನ್ನು ಪುಳಕಿತಗೊಳಿಸಿದರು.

ನಾನು ಯಾರನ್ನು ನಂಬಲ್ಲ ಎಂದ ಚಂದ್ರಿಕಾ

ನರ್ಸ್ ಜಯಲಕ್ಷ್ಮಿ ಜೊತೆ ಮಾತನಾಡುತ್ತಾ, ನಾನು ಯಾರನ್ನೂ ಜೀವನದಲ್ಲಿ ನಂಬಲ್ಲ. ಆದರೆ ನಿಮ್ಮನ್ನು ನಂಬಿದೆ. ನಾನು ವೈರಿಗಳನ್ನು ಎದುರುಗಡೆ ನೋಡಲು ಇಷ್ಟಪಡುತ್ತೇನೆ. ಆದರೆ ಪಕ್ಕದಲ್ಲಿ ಅಲ್ಲ ಎಂದರು. ಬಳಿಕ ನರ್ಸ್ ಜಯಲಕ್ಷ್ಮಿ ಅವರ ಚುಂಬನದ ಬಗ್ಗೆ ಕೇಳಿದರು. ಆಗ ಅವರು ಹುಷಾರಾಗಿ ಹೆಚ್ಚಾಗಿ ಬಾಯಿಗೆ ಬೀಗ ಹಾಕಿಕೊಂಡರು.

English summary
Etv Kannada's reality show 'Bigg Boss' day 35th, 36th highlights. This week all members are nominated for elimination. This week Two members will evicted from the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada