For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 4: ಪ್ರಥಮ್ ಆವಾಜ್, ಮೈಕ್ ಬಿಟ್ಟು ಮನೆ ಬಿಡ್ತೀನಿ ಎಂದ ಕೀರ್ತಿ

  By Suneetha
  |

  ಬಿಗ್ ಬಾಸ್ ಮನೆಯಲ್ಲಿ ಸತತ ನಾಲ್ಕು ದಿನಗಳು ಕಳೆಯಿತು. ಈ ನಾಲ್ಕೂ ದಿನಗಳಲ್ಲಿ ಕೂಡ ಪ್ರಥಮ್, ಮನೆ ಮಂದಿಗೆಲ್ಲಾ ಕಿರಿಕ್ ಮಾಡಿದ್ದೇ ಜಾಸ್ತಿ. 5ನೇ ದಿನದಲ್ಲಿ ಅವರ ಪ್ರತಿಭಟನೆ, ಹುಚ್ಚಾಟ-ರಂಪಾಟ ಅದ್ಯಾವ ರೀತಿ ಮುಂದುವರಿಯುತ್ತೆ ಅನ್ನೋದು ಕುತೂಹಲ.

  ಐದನೇ ದಿನ ಆರಂಭವಾದಂತೆ ಎಲ್ಲರೂ ಎದ್ದು ಬೆಳಗ್ಗಿನ ಪ್ರಾತ ವಿಧಿಗಳನ್ನು ಪೂರೈಸುತ್ತಾರೆ. ಐದನೇ ದಿನದಂದು ಪ್ರಥಮ್ ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಬ್ರೇಕ್ ಹಾಕಿ ಹಣ್ಣು ತಿಂದಿದ್ದಾರೆ.[ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ]

  ಐದನೇ ದಿನದಂದು ಬಿಗ್ ಬಾಸ್ ಮನೆಯವರಿಗೆ 'ಸಮರ್ಪಣೆ' ಎಂಬ ಹೊಸ ಟಾಸ್ಕ್ ನೀಡುತ್ತಾರೆ. ಇದು ಮನೆಯ ನಾಯಕ ಕೀರ್ತಿ ಕುಮಾರ್ ಅವರಿಗೂ ಅನ್ವಯ ಆಗುತ್ತೆ. ಆದ್ದರಿಂದ ಕೀರ್ತಿ ಅವರು ಏನು ಸಮರ್ಪಣೆ ಮಾಡುತ್ತಾರೆ ನೋಡೋಣ. ಮುಂದೆ ಓದಿ....

  ನಾಯಕ ಕೀರ್ತಿ ಸಮರ್ಪಣೆ ಮಾಡಿದ್ದು ಯಾವುದನ್ನು?

  ನಾಯಕ ಕೀರ್ತಿ ಸಮರ್ಪಣೆ ಮಾಡಿದ್ದು ಯಾವುದನ್ನು?

  ಬಿಗ್ ಬಾಸ್ ಕೊಟ್ಟ ಸಮರ್ಪಣಾ ಟಾಸ್ಕ್ ಗಾಗಿ, ಮನೆಯ ನಾಯಕ ಕೀರ್ತಿ ಕುಮಾರ್ ಅವರು ತಮ್ಮ ವಿಶೇಷ ಬೆಡ್ ರೂಮ್ ಅನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ನಾಯಕನಾಗಿದ್ದಕ್ಕೆ ಬಿಗ್ ಬಾಸ್ ಅವರಿಗೆ ಲಕ್ಷುರಿ ಬೆಡ್ ರೂಮ್ ಮತ್ತು ಬೇರೆಯದೇ ಟಾಯ್ಲೆಟ್ ಕೊಟ್ಟಿದ್ದರು. ಅದನ್ನು ಇದೀಗ ನಾಯಕ ಕೀರ್ತಿ ಅವರು ಬಿಟ್ಟುಕೊಟ್ಟಿದ್ದಾರೆ. ಇನ್ನುಳಿದ ಸದಸ್ಯರು ಹೇಳುವ ತನಕ ನಾಯಕ ಆ ವಿಶೇಷ ರೂಮಿಗೆ ಕಾಲಿಡುವುದಾಗಿ ಹೇಳುತ್ತಾರೆ.[ಬಿಗ್ ಬಾಸ್ 4: ಅಬ್ಬಬ್ಬಾ..ಹೆಣ್ಣು ಹೈಕಳ ಹಿಂದೆ ಇಷ್ಟೊಂದು ಸೀಕ್ರೆಟ್ಸಾ?]

  ಶುಚಿತ್ವ ಕಾಪಾಡಲು ಹೋಗಿ ಕಿತ್ತಾಡಿಕೊಂಡರು

  ಶುಚಿತ್ವ ಕಾಪಾಡಲು ಹೋಗಿ ಕಿತ್ತಾಡಿಕೊಂಡರು

  ಮಾಳವಿಕಾ ಅವರು ಅನ್ನಕ್ಕಿಟ್ಟ ನೀರು ಜಾಸ್ತಿಯಾಗಿ ಅನ್ನ ಸ್ವಲ್ಪ ಚೆಲ್ಲುತ್ತೆ. ಇದರ ಪರಿಣಾಮ ಕ್ಲೀನಿಂಗ್ ವಿಭಾಗದಲ್ಲಿರೋ ಪ್ರಥಮ್ ಶುಚಿ ಮಾಡುತ್ತಾರೆ. ಜೊತೆಗೆ ಚೆಲ್ಲಿರೋ ಅನ್ನದ ಮೇಲೆ ಓಡಾಡಬೇಡಿ ಅಂತ ನಿಷೇದಾಜ್ಞೆ ಮಾಡುತ್ತಾರೆ. ಪ್ರಥಮ್ ಅವರು ಕ್ಲೀನ್ ಮಾಡಿ ಆದ ಮೇಲೆ ವಾಣಿಶ್ರೀ ಅವರು ಅಲ್ಲಿ ಓಡಾಡಿದ್ದಕ್ಕೆ, ಪ್ರಥಮ್ ರೇಗಾಡುತ್ತಾರೆ.['ಬಿಗ್ ಬಾಸ್ ಕನ್ನಡ-4' ಶೋನ ಎಲ್ಲಾ ಸ್ಪರ್ಧಿಗಳ ಪರಿಚಯ]

  ತಲೆ ಕೆಟ್ಟಿದ್ಯಾ?

  ತಲೆ ಕೆಟ್ಟಿದ್ಯಾ?

  ಪ್ರಥಮ್ ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ವಾಣಿಶ್ರೀ ಅವರಿಗೆ, 'ಏನ್ರಿ ನಿಮಗೆ ತಲೆ ಕೆಟ್ಟಿದ್ಯಾ?, ಯಾಕ್ರೀ ಚಪ್ಪಲಿ ಹಾಕ್ಕೊಂಡು ಅಲ್ಲಿ ಓಡಾಡ್ತೀರಾ ಅಂತ ಅವಾಜ್ ಹಾಕ್ತಾರೆ. ಅದಕ್ಕೆ ವಾಣಿಶ್ರೀ ಅವರು ನಾನು ಅನ್ನದ ಮೇಲೆ ಓಡಾಡಿಲ್ಲ, ದೂರದಿಂದಲೇ ಬಂದೆ ಅಂತಾರೆ. ತಲೆ ಕೆಟ್ಟಿದ್ಯಾ ಅಂದಿದಕ್ಕೆ ನಾಯಕ ಕೀರ್ತಿ ಅವರು, ಅವರ ವಯಸ್ಸಿಗೆ ಮಾರ್ಯಾದೆ ಕೊಟ್ಟು ಮಾತಾಡಿ ಅಂತಾರೆ. ಅದಕ್ಕೆ ಪ್ರಥಮ್, ಅವರನ್ನು ಸಂಭಾಳಿಸೋಕೆ ಆಗದವನು ನೀನ್ಯಾವ ಸೀಮೆ ನಾಯಕ ಕಣಯ್ಯಾ ಅಂತ ಕೀರ್ತಿ ಅವರಿಗೆ ಜೋರು ಮಾಡುತ್ತಾರೆ.[ಬಿಗ್ ಬಾಸ್-4: ಈ ವಾರ ಮನೆಯಿಂದ ಹೊರ ಹೋಗೋರು ಯಾರು?]

  ಯುಸ್ ಲೆಸ್ ಫೆಲೊ

  ಯುಸ್ ಲೆಸ್ ಫೆಲೊ

  ಬರೀ ಚೆಲ್ಲಿದ ಅನ್ನವನ್ನು ಶುಚಿಗೊಳಿಸುವ ಭರಾಟೆಯಲ್ಲಿ ಪ್ರಥಮ್ ಮತ್ತು ನಾಯಕ ಕೀರ್ತಿ ಕುಮಾರ್ ಅವರಿಗೆ ಭಯಂಕರ ಮಾತಿನ ಮಾರಾಮಾರಿ ನಡೆಯಿತು. ಪ್ರಥಮ್ ಅವರು ಕೀರ್ತಿ ಅವರಿಗೆ ಯುಸ್ ಲೆಸ್ ಫೆಲೋ, ಹುಚ್ಚು ನಾಯಿ ತರ ಆಡ್ತೀರಾ ಅಂತ ಜೋರು ಮಾಡಿದರು. ಸಮಾಧಾನ, ಫಸ್ಟ್ ಸಮಾಧಾನವಾಗಿ ಇರೋದನ್ನು ಕಲಿತುಕೊಳ್ರೀ ದುರಹಂಕಾರಿ ಅಂತ ಪ್ರಥಮ್ ಕೀರ್ತಿ ಅವರಿಗೆ ಸಿಕ್ಕಾಪಟ್ಟೆ ಬೈದಾಡಿದರು. ಇವರಿಬ್ಬರ ಕಾದಾಟವನ್ನು ಶಾಲಿನಿ ಅವರು ಮಧ್ಯೆ ಬಂದು ತಡೆದರು.

  ಏನಿವಾಗ?

  ಏನಿವಾಗ?

  ವಯಸ್ಸಿಗೆ ಬೆಲೆ ಕೊಟ್ಟು ಮಾತಾಡು, ಎಲ್ಲರನ್ನೂ ಏಕ ವಚನ ಬಳಸಿ ಮಾತಾಡ್ತೀಯಾ, ನನ್ ಹತ್ರ ಬೇಡಾ?, ಅಂತ ಕೀರ್ತಿ ಅವರು ಸಮಾಧಾನವಾಗಿ ಹೇಳಿದ್ರೂ, ಪ್ರಥಮ್ ಮಾತ್ರ ಪಟ್ಟು ಬಿಡದೇ ಹಂಗೆ ಹಂಗೆ, ಏನಿವಾಗ ಏನಿವಾಗ ಅಂತ, ಕೀರ್ತಿ ಅವರ ಮೇಲೆರಗಿ ಜಗಳ ಕಾದರು. ಶಾಲಿನಿ ಅವರು ಎಷ್ಟೇ ಸಮಾಧಾನ ಮಾಡಲು ಪ್ರಯತ್ನಪಟ್ಟರು, ಇಬ್ಬರೂ ಕೇಳಲಿಲ್ಲ.

  ಬಡಬಡಿಸುತ್ತಿರುವ ಪ್ರಥಮ್

  ಬಡಬಡಿಸುತ್ತಿರುವ ಪ್ರಥಮ್

  "ಒಂದು ಹಿಡಿ ಅನ್ನಕ್ಕಾಗಿ ಎಷ್ಟು ಜನ ಪರದಾಡ್ತಿದ್ದಾರೆ ಗೊತ್ತಾ?. ಅದರ ಮೇಲೆ ಚಪ್ಪಲಿ ಹಾಕಿ ತುಳಿದಿದ್ದನ್ನು, ಸರಿ ಅಂತ ಸಮರ್ಥನೆ ಮಾಡುತ್ತಿರುವ ನಾಯಕನ ವಿರುದ್ಧ ನನ್ನ ಹೋರಾಟ. ಅವನು ಮಾಡುತ್ತಿರುವುದು ಅನ್ಯಾಯ, ಅಕ್ರಮ, ಅಕ್ಷಮ್ಯ ಅಪರಾಧ. ಅವರು ನಾಯಕನಾಗಿ ಅದಕ್ಕೆ ಸರಿಯಾದ ಗೌರವ ಕೊಟ್ಟಿಲ್ಲ. ಆತ ಕಿರಿಕ್ ಮಾಡಿದ್ದಾರೆ. ನಾನು ಒಳ್ಳೆ ಹುಡ್ಗ, ಆತ ಕಿರಿಕ್ ಮಾಡ್ತಾನೆ ಇರ್ಲಿ. ನಾನು ಅನ್ಯಾಯದ ಪರ ಹೋರಾಟ ಮಾಡ್ತಾನೆ ಇರ್ತಿನಿ. ಕ್ಯಾಮೆರಾದ ಮೇಲೆ ನನ್ನ ಉಗುಳು ಬಿತ್ತು. ಅದು ಹುಮ್ಮಸ್ಸಿನಿಂದ ಬಂತು ಕ್ಷಮಿಸಿ" ಅಂತ ಕ್ಯಾಮೆರಾ ಮುಂದೆ ಪ್ರಥಮ್ ಏನೇನೋ ಬಡಬಡಿಸಿದರು.

  ಮೈಕ್ ಕೆಳಗಿಟ್ಟ ನಾಯಕ ಕೀರ್ತಿ

  ಮೈಕ್ ಕೆಳಗಿಟ್ಟ ನಾಯಕ ಕೀರ್ತಿ

  ಪ್ರಥಮ್ ಹುಚ್ಚಾಟ-ಅರಚಾಟದಿಂದ ಬೇಸತ್ತ ಮನೆಯ ನಾಯಕ ಕೀರ್ತಿ ಅವರು ತಾವು ಹಾಕಿಕೊಂಡಿದ್ದ ಮೈಕ್ ಅನ್ನು ಕೆಳಗಿಟ್ಟು, ಬಿಗ್ ಬಾಸ್ ಮನೆಯಿಂದ ಹೊರ ನಡೆಯುವುದಾಗಿ ಹೇಳುತ್ತಾರೆ. ಇಷ್ಟೆಲ್ಲಾ ಆದ್ರೂ ಪ್ರಥಮ್ ಮಾತ್ರ 'ಹೋಗುವವರು ಹೋಗಲಿ, ಬರುವವರು ಬರಲಿ' ಅಂತ ನಗು-ನಗುತ್ತಾ ಮಾತಾಡುತ್ತಾರೆ.

  ಸಮಾಧಾನಪಡಿಸಿದ ಮೋಹನ್-ಶೀತಲ್

  ಸಮಾಧಾನಪಡಿಸಿದ ಮೋಹನ್-ಶೀತಲ್

  ಮೈಕ್ ಕೆಳಗಿಟ್ಟು ಹೋಗ್ತೀನಿ ಎಂದ ಕೀರ್ತಿ ಅವರನ್ನು ಕೂರಿಸಿಕೊಂಡು ಶೀತಲ್ ಮತ್ತು ಮೋಹನ್ ಅವರು ಮಾತಾಡುತ್ತಾರೆ. 'ನಿಮ್ಮ ಕೆಲಸ ನೀವು ಮಾಡಿ, ನಿಮ್ಮ ನಾಯಕತ್ವವನ್ನು ನೀವು ತೋರಿಸಿ. ಬೇರೆಯವರು ಏನೇನೋ ಹೇಳ್ತಾರೆ ಅಂತ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ' ಅಂತ ಬುದ್ಧಿವಾದ ಹೇಳುತ್ತಾರೆ.

  ಕಣ್ಣೀರು ಹಾಕಿದ ನಿರಂಜನ್

  ಕಣ್ಣೀರು ಹಾಕಿದ ನಿರಂಜನ್

  ಮನೆಯಲ್ಲಿ ಉಪವಾಸ ಇರುವ ಮೂರು ಜನ (ರೇಖಾ, ನಿರಂಜನ್ ಮತ್ತು ಭುವನ್ ಪೊನ್ನಪ್ಪ), ಇನ್ನುಳಿದ ಮನೆಯ ಸದಸ್ಯರಿಗೆ ತಾವೇ ಕೈಯಾರೆ ಐಸ್ ಕ್ರೀಮ್ ತಿನ್ನಿಸಬೇಕಿತ್ತು. ಈ ಸಂದರ್ಭದಲ್ಲಿ ನಿರಂಜನ್ ಅವರು ಯಾವುದೋ ಘಟನೆ ನೆನೆಸಿಕೊಂಡು ಕಣ್ಣೀರು ಹಾಕಿದರು. ಮನೆಯವರೆಲ್ಲರೂ ಸಮಾಧಾನ ಮಾಡಿದರು.

  ಕನ್ ಫೆಶನ್ ರೂಮ್ ನಲ್ಲಿ ಚೈತ್ರಾ

  ಕನ್ ಫೆಶನ್ ರೂಮ್ ನಲ್ಲಿ ಚೈತ್ರಾ

  ಮೊದಲ ಬಾರಿಗೆ ಕನ್ ಫೆಶನ್ ರೂಮ್ ಗೆ ಚೈತ್ರಾ ಅವರನ್ನು ಬಿಗ್ ಬಾಸ್ ಕರೆಯುತ್ತಾರೆ. ಮನೆಯಲ್ಲಿ ಅವರ ಅನುಭವ ಕೇಳುತ್ತಾರೆ. ಚೈತ್ರಾ ಅವರು ಹೊಂದಾಣಿಕೆ ಮಾಡಿಕೊಂಡು ಹೋಗುವುದಾಗಿ ಹೇಳುತ್ತಾರೆ.

  English summary
  Captain Keerthi gives up his bedroom as a sacrifice. When Vanishree walks on rice wearing slippers, Pratham creates huge scene. Keerthi steps in to stop him, and in the process, ends up having a huge fight with him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X