For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಕನ್ನಡ 4: 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗ!

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 4 ಅಕ್ಟೋಬರ್ 9 ರಿಂದ ಆರಂಭವಾಗಲಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಾಗಿರಬಹುದು. ಈಗ ಶೋನಲ್ಲಿ ಯಾರು ಯಾರು ಸ್ಪರ್ಧಿಗಳಾಗಿ ರೆಡ್ ಕಾರ್ಪೆಟ್ ತುಳಿದು ಮನೆ ಪ್ರವೇಶಿಸುತ್ತಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಸದ್ಯಕ್ಕೆ 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗಗೊಂಡಿದೆ.

  ನಟ ಕಿಚ್ಚ ಸುದೀಪ ನಿರೂಪಣೆಯ ಈ ಜನಪ್ರಿಯ ಶೋನಲ್ಲಿ ಈ ಬಾರಿ ಒಟ್ಟು 15 ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅಕ್ಟೋಬರ್ 9 ರಂದು ಸಂಜೆ 6 ಗಂಟೆಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಓಪನ್ನಿಂಗ್ ಶುರು ಆಗಲಿದೆ. ಅಕ್ಟೋಬರ್ 10 ರಿಂದ ಸ್ಪರ್ಧಿಗಳು ಮನೆಯಲ್ಲಿ ಏನೇನು ಮಾಡಲಿದೆ ಎಂಬುದನ್ನು ವೀಕ್ಷಕರು ನೋಡಿ ಆನಂದಿಸಬಹುದು. [ನವೀನ್ ಪಡೀಲ್ ಹೋಗ್ತಾರಾ ಬಿಗ್ ಬಾಸ್ ಮನೆಗೆ?]

  ರಕ್ಷಿತಾ ಪ್ರೇಮ್, ಅನುಪ್ರಭಾಕರ್, ಯೋಗೀಶ್, ತರುಣ್ ಸೇರಿದಂತೆ ಕೆಲ ತಾರೆಯರ ಹೆಸರುಗಳು 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ ಇದೆ ಎನ್ನಲಾಗಿತ್ತು. ಆದರೆ, ಅಂತಿಮ ಹೆಸರುಗಳು ಇಲ್ಲಿವೆ. ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅಂತ ನಟಿ ಸುಧಾರಾಣಿ, ತಾರಾ ಮತ್ತು ನಟ ಕೋಮಲ್ ಸ್ಪಷ್ಟಪಡಿಸಿದ್ದಾರೆ. [ಬಿಗ್ ಬಾಸ್ ಕನ್ನಡ-4'ಕ್ಕೆ ಮುಹೂರ್ತ ಫಿಕ್ಸ್]

  ಯಾವ ಯಾವ ಕ್ಷೇತ್ರಗಳಿಂದ ಆಯ್ಕೆ

  ಯಾವ ಯಾವ ಕ್ಷೇತ್ರಗಳಿಂದ ಆಯ್ಕೆ

  ಕಳೆದ ಸೀಸನ್ ಪ್ರಕಾರ ಹೋಗುವುದಾದರೆ, ಚಲನಚಿತ್ರ ನಟ, ನಟಿ, ಪೋಷಕ ಪಾತ್ರಧಾರಿ, ಹಳೆ ನಟ/ನಟಿ, ನಿರ್ದೇಶಕ, ನಿರೂಪಕ, ಆಧಾತ್ಮ ಚಿಂತಕ, ಕಿರುತೆರೆ ಸ್ಟಾರ್, ಪತ್ರಕರ್ತ, ರೇಡಿಯೋ ಜಾಕಿ, ಕ್ರಿಕೆಟರ್, ಕಲಾವಿದ, ರೂಪದರ್ಶಿ, ವಿವಾದಿತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

  ಹೆಸರು ಪಕ್ಕಾ ಆಗಿರೋದು

  ಹೆಸರು ಪಕ್ಕಾ ಆಗಿರೋದು

  * ಶೀತಲ್ ಶೆಟ್ಟಿ (ನಿರೂಪಕಿ/ನಟಿ)
  * ಕಿರಿಕ್ ಕೀರ್ತಿ(ಪತ್ರಕರ್ತ/ಫೇಸ್ ಬುಕ್ ಸ್ಟಾರ್/ ನಿರ್ದೇಶಕ)
  * ಸುಚಿತ್ರಾ ಮುರಳಿ(ಒಗ್ಗರಣೆ ಡಬ್ಬಿ ಖ್ಯಾತಿಯ ಬಾಣಸಿಗ ಕಮ್ ನಿರೂಪಕ)
  * ನವೀನ್ ಕೃಷ್ಣ (ನಾಯಕ ನಟ)
  * ನಿರಂಜನ್ (ನಿರೂಪಕ)

  ಈ ಪೈಕಿ ಸುಚಿತ್ರಾ ಮುರಳಿ ಅವರ ಹೆಸರು ಇನ್ನೂ ಡೌಟ್ ನಲ್ಲೇ ಇದೆ. ಕೊನೆಕ್ಷಣದ ಬದಲಾವಣೆಗೆ ಒಳಪಟ್ಟಿದೆ.

  ಗೆಸ್ಟ್ ರೋಲ್ ಆಫರ್ ಯಾರಿಗೆ

  ಗೆಸ್ಟ್ ರೋಲ್ ಆಫರ್ ಯಾರಿಗೆ

  ಕಳೆದ ಸೀಸನ್ ನಲ್ಲಿ ರಂಪಾಟ ಮಾಡಿಕೊಂಡ ಸ್ಪರ್ಧಿ, ಬಹುಮುಖ ಪ್ರತಿಭೆ ಹುಚ್ಚ ವೆಂಕಟ್, ಮಜಾ ಟಾಕೀಸ್ ಖ್ಯಾತಿಯ ತುಳು ಚಿತ್ರರಂಗದ ಜನಪ್ರಿಯ ತಾರೆ ನವೀನ್ ಪಡೀಲ್, ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪಪಾತ್ರಧಾರಿ. ಈ ಪೈಕಿ ನವೀನ್ ಪಡೀಲ್ ಅವರ ಹೆಸರು ಮುಖ್ಯ ಸ್ಪರ್ಧಿಗಳ ಲಿಸ್ಟ್ ನಲ್ಲೂ ಓಡಾಡುತ್ತಿದೆ. ಕೋಮಲ್ ಅವರು 'ನೋ' ಎಂದಿರುವುದರಿಂದ ಕಾಮಿಡಿ ಸ್ಟಾರ್ ಗಳ ಕೊರತೆಯನ್ನು ಎದುರಿಸುತ್ತಿದ್ದು, ಪಡೀಲ್ ಅವರನ್ನು ಮಜಾ ಟಾಕೀಸ್ ಬಿಟ್ಟುಕೊಟ್ಟರೆ ಬಿಗ್ ಬಾಸ್ ಮನೆಗೆ ಎಂಟ್ರಿ ಖಚಿತವಾಗಲಿದೆ.

  ಮಿಕ್ಕ ಸ್ಪರ್ಧಿಗಳು ಯಾರು ಯಾರು?

  ಮಿಕ್ಕ ಸ್ಪರ್ಧಿಗಳು ಯಾರು ಯಾರು?

  ಹಿರಿಯ ನಟಿ ವನಿತಾ ವಾಸು, ನಟಿ ರೂಪಿಕಾ, ಚಾರುಲತಾ, ಶುಭಾ ಪುಂಜಾ, ಕ್ರಿಕೆಟರ್ ಶ್ರೀಶಾಂತ್,ಸುಧಾರಾಣಿ, ಆರ್ ಜೆಗಳಾದ ಸ್ಮಿತಾ ದೀಕ್ಷಿತ್ ಅಥವಾ Rapid ರಶ್ಮಿ, ನಟಿ ನಿರ್ದೇಶಕಿ ಶ್ರುತಿ ನಾಯ್ಡು, ನಟ, ಪ್ರತ್ರಕರ್ತ ಗೌರೀಶ್ ಅಕ್ಕಿ, ಗಾಯಕಿ, ನಟಿ ಎಂಡಿ ಪಲ್ಲವಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

  English summary
  Enjoy Kannada. "Bigboss 4" Everynight from October 9, 2016. onwards Colors Kannada Channel. Here is the list of 15 probable contestants. The popular reality show hosted by actor Kichcha Sudeepa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X