»   » ದುಡ್ಡಿಗಾಗಿ 'ಬಾಂಬ್' ಎಸೆಯುತ್ತಿರುವ 'ಬಿಗ್ ಬಾಸ್' ಸ್ಪರ್ಧಿಗಳು.!

ದುಡ್ಡಿಗಾಗಿ 'ಬಾಂಬ್' ಎಸೆಯುತ್ತಿರುವ 'ಬಿಗ್ ಬಾಸ್' ಸ್ಪರ್ಧಿಗಳು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಈ ವಾರ 'ದುಡ್ಡು ದುಡ್ಡು' ಎಂಬ ಟಾಸ್ಕ್ ಚಾಲ್ತಿಯಲ್ಲಿದೆ. ಈ ಟಾಸ್ಕ್ ನ ಭಾಗವಾಗಿ 'ಆನೆ ಪಟಾಕಿ' ಎಂಬ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದ್ದಾರೆ.

'ಆನೆ ಪಟಾಕಿ' ಚಟುವಟಿಕೆ ಅನ್ವಯ, ಗಾರ್ಡನ್ ಏರಿಯಾದ ಮರದಲ್ಲಿ ಇರಿಸಿರುವ ಬಾಂಬ್ ಗಳನ್ನು ಕ್ಯಾಪ್ಟನ್ ಸೂಚಿಸುವ ಒಬ್ಬೊಬ್ಬರು ಬಿಚ್ಚಿ, ನಂತರ ಅದರಲ್ಲಿರುವ ಸವಾಲನ್ನು ಓದಿಕೊಂಡು, ಚೆನ್ನಾಗಿ ಯೋಚಿಸಿ, ತಮ್ಮ ಆಯ್ಕೆಯ ಒಬ್ಬ ಸದಸ್ಯರ ಮೇಲೆ ಬಾಂಬ್ ಪ್ರಯೋಗಿಸಬೇಕು.[ಜಿದ್ದಿಗೆ ಬಿದ್ದು ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದ ಪ್ರಥಮ್.!]

ಸವಾಲನ್ನು ಪೂರ್ಣಗೊಳಿಸಿದವರಿಗೆ ಹತ್ತು ಸಾವಿರ ರೂಪಾಯಿ ಹಣ ದೊರೆಯಲಿದ್ದು, ಸವಾಲನ್ನು ಸ್ವೀಕರಿಸದೇ ಇದ್ದರೆ ಅಥವಾ ಪೂರ್ಣಗೊಳಿಸದೇ ಇದ್ದರೆ ಬಾಂಬ್ ಪ್ರಯೋಗಿಸಿದ ಸದಸ್ಯರಿಗೆ ಬಹುಮಾನದ ಅವಕಾಶ.

ಶಾಲಿನಿಗೆ ಬಾಂಬ್ ಎಸೆದ ಮೋಹನ್

ಬಾಂಬ್ ನಲ್ಲಿ ಬರೆಯಲಾಗಿದ್ದ ''ಎರಡು ಗಂಟೆ ಕಾಲ ನಿರಂತರವಾಗಿ ಈಜಬೇಕು. ನೀರಿನಲ್ಲಿ ಸುಮ್ಮನೆ ನಿಲ್ಲುವಂತಿಲ್ಲ. ವಿರಾಮ ತೆಗೆದುಕೊಳ್ಳುವಂತಿಲ್ಲ'' ಎಂಬ ಸವಾಲನ್ನ ಶಾಲಿನಿಗೆ ಮೋಹನ್ ನೀಡಿದರು.['ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರ ಗೆದ್ದ ಕೀರ್ತಿ ಕುಮಾರ್]

ಮಾಳವಿಕಾ ಮುಖಕ್ಕೆ 'ಯಮ' ಖಾರ.!

ಮೂಗು, ಬಾಯಿ, ಕೆನ್ನೆ, ತುಟಿ ಸಹಾಯದಿಂದ ಮೆಣಸಿನಕಾಯಿ ಬೌಲ್ ನಲ್ಲಿ ಇರುವ ಮೂರು ಗೋಲಿಗಳನ್ನು ಹೊರಕ್ಕೆ ತೆಗೆಯುವ ಚಾಲೆಂಜ್ ನ ಮಾಳವಿಕಾ ರವರಿಗೆ ಕೀರ್ತಿ ನೀಡಿದರು.

ಉಪ್ಪು-ಮೊಸರು

ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಫ್ರಿಡ್ಜ್ ನಿಂದ ತೆಗೆದುಕೊಳ್ಳುವ ಮೊದಲ ವಸ್ತುವನ್ನು ಸಂಪೂರ್ಣವಾಗಿ ಸೇವಿಸುವ 'ಬಾಂಬ್'ನ ಕೀರ್ತಿ ಮೇಲೆ ರೇಖಾ ಪ್ರಯೋಗಿಸಿದರು. ಅದರಂತೆ ಉಪ್ಪು ಸುರಿದಿದ್ದ ಮೊಸರನ್ನು ಕುಡಿಯಲು ಕೀರ್ತಿ ಒದ್ದಾಡಿದರು.

ರಾತ್ರಿ ಪೂರ್ತಿ ಕ್ಯಾಮರಾ ಜೊತೆ ಚಾಟಿಂಗ್

ಕ್ಯಾಮರಾಗಳ ಜೊತೆ ಮಾತನಾಡುತ್ತಾ ರಾತ್ರಿ ಪೂರ್ತಿ ಎದ್ದಿರುವ ಟಾಸ್ಕ್ ನ ರೇಖಾಗೆ ಪ್ರಥಮ್ ನೀಡಿದರು.

ಮಾಳವಿಕಾ ಬಾಂಬ್ ಠುಸ್.!

''ಎರಡು ಗಂಟೆ ನಿರಂತರವಾಗಿ ನಡೆಯುತ್ತಲೇ ಇರಬೇಕು. ವಿರಾಮ ಇಲ್ಲ. ಸುಮ್ಮನೆ ನಿಲ್ಲುವ ಹಾಗಿಲ್ಲ'' ಎಂಬ ಬಾಂಬ್ ನ ಮೋಹನ್ ಮೇಲೆ ಮಾಳವಿಕಾ ಪ್ರಯೋಗಿಸಿದರು. ಟಾಸ್ಕ್ ನ ಮೋಹನ್ ಪೂರ್ಣಗೊಳಿಸಿದರು.

45 ಹಸಿ ಮೆಣಸಿನಕಾಯಿ ತಿಂದ ಪ್ರಥಮ್

ಶಾಲಿನಿ ಪ್ರಯೋಗಿಸಿದ ಬಾಂಬ್ ಅನ್ವಯ ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದರು ಪ್ರಥಮ್.

ಅರ್ಧಕ್ಕೆ ಬಿಟ್ಟವರೇ ಹೆಚ್ಚು.!

ಮೋಹನ್ ಮತ್ತು ಪ್ರಥಮ್ ಬಿಟ್ಟರೆ... 'ಆನೆ ಪಟಾಕಿ' ಟಾಸ್ಕ್ ನ ಅರ್ಧಕ್ಕೆ ಬಿಟ್ಟವರೇ ಹೆಚ್ಚು. ಈ ಟಾಸ್ಕ್ ನಲ್ಲಿ 'ಬಾಂಬ್' ಪ್ರಯೋಗಿಸಿ ಎಷ್ಟು ಮಂದಿ ಎಷ್ಟು ದುಡ್ಡು ಕಮಾಯಿ ಮಾಡುತ್ತಾರೆ ಎಂಬುದನ್ನು ಕಾದು ನೋಡ್ಬೇಕು.

English summary
Bigg Boss Kannada 4: Week 15, Day 101: Detailed report on 'Aane Pataki' task

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada