For Quick Alerts
  ALLOW NOTIFICATIONS  
  For Daily Alerts

  ಇಂಗ್ಲೆಂಡ್ ನಲ್ಲಿ 'ಕೂಲಿ' ಮಾಡಿದ ಸತ್ಯ ಬಾಯ್ಬಿಟ್ಟ ದೊಡ್ಡ ಗಣೇಶ್

  By Harshitha
  |

  ಅಗಾಧ ಪ್ರತಿಭೆ ಇದ್ದರೂ, ಭಾರತ ತಂಡದ ವೇಗದ ಬೌಲರ್ ದೊಡ್ಡ ಗಣೇಶ್ ರವರಿಗೆ ಉತ್ತಮ ಅವಕಾಶ ಸಿಗಲಿಲ್ಲ ಅನ್ನೋದು ಎಲ್ಲರೂ ಒಪ್ಪಲೇಬೇಕಾದ ಕಟು ಸತ್ಯ. 'ನನ್ನನ್ನ ಮೂಲೆಗುಂಪು ಮಾಡಿದ್ದಾರೆ' ಅಂತ ಹಿಂದೊಮ್ಮೆ ಸ್ವತಃ ದೊಡ್ಡ ಗಣೇಶ್ ರವರೇ ನೋವಿನಿಂದ ಹೇಳಿದ್ದು ಅನೇಕರಿಗೆ ಗೊತ್ತಿರಬಹುದು. ಆದ್ರೆ, ಇಂಗ್ಲೆಂಡ್ ವಿರುದ್ಧ ಮ್ಯಾಚ್ ಆಡಲು ಒಂದೇ ಒಂದು ಚಾನ್ಸ್ ಪಡೆಯಲು ದೊಡ್ಡ ಗಣೇಶ್ 'ಕೂಲಿ' ಮಾಡಿದ್ದರು ಎಂಬ ಸತ್ಯ ಸಂಗತಿ ಎಷ್ಟು ಜನರಿಗೆ ಗೊತ್ತು?

  ತಮ್ಮ ಸುದೀರ್ಘ ಕ್ರಿಕೆಟ್ ಕೆರಿಯರ್ ನಲ್ಲಿ ಭಾರತ ತಂಡದ ಪರವಾಗಿ ದೊಡ್ಡ ಗಣೇಶ್ ಆಡಿರುವುದು ಕೇವಲ ನಾಲ್ಕು ಟೆಸ್ಟ್ ಮತ್ತು ಒಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಮಾತ್ರ. ಇಂಗ್ಲೆಂಡ್ ವಿರುದ್ಧ ಆಡುವ ಸಮಯ ಬಂದಾಗ ಕ್ರಿಕೆಟರ್ ದೊಡ್ಡ ಗಣೇಶ್ ಪಟ್ಟ ಸಂಕಷ್ಟ ಮತ್ತು ಮಾಡಿದ 'ಸಮರ್ಪಣೆ', 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಅನಾವರಣ ಆಗಿದೆ. ['ಬಿಗ್ ಬಾಸ್ ಕನ್ನಡ-4' ಕುರಿತ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

  ಜೀವನದಲ್ಲಿ ತಾವು ಮಾಡಿರುವ 'ಸಮರ್ಪಣೆ' ಬಗ್ಗೆ ಬಾಯ್ಬಿಡುವ ಸದಾವಕಾಶವನ್ನ ಸ್ಪರ್ಧಿಗಳಿಗೆ 'ಬಿಗ್‌ ಬಾಸ್' ಮೂರನೇ ದಿನ ಕಲ್ಪಿಸಿಕೊಟ್ಟರು. ಅದರಂತೆ, ತಾವು ಮಾಡಿದ 'ತ್ಯಾಗ' ಅಥವಾ 'ಸಮರ್ಪಣೆ' ಬಗ್ಗೆ ಸ್ಪರ್ಧಿಗಳು ಹೇಳತೊಡಗಿದಾಗ, ದೊಡ್ಡ ಗಣೇಶ್ ಕೂಡ 'ಇಂಗ್ಲೆಂಡ್ ಚ್ಯಾಪ್ಟರ್' ಓಪನ್ ಮಾಡಿದರು. ಓವರ್ ಟು ದೊಡ್ಡ ಗಣೇಶ್.....

  ಇಂಗ್ಲೆಂಡ್ ವಿರುದ್ಧ ಆಡಲು ಅವಕಾಶ ಕೊಡಲಿಲ್ಲ.!

  ಇಂಗ್ಲೆಂಡ್ ವಿರುದ್ಧ ಆಡಲು ಅವಕಾಶ ಕೊಡಲಿಲ್ಲ.!

  ''ದೇಶಕ್ಕೆ ಮತ್ತು ರಾಜ್ಯದ ಪರ ಆಡಿದ ನಂತರ ಇಂಗ್ಲೆಂಡ್ ವಿರುದ್ಧ ಮ್ಯಾಚ್ ಆಡಲು ಅವಕಾಶ ಕೊಡಿ ಅಂತ ನಾನು ನನ್ನ ಸೀನಿಯರ್ಸ್ ಬಳಿ ತುಂಬಾ ಕೇಳಿಕೊಂಡೆ. ಕೆಲವರು ಚಾನ್ಸ್ ಕೊಡ್ತೀವಿ ಅಂತ ಹೇಳಿ ಕೇಳಿ ಕೊನೆಗೆ ಕೊಡಲೇ ಇಲ್ಲ. ಕಡೆಗೆ ನನ್ನ ದುಡ್ಡಲ್ಲಿ, ನಾನೇ ಇಂಗ್ಲೆಂಡ್ ಗೆ ಹೋದೆ'' - ದೊಡ್ಡ ಗಣೇಶ್ [ಕ್ರಿಕೆಟರ್ ದೊಡ್ಡ ಗಣೇಶ್ ಗೆ ಹೊಸ ಬಯಕೆ: ಏನು ಅಂತ ಒಸಿ ಕೇಳಿ...]

  ಬಂದ ಹಣದಲ್ಲಿ ಶೂ ಖರೀದಿ

  ಬಂದ ಹಣದಲ್ಲಿ ಶೂ ಖರೀದಿ

  ''ಇಲ್ಲಿ ಕೂಲಿ ಕೆಲಸ ಅಂದ್ರೆ ಕೇವಲವಾಗಿ ನೋಡ್ತಾರೆ, ಆದರೂ ಭಾರತದಲ್ಲಿ ಯಾರಿಗೂ ಹೇಳದೆ, ನಾನು ಇಂಗ್ಲೆಂಡ್ ಗೆ ಹೋಗಿ, ಅಲ್ಲಿ ಕೂಲಿ ಕೆಲಸ ಮಾಡ್ತಿದ್ದೆ. ಅಲ್ಲಿ ಪ್ರತಿದಿನಕ್ಕೆ ಐವತ್ತು ಪೌಂಡ್ ಕೊಡ್ತಿದ್ರು. ಅದನ್ನೆಲ್ಲಾ ಕೂಡಿಟ್ಟು ಪ್ಯಾಡು, ಶೂಸ್ ಕೊಂಡುಕೊಂಡೆ'' - ದೊಡ್ಡ ಗಣೇಶ್

  ಶೂ ಕೊಟ್ಬಿಟ್ಟೆ!

  ಶೂ ಕೊಟ್ಬಿಟ್ಟೆ!

  ''ನಾನು ಆಗ ಇಂಡಿಯನ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡ್ತಿದ್ದೆ. ಆಗ ದೆಹಲಿಯಲ್ಲಿ ಮ್ಯಾಚ್ ಇತ್ತು. ಆಗ ಬರೋಡಾದ ಒಬ್ಬರು ಫಾಸ್ಟ್ ಬೌಲರ್ ಇದ್ದರು. ಅವರನ್ನ ನೋಡಿ, ಇವರು ಭಾರತಕ್ಕೆ ಆಡಬಹುದು ಅಂತ ನನ್ನ ಬಳಿ ಇದ್ದ ಶೂಸ್ ನ ಅವರಿಗೆ ಕೊಟ್ಟೆ. ನನಗೂ ಒಂದ್ಕಾಲದಲ್ಲಿ ಇನ್ನೊಬ್ಬರು ಶೂಸ್ ಕೊಟ್ಟಿದ್ದರು'' - ದೊಡ್ಡ ಗಣೇಶ್

  ಇರ್ಲಿಲ್ಲ ಅಂದ್ರೂ ಕೊಟ್ಟೆ!

  ಇರ್ಲಿಲ್ಲ ಅಂದ್ರೂ ಕೊಟ್ಟೆ!

  ''ನನಗೆ ಇರಲಿಲ್ಲ ಅಂದ್ರೂ ನಾನು ಅವರಿಗೆ ಕೊಟ್ಟೆ. ನೆಕ್ಸ್ಟ್ ವರ್ಷ ಅವರು ಭಾರತದ ಪರ ಆಡಿದರು. ನನಗೆ ಅದೊಂದು ಖುಷಿ'' - ದೊಡ್ಡ ಗಣೇಶ್

  English summary
  Bigg Boss Kannada 4, Day 3 Highlights: Former Indian Fast Bowler Dodda Ganesh revealed his sacrifice during England Tournament.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X