For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟರ್ ದೊಡ್ಡ ಗಣೇಶ್ ಗೆ ಹೊಸ ಬಯಕೆ: ಏನು ಅಂತ ಒಸಿ ಕೇಳಿ...

  By Harshitha
  |

  ದೊಡ್ಡ ನರಸಯ್ಯ ಗಣೇಶ್...ಭಾರತ ಕ್ರಿಕೆಟ್ ತಂಡದ ಪರ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ ಅನುಭವವುಳ್ಳ ಕರ್ನಾಟಕದ ಹೆಮ್ಮೆಯ ಬಲಗೈ ವೇಗದ ಬೌಲರ್.

  ಸಿಕ್ಕ ಸುವರ್ಣಾವಕಾಶದಲ್ಲಿ ನಾಲ್ಕು ಟೆಸ್ಟ್ ಹಾಗೂ ಒಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿರುವ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 365ಕ್ಕೂ ಹೆಚ್ಚು ವಿಕೆಟ್ ಕಬಳಿಸಿರುವ ದೊಡ್ಡ ಗಣೇಶ್ ಇದೀಗ 'ಬಿಗ್ ಬಾಸ್' ಮನೆ ಗೃಹಪ್ರವೇಶ ಮಾಡಿದ್ದಾರೆ. ['ಬಿಗ್ ಬಾಸ್ ಕನ್ನಡ-4' ಕುರಿತ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಕರ್ನಾಟಕದ ಜನತೆಯನ್ನ ಕ್ಲೀನ್ ಬೌಲ್ಡ್ ಮಾಡುವ ತವಕದಲ್ಲಿರುವ ದೊಡ್ಡ ಗಣೇಶ್ ರವರಿಗೆ 'ಹೀರೋ' ಬಯಕೆ ಇದೆ. ಅದನ್ನ ನಟಿ ಸಂಜನಾ ರವರ ಜೊತೆ ಖುದ್ದು ದೊಡ್ಡ ಗಣೇಶ್ ಹೇಳಿಕೊಂಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಮೂರನೇ ದಿನ, ದೊಡ್ಡ ಗಣೇಶ್ ಮತ್ತು ಸಂಜನಾ ನಡುವೆ ನಡೆದ ಮಾತಿನ ಸಂಭಾಷಣೆ ಇಲ್ಲಿದೆ ಓದಿರಿ....

  ನನಗೂ ಆಕ್ಟಿಂಗ್ ಕಲಿಸಿ...

  ನನಗೂ ಆಕ್ಟಿಂಗ್ ಕಲಿಸಿ...

  ದೊಡ್ಡ ಗಣೇಶ್ - ''ನನಗೂ ಸ್ವಲ್ಪ ಆಕ್ಟಿಂಗ್ ಕಲಿಸಿ, ನಾವು ಆಕ್ಟಿಂಗ್ ಮಾಡೋಣ. ಮಾಡಬಹುದಾ ಆಕ್ಟಿಂಗ್ ನಾವು?''
  ಸಂಜನಾ - ''ಹ್ಹೂಂ...ಶರತ್ ಲೋಹಿತಾಶ್ವ ತರಹ ಹೈಟು-ಪರ್ಸನಾಲಿಟಿ ಇದೆ ನಿಮಗೆ. ಖಂಡಿತ ಮಾಡಬಹುದು''
  ದೊಡ್ಡ ಗಣೇಶ್ - ''ನಾನು ಹೀರೋ ಆಗ್ಬೇಕು ಅಂತಿದ್ದೀನಿ. ಯಾಕೆ ಝೀರೋ ಮಾಡ್ತಿದ್ದೀಯಾ?''
  ಸಂಜನಾ - ''ಹೀರೋ.?! ಓಕೆ''

  ಯಾರ್ಯಾರೋ ಹೀರೋ ಆಗ್ತಾರಂತೆ!

  ಯಾರ್ಯಾರೋ ಹೀರೋ ಆಗ್ತಾರಂತೆ!

  ದೊಡ್ಡ ಗಣೇಶ್ - ''ಏನೇನು ಬೇಕು ಹೀರೋ ಆಗೋಕೆ?''
  ಸಂಜನಾ - ''ಇವಾಗೇನು, ಯಾರ್ಯಾರೋ ಹೀರೋ ಅಗ್ತಾರೆ. ನೋಡಿದವರೆಲ್ಲಾ ಹೀರೋ ಆಗ್ತಾರೆ''

  ದುಡ್ಡು ಕೂಡ ಹಾಕ್ತಾರೆ.!

  ದುಡ್ಡು ಕೂಡ ಹಾಕ್ತಾರೆ.!

  ದೊಡ್ಡ ಗಣೇಶ್ - ''ಅವರೆಲ್ಲಾ ಹೀರೋ ಆಗುವಾಗ, ನಾನೂ ಆಗಬಹುದಲ್ವಾ? ಎಷ್ಟು ಹಾಕಬೇಕು ದುಡ್ಡು?''
  ಸಂಜನಾ - ''ನೀವೇ ಪ್ರೊಡ್ಯೂಸ್ ಮಾಡ್ತೀರಾ?''
  ದೊಡ್ಡ ಗಣೇಶ್ - ''ಹೌದು''
  ಸಂಜನಾ - ''ಆಂತಹ ಕೆಲಸ ಮಾತ್ರ ಮಾಡ್ಬೇಡಿ''

  ಒನ್ ಮ್ಯಾನ್ ಶೋ

  ಒನ್ ಮ್ಯಾನ್ ಶೋ

  ದೊಡ್ಡ ಗಣೇಶ್ - ''ನಾನೇ ಡೈರೆಕ್ಟರ್. ನಾನೇ ಪ್ರೊಡ್ಯೂಸ್ ಮಾಡ್ತೀನಿ, ನಾನೇ ಹೀರೋ''
  ಸಂಜನಾ - ''ಅದರ ಬದಲು ಸೀರಿಯಲ್ ಪ್ರೊಡ್ಯೂಸ್ ಮಾಡಿ, ಮೂವಿ ಮಾತ್ರ ಪ್ರೊಡ್ಯೂಸ್ ಮಾಡ್ಬೇಡಿ''

  ಜೀವನಚರಿತ್ರೆಯೇ ಸಿನಿಮಾ!

  ಜೀವನಚರಿತ್ರೆಯೇ ಸಿನಿಮಾ!

  ದೊಡ್ಡ ಗಣೇಶ್ - ''ನನ್ನದೇ ಲೈಫ್ ಸ್ಟೋರಿಯನ್ನ ಇಟ್ಕೊಂಡು ಸಿನಿಮಾ ಮಾಡೋಣ ಅಂತಿದ್ದೀನಿ''
  ಸಂಜನಾ - ''ಎಕ್ಸ್ಟ್ರಾಡಿನರಿ ಆಗಿದ್ರೆ, ಟ್ರೈ ಮಾಡಬಹುದು''

  English summary
  Bigg Boss Kannada 4, Day 3 Highlights: Former Indian Fast Bowler Dodda Ganesh wants to learn acting and become Hero. He also expressed his desire to Produce and Direct a movie based on his life story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X