»   » 'ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!

'ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!

Posted By:
Subscribe to Filmibeat Kannada

ಯಾವುದು ಆಗಬಾರದು ಅಂತ ಸ್ವತಃ 'ಬಿಗ್ ಬಾಸ್' ಅಂದುಕೊಂಡಿದ್ರೋ, ಅದು ನಡೆದೇ ಹೋಯ್ತು. ಒಂದು ಬಾರಿ ಎಡವಟ್ಟು ಮಾಡಿಕೊಂಡು 'ಬಿಗ್ ಬಾಸ್' ಮನೆಯಿಂದ ಕಿಕ್ ಔಟ್ ಆಗಿದ್ದ 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್, ಮತ್ತೊಮ್ಮೆ 'ಬಿಗ್ ಬಾಸ್' ಮನೆಗೆ ತೆರಳಿ ಅದೇ ತಪ್ಪು ಮಾಡಿ ಬಂದಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?]

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಆಗಿ ಭಾಗವಹಿಸಿದ್ದ ಹುಚ್ಚ ವೆಂಕಟ್, 'ಒಳ್ಳೆ ಹುಡುಗ' ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರೆ.

'ಬಿಗ್ ಬಾಸ್' ಕೊಟ್ಟಿದ್ದ ಟಾಸ್ಕ್ ಏನು.?

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 37ನೇ ದಿನ 'ಧೈರ್ಯಂ ಸರ್ವತ್ರ ಸಾಧನಂ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಅನುಸಾರ 'ಅತ್ತಿತ್ತ ತಿರುಗಿ ನೋಡದಿರು' ಎಂಬ ಮೊದಲನೇ ಚಟುವಟಿಕೆ ಚಾಲ್ತಿಯಲ್ಲಿತ್ತು. ಇದರ ಪ್ರಕಾರ, ಮನೆಯ ಎಲ್ಲಾ ಸದಸ್ಯರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು, ಏಕಾಗ್ರತೆ ಕಳೆದುಕೊಳ್ಳಬಾರದು. ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ ತಮ್ಮ ಪಾಡಿಗೆ ತಾವು ಸಹಜವಾಗಿ ಇರಬೇಕು ಎಂಬ ನಿಯಮ ವಿಧಿಸಲಾಗಿತ್ತು.

ಮೊದಲು ಬಂದ 'ಬಂಗಾರಿ' ಧಾರಾವಾಹಿ ತಂಡ.!

'ಅತ್ತಿತ್ತ ತಿರುಗಿ ನೋಡದಿರು' ಚಟುವಟಿಕೆಯಲ್ಲಿ 'ಬಿಗ್ ಬಾಸ್' ಮನೆ ಸದಸ್ಯರ ಏಕಾಗ್ರತೆ ಪರೀಕ್ಷಿಸಲು 'ಬಂಗಾರಿ' ಧಾರಾವಾಹಿ ತಂಡ ಮೊದಲು ಭೇಟಿ ಕೊಡ್ತು.

ನಂತರ ಬಂದ ಹುಚ್ಚ ವೆಂಕಟ್.!

'ಬಂಗಾರಿ' ತಂಡ ವಾಪಸ್ ತೆರಳಿದ ಬಳಿಕ 'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿ ಆಗಿ ಆಗಮಿಸಿದವರು ಹುಚ್ಚ ವೆಂಕಟ್. ನೀಲಿ ಶರ್ಟು, ಕಪ್ಪು ಪ್ಯಾಂಟು ಧರಿಸಿ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದರು ಹುಚ್ಚ ವೆಂಕಟ್. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಕಾರುಣ್ಯ ರಾಮ್ ಗೆ ಪಾಠ

ತುಂಡು ಬಟ್ಟೆ ಧರಿಸದಂತೆ ನಟಿ ಕಾರುಣ್ಯ ರಾಮ್ ಗೆ ಹುಚ್ಚ ವೆಂಕಟ್ ಪಾಠ ಮಾಡಿದರು. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ಸಂಜನಾ ಮುಂದೆ ಅದೇ ಕಥೆ

''ತುಂಡು ಬಟ್ಟೆ ಧರಿಸಿದರೆ ಮಕ್ಕಳು ಹಾಳಾಗುತ್ತಾರೆ, 'ಬಿಗ್ ಬಾಸ್'ನ ಎಲ್ಲರೂ ನೋಡುತ್ತಾರೆ'' ಅಂತ ಸಂಜನಾಗೂ ಹುಚ್ಚ ವೆಂಕಟ್ ಕ್ಲಾಸ್ ತೆಗೆದುಕೊಂಡರು.

ಕೊನೆಗೆ ಪ್ರಥಮ್ ಪಕ್ಕ ಕೂತ ಹುಚ್ಚ ವೆಂಕಟ್

ಕೊನೆಗೆ ಪ್ರಥಮ್ ಪಕ್ಕ ಬಂದು ಕೂತ ಹುಚ್ಚ ವೆಂಕಟ್, 'ಕನ್ನಡ ರಾಜ್ಯೋತ್ಸವ' ಮತ್ತು 'ಕೆಂಪು ಸ್ಕರ್ಟ್' ಟಾಪಿಕ್ ತೆಗೆದು ಪ್ರಥಮ್ ಗೆ ಪಂಚ್ ಕೊಟ್ಟರು.

ಗಾರ್ಡ್ ಗಳಿದ್ದರೂ...ಹೀಗೆ ಆಯ್ತು.!

ಇಂತಹ ಅವಾಂತರ ಆಗಬಾರದು ಅಂತ ಹುಚ್ಚ ವೆಂಕಟ್ ಬೆನ್ನಹಿಂದೆ ಗಾರ್ಡ್ ಗಳನ್ನ ಇರಿಸಲಾಗಿತ್ತು. ಹೀಗಿದ್ದರೂ, ಪ್ರಥಮ್ ಗೆ ಹುಚ್ಚ ವೆಂಕಟ್ ಪಂಚ್ ಕೊಟ್ಟಿದ್ದಾರೆ.

ಪ್ರಥಮ್ ಗೆ ಏನೂ ಆಗಿಲ್ಲ.!

ಪ್ರಥಮ್ ಮೇಲೆ ಹುಚ್ಚ ವೆಂಕಟ್ ಕೈ ಮಾಡುತ್ತಿದ್ದ ಹಾಗೆ, ಹುಚ್ಚ ವೆಂಕಟ್ ರನ್ನ ಮನೆಯಿಂದ 'ಬಿಗ್ ಬಾಸ್' ಹೊರಗೆ ಕಳುಹಿಸಿದರು. ಪ್ರಥಮ್ ರನ್ನ ಕನ್ಫೆಶನ್ ರೂಮ್ ಒಳಗೆ ಕರೆದು 'ಬಿಗ್ ಬಾಸ್' ಯೋಗಕ್ಷೇಮ ವಿಚಾರಿಸಿದರು. ಪ್ರಥಮ್ ಹೇಳಿಕೆ ನೀಡಿದ ಪ್ರಕಾರ, ಅವರಿಗೆ ಪೆಟ್ಟಾಗಿಲ್ಲ.

ಕಳೆದ ಬಾರಿ ಹೀಗೇ ಮಾಡಿದ್ದ ಹುಚ್ಚ ವೆಂಕಟ್.!

'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿ ಹುಚ್ಚ ವೆಂಕಟ್ ಕಿಕ್ ಔಟ್ ಆಗಿದ್ದರು. ಇಷ್ಟಾದರೂ, ಬುದ್ಧಿ ಕಲಿಯದ ಹುಚ್ಚ ವೆಂಕಟ್ ರಿಯಾಲಿಟಿ ಶೋನಲ್ಲಿ ಮತ್ತೊಮ್ಮೆ 'ಪಂಚ್' ಕೊಟ್ಟು ಕುಖ್ಯಾತಿ ಗಳಿಸಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

ಹುಚ್ಚ ವೆಂಕಟ್ ವಿರುದ್ಧ ಟೀಕೆ.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ರವರ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

English summary
Bigg Boss Kannada 4, Week 6 : Day 37 - Youtube Star Huccha Venkat makes guest entry and assaults Kannada Director Huccha Venkat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada