For Quick Alerts
  ALLOW NOTIFICATIONS  
  For Daily Alerts

  ಓಂ ಪ್ರಕಾಶ್ ರಾವ್ ಮುಂಗೋಪಿ: ತಲೆ ಕೆಟ್ಟರೆ, ಒದೆ ಗ್ಯಾರೆಂಟಿ.!

  By Harshitha
  |

  ನಿರ್ದೇಶಕ ಓಂ ಪ್ರಕಾಶ್ ರಾವ್ ರವರ ಎಡವಟ್ಟುಗಳು, ವಿವಾದಗಳು ಒಂದೆರಡಲ್ಲ. ಅವೆಲ್ಲವೂ ಗಾಂಧಿನಗರಕ್ಕೆ ಚಿರಪರಿಚಿತ. ಮೈಂಡ್ ಗೂ ನಾಲಿಗೆ ಗೂ ಫಿಲ್ಟರ್ ಇಲ್ಲದೆ ಮಾತನಾಡುವ ಓಂ ಪ್ರಕಾಶ್ ರಾವ್ ಮಾಧ್ಯಮಗಳ ಕೆಂಗಣ್ಣಿಗೂ ಗುರಿಯಾಗಿರುವ ನಿದರ್ಶನ ಇದೆ.

  ಈಗ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿ ಪಾಲ್ಗೊಂಡಿರುವ ಓಂ ಪ್ರಕಾಶ್ ರಾವ್, ಮೊದಲ ದಿನ 'ಬಿಗ್ ಬಾಸ್' ಮನೆಯಲ್ಲಿ ಆದಷ್ಟು ಸೈಲೆಂಟ್ ಆಗಿ ಇದ್ದರು. ಹಾಗಂದ ಮಾತ್ರಕ್ಕೆ ಅವರು ಸೌಮ್ಯ ಸ್ವಭಾವದವರು ಅಂತ ಭಾವಿಸಬೇಡಿ. ಅವರಿಗೆ ತಲೆ ಕೆಟ್ಟರೆ ಕಪ್ಪಾಳಕ್ಕೆ ಹೊಡೆದು ಬಿಡುತ್ತಾರೆ.! ['ಬಿಗ್ ಬಾಸ್' ಮನೆಗೆ 'ಕರೆಂಟ್' ಬಂದ ಹಾಗೆ ಬಂದ ಓಂ ಪ್ರಕಾಶ್ ರಾವ್.!]

  ಹೀಗಂತ ಹೇಳಿದವರು ನಟ, ನಿರ್ದೇಶಕ ಮೋಹನ್. ಓಂ ಪ್ರಕಾಶ್ ರಾವ್ ಬಗ್ಗೆ ನಿರಂಜನ್ ದೇಶಪಾಂಡೆ ಹಾಗೂ ಮೋಹನ್ ನಡುವೆ ನಡೆದ ಸಂಭಾಷಣೆ ಇಲ್ಲಿದೆ ಓದಿರಿ....

  ಓಂ ಪ್ರಕಾಶ್ ರಾವ್ ಬಗ್ಗೆ ಪ್ರಥಮ್ ಹೇಳಿದ್ದೇನು?

  ಓಂ ಪ್ರಕಾಶ್ ರಾವ್ ಬಗ್ಗೆ ಪ್ರಥಮ್ ಹೇಳಿದ್ದೇನು?

  ಮೋಹನ್ : ''ಏನ್ ಧೈರ್ಯ ಗುರು ಅವನಿಗೆ (ಪ್ರಥಮ್)....''ಏನೋ..,ಒಬ್ಬ ಡೈರೆಕ್ಟರ್ ಜೊತೆ ಹಾಗೆ ಮಾತನಾಡುತ್ತೀಯಾ'' ಅಂತ ಕೇಳಿದರೆ...''ನನ್ನ ಮನಃಸ್ಥಿತಿ ತರಹ ಇನ್ನೊಬ್ಬರನ್ನ ಕಳುಹಿಸಿದ್ದಾರಲ್ಲ ಅದೇ ಖುಷಿ ನನಗೆ'' ಅಂತಾನೆ''

  ಓಂ ಪ್ರಕಾಶ್ ರಾವ್ ರವರ ತಲೆ ಕೆಟ್ಟರೆ...

  ಓಂ ಪ್ರಕಾಶ್ ರಾವ್ ರವರ ತಲೆ ಕೆಟ್ಟರೆ...

  ನಿರಂಜನ್ ದೇಶಪಾಂಡೆ : ''ಓಂ ಪ್ರಕಾಶ್ ರಾವ್ ರವರು ಟೈಮ್ ತೆಗೆದುಕೊಳ್ಳುತ್ತಿದ್ದಾರೆ''

  ಮೋಹನ್ : ''ಅವರಿಗೆ ತಲೆ ಕೆಟ್ಟರೆ ತೆಗೆದು ಕಪ್ಪಾಳಕ್ಕೆ ಬಿಡ್ತಾರೆ.!''

  ನಿರಂಜನ್ : ''ಹೌದಾ.?''

  ಮೋಹನ್ : ''ಹೌದು...ಅಯ್ಯೋ...ಬಹಳ ಮುಂಗೋಪಿ. ಎಷ್ಟು ಸ್ವೀಟ್ ಆಗಿ ಇರ್ತಾರೋ, ಅಷ್ಟೇ ಮುಂಗೋಪಿ. ತೀರಾ ತಲೆ ತಿಂದರೆ ನೋಡೋಷ್ಟು ನೋಡಿ, ಮುಖಕ್ಕೆ ಹೊಡೆದುಬಿಡ್ತಾರೆ''

  ನಿರಂಜನ್ : ''ಆಮೇಲೆ ಇವತ್ತೇ ಎಲಿಮಿನೇಟ್ ಆಗ್ಬಿಡ್ತಾರಲ್ಲ.!''

  ಓಂ ಪ್ರಕಾಶ್ ರಾವ್ ಸಹಿಸಿಕೊಳ್ಳುವುದಿಲ್ಲ.!

  ಓಂ ಪ್ರಕಾಶ್ ರಾವ್ ಸಹಿಸಿಕೊಳ್ಳುವುದಿಲ್ಲ.!

  ಮೋಹನ್ : ''ನಾವು ಸಹಿಸಿಕೊಳ್ಳುವ ತರಹ, ಅವರು (ಓಂ ಪ್ರಕಾಶ್ ರಾವ್) ಸಹಿಸಿಕೊಳ್ಳುವುದಿಲ್ಲ''

  ನಿರಂಜನ್ : ''ಅವರು (ಓಂ ಪ್ರಕಾಶ್ ರಾವ್) ಅಡ್ಜಸ್ಟ್ ಆಗುವುದಕ್ಕಿಂತ ಮುನ್ನವೇ ಎಲಿಮಿನೇಟ್ ಆಗ್ಬಿಡ್ತಾರೆ''

  ಪ್ರಥಮ್ ಸ್ಟ್ರಾಟೆಜಿ ಇರಬಹುದು!

  ಪ್ರಥಮ್ ಸ್ಟ್ರಾಟೆಜಿ ಇರಬಹುದು!

  ನಿರಂಜನ್ : ''ಇವನ (ಪ್ರಥಮ್) ಸ್ಟ್ರಾಟೆಜಿ ಅದೇ ಇರಬೇಕು ಎಲ್ಲರಿಂದ ಒದೆ ತಿಂದು ಎಲಿಮಿನೇಟ್ ಮಾಡಿಸುವುದು. ಹಲ್ಲೆ ಮಾಡಿದರೆ ಔಟ್ ಅಲ್ವಾ? ಹೇಳೋಕೆ ಆಗಲ್ಲ ಅವರು (ಓಂ ಪ್ರಕಾಶ್ ರಾವ್) ಇವತ್ತು ಸಂಜೆ ಔಟ್ ಆಗಬಹುದು''

  English summary
  Bigg Boss Kannada 4, Day 8: Director Mohan and RJ Niranjan Deshpande spoke about Director Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X