»   » ಆರ್.ಜೆ ನಿರಂಜನ್ ಗೆ 'ಬಿಗ್ ಬಾಸ್' ಕೊಟ್ಟ ಸೀಕ್ರೆಟ್ ಟಾಸ್ಕ್ ಏನು?

ಆರ್.ಜೆ ನಿರಂಜನ್ ಗೆ 'ಬಿಗ್ ಬಾಸ್' ಕೊಟ್ಟ ಸೀಕ್ರೆಟ್ ಟಾಸ್ಕ್ ಏನು?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಕಂಡಿರೋ ಮುಖಗಳ ಕಾಣದೇ ಇರೋ ಮುಖ' ಪರಿಚಯ ಮಾಡಿಸಲು ಹೊರಟಿರುವ 'ಬಿಗ್ ಬಾಸ್', ಆರ್.ಜೆ ನಿರಂಜನ್ ದೇಶಪಾಂಡೆಗೆ ಈ ವಾರ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಾರೆ.

ಅದರ ಅನುಸಾರ, 'ಬಿಗ್' ಮನೆಗೆ ಒಂದು ದೂರವಾಣಿ ಕರೆ ಬರಲಿದ್ದು, ನಿರಂಜನ್ ದೇಶಪಾಂಡೆ ರವರನ್ನ 'ಬಿಗ್ ಬಾಸ್' ಕರೆಯಲಿದ್ದಾರೆ. ಆ ದೂರವಾಣಿ ಕರೆಯಲ್ಲಿ ತಮ್ಮ ಭಾವಿ ಪತ್ನಿ ಯಶಸ್ವಿನಿ ಜೊತೆ ಮಾತನಾಡುವಂತೆ ನಿರಂಜನ್ ವರ್ತಿಸಬೇಕು.

Bigg Boss Kannada 4: Day 8: Niranjan Deshpande gets to perform secret task

ಆತ್ಮೀಯ ಮಾತುಕತೆ ಮತ್ತು ತಿಳಿ ಹಾಸ್ಯದ ಮೂಲಕ 'ಬಿಗ್' ಮನೆಯ ಇತರೆ ಸದಸ್ಯರಿಗೆ ಅನುಮಾನ ಬಾರದಂತೆ ನಡೆದುಕೊಳ್ಳುವ ಜವಾಬ್ದಾರಿ ನಿರಂಜನ್ ರದ್ದು. [ನಿರಂಜನ್ ದೇಶಪಾಂಡೆಗೆ ನಟಿ ವಾಣಿಶ್ರೀ ಕೊಟ್ಟ ಶಿಕ್ಷೆ ಇದು.!]

ದೂರವಾಣಿ ಕರೆ ಮುಗಿಯುವ ವೇಳೆಗೆ ನಿಜವಾಗಿಯೂ ಯಶಸ್ವಿನಿ ರವರ ಜೊತೆ ಮಾತನಾಡುತ್ತಿದ್ದಂತೆ ಮನೆಯ ಸದಸ್ಯರನ್ನು ನಿರಂಜನ್ ನಂಬಿಸಬೇಕು. ಸಂಭಾಷಣೆಯನ್ನು ಯಾವಾಗ ಮುಗಿಸಬೇಕು ಎಂಬುದನ್ನು 'ಬಿಗ್ ಬಾಸ್' ತಿಳಿಸುತ್ತಾರೆ.

ಸೀಕ್ರೆಟ್ ಟಾಸ್ಕ್ ವಿಚಾರವನ್ನು ಯಾವುದೇ ಕಾರಣಕ್ಕೂ, ಯಾವುದೇ ಸದಸ್ಯರ ಜೊತೆ ನಿರಂಜನ್ ಹಂಚಿಕೊಳ್ಳುವ ಹಾಗಿಲ್ಲ.

ಈ ಸೀಕ್ರೆಟ್ ಟಾಸ್ಕ್ ನಿಂದ 'ಬಿಗ್ ಬಾಸ್' ಮನೆಯಲ್ಲಿ ಏನೆಲ್ಲಾ ಸತ್ಯಗಳು ಹೊರಬರುತ್ತೋ, ನೋಡೋಣ.

English summary
Bigg Boss Kannada 4, Day 8: RJ Niranjan Deshpande gets to perform secret task in Bigg Boss house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada