»   » 'ಒಳ್ಳೆ ಹುಡುಗ' ಪ್ರಥಮ್ ಮದುವೆ ಆಗುವ ಹುಡುಗಿ ಹೇಗಿರಬೇಕು ಗೊತ್ತಾ.?

'ಒಳ್ಳೆ ಹುಡುಗ' ಪ್ರಥಮ್ ಮದುವೆ ಆಗುವ ಹುಡುಗಿ ಹೇಗಿರಬೇಕು ಗೊತ್ತಾ.?

Posted By:
Subscribe to Filmibeat Kannada

ಬಾಯಿ ತೆಗೆದ್ರೆ, ಬ್ರೇಕ್ ಇಲ್ಲದೆ ಗಂಟೆಗಟ್ಟಲೆ ಮಾತನಾಡುವ ಪ್ರಥಮ್ ಗೆ ಬಾಯಿ ನೋವು ಬರೋದು ಡೌಟು...ಆದ್ರೆ, ಪ್ರಥಮ್ ಬಾಯಿಗೆ ಕಿವಿ ಕೊಟ್ಟು ಕೂತವರಿಗೆ ತಲೆ ನೋವು...ಸ್ವಲ್ಪ ಜಾಸ್ತಿ ಆದರೆ, ಕಿವಿ ತಮಟೆ ಒಡೆದು ರಕ್ತ ಹರಿಯುವುದು ಗ್ಯಾರೆಂಟಿ.!

ಬಾಯಿಬಡುಕ ಪ್ರಥಮ್ ಒಂದೇ ವಾರದಲ್ಲಿ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೆ 'ಸಾಕಪ್ಪಾ...ಸಾಕು' ಎನಿಸಿಬಿಟ್ಟಿದ್ದಾನೆ. ಇನ್ನೂ ಪ್ರಥಮ್ ಕೈ ಹಿಡಿಯುವ ಹುಡುಗಿಯ ಕಥೆ ಹೇಗಿರಬಹುದು ಅಂತ ನೀವೇ ಊಹಿಸಿ....[ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ]

ನಿಮ್ಮ ಊಹೆ ಏನೇ ಇರಲಿ...ಅಸಲಿಗೆ, 'ಮದುವೆ ಆಗುತ್ತಾ' ಎಂಬ ಡೌಟ್ ಸ್ವತಃ ಪ್ರಥಮ್ ಗೆ ಕಾಡುತ್ತಿದೆ.! ಮುಂದೆ ಓದಿ.....

ಮದುವೆ ಬಗ್ಗೆ ಮಾತನಾಡಿದ ಪ್ರಥಮ್

ಪ್ರಥಮ್ : ''ಮೋಹನ್ ಸರ್, ಶೀತಲ್ ಹೇಳಿದ ಹಾಗೆ ಎಲ್ಲವೂ ಆಗುತ್ತಿದೆ. 'ನೀನು ಹೋಗಲ್ಲ ಅಂತ ನನಗೆ ಹೇಳಿದ್ದರು' ಹಾಗೆ ಆಯ್ತು. ಈಗ ಇನ್ನೊಂದು ವೈಯುಕ್ತಿಕ ಪ್ರಶ್ನೆ ಕೇಳುತ್ತೇನೆ, ನನ್ನ ಬಗ್ಗೆ...'ನನಗೆ ಮದುವೆ ಆಗುತ್ತಾ' ಅಂತ ಹೇಳಿ...''

ಶೀತಲ್ ಶೆಟ್ಟಿ : ''ಆಗುತ್ತೆ ಕಣೋ''

[ಬಿಗ್ ಬಾಸ್ 4: ಪ್ರಥಮ್ ಆವಾಜ್, ಮೈಕ್ ಬಿಟ್ಟು ಮನೆ ಬಿಡ್ತೀನಿ ಎಂದ ಕೀರ್ತಿ]

ಹುಡುಗಿ ಹೇಗಿರಬೇಕು?

ಪ್ರಥಮ್ : ''ನನ್ನ ಟೇಸ್ಟ್ ಗೆ ತಕ್ಕ ಹಾಗೆ ಹುಡುಗಿ ಸಿಗುತ್ತಾಳಾ?''

ಶೀತಲ್ ಶೆಟ್ಟಿ : ''ಯಾವ ಟೇಸ್ಟ್ ಅದು.?''

ಪ್ರಥಮ್ : ''ನನ್ನ ಮ್ಯಾನರಿಸಂ ಗೆ ಹೊಂದಾಣಿಕೆ ಮಾಡಿಕೊಂಡು ಹಳ್ಳಿಯಲ್ಲಿ ಇರುತ್ತಾರಲ್ಲಾ ಹಾಗೆ ಇರಬೇಕು''

['ಪ್ರಥಮ್' ಬಿಗ್ ಬಾಸ್ ಎಂಟ್ರಿಗೆ ರಾಜಕಾರಣಿಗಳೆ ಕಾರಣವೇ ?]

ಗರ್ಲ್ ಫ್ರೆಂಡ್ ಇದ್ದಾರಾ?

ಶೀತಲ್ ಶೆಟ್ಟಿ : ''ಯಾರಾದರೂ ಗರ್ಲ್ ಫ್ರೆಂಡ್ ಇದ್ದರಾ ನಿನಗೆ?''

ಪ್ರಥಮ್ : ''ಇಲ್ಲಪ್ಪಾ.!''

['ಒಳ್ಳೆ ಹುಡುಗ' ಪ್ರಥಮ್ ಬಗ್ಗೆ ದೊಡ್ಡ ಗಣೇಶ್ ಮಾಡಿದ ಕಾಮೆಂಟ್ ಏನು.?]

ಬೆಳ್ಳಗಿದ್ದವರೆಲ್ಲಾ ಇಷ್ಟ.!

ಶೀತಲ್ ಶೆಟ್ಟಿ : ''ಯಾರದರೂ ಹುಡುಗಿ ಇಷ್ಟ ಆಗಿದ್ಲಾ.?''

ಪ್ರಥಮ್ : ''ಬೆಳ್ಳಗಿರುವವರೆಲ್ಲಾ ಇಷ್ಟವಾಗುತ್ತಾರೆ''

ಶೀತಲ್ ಶೆಟ್ಟಿ : ''ಕಾರುಣ್ಯ ರಾಮ್ ಇಷ್ಟ ಆಗಿದ್ದಾರಾ ಈಗ?''

ಪ್ರಥಮ್ : ''ನೋಡಿ, ಅದರಲ್ಲಿ ಅಭಿರುಚಿ ಇರುತ್ತೆ. ನನ್ನ ಆತ್ಮಸಾಕ್ಷಿ, ನನ್ನ ಅಭಿರುಚಿಗೆ ಹೊಂದುವ ಬೆಳ್ಳಗಿರುವವರು''

ತಗಲಾಕೊಂಡ ಕಾರುಣ್ಯ ರಾಮ್

ಶೀತಲ್ ಶೆಟ್ಟಿ : ''ನಿನ್ನ ಅಭಿರುಚಿ ಏನು?''

ಪ್ರಥಮ್ : ''ನನ್ನಷ್ಟು ಪ್ರಾಮಾಣಿಕವಾಗಿರಬೇಕು. ಆತ್ಮಸಾಕ್ಷಿ ನಂಬಿಕೊಂಡು ಬದುಕಬೇಕು''

ನಿರಂಜನ್ : ''ಪ್ರಾಮಾಣಿಕ ಅಂತ ಬಂದ್ರೆ ಕಾರುಣ್ಯ ರಾಮ್ ಇದ್ದಾರೆ ಇಲ್ಲಿ''

ಪ್ರಥಮ್ : ''ಅವರ ಅಭಿರುಚಿ ಬೇರೆ, ನನ್ನ ಅಭಿರುಚಿ ಬೇರೆ''

English summary
Bigg Boss Kannada 4, Day 8: Kannada Director Pratham speaks about his marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada