»   » ಹೋಗಿ ಬಂದು ಪ್ರಥಮ್ ಗೆ ಸೂಜಿ ಚುಚ್ಚುವ 'ಬಿಗ್ ಬಾಸ್' ಸ್ಪರ್ಧಿಗಳು.!

ಹೋಗಿ ಬಂದು ಪ್ರಥಮ್ ಗೆ ಸೂಜಿ ಚುಚ್ಚುವ 'ಬಿಗ್ ಬಾಸ್' ಸ್ಪರ್ಧಿಗಳು.!

Posted By:
Subscribe to Filmibeat Kannada

''ಪ್ರಥಮ್ ಒಳ್ಳೆಯ ಪ್ಲೇಯರ್. ಇಲ್ಲಿರುವ ಹಲವಾರು ಜನರಿಗಿಂತಲೂ ಪ್ರಥಮ್ ತುಂಬ ಬೆಟರ್'' ಎಂಬ ಗುಣಗಾನ ಕೇಳಿಬಂದಿದ್ದು ಶಾಲಿನಿ-ಕೀರ್ತಿ ಗ್ಯಾಂಗ್ ನಿಂದಲೇ..! ನೆನಪಿದ್ಯಾ ನಿಮಗೆ..?

ಈಗ ಅದೇ ಶಾಲಿನಿ ಮತ್ತು ಕೀರ್ತಿ, ''ಪ್ರಥಮ್ ತುಂಬಾ ಸ್ಟ್ರಾಟೆಜಿ ಮಾಡುತ್ತಾನೆ. ಫಿನಾಲೆ ವಾರಕ್ಕೆ ಆತ ಹೋಗಲೇಬಾರದು'' ಎಂದು ಹೇಳುತ್ತಾ ಪ್ರಥಮ್ ಗೆ ಮಗದೊಂದು ಬಾರಿ ಸೂಜಿ ಚುಚ್ಚುತ್ತಿದ್ದಾರೆ.[ಪ್ರಥಮ್ ಬಗ್ಗೆ ಶೀತಲ್, ಶಾಲಿನಿ, ರೇಖಾ ಉದುರಿಸಿದ ಮಾತಿನ ಮುತ್ತುಗಳಿವು]

''ತಮ್ಮ ಪ್ರಕಾರ ಯಾವ ಒಬ್ಬ ಸದಸ್ಯರು ಫಿನಾಲೆ ವಾರಕ್ಕೆ ಹೋಗಬಾರದು'' ಎಂಬುದನ್ನು ಸೂಕ್ತ ಕಾರಣಗಳೊಂದಿಗೆ ವಿವರಿಸುವ ವಿಶೇಷ ಚಟುವಟಿಕೆಯೊಂದನ್ನ 'ಬಿಗ್ ಬಾಸ್' ನೀಡಿದರು. ಆಗ ಬಹುತೇಕರ ಬಾಯಲ್ಲಿ ಬಂದ ಹೆಸರೇ ಪ್ರಥಮ್.!

ಕೀರ್ತಿ ಬಾಯಲ್ಲಿ ಬಿಡದೇ ಬರುವ ಹೆಸರು ಪ್ರಥಮ್.!

ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಥಮ್ ರವರನ್ನೇ ಹೆಚ್ಚು ಬಾರಿ ಕೀರ್ತಿ ನಾಮಿನೇಟ್ ಮಾಡಿದ್ದಾರೆ. ಇನ್ನೂ, ಫಿನಾಲೆಗೆ ಯಾರು ಹೋಗಬಾರದು ಅಂತ 'ಬಿಗ್ ಬಾಸ್' ಪ್ರಶ್ನೆ ಕೇಳಿದರೆ, ಕೀರ್ತಿ ಬಾಯಲ್ಲಿ ಬೇರೆ ಹೆಸರಾದರೂ ಹೇಗೆ ತಾನೆ ಬಂದೀತು.? ನೀವೇ ಹೇಳಿ....

ಕೀರ್ತಿ ಕೊಟ್ಟ ವಿವರಣೆ ಏನು.?

''ಆರಂಭದ ಪ್ರಥಮ್ ಗೂ ಈಗಿನ ಪ್ರಥಮ್ ಗೂ ತುಂಬಾ ವ್ಯತ್ಯಾಸ ಇದೆ. ಪ್ರಥಮ್ ಹೇಳುವ ಹಾಗೆ ಇಲ್ಲಿಯವರೆಗೂ ಅವರು ಒಂದು ಗಂಟೆ ಕೂಡ ವೇಸ್ಟ್ ಮಾಡಿಲ್ಲ. ಈ ಆಟವನ್ನು ಸ್ಟ್ರಾಟೆಜಿ ಮಾಡಿಕೊಂಡು ಆಡ್ತಿದ್ದಾರೆ. ನನ್ನ ಪ್ರಕಾರ ನಾವೆಲ್ಲ ನಾವಾಗಿದ್ದುಕೊಂಡು ಇಲ್ಲಿಯವರೆಗೂ ಬಂದ್ವಿ. ಪ್ರಥಮ್ ಸ್ಟ್ರಾಟೆಜಿ ಮಾಡಿಕೊಂಡು ಇಲ್ಲಿಯವರೆಗೂ ಬಂದಿದ್ದಾರೆ. ನನ್ನ ಪ್ರಕಾರ ಫಿನಾಲೆಗೆ ಈ ತರಹದ ಸ್ಟ್ರಾಟೆಜಿ ವರ್ಕ್ ಆಗಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವ ಮಾತ್ರ ವರ್ಕ್ ಆಗುತ್ತದೆ. ಹೀಗಾಗಿ ಪ್ರಥಮ್ ಫಿನಾಲೆಗೆ ಹೋಗಬಾರದು'' ಅಂತ ಕೀರ್ತಿ ಹೇಳಿದರು.[ಇವರೆಲ್ಲ ಫಿನಾಲೆ ವಾರಕ್ಕೆ ಹೋಗಬೇಕಂತೆ.! ಯಾಕಂತೆ.?]

ಶಾಲಿನಿಗೂ ಬೇರೆ ಹೆಸರು ಹೊಳೆಯಲಿಲ್ಲ.!

''ಒಬ್ಬರನ್ನ ಬೇರೆ ರೂಪದಲ್ಲಿ ತೋರಿಸಬೇಕು ಎನ್ನುವ ಪ್ರಯತ್ನ ಪ್ರಥಮ್ ಮಾಡುತ್ತಾರೆ. ಹೀಗಾಗಿ ಪ್ರಥಮ್ ಫಿನಾಲೆ ವಾರಕ್ಕೆ ಹೋಗಬಾರದು ಎಂಬ ಫೀಲಿಂಗ್ ನನ್ನದು'' ಅಂತ ಹೇಳಿದರು ಶಾಲಿನಿ.

ಮಾಳವಿಕಾ ಹೆಸರು ಹೇಳಿದ ರೇಖಾ

''ಫಿನಾಲೆಗೆ ಮಾಳವಿಕಾ ಹೋಗಬಾರದು. ಕೆಲವು ಆಟಗಳಲ್ಲಿ ಸೋತಾಗ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಲಿಲ್ಲ'' ಎಂದರು ರೇಖಾ

'ಕನ್ನಿಂಗ್' ಪಾಯಿಂಟ್ ಎತ್ತಿದ ಮಾಳವಿಕಾ

''ನಾನು ಇರೋದೇ ಕನ್ನಿಂಗ್ ಅಂತ ಹೇಳಿಕೊಳ್ಳುವ ಏಕೈಕ ಹುಡುಗ ಪ್ರಥಮ್. ಕನ್ನಿಂಗ್ ಅನ್ನೋದು ನೆಗೆಟಿವ್ ಅಲ್ಲ ಪಾಸಿಟಿವ್ ಅಂತ ಅಂದುಕೊಂಡಿದ್ದಾನೆ. ಆಟ ಗೆಲ್ಲಬಹುದೇನೋ, ಈ ಧೋರಣೆ ಇಟ್ಟುಕೊಂಡು ಹೋಗಬೇಕಾ.? ಇದು ಬೇಡ ಅಂತ ನನಗೆ ಅನ್ಸುತ್ತೆ'' - ಮಾಳವಿಕಾ ಅವಿನಾಶ್

ಪ್ರಥಮ್ ಕೆಟ್ಟ ನಿದರ್ಶನ.!

''ಮನರಂಜನೆಯಲ್ಲಿ ಪ್ರಥಮ್ ಬೆಸ್ಟ್ ಇರಬಹುದು. ಆದ್ರೆ, ಮನರಂಜನೆ ಜೊತೆಗೆ ಪ್ರಥಮ್ ರಾಂಗ್ ಎಕ್ಸಾಂಪಲ್ ಸೆಟ್ ಮಾಡ್ತಿದ್ದಾರೆ ಅನ್ಸುತ್ತೆ. ಹೀಗಾಗಿ ಅವರು ಫಿನಾಲೆಗೆ ಹೋಗಬಾರದು'' - ಭುವನ್ ಪೊನ್ನಣ್ಣ

ಫೈನಲ್ ಗೆ ಭುವನ್ ಹೋಗ್ಬಾರ್ದು.!

''ಭುವನ್ ಫಿನಾಲೆಗೆ ಹೋಗಬಾರದು ಅಂತ ಹೇಳುತ್ತೇನೆ'' - ಪ್ರಥಮ್

English summary
Bigg Boss Kannada 4, Week 13 : Contestants targets Pratham as they don't want him to go to Grand Finale week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada