»   » ಹುಚ್ಚಾಸ್ಪತ್ರೆ ಆದ 'ಬಿಗ್ ಬಾಸ್' ಮನೆ: ಯಾರಿಗೆ ಯಾವ ರೋಗ.?

ಹುಚ್ಚಾಸ್ಪತ್ರೆ ಆದ 'ಬಿಗ್ ಬಾಸ್' ಮನೆ: ಯಾರಿಗೆ ಯಾವ ರೋಗ.?

Posted By:
Subscribe to Filmibeat Kannada

ಆಸ್ಪತ್ರೆಯಲ್ಲಿ ನಡೆಯುವ ಹಾಸ್ಯ ಸಂಗತಿಗಳನ್ನು ತಿಳಿಸುವ ಸಲುವಾಗಿ 'ಬಿಗ್ ಬಾಸ್' ಈ ವಾರ 'ಐ.ಸಿ.ಯು' (ಇನ್ಟೆನ್ಸಿವ್ ಕ್ರಿಯೇಟಿವ್ ಯುನಿಟ್) ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದಾರೆ.

ಇದರ ಅನುಸಾರ ಮನೆಯ ಸದಸ್ಯರು ಸೀನಿಯರ್ ಡಾಕ್ಟರ್, ಜೂನಿಯರ್ ಡಾಕ್ಟರ್, ನರ್ಸ್, ವಾರ್ಡ್ ಬಾಯ್ ಮತ್ತು ರೋಗಿಗಳ ಪಾತ್ರ ನಿರ್ವಹಿಸಬೇಕು. 'ಬಿಗ್ ಬಾಸ್' ನೀಡಿದ ಸೂಚನೆಯ ಅನುಸಾರ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ, ತಿಳಿ ಹಾಸ್ಯದ ಮೂಲಕ ಮನರಂಜನೆ ನೀಡುವ ಜವಾಬ್ದಾರಿ ಎಲ್ಲಾ ಸ್ಪರ್ಧಿಗಳದ್ದು. ['ಬಿಗ್ ಬಾಸ್ ಕನ್ನಡ-4' ಕುರಿತ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

ಟಾಸ್ಕ್ ಗಾಗಿ ಮನೆಯಲ್ಲಿ ಎರಡು ವಿಶೇಷ ವಾರ್ಡ್ ಗಳನ್ನ ಮಾಡಲಾಗಿದೆ. ವಿಐಪಿ ವಾರ್ಡ್ ನಲ್ಲಿ ರೋಗಿಗಳಿಗೆ ಆಟದ ಸಾಮಗ್ರಿ ನೀಡುವ ಮತ್ತು ಲಾಲಿ ಹಾಡನ್ನ ಹಾಡಿ ಮಲಗಿಸುವಂತಹ ವಿಶೇಷ ಚಿಕಿತ್ಸೆ ನೀಡಿದ್ರೆ, ಜನರಲ್ ವಾರ್ಡ್ ನಲ್ಲಿ ರೋಗಿಗಳಿಗೆ ಬೇಕಾಬಿಟ್ಟಿ ಟ್ರೀಟ್ಮೆಂಟ್.

ಹಾಗಾದ್ರೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಎರಡನೇ ವಾರದ 'ಐ.ಸಿ.ಯು' ಟಾಸ್ಕ್ ನಲ್ಲಿ ಯಾರ್ಯಾರಿಗೆ ಯಾವ ಯಾವ ಪಾತ್ರಗಳು ಸಿಕ್ಕಿರಬಹುದು ಎಂಬ ಕುತೂಹಲ ಇದ್ರೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.....

ವೃತ್ತಿಗೆ ತಕ್ಕ ಪಾತ್ರ ನೀಡಿರುವ 'ಬಿಗ್ ಬಾಸ್'

ಮನೆಯ ಸದಸ್ಯರ ವೃತ್ತಿ ಹಾಗೂ ವ್ಯಕ್ತಿತ್ವಕ್ಕೆ ತಕ್ಕ ಮಾನಸಿಕ ಕಾಯಿಲೆಯನ್ನೇ ಪಾತ್ರವಾಗಿ ನೀಡಿರುವುದರಿಂದ, 'ಬಿಗ್ ಬಾಸ್' ಮನೆಯಲ್ಲಿ ನೈಜವಾಗಿ ಹಾಸ್ಯದ ಹೊಳೆ ಹರಿಯುತ್ತಿದೆ.

ವೈದ್ಯರು ಯಾರ್ಯಾರು?

ಸೀನಿಯರ್ ಡಾಕ್ಟರ್ ನಟಿ ರೇಖಾ ಮತ್ತು ಜೂನಿಯರ್ ಡಾಕ್ಟರ್ ಗಳಾದ ಚೈತ್ರ ಮತ್ತು ನಿರಂಜನ್ ದೇಶಪಾಂಡೆ ರೋಗಿಗಳ ಶುಶ್ರೂಷೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. [ಆರ್.ಜೆ ನಿರಂಜನ್ ಗೆ 'ಬಿಗ್ ಬಾಸ್' ಕೊಟ್ಟ ಸೀಕ್ರೆಟ್ ಟಾಸ್ಕ್ ಏನು?]

ನರ್ಸ್ - ವಾರ್ಡ್ ಬಾಯ್ ಕಥೆ ಗೊತ್ತಾ?

'ಬಿಗ್ ಬಾಸ್' ಮನೆಯಲ್ಲಿ ಸದಾ 'ಜಂಟಿ'ಯಾಗಿ ಕೂತು ಮಾತನಾಡುವ ಸಂಜನಾ 'ಐಸಿಯು' ಟಾಸ್ಕ್ ನಲ್ಲಿ ನರ್ಸ್ ಆಗಿದ್ದಾರೆ. ಅವರಿಗೆ ವಾರ್ಡ್ ಬಾಯ್ ಆಗಿ ಭುವನ್ ಪೊನ್ನಣ್ಣ ಎಲ್ಲಾ ಕೆಲಸಗಳಿಗೂ ಸಹಾಯ ಮಾಡಬೇಕು.

ಮಾಳವಿಕಾ ಅವಿನಾಶ್ ಗೆ 'ಲಾ' ಪ್ರಾಬ್ಲಂ

ಮಾತು ಮಾತಿಗೂ ಲಾ ಸೆಕ್ಷನ್ ಹೇಳುವ, ಎಲ್ಲಾ ಸಂದರ್ಭದಲ್ಲೂ ಪುಕ್ಕಟೆ ಕಾನೂನು ಸಲಹೆ ನೀಡುವ ರೋಗಿ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ನಟಿಸುತ್ತಿದ್ದಾರೆ.

'ಲಾಫಿಂಗ್ ಮಷಿನ್' ಶಾಲಿನಿ

ಸದಾ ನಗು-ನಗುತ್ತಿರುವ ಶಾಲಿನಿ ರವರನ್ನ 'ಲಾಫಿಂಗ್ ಮಷಿನ್' ಮಾಡಿದ್ದಾರೆ 'ಬಿಗ್ ಬಾಸ್'.

ರಿಪೋರ್ಟರ್ ಶೀತಲ್

'ಬಿಗ್ ಬಾಸ್' ಮನೆಯಲ್ಲಿ ನಡೆಯುವ ಎಲ್ಲಾ ಘಟನೆಗಳನ್ನು ರಿಪೋರ್ಟರ್ ದೃಷ್ಟಿಯಲ್ಲೇ ನೋಡಿ, ವರದಿ ಒಪ್ಪಿಸುವ ಕೆಲಸ ಶೀತಲ್ ಶೆಟ್ಟಿ ರವರದ್ದು. ಯಾವಾಗಲೂ ಮೈಕ್ ಮತ್ತು ಕ್ಯಾಮರಾಮ್ಯಾನ್ ಜೊತೆಯಲ್ಲೇ ಇದ್ದಾರೆ ಎಂಬ ಗುಂಗಿನಲ್ಲಿ ಶೀತಲ್ ಶೆಟ್ಟಿ ಇರಬೇಕು.

ಡ್ಯುಯೆಲ್ ಪರ್ಸನಾಲಿಟಿ ಕೀರ್ತಿ

ಒಮ್ಮೆ ಸೌಮ್ಯ ಸ್ವಭಾವದ ಜೆಂಟಲ್ ಮೆನ್ ಆಗಿ, ಇನ್ನೊಮ್ಮೆ ಇದ್ದಕ್ಕಿದ್ದಂತೆ ಎಲ್ಲರ ಮೇಲೂ ರೇಗುವ ಡ್ಯುಯೆಲ್ ಪರ್ಸನಾಲಿಟಿ ಕಾಯಿಲೆ ಇರುವಂತೆ ಕೀರ್ತಿ ವರ್ತಿಸಬೇಕು.

ಅಳುಮುಂಜಿ ಕಾಯಿಲೆ

ನಟಿ ಕಾವ್ಯ ಶಾಸ್ತ್ರಿಗೆ ಅಳುವ ಕಾಯಿಲೆ. ಸಣ್ಣ ಪುಟ್ಟ ವಿಚಾರಕ್ಕೂ ಕಣ್ಣೀರು ಸುರಿಸುವ ಅಳುಮುಂಜಿಯಾಗಿ ಕಾವ್ಯ ಶಾಸ್ತ್ರಿ ನಟಿಸಬೇಕು.

'ಹೀರೋಯಿನ್' ಕಾರುಣ್ಯ

'ನಾನೇ ದೊಡ್ಡ ಹೀರೋಯಿನ್' ಎಂಬ ಗುಂಗಿನಲ್ಲಿ ಸದಾ ಮೇಕಪ್ ಮತ್ತು ಕನ್ನಡಿ ಹಿಡಿದು ವರ್ತಿಸುವ ಕೆಲಸ ಕಾರುಣ್ಯ ರಾವ್ ರದ್ದು.

ದುರ್ಯೋಧನ ಮೋಹನ!

ಪೌರಾಣಿಕ ಪಾತ್ರಗಳ ಬಗ್ಗೆ ವ್ಯಾಮೋಹವಿದ್ದಂತೆ ನಟ ಮೋಹನ್ ವರ್ತಿಸಬೇಕು.

'ಅನಾಗರಿಕ' ಪ್ರಥಮ್

ನಾಗರಿಕ ಭಾಷೆಗಳನ್ನು ಮಾತನಾಡಲು ತಿಳಿಯದ ವ್ಯಕ್ತಿಯಾಗಿ ಪ್ರಥಮ್ ನಡೆದುಕೊಳ್ಳಬೇಕು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಡೈರೆಕ್ಟರ್ 'ಓಂ ಪ್ರಕಾಶ್ ರಾವ್'

'ಬಿಗ್ ಬಾಸ್' ಮನೆಯೇ ಸಿನಿಮಾ ಸೆಟ್, ಎಲ್ಲರನ್ನೂ ಸಿನಿಮಾ ನಟರಂತೆಯೇ ಕಂಡು ಓಂ ಪ್ರಕಾಶ್ ರಾವ್ ಕಾಮಿಡಿ ಸನ್ನಿವೇಶ ಸೃಷ್ಟಿಸಬೇಕು.

ಘಜಿನಿ 'ದೊಡ್ಡ ಗಣೇಶ್'

'ಶಾರ್ಟ್ ಟರ್ಮ್ ಮೆಮರಿ ಲಾಸ್' ರೋಗಿಯ ಪಾತ್ರವನ್ನ ಕ್ರಿಕೆಟರ್ ದೊಡ್ಡ ಗಣೇಶ್ ನಿರ್ವಹಿಸಬೇಕು.

English summary
Bigg Boss Kannada 4, Day 9 : Bigg Boss House turns into Hospital.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada