»   » ಖುಷಿಯಲ್ಲಿ ಮಸ್ತಿ ಮಾಡ್ತಿದ್ದೋರಿಗೆ ಶಾಕ್ ಸಿಕ್ಕಾಗ ಮಾತೇ ಬರ್ಲಿಲ್ಲ.!

ಖುಷಿಯಲ್ಲಿ ಮಸ್ತಿ ಮಾಡ್ತಿದ್ದೋರಿಗೆ ಶಾಕ್ ಸಿಕ್ಕಾಗ ಮಾತೇ ಬರ್ಲಿಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಕಳೆದ ವಾರ ನಾಮಿನೇಟ್ ಆಗದೇ ಇದ್ದಾಗ ನಟಿ ಶಾಲಿನಿ ಕನ್ ಫ್ಯೂಸ್ ಆಗ್ಬಿಟ್ರು. 'ಫಿನಾಲೆ ವಾರ'ಕ್ಕೆ ಕಾಲಿಟ್ಟೆ ಅಂತ ಫುಲ್ ಖುಷ್ ಆಗ್ಬುಟ್ರು. ನಟ ಮೋಹನ್ ಕೂಡ ಒಳಗೊಳಗೆ ಸಂಭ್ರಮ ಪಟ್ರು. ಇನ್ನೂ ರೇಖಾ ಎಂದಿನಂತೆ ಪಾಸಿಟೀವ್ ಆಗಿದ್ರು. ಉಳಿದವರೆಲ್ಲರೂ ಈ ಮೂವರಿಗೆ 'ಕಂಗ್ರ್ಯಾಟ್ಸ್' ಹೇಳಿದರು.

'ಇನ್ನೂ ಫಿನಾಲೆ ಆಟ ಅಷ್ಟೇ ಬಾಕಿ' ಅಂತ ಖುಷಿಯಲ್ಲಿ ಮಸ್ತಿ ಮಾಡುತ್ತಿದ್ದ ಈ ಮೂವರಿಗೆ 'ಬಿಗ್ ಶಾಕ್' ಸಿಕ್ಕಿದ್ದು ಮೊನ್ನೆ.. ಶನಿವಾರ.! ಈ ಮೂವರು ಮಾತ್ರ ಅಲ್ಲ, ಯಾರೂ ನಿರೀಕ್ಷೆ ಮಾಡದ ಟ್ವಿಸ್ಟ್ ಒಂದನ್ನ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನೀಡಿದರು. ಆ ಟ್ವಿಸ್ಟ್ ಕೇಳಿದ ನಂತರ 'ಬಿಗ್ ಬಾಸ್' ಮನೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು.

'ಫಿನಾಲೆ' ಖುಷಿಯಲ್ಲಿದ್ದ ಶಾಲಿನಿಗೆ ಸುದೀಪ್ ಪ್ರಶ್ನೆ...

''ತಾವು ಫಿನಾಲೆ ವಾರದಲ್ಲಿ ಇದ್ದೀರಾ ಅಂತ 'ಬಿಗ್ ಬಾಸ್' ಏನಾದರೂ ಅಭಿನಂದನೆ ಸಲ್ಲಿಸಿದ್ರಾ.?'' ಅಂತ ಶಾಲಿನಿಗೆ ಸುದೀಪ್ ಪ್ರಶ್ನೆ ಕೇಳಿದರು.[ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.!]

ಶಾಕ್ ಆದ ಶಾಲಿನಿ.!

'ಇಲ್ಲ ಸರ್' ಅಂತ ಶಾಲಿನಿ ಹೇಳಿದರು. 'ಬಿಗ್ ಬಾಸ್ ಅಭಿನಂದನೆ ಸಲ್ಲಿಸಲಿಲ್ಲ' ಅಂತ ಮೋಹನ್ ಕೂಡ ಹೇಳಿದರು.[ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಈ ವಾರ ಆಟ ಮುಗಿಯಲ್ಲ ಅಂದ್ರೆ....

''ಕೇವಲ ಹತ್ತೇ ದಿನ ಆಟ. ಒಂದೇ ವಾರ ಆಟ ಅಂತ ತಾವು ಅವಾಗವಾಗ ಹೇಳ್ತಿದ್ರಿ. ಈ ವಾರ ಆಟನೇ ಮುಗಿಯಲ್ಲ ಅಂದ್ರೆ.?'' ಅಂತ ಕೀರ್ತಿಗೆ ಸುದೀಪ್ ಕೇಳಿದರು. ಅದಕ್ಕೆ ಕೀರ್ತಿ 'ರೆಡಿ ಸರ್' ಎಂದರು.

'ಬಾಂಬ್' ಹಾಕಿದ ಸುದೀಪ್

''ಬಿಗ್ ಬಾಸ್ ಎರಡು ವಾರ ಎಕ್ಸ್ ಟೆಂಡ್ ಆಗಿದೆ. ನೋ ಟ್ರಿಕ್ಸ್, ನೋ ಜೋಕ್ಸ್, ನೋ ಗಿಮಿಕ್ಸ್'' ಅಂತ ಹೇಳಿದರು ಕಿಚ್ಚ ಸುದೀಪ್.

ಆಟ ಈಗ ಶುರು....

''ಕೊನೆಯ ಎರಡರಲ್ಲಿ ಒಂದನೇ ವಾರದ ಆಟ ಮುಗಿದ ನಂತರ 'ಬಿಗ್ ಬಾಸ್' ನಿಮಗೆ ಹೇಳ್ತಿದ್ದಾರೆ, ಇನ್ನೂ ಮುಗಿದಿಲ್ಲ.! ಮುಂದಿನ ವಾರ ಸೇರಿ ಮೂರು ವಾರಗಳ ಆಟ ಬಾಕಿ ಇದೆ. ಹದಿಮೂರು ಸುತ್ತು ಓಡಿದ ನಂತರ ನಿಮಗೆ ಗೊತ್ತಾಗುತ್ತೆ, ನೀವು ಓಡಬೇಕಾಗಿರುವುದು 14 ಅಲ್ಲ 16 ಸುತ್ತು.... ನಿಮ್ಮ ವ್ಯಕ್ತಿತ್ವ, ಕ್ಯಾರೆಕ್ಟರ್, ಶಕ್ತಿ... ಎಲ್ಲದರ ಪರಿಪೂರ್ಣ ಪರೀಕ್ಷೆ, ಸಂಪೂರ್ಣ ಪರೀಕ್ಷೆ ಈಗ...'' ಅಂತ ಬಾಂಬ್ ಸಿಡಿಸಿದರು ಸುದೀಪ್.

ಚಪ್ಪಾಳೆ ತಟ್ಟಿದ ಕೀರ್ತಿ, ಪ್ರಥಮ್

'ಬಿಗ್ ಬಾಸ್' ಕಾರ್ಯಕ್ರಮ ಎರಡು ವಾರ ಎಕ್ಸ್ ಟೆಂಡ್ ಆಗಿರುವುದನ್ನು ಕೇಳಿ ಪ್ರಥಮ್ ಮತ್ತು ಕೀರ್ತಿ ಚಪ್ಪಾಳೆ ತಟ್ಟಿದರು.

ಓ ಮೈ ಗಾಡ್ ಎಂದ ಶಾಲಿನಿ

ಹೊಸ ಟ್ವಿಸ್ಟ್ ಕೇಳುತ್ತಿದ್ದಂತೆಯೇ ಶಾಲಿನಿ, ''ಓ ಮೈ ಗಾಡ್'' ಎಂದುಬಿಟ್ಟರು.

ಶಾಲಿನಿ ಬಾಯಿ ತೆಗೆಯಲೇ ಇಲ್ಲ.!

ಶಾಲಿನಿ ಪ್ರತಿಕ್ರಿಯೆ ಹೇಗಿತ್ತು ಅಂತ ನೀವೇ ನೋಡಿ...

ಮೋಹನ್ ಗೆ ಮಾತೇ ಬರಲಿಲ್ಲ

ಮೋಹನ್ - ''ಏನು ಟ್ವಿಸ್ಟ್ ಇದು''

ಮಾಳವಿಕಾ - ''ಮೊದಲು ನಾನು ಇರ್ತೀನಾ, ಇಲ್ವಾ ಅಂತ ನೋಡ್ಕೊಂಡ್, ಆಮೇಲೆ ರಿಯಾಕ್ಟ್ ಮಾಡುತ್ತೇನೆ''

ಮೋಹನ್ - ''ಬಿಗ್ ಶಾಕ್ ಇದು''

ಪ್ರಥಮ್ ಏನಂದರು.?

ಪ್ರಥಮ್ - ''ಸೀಸನ್ 5ಕ್ಕೂ ಬರ್ತೀನಿ ಅಂತ ಅವತ್ತಿಂದ ಕುಣಿಯುತ್ತಿದ್ದೇನೆ. ಹೀಗಾಗಿ ಈ ಟ್ವಿಸ್ಟ್ ನನಗೆ ಹ್ಯಾಪಿನೇ. 'ಬಿಗ್ ಬಾಸ್' ಮುಗಿಸಲೇಬೇಡಿ. ನಾನು ಇಲ್ಲೇ ಇರ್ತೀನಿ. 98 ದಿನ ಆದ್ಮೇಲೆ ಇನ್ನೂ 2 ದಿನ ಇದೇ ಬೆಡ್ ಮೇಲೆ ಮಲ್ಕೊಂಡು 100 ದಿನ ಮಾಡಿ ಹೋಗೋಣ ಅಂತ ಇದ್ದೆ. ಈಗ ಎಕ್ಸ್ ಟೆಂಡ್ ಆಗಿದೆ. ಖುಷಿ ಇದೆ ನನಗೆ''

English summary
For the first time in the History of 'Bigg Boss Kannada', 'BBK4' is extended for 2 weeks. Grand Finale of 'BBK4' will be held on January 29th instead of January 15th. Read the article to know Contestants reaction on the same.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada