»   » 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಪಾರ್ಟ್ 1

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಪಾರ್ಟ್ 1

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಮೊದಲ ಭಾಗ ನಿನ್ನೆ (ಜನವರಿ 28) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯ್ತು. ಇದೇ ಸಂಚಿಕೆಯಲ್ಲಿ ನಟಿ ಮಾಳವಿಕಾ ಅವಿನಾಶ್ ಮತ್ತು ಮೋಹನ್ ಔಟ್ ಆದರು.

ಹಲವು ವಿಶೇಷತೆಗಳಿಂದ ಕೂಡಿದ ಈ ಸಂಚಿಕೆಯ ಹೈಲೈಟ್ಸ್ ಇಲ್ಲಿದೆ, ನೋಡಿರಿ...

'ಹೆಬ್ಬುಲಿ' ಘರ್ಜನೆ

'ಹೆಬ್ಬುಲಿ' ಚಿತ್ರದ ಹಾಡಿನ ಮೂಲಕ ಕಿಚ್ಚ ಸುದೀಪ್ 'ಬಿಗ್ ಬಾಸ್' ವೇದಿಕೆಗೆ ಎಂಟ್ರಿಕೊಟ್ಟು ಕಿಚ್ಚು ಹಚ್ಚಿಸಿದರು.

ಸ್ಪರ್ಧಿಗಳಿಗೆ 'ವಾಸ್ತವ' ದರ್ಶನ

ಕಳೆದ ಮೂರು ತಿಂಗಳಿನಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ದರ್ಶನ ಸ್ಪರ್ಧಿಗಳಿಗೆ ಆಯ್ತು.

ಶಾಲಿನಿ ಎಂಟ್ರಿ

'ಬೊಂಬೆ ಬೊಂಬೆ ಬೊಂಬೆ...' ಮತ್ತು 'ಜಿಲ್ಕಾ ಜಿಲ್ಕಾ...' ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಶಾಲಿನಿ ವೇದಿಕೆ ಮೇಲೆ ಪ್ರತ್ಯಕ್ಷವಾದರು.['ಬಿಗ್ ಬಾಸ್' ಮನೆ ಗೇಟ್ ಆಚೆ ಕಾಲಿಟ್ಟ ತಕ್ಷಣ ಶಾಲಿನಿಗೆ ಏನಾಯ್ತು.?]

'ಬಿಗ್ ಬಾಸ್' ಮೊದಲ ವಿನ್ನರ್

'ಬಿಗ್ ಬಾಸ್' ಮೊದಲನೇ ಸೀಸನ್ ವಿನ್ನರ್ - ವಿಜಯ್ ರಾಘವೇಂದ್ರ 'ಚಕ್ರವ್ಯೂಹ..' ಹಾಡಿಗೆ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು.['ಬಿಗ್ ಬಾಸ್' ವಿನ್ನರ್ ವಿಜಯ್ ರಾಘವೇಂದ್ರ ಪ್ರಕಾರ ಈ ಬಾರಿ ಗೆಲ್ಲೋರು ಯಾರು?]

ಔಟ್ ಆದ ಸ್ಪರ್ಧಿಗಳು ವೇದಿಕೆ ಮೇಲೆ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಔಟ್ ಆಗಿದ್ದ ಸ್ಪರ್ಧಿಗಳೆಲ್ಲರೂ ವೇದಿಕೆ ಮೇಲೆ ಹಾಜರ್ ಆಗಿದ್ದರು.

ಮನರಂಜನೆ ನೀಡಿದ ನಿರಂಜನ್

ಫಿನಾಲೆ ಹಂತ ತಲುಪಿರುವ ಸ್ಪರ್ಧಿಗಳನ್ನು ಇಮಿಟೇಟ್ ಮಾಡಿ ಮಸ್ತ್ ಮನರಂಜನೆ ನೀಡಿದವರು ನಿರಂಜನ್.

ಮೋಹನ್ ಗೆ ಸಿಕ್ಕ ಸರ್ ಪ್ರೈಸ್

ಸ್ನೇಹಿತ ರಾಜೇಶ್ 'ಸ್ನೇಹಕ್ಕೆ ಸ್ನೇಹ...' ಹಾಡಿಗೆ ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿ ಮೋಹನ್ ಗೆ ವಿಶ್ ಮಾಡಿದರು.

ವೇದಿಕೆ ಮೇಲೆ ಫೈನಲಿಸ್ಟ್ ಗಳ ಕುಟುಂಬ

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಫೈನಲಿಸ್ಟ್ ಗಳ ಮನೆಯವರನ್ನು ಕರೆಯಿಸಿ ಕಿಚ್ಚ ಸುದೀಪ್ ಮಾತನಾಡಿಸಿದರು.

ಔಟ್ ಆದ ಮೋಹನ್

ಮೊದಲ ರೌಂಡ್ ಎಲಿಮಿನೇಷನ್ ನಲ್ಲಿ ನಟ, ನಿರ್ದೇಶಕ ಮೋಹನ್ ಔಟ್ ಆದರು. [ನಟಿ ಮಾಳವಿಕಾ ಮತ್ತು ಮೋಹನ್ ಗೆ 'ಬಿಗ್ ಬಾಸ್' ಗೆಲ್ಲುವ ಕನಸು ನುಚ್ಚುನೂರು]

ಪ್ರಥಮ್ ಗೆ ಸಿಕ್ಕ ಸರ್ ಪ್ರೈಸ್

'ಹುಚ್ಚ ನಾ...' ಹಾಡಿಗೆ ರಿಶಿಕಾ ಪರ್ಫಾಮೆನ್ಸ್ ನೀಡಿ ಪ್ರಥಮ್ ಗಾಗಿ ವಿಶ್ ಮಾಡಿದರು.

ಮಾಳವಿಕಾಗೆ ಗಿಫ್ಟ್

ಮಾಳವಿಕಾ ಗಾಗಿ ಅವರ ಅಕ್ಕನ ಮಗಳು ಡ್ಯಾನ್ಸ್ ಪರ್ಫಾಮೆನ್ಸ್ ನೀಡಿ ಶುಭ ಕೋರಿದರು.

ಭುವನ್-ಸಂಜನಾ ಡ್ಯುಯೆಟ್

ಇನ್ನೂ 'ತಿಥಿಲಿ' ಹಾಡಿಗೆ ಸಂಜನಾ ಮತ್ತು ಭುವನ್ ನೀಡಿದ ಡ್ಯಾನ್ಸ್ ಪರ್ಫಾಮೆನ್ಸ್ ಕೂಡ ವಿಶೇಷವಾಗಿತ್ತು.

ಮಾಳವಿಕಾ ಔಟ್

ಎರಡನೇ ರೌಂಡ್ ಎಲಿಮಿನೇಷನ್ ನಲ್ಲಿ ನಟಿ ಮಾಳವಿಕಾ ಅವಿನಾಶ್ ಔಟ್ ಆದರು.

ಸುದೀಪ್ ಗಾಗಿ ಸ್ಪೆಷಲ್ ವಿಡಿಯೋ

ಸುದೀಪ್ ಕುರಿತಾಗಿ ಪ್ರಸಾರವಾದ ವಿಡಿಯೋ ಕೂಡ ವಿಶೇಷವಾಗಿತ್ತು

ಟಾಪ್ 3

ಕೀರ್ತಿ, ಪ್ರಥಮ್ ಮತ್ತು ರೇಖಾ ಸದ್ಯ ಟಾಪ್ 3 ಸ್ಥಾನದಲ್ಲಿ ಇದ್ದಾರೆ. ಇವರ ಪೈಕಿ ಯಾರಿಗೆ ವಿಜಯದ ಕಿರೀಟ ದೊರಕುತ್ತೆ? ಇಂದು ನೋಡೋಣ....

ಟ್ರೋಫಿ ನೋಡಿದ್ರಾ.?

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ 'ವಿನ್ನರ್ ಟ್ರೋಫಿ' ಕಂಗೊಳಿಸುತ್ತಿದೆ. ಈ ಟ್ರೋಫಿಯನ್ನ ಯಾರು ಎತ್ತಿ ಹಿಡಿಯುತ್ತಾರೋ, ಕಾದು ನೋಡಬೇಕು...

English summary
Bigg Boss Kannada 4: In pics-Grand Finale highlights part-1
Please Wait while comments are loading...